'ಗಟ್ಟಿಮೇಳ' ಧಾರಾವಾಹಿಯಲ್ಲಿ ವಿಕ್ರಾಂತ್ ವಸಿಷ್ಟ ಪಾತ್ರ ಮಾಡುತ್ತಿದ್ದ ನಟ ಅಭಿಷೇಕ್ ದಾಸ್
ಗಟ್ಟಿಮೇಳ' ಧಾರಾವಾಹಿಗೆ ನಟ ಅಭಿಷೇಕ್ ದಾಸ್ ಗುಡ್ ಬೈ ಹೇಳಿದ್ದು ಯಾಕೆ ಗೊತ್ತಾ..?
ಹೊಸ ಹೊಸ ತಿರುವು ಹಾಗೂ ಕುತೂಹಲ ಪಡೆದುಕೊಳ್ಳುತ್ತಿದೆ ಜನ ಮೆಚ್ಚಿದ ಧಾರಾವಾಹಿ!
ಕನ್ನಡ ಕಿರುತೆರೆಯಲ್ಲಿ ಕೆಲವೊಂದು ಧಾರಾವಾಹಿಗಳು ವೀಕ್ಷಕರ ಮನಸ್ಸಿನ ಮೇಲೆ ಪರಿಣಾಮ ಬೀರುತ್ತವೆ. ಬಹಶ: ಅದರಲ್ಲಿ ಬರುವಂತ ಒಂದೊಂದು ಪಾತ್ರಗಳು ಪ್ರೇಕ್ಷಕರ ಮನಸ್ಸಿನಲ್ಲಿ ನೆಲೆಯೂರುವಂತೆ ಮಾಡಿ ಬಿಡುತ್ತವೆ. ಬರೆದ ಕತೆಯ ಹಾಗೇ ಪಾತ್ರಕ್ಕೆ ತಕ್ಕಂತೆ ನಟಿಸುವ ಕಲಾವಿದರೋ ಸಿಗುವುದು ತುಂಬಾ ಕಮ್ಮಿ. ಒಟ್ಟಿನಲ್ಲಿ ಆ ಕತೆಗೆ ನಾವು ಮನಸೋತು ಬಿಡುತ್ತಿವೆ ಅಂತಹ ಕತೆಗಳಲ್ಲಿ ಗಟ್ಟಿಮೇಳ ಧಾರಾವಾಹಿಯು ಒಂದು.
ಗಟ್ಟಿಮೇಳ ಧಾರಾವಾಹಿ ಅಂದರೆ ಎಲ್ಲರಿಗೂ ತುಂಬಾ ಇಷ್ಟ. ಅದರಲ್ಲಿ ಇರೋ ಅಂತ ಪಾತ್ರಗಳಂತೂ ಎಲ್ಲರ ಮನಸ್ಸು ಗೆದ್ದಿದೆ. ಈ ಧಾರಾವಾಹಿ ಬರೋಬ್ಬರಿ 1000 ಸಂಚಿಕೆಗಳಿಗಿಂತ ಹೆಚ್ಚು ಪುಟಗಳಲ್ಲಿ ಪ್ರಸಾರವಾಗ್ತಿದೆ. ಇನ್ನೂ ಧಾರಾವಾಹಿಯಲ್ಲಿ ವಿಕ್ರಾಂತ್ ವಸಿಷ್ಟ ಪಾತ್ರ ಬಹುಪಾಲು ದೊಡ್ಡದಿದೆ. ವಿಕ್ಕಿ ಪಾತ್ರವು ವೇದಾಂತ್ ಪಾತ್ರವಷ್ಟೇ ತುಂಬಾ ಪವರ್ಫುಲ್ ಆಗಿ ಮೂಡಿ ಬರ್ತಿತ್ತು. ಆದ್ರೆ ಕತೆಯ ಅನಿವಾರ್ಯಯತೆಗೆ ಇಂದಿಗೆ ವಿಕ್ರಾಂತ್ ಪಾತ್ರ ಸಂಪೂರ್ಣವಾಗಿ ಪೂರ್ಣಗೊಂಡಿದೆ. ಅಂದ್ರೆ ಕತೆ ಬಯಸಿದ್ದು ವಿಕ್ಕಿಯ ಸಾವು. ಹೌದು ಕತೆಯಲ್ಲಿ ಸದ್ಯ ತಿರುವುಗಳು ಬಹಳಷ್ಟಿವೆ. ವಸಿಷ್ಟ ಕುಟುಂಬದ ನಿಜವಾದ ತಾಯಿ ಯಾರು ಅನ್ನೋದು ಸದ್ಯದ ಕುತೂಹಲದ ತಿರುವುಗಳಿಗೆ ಕಾರಣವಾಗಿದೆ.
