ವಂಶಿಕಾ ಅಂಜನಿ ಕಶ್ಯಪ್ ಹೆಸರು ಬಳಸಿ ವಂಚನೆ ಆರೋಪ
ತಪ್ಪಿತಸ್ಥರ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿ ದೂರು ನೀಡಿದ ವಂಶಿಕಾ ತಾಯಿ
ಹಣ ಕೊಟ್ಟು ಮೋಸ ಹೋಗ್ಬೇಡಿ ಎಂದು ಪೋಷಕರಿಗೆ ಎಚ್ಚರಿಕೆ ಕೊಟ್ಟ ಯಶಸ್ವಿನಿ
ಮಾಸ್ಟರ್ ಆನಂದ್ ಮತ್ತು ಯಶಸ್ವಿನಿ ದಂಪತಿಗಳ ಪುತ್ರಿ ವಂಶಿಕಾ ಅಂಜನಿ ಕಶ್ಯಪ ಹೆಸರು ಬಳಸಿ ವಂಚನೆ ಆರೋಪ ಕೇಳಿಬಂದಿದೆ. ಈ ಹಿನ್ನಲೆ ವಂಶಿಕಾ ತಾಯಿ ಸದಾಶಿವನಗರ ಪೊಲೀಸ್ ಠಾಣೆ ಮೆಟ್ಟಿಲೇರಿ ತಪ್ಪಿತಸ್ಥರ ವಿರುದ್ಧ ದೂರು ನೀಡಿದ್ದು, ಯಾರು ಕೂಡ ಈ ರೀತಿ ಹಣವನ್ನ ಕೊಟ್ಟು ಮೋಸ ಹೋಗ ಬೇಡಿ ಎಂದು ಪೋಷಕರಿಗೆ ಎಚ್ಚರಿಕೆ ನೀಡಿದ್ದಾರೆ.
ಮಾಧ್ಯಮದವರ ಮುಂದೆ ಮಾತನಾಡಿದ ವಂಶಿಕಾ ತಾಯಿ ಯಶಸ್ವಿನಿ, ಇಷ್ಟೊಂದು ಜನರಿಗೆ ವಂಚನೆ ಮಾಡಿರೋದು ಗೊತ್ತಿರಲಿಲ್ಲ. ನಾನು 1 ಲಕ್ಷದ ಅಸುಪಾಸಿನಲ್ಲಿ ವಂಚನೆಯಾಗಿದೆ ಅಂದ್ಕೊಂಡಿದ್ದೆ. ಆದರೆ ಇಷ್ಟೊಂದು ಜನ ದೂರು ಕೊಡೋಕೆ ಬಂದಿದ್ದು ನೋಡಿ ಗೊತ್ತಾಗಿದ್ದು. ನಾವು ಕೂಡ ಪೋಷಕರ ಪರವಾಗಿದ್ದೇವೆ ಹಾಗಾಗಿ ಇಲ್ಲಿವರೆಗೂ ಬಂದಿದ್ದೇನೆ ಎಂದು ಹೇಳಿದ್ದಾರೆ.
ನಂತರ ಮಾತನಾಡಿದ ಯಶಸ್ವಿನಿ ಮಕ್ಕಳ ಪೋಷಕರು ಈಕೆಯಿಂದ ಮೋಸ ಹೋಗಿದ್ದಾರೆ. ಪೋಷಕರ ನೋವು ಏನು ಅನ್ನೋದು ನನಿಗೂ ಗೊತ್ತಿದೆ. ಅವರೆಲ್ಲರೂ ಕೂಡ ರಕ್ತ ಸುರಿಸಿ ದುಡಿದು ಹಣವನ್ನ ಕೊಟ್ಟಿರುತ್ತಾರೆ. ಯಾರು ಕೂಡ ಈ ರೀತಿ ಹಣವನ್ನ ಕೊಟ್ಟು ಮೋಸ ಹೋಗ ಬೇಡಿ ಎಂದು ಪೋಕರಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಏನಿದು ಘಟನೆ?
