newsfirstkannada.com

ಪೊಲೀಸ್​ ವಾಹನದಲ್ಲಿ ಗಳಗಳನೇ ಕಣ್ಣೀರಿಟ್ಟ A1 ಪವಿತ್ರ ಗೌಡ; ಅಸಲಿಗೆ ಆಗಿದ್ದೇನು?

Share :

Published June 19, 2024 at 3:57pm

    ನಿನ್ನೆ A1 ಆರೋಪಿ ಪವಿತ್ರ ಗೌಡ ಆರೋಗ್ಯದಲ್ಲಿ ದಿಢೀರ್​ ಏರುಪೇರು

    9 ಆರೋಪಿಗಳನ್ನ ವೈದ್ಯಕೀಯ ತಪಾಸಣೆಗೆಂದು ಕರೆದೊಯ್ದ ಪೊಲೀಸರು

    ಪವಿತ್ರ ಗೌಡರಿಗೆ ಪ್ರತ್ಯೇಕವಾಗಿ ತಪಾಸಣೆ ಮಾಡಿದ ವಿಕ್ಟೋರಿಯಾ ವೈದ್ಯರು

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್​ ಆರೋಪದಲ್ಲಿ ಪವಿತ್ರಾ ಗೌಡ, ದರ್ಶನ್​​ ಗ್ಯಾಂಗ್​​ ಪೊಲೀಸ್​​ ಕಸ್ಟಡಿಯಲ್ಲಿದೆ. ಸತತ 9 ದಿನಗಳಿಂದ ಎಲ್ಲಾ ಆರೋಪಿಗಳನ್ನ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಎ1 ಆರೋಪಿ ಪವಿತ್ರಾ ಗೌಡ ಸರಿಯಾಗಿ ತಿಂಡಿ ಹಾಗೂ ಊಟ ಸೇವಿಸಿರಲಿಲ್ಲ. ಬಿಪಿ ಲೋ ಆಗಿದ್ದರಿಂದ ಅವರ ಆರೋಗ್ಯದಲ್ಲಿ ನಿನ್ನೆಯೇ ಏರುಪೇರು ಉಂಟಾಗಿತ್ತು.

ಇದನ್ನೂ ಓದಿ: ಉಮಾಪತಿ ಹೇಳಿಕೆಯಿಂದ ದರ್ಶನ್​​ಗೆ ಮತ್ತೊಂದು ಸಂಕಷ್ಟ.. ಗೃಹ ಇಲಾಖೆಯಿಂದ ಶಾಕಿಂಗ್ ನಿರ್ಧಾರ..?

ಆ ಕೂಡಲೇ ಪೊಲೀಸ್​ ಅಧಿಕಾರಿಗಳು ಠಾಣೆಗೆ ವೈದ್ಯರನ್ನು ಕರೆಸಿದ್ದರು. ಬಳಿಕ ಪವಿತ್ರಾ ಗೌಡ ಅವರನ್ನು ಪೊಲೀಸ್​ ಠಾಣೆಯಿಂದ ಆಸ್ಪತ್ರೆಗೆ ಶಿಫ್ಟ್​ ಮಾಡಲಾಗಿದೆ. ಕೊಲೆ ಕೇಸ್​​ನಲ್ಲಿ ಬಂಧಿತ ಆರೋಪಿಯಾಗಿರೋ ಪವಿತ್ರ ಗೌಡ ಸರಿಯಾಗಿ ಊಟ ಮಾಡುತ್ತಿಲ್ಲ. ನಿದ್ದೆ ಮಾಡುತ್ತಿಲ್ಲ. ಹೀಗಾಗಿ ಅವರ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಿದ್ದರಿಂದ ಅವರನ್ನು ಪೊಲೀಸ್ ಠಾಣೆಯಿಂದ ಆಸ್ಪತ್ರೆಗೆ ಶಿಫ್ಟ್​ ಮಾಡಲಾಗಿತ್ತು.

ಇದಾದ ಬಳಿಕ ಇಂದು ಪವಿತ್ರ ಗೌಡ ಸೇರಿ 9 ಆರೋಪಿಗಳನ್ನು ವಿಕ್ಟೋರಿಯಾ ಆಸ್ಪತ್ರೆಯ ಎಮರ್ಜೆನ್ಸಿ ವಾರ್ಡ್​ನಲ್ಲಿ ವೈದ್ಯಕೀಯ ತಪಾಸಣೆ​ಗೆಂದು ಕರೆದುಕೊಂಡು ಹೋಗಿದ್ದರು. ಬಳಿಕ ನಿನ್ನೆ ಲೋ ಬಿಪಿಯಿಂದ ಅಸ್ವಸ್ಥಗೊಂಡಿದ್ದ ಪವಿತ್ರ ಗೌಡರಿಗೆ ವೈದ್ಯರು ಪ್ರತ್ಯೇಕವಾಗಿ ತಪಾಸಣೆ ಮಾಡಿದ್ದರು. ಇನ್ನುಳಿದ 8 ಜನ ಆರೋಪಿಗಳಿಗೆ ವಿಕ್ಟೋರಿಯಾ ವೈದ್ಯರು ನಾರ್ಮಲ್ ವೈದ್ಯಕೀಯ ತಪಾಸಣೆ​ ನಡೆಸಿದ್ದರು. ಆದರೆ ಇದರ ಮಧ್ಯೆ ಪವಿತ್ರ ಗೌಡ ಕಣ್ಣೀರ ಕೋಡಿ ಹರಿಸಿದ್ದು ಕ್ಯಾಮೆರಾ ಕಣ್ಣಿಗೆ ಸೆರೆ ಬಿದ್ದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪೊಲೀಸ್​ ವಾಹನದಲ್ಲಿ ಗಳಗಳನೇ ಕಣ್ಣೀರಿಟ್ಟ A1 ಪವಿತ್ರ ಗೌಡ; ಅಸಲಿಗೆ ಆಗಿದ್ದೇನು?

https://newsfirstlive.com/wp-content/uploads/2024/06/pavitra-gowda-5.jpg

Load More