ನಿರ್ಮಾಪಕ ಕುಮಾರ್ ವಿರುದ್ದ ಸುದೀಪ್ ಮಾನನಷ್ಟ ಕೇಸ್
ನಾನು ಇಷ್ಟು ವರ್ಷ ಕಷ್ಟ ಪಟ್ಟು ಗಳಿಸಿದ ವರ್ಚಸ್ಸಿಗೆ ಹಾನಿ
ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಹಾಜರಾದ ಸುದೀಪ್ ಹೇಳಿದ್ದೇನು?
ಬೆಂಗಳೂರು: ಸ್ಯಾಂಡಲ್ವುಡ್ ನಟ ಕಿಚ್ಚ ಸುದೀಪ್ ವಿರುದ್ಧ ನಿರ್ಮಾಪಕ ಎಂ.ಎನ್. ಕುಮಾರ್ ಗಂಭೀರ ಆರೋಪ ಮಾಡಿದ್ದರು. ಇದಾದ ಮೇಲೆ ಟ್ವೀಟ್ ಹಾಗೂ ಪತ್ರದ ಮೂಲಕ ಉತ್ತರಿಸಿ ಸುಮ್ಮನಾಗಿದ್ದ ನಟ ಕಿಚ್ಚ ಸುದೀಪ್ ಇದೀಗ ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಹಾಜರಾಗಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಂಧಾನಕ್ಕೆ ಒಪ್ಪದ ನಟ ಸುದೀಪ್, ನಿರ್ಮಾಪಕ ಕುಮಾರ್ ಅವರಿಗೆ ಕ್ಷಮೆಯೇ ಇಲ್ಲ ಎಂದು ಕಾನೂನು ಸಮರ ಸಾರಿದ್ದಾರೆ.
ಎಂ.ಎನ್. ಕುಮಾರ್ ಆರೋಪವೇನು?
ಮಾಣಿಕ್ಯ, ಮುಕುಂದ ಮುರಾರಿ ಸಿನಿಮಾ ಸೇರಿದಂತೆ ಹಲವು ಹಿಟ್ ಸಿನಿಮಾಗಳನ್ನು ನೀಡಿರುವ ನಿರ್ಮಾಪಕ ಎಂ.ಎನ್. ಕುಮಾರ್ ಸುದ್ದಿಗೋಷ್ಠಿ ನಡೆಸಿ ಕಿಚ್ಚ ಸುದೀಪ್ ವಿರುದ್ಧ ಸಾಲು ಸಾಲು ಆರೋಪಗಳನ್ನು ಮಾಡಿದ್ದಾರೆ. ಸಿನಿಮಾಗೆ ಅಡ್ವಾನ್ ಪಡೆದು ಸಿನಿಮಾ ಮಾಡಿಕೊಡದೇ ಸತಾಯಿಸುತ್ತಿದ್ದಾರೆ. ಎಷ್ಟೇ ಬಾರಿ ಮನೆಗೆ ಹೋದರು ನಮಗೆ ಸ್ಪಂದಿಸುತ್ತಿಲ್ಲ. ಅವರಿಂದ ಸಾಕಷ್ಟು ಹಣ ನಷ್ಟವಾಗಿದೆ. ಮನೆಯ ಅಡುಗೆ ಕೋಣೆ ರಿಪೇರಿಗೆಂದು 10 ಕೋಟಿ ರೂಪಾಯಿ ಹಣ ನೀಡಿದ್ದೇನೆ. ಅದನ್ನು ನೀಡದೆ, ಸಿನಿಮಾವನ್ನು ಮಾಡಿಕೊಡದೇ ಸುದೀಪ್ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.
ನಿರ್ಮಾಪಕ ರೆಹಮಾನ್ ಆರೋಪವೇನು..?
ಹುಚ್ಚ ಸಿನಿಮಾ ನಿರ್ಮಾಪಕ ರೆಹಮಾನ್ ಕೂಡ ಸುದೀಪ್ ವಿರುದ್ಧ ಸುದ್ದಿಗೋಷ್ಠಿ ನಡೆಸಿ 35 ಲಕ್ಷ ರೂಪಾಯಿ ನಷ್ಟವಾಗಿದೆ ಎಂದು ಆರೋಪಿಸಿದ್ದರು. ಸುದೀಪ್ ಜತೆ ಸಿನಿಮಾ ಮಾಡಲು ಹಿಂದಿ ಸಿನಿಮಾವೊಂದರ ರೈಟ್ಸ್ ತಂದಿದ್ದೆ ಆದರೆ, ಸುದೀಪ್ ಸಿನಿಮಾಗೆ ಒಪ್ಪಲಿಲ್ಲ. ಅವರು ಹೇಳಿದರೂ ಅಂತ ರೈಟ್ಸ್ ತಂದಿದ್ದೆ. ಇದರಿಂದ ನನಗೆ 35 ಲಕ್ಷ ರೂಪಾಯಿ ಹಣ ನಷ್ಟವಾಗಿದೆ. ನಾನು ಮತ್ತು ನನ್ನ ಮಗಳು ಸುದೀಪ್ ಅವರನ್ನು ಭೇಟಿಯಾಗಲು ಹೋದಾಗ ಸರಿಯಾಗಿ ಸ್ಪಂದಿಸಲಿಲ್ಲ ಎಂದು ಆರೋಪಿಸಿದ್ದರು.