ಸಾಮಾಜಿಕ ಜಾಲತಾಣದಲ್ಲಿ ಎನ್ಎನ್ ಪ್ರೊಡಕ್ಷನ್ನವರ ಬೇಬಿ ಕನ್ಟೆಸ್ಟ್ ಎಂಬ ಕಾರ್ಯಕ್ರಮ ಭಾರೀ ಫೇಮಸ್ ಆಗಿತ್ತು. ಈ ಕಾರ್ಯಕ್ರಮವನ್ನು ನಿಶಾ ನರಸಪ್ಪ ಎಂಬಾಕೆ ನಡೆಸುತ್ತಿದ್ದಳು. ಹೀಗಾಗಿ ಇದರ ಪ್ರೊಮೋಷನ್ ಅನ್ನು ಬಾಲ ನಟಿ ವಂಶಿಕಾ ಮಾಡುತ್ತಿದ್ದಳು.
ನಿಶಾ ನರಸಪ್ಪ ನಡೆಸುತ್ತಿದ್ದ ಎನ್ಎನ್ ಪ್ರೊಡಕ್ಷನ್ ಆ್ಯಡ್ ಶೂಟ್, ಮಕ್ಕಳ ಟ್ಯಾಲೆಂಟ್ ನೆಪದಲ್ಲಿ ಹಣ ವಂಚನೆ ಮಾಡಿದೆ. ಅನೇಕ ಪೋಷಕರ ಬಳಿ ಲಕ್ಷಾಂತರ ರೂಪಾಯಿ ಹಣ ತೆಗೆದುಕೊಂಡು ಮಕ್ಕಳ ಪ್ರಮೋಟ್ ಮತ್ತು ಫೋಟೋಶೂಟ್ ಮಾಡಿಸದೆ ಮೋಸ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮಾತ್ರವಲ್ಲದೆ, ಇದೇ ವಿಚಾರವಾಗಿ ವಂಶಿಕಾ ತಾಯಿಗೆ ಅನೇಕರು ಮೆಸೇಜ್ ಕೂಡ ಮಾಡಿದ್ದಾರೆ. ಈ ಹಿನ್ನೆಲೆ ಮೋಸ ಹೋದ ಪೋಷಕರ ಪರವಾಗಿ ನಿಂತ ವಂಶಿಕ ತಾಯಿ ಯಶಸ್ವಿನಿ ಸದಾಶಿವನಗರ ಪೊಲೀಸ್ ಠಾಣೆ ಮೆಟ್ಟಿಲೇರಿ ತಪ್ಪಿತಸ್ಥರ ವಿರುದ್ಧ ದೂರು ನೀಡಿದ್ದಾರೆ.
ಬಾಲ ನಟಿ ವಂಶಿಕಾ ಹೆಸರಲ್ಲಿ ಲಕ್ಷ ಲಕ್ಷ ವಂಚನೆ ಆರೋಪ.. ವಂಶಿಕಾ ತಾಯಿ ಯಶಸ್ವಿನಿ ಬಿಚ್ಚಿಟ್ರು ಸ್ಫೋಟಕ ಸತ್ಯ #vanshikacase pic.twitter.com/F5HiAk5oKr
— NewsFirst Kannada (@NewsFirstKan) July 14, 2023
ನಿಶಾ ನರಸಪ್ಪ ವಿರುದ್ಧ ಪೊಲೀಸರು ಐಪಿಸಿ ಸೆಕ್ಷನ್ 419, 420 ಅಡಿಯಲ್ಲಿ ಕೇಸ್ ದಾಖಲಿಸಿದ್ದಾರೆ. ಮಾತ್ರವಲ್ಲದೆ ಪೊಲೀಸರು ಹಣ ಕೊಟ್ಟ ಬಗ್ಗೆ ಪೋಷಕರ ಬಳಿಯಿರುವ ದಾಖಲೆಗಳನ್ನ ಪಡೆದು ಪರಿಶೀಲಿಸಿದ್ದಾರೆ. ಬಳಿಕ ನಿಶಾಳನ್ನ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