newsfirstkannada.com

ಮದುವೆಯಾದೋರೆ ಈತನ ಟಾರ್ಗೆಟ್​​.. ಸೆಕ್ಸ್​ ಆಸೆ ತೋರಿಸಿ ಕಳ್ಳತನ ಮಾಡುತ್ತಿದ್ದ ಸಲಿಂಗ ಕಾಮಿ ಅರೆಸ್ಟ್​​

Share :

Published July 1, 2024 at 10:34pm

  ಹೆಂಡತಿ, ಮಗು ತವರು ಮನೆಗೆ ಹೋಗಿದ್ದಾಗ ಆರೋಪಿಗೆ ಕರೆದಿದ್ದ ಆ ವ್ಯಕ್ತಿ

  ಮರ್ಯಾದೆಗೆ ಅಂಜಿ ಕೇಸ್ ಕೊಡಲ್ಲ ಎಂಬ ಕಾರಣಕ್ಕೆ ಆರೋಪಿ ಕಳ್ಳತನ

  ತುಮಕೂರು, ನೆಲಮಂಗಲ, ರಾಮನಗರ ಸೇರಿ ಹಲವು ಕಡೆ ದೂರು ದಾಖಲು

ರಾಮನಗರ: ಗಂಡಸಿರಿಗೆ ಗಾಳ ಹಾಕಿ ಬಳಿಕ ಸೆಕ್ಸ್ ಆಸೆ ತೋರಿಸಿ ಕಳ್ಳತನ ಮಾಡುತ್ತಿದ್ದ ಸಲಿಂಗ ಕಾಮಿ‌ಯನ್ನು ಐಜೂರು ಪೊಲೀಸರು ಬಂಧಿಸಿದ್ದಾರೆ. ಶ್ರೀಧರ್ ಎಸ್ (32) ‌ಕಳ್ಳತನ ಮಾಡಿದ ಆರೋಪಿ.

ತುಮಕೂರು, ನೆಲಮಂಗಲ, ರಾಮನಗರ, ‌ರಾಜಾನುಕುಂಟೆಯಲ್ಲಿ ಆರೋಪಿ ಶ್ರೀಧರ್ ವಿರುದ್ಧ ದೂರು ದಾಖಲಾಗಿದೆ. ಈ ಆರೋಪಿ ಮದುವೆಯಾದ ಪುರುಷರನ್ನೇ ಟರ್ಗೆಟ್ ಮಾಡುತ್ತಿದ್ದ. ಮೊದ ಮೊದಲು ಸಾಮಾಜಿಕ ಜಾಲಾತಾಣದಲ್ಲಿ ಪುರುಷರ ಜೊತೆ ಶ್ರೀಧರ್​ ಚಾಟಿಂಗ್ ಮಾಡುತ್ತಿದ್ದನಂತೆ. ಚಾಟಿಂಗ್ ಮಾಡುತ್ತಾ ತನ್ನ ಬಯಕೆ ಹೇಳುತ್ತಿದ್ದನಂತೆ. ತನಗೆ ಸ್ತ್ರೀಗಿಂತ ಪುರುಷರೇ ಹೆಚ್ಚು ಇಷ್ಟ ಎನ್ನುತ್ತಿದ್ದನಂತೆ. ಸ್ತ್ರೀಯರಿಗಿಂತ ಹೆಚ್ಚು ಸುಖ ಕೊಡುತ್ತೇನೆ ಅಂತ ಉತ್ತೇಜನ ಮಾಡುತ್ತಿದ್ದನಂತೆ.

ಇದನ್ನೂ ಓದಿ: ದೊಡ್ಮನೆಯಿಂದ ಆಚೆ ಬಂದ ಅರ್ಮಾನ್ ಮಲಿಕ್ ​ಹೆಂಡತಿ; ಅಸಲಿ ಕಾರಣ ಬಿಚ್ಚಿಟ್ಟ ಪಾಯಲ್ ಮಲಿಕ್

ಬಳಿಕ ಚಾಟ್ ಮಾಡಿದ ಪುರುಷರ ಮನೆಗೆ ತೆರಳಿ ಎಣ್ಣೆ ಪಾರ್ಟಿ ಮಾಡುತ್ತಿದ್ದನಂತೆ. ಎಣ್ಣೆ ಪಾರ್ಟಿ ಬಳಿಕ ಪುರುಷರ ಜೊತೆ ಸಲಿಂಗ ಸೆಕ್ಸ್ ಮಾಡುತ್ತಿದ್ದನಂತೆ. ಇದಾದ ಬಳಿಕ ಎಣ್ಣೆಯಲ್ಲಿ ಮತ್ತು ಬರುವ ಗುಳಿಗೆ ನೀಡಿ ಇಡೀ ಮನೆಯನ್ನು ಸರ್ಚ್ ಮಾಡಿ ಕಳ್ಳತನ ಮಾಡುತ್ತಿದ್ದನಂತೆ. ಮನೆಯಲ್ಲಿದ್ದ ದುಡ್ಡು, ಬಂಗಾರ ಇನ್ನೂ ಬೆಲೆಬಾಳುವ ವಸ್ತುಗಳನ್ನು ಕಳ್ಳತನ ಮಾಡಿ ಎಸ್ಕೇಪ್​ ಆಗುತ್ತಿದ್ದ. ಬೆಳಿಗ್ಗೆ ಎದ್ದು ನೋಡಿದಾಗ ಅವರ ಮನೆಯಲ್ಲಿದ್ದ ಬಂಗಾರ ಹಾಗೂ ಬೆಲೆ ಬಾಳುವ ವಸ್ತುಗಳು ಮಾಯವಾಗುತ್ತಿದ್ದವು, ಹೀಗಾಗಿ ರಾತ್ರಿ ನಡೆದ ಸಂಗತಿಯ ಬಗ್ಗೆ ಬಾಯಿ ಬಿಡದ ಪರಿಸ್ಥಿತಿಯಲ್ಲಿರುತ್ತಿದ್ದ ಪುರುಷರು ಸುಮ್ಮನಾಗುತ್ತಿದ್ದರಂತೆ. ಮರ್ಯಾದೆಗೆ ಅಂಜಿ ಕೇಸ್ ಕೊಡಲ್ಲ ಎನ್ನುವ ಕಾರಣಕ್ಕೆ ಆರೋಪಿ ಹೀಗೆ ಸಾಕಷ್ಟು ಕಡೆಗಳಲ್ಲಿ ಕಳ್ಳತನ ಮಾಡುತ್ತಿದ್ದನಂತೆ.