ಸದ್ಯ ಮ್ಯಾಜಿಸ್ಟ್ರೇಟ್ ಕೋರ್ಟ್ನ ಕಟಕಟೆಯಲ್ಲಿ ನಿಂತುಕೊಂಡು ಕಿಚ್ಚ ಸುದೀಪ್, ನಿರ್ಮಾಪಕ ಎಂಎನ್ ಕುಮಾರ್, ಎಂಎಸ್ ಸುರೇಶ್ ವಿರುದ್ಧ 13ನೇ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿದ್ದಾರೆ.
ಕೋರ್ಟ್‌ನಲ್ಲಿ ನಡೆದ ವಾದವೇನು?
ಸುದೀಪ್: ಎಂ.ಎನ್ ಕುಮಾರ್ ನನ್ನ ವಿರುದ್ಧ ಮಾಧ್ಯಮಗೋಷ್ಟಿಯಲ್ಲಿ ವಿರುದ್ಧ ಇಲ್ಲಸಲ್ಲದ ಸುಳ್ಳು ಆರೋಪಗಳನ್ನು ಮಾಡಿದ್ದಾರೆ. ಆರ್ ಆರ್ ನಗರದ ಮನೆ ಕಟ್ಟಲು ಹಣದ ಸಹಾಯ ಮಾಡಿದ್ದೇನೆ ಎನ್ನುವ ಆರೋಪ ಸುಳ್ಳು. ಮನೆ ರಿಪೇರಿಗೆ ಹಣ ನೀಡಿದ್ದಾಗಿ ಪ್ರೆಸ್‌ಮೀಟ್‌ನಲ್ಲಿ ಸುಳ್ಳು ಹೇಳಿದ್ದಾರೆ. ಕುಮಾರ್ ಅವರ ಹೇಳಿಕೆಯನ್ನು ಬೆಂಬಲಿಸಿ ಎಂ.ಎಸ್ ಸುರೇಶ್ ಮಾತನಾಡಿದ್ದಾರೆ. ಈ ಇಬ್ಬರ ಮಾಧ್ಯಮಗೋಷ್ಟಿಯಿಂದ ನನ್ನ ಮಾನ ಹಾನಿಯಾಗಿದೆ. ಈ ಬಗ್ಗೆ ಹಲವರು ನನಗೆ ಪ್ರಶ್ನೆ ಮಾಡ್ತಾ ಇದ್ದಾರೆ. ಅವರಿಗೆ ಉತ್ತರ ನೀಡಲಾಗದೇ ನನ್ನ ಮಾನ ಹರಾಜು ಆಗ್ತಾ ಇದೆ ಎಂದು ಹಲವು ಫೋಟೋಗಳೊಂದಿಗೆ ಸುದೀಪ್ ಕೋರ್ಟ್‌ಗೆ ದಾಖಲೆ ಸಲ್ಲಿಸಿದ್ದಾರೆ.
ಜಡ್ಜ್ ಪ್ರಶ್ನೆ: ನಿರ್ಮಾಪಕರು ಕ್ಷಮಾಪಣೆ ಕೇಳಿದರೆ ಕ್ಷಮಿಸುತ್ತೀರಾ.? ರಾಜಿ ಸಂಧಾನ ಮಾಡಿಕೊಂಡು ಕಕ್ಷಿದಾರರಿಗೆ ಮಾದರಿಯಾಗುತ್ತೀರಾ?
ಸುದೀಪ್: ಈ ಹಿಂದೆ ನೋಟಿಸ್ ನೀಡಿ ಮಾಧ್ಯಮಗಳಲ್ಲಿ ಕ್ಷಮೆಯಾಚಿಸಲು ಕೇಳಿದ್ದೆ. ಆದರೆ ಅವರು ಮಾಧ್ಯಮಗಳಲ್ಲಿ ಕ್ಷಮೆ ಯಾಚಿಸಿಲ್ಲ. ಅವರ ಹೇಳಿಕೆಯಿಂದ ನನ್ನ ವರ್ಚಸ್ಸಿಗೆ ಹಾನಿಯಾಗಿದೆ. ನಾನು ಇಷ್ಟು ವರ್ಷ ಕಷ್ಟ ಪಟ್ಟು ಗಳಿಸಿದ ವರ್ಚಸ್ಸಿಗೆ ಹಾನಿಯಾಗಿದೆ. ಒಬ್ಬ ಸುದೀಪ್ ಅನ್ನ ಬಗ್ಗಿಸಿದರೆ ಹಲವರನ್ನು ಬಗ್ಗಿಸಬಹುದೆಂದು ತಿಳಿದಿದ್ದಾರೆ. ಹೀಗಾಗಿ ಕ್ಷಮಿಸೋ ಪ್ರಶ್ನೆಯೇ ಇಲ್ಲ.
ಈ ವಾದ, ಪ್ರತಿವಾದವನ್ನು ಆಲಿಸಿರುವ ನ್ಯಾಯಾಲಯ ಈ ಕೇಸ್ ಬಗ್ಗೆ ನಾಳೆ ಆದೇಶ ನೀಡಲಾಗುವುದು ಎಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