ಇದನ್ನೂ ಓದಿ: ಅಮ್ಮ, ತಮ್ಮನನ್ನು ಕಂಡು ದರ್ಶನ್​ ಕಣ್ಣೀರು.. 45 ನಿಮಿಷಗಳ ಕಾಲ ಜೈಲಿನಲ್ಲಿ ಏನು ಮಾತನಾಡಿದ್ರು ಗೊತ್ತಾ?

ಇನ್ನು, ಹೀಗೆ ರಾಮನಗರದ ವ್ಯಕ್ತಿಯೊಬ್ಬರ ಹೆಂಡತಿ ಹಾಗೂ ಮಗು ಕೌಟುಂಬಿಕ ಸಮಾರಂಭಕ್ಕೆ ತವರು ಮನೆ ತೆರಳಿದ್ದರು. ಇದೇ ವೇಳೆ ರಾಮನಗರದ ವ್ಯಕ್ತಿ ಆರೋಪಿ ಶ್ರೀಧರ್​ನನ್ನು ತಮ್ಮ ಮನೆಗೆ ಕರೆಸಿಕೊಂಡಿದ್ದಾರೆ. ಇನ್ನು, ಆರೋಪಿ ಎಣ್ಣೆಯಲ್ಲಿ ಮತ್ತಿನ ಗುಳಿಗೆ ಹಾಕಿ ವ್ಯಕ್ತಿಗೆ ಕುಡಿಸಿದ್ದಾನೆ. ಇದಾದ ಬಳಿಕ ಮನೆಯಲ್ಲಿದ್ದ ಚಿನ್ನಾಭರಣ ದೋಚಿ ಆರೋಪಿ ಎಸ್ಕೇಪ್​ ಆಗಿದ್ದಾರೆ. ಆದರೆ ಮರುದಿನ ಮನೆಯಲ್ಲಿದ್ದ ಬಂಗಾರ ಕಳುವಾಗಿದ್ದನ್ನು ಕಂಡ ಪತ್ನಿ ಬಂಗಾರ ಎಲ್ಲಿದೆ ಅಂತ ಕೂಗಾಡ ತೊಡಗಿದ್ದಾರೆ. ನಿಜ‌ ಹೇಳು ಇಲ್ಲವಾದರೇ ನಿನ್ನ ಬಿಟ್ಟು ಹೋಗ್ತೀನಿ. ಏನಾಯ್ತು ನಿಜ ಹೇಳು, ಮಕ್ಕಳ ಮೇಲೆ ಆಣೆ ಅಂತ ಪತ್ನಿ ಹೇಳಿದ್ದಾರೆ. ಬಳಿಕ ನಡೆದ ವಿಚಾರವನ್ನೆಲ್ಲಾ ಪತಿ ಹೇಳಿದ್ದಾರೆ. ಇದಾದ ಕೂಡಲೇ ಜೂನ್ 29ರಂದು ಐಜೂರು ಠಾಣೆಗೆ ದಂಪತಿ ದೂರು ನೀಡಿದ್ದಾರೆ. ದೂರಿನ ಬಳಿಕ ಐಜೂರು ಪೊಲೀಸರು ಆರೋಪಿ ಪತ್ತೆ ಹಚ್ಚಿದ್ದಾರೆ. ಆರೋಪಿಯನ್ನು ಬಂಧಿಸಿ ವಿಚಾರಣೆ ಮಾಡಿದ ಬಳಿಕ ಇಡಿ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ಬಂಧಿತ ಆರೋಪಿಯಿಂದ ಪೊಲೀಸರು 130 ಗ್ರಾಂ ಬಂಗಾರವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಸಂಬಂಧ ಐಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮದುವೆಯಾದೋರೆ ಈತನ ಟಾರ್ಗೆಟ್​​.. ಸೆಕ್ಸ್​ ಆಸೆ ತೋರಿಸಿ ಕಳ್ಳತನ ಮಾಡುತ್ತಿದ್ದ ಸಲಿಂಗ ಕಾಮಿ ಅರೆಸ್ಟ್​​

https://newsfirstlive.com/wp-content/uploads/2024/07/ramanagar.jpg

Load More