ಇನ್ನೂ, ನಿಜವಾದ ಅಮ್ಮನ ಹುಡುಕಾಟದಲ್ಲಿ ವಿಕ್ಕಿ ತುಂಬಾನೆ ಮಗ್ನರಾಗಿದ್ದರು. ಈ ಹುಡುಕಾಟದ ಮಧ್ಯೆ ವಿಕ್ಕಿಗೆ ಅವರ ನಿಜವಾದ ಆಯಿ ಯಾರೆಂದು ತಿಳಿತು. ವಿಕ್ಕಿಗೆ ನಿಜಾ ತಿಳಿದಿರೋ ವಿಷ್ಯ ಸುಹಾಸಿನಿಗೆ ಗೊತ್ತಾಗಿ, ಕುತಂತ್ರ ಮಾಡಿ ವಿಕ್ಕಿಯ ಗಾಡಿಗೆ ಆ್ಯಕ್ಸಿಡೆಂಟ್ ಮಾಡಿಸಿ ವಸಿಷ್ಟ ಕುಟುಂಬದ ದೀಪವನ್ನ ಆರಿಸಿದ್ದಾಳೆ. ವಿಕ್ಕಿಯ ಸಾವಿನಿಂದ ಮತ್ತೆ ನಿಜವಾದ ತಾಯಿಯ ಗುಟ್ಟು ಗುಟ್ಟಾಗಿ ಉಳಿದುಕೊಂಡಿತು. ವಿಕ್ಕಿಯ ಪಾತ್ರ ಧಾರಾವಾಹಿಯಲ್ಲಿ ಕೊನೆ ಉಸಿರೆಳದಿದೆ. ವಿಕ್ಕಿ ಪಾತ್ರವನ್ನ ಧಾರಾವಾಹಿಯ ಶುರುವಿಂದಲೂ ಚಾಚು ತಪ್ಪದೆ ಅತ್ಯದ್ಭುತವಾಗಿ ನಟಿಸಿದ್ದು ನಟ ಅಭಿಷೇಕ್ ದಾಸ್.
ಇಷ್ಟು ವರ್ಷದ ಗಟ್ಟಿಮೇಳ ಧಾರಾವಾಹಿಯಲ್ಲಿ ಹಲವಾರು ಪಾತ್ರಗಳು ರಿಪ್ಲೇಸ್ ಆಗಿದ್ದವು. ಹಲವಾರು ಜನ ಬಂದು ಹೋಗಿದ್ದರು.
ಆದರೆ ವಿಕ್ಕಿ ಪಾತ್ರಧಾರಿ ಅಭಿ ಮೊದಲ ಎಪಿಸೋಡ್ನಿಂದಲೂ ಕೂಡ ಧಾರಾವಾಹಿಯಲ್ಲಿ ಇದ್ದು ಸಂಪೂರ್ಣವಾಗಿ ವಿಕ್ಕಿಯ ಪಾತ್ರವನ್ನ ಜೀವಿಸಿದ್ದಾರೆ. ತಮ್ಮ ಪಾತ್ರ ಮುಗಿಯುತ್ತಿರುವ ಬಗ್ಗೆ ಹಾಗೂ ತಮ್ಮ ಗಟ್ಟಿಮೇಳ ಕೊನೆಯ ದಿನ ಶೂಟಿಂಗ್ ವೇಳೆ ತೆಗೆದ ಭಾವುಕತೆಯಿಂದ ಕೂಡಿರುವ ಕೆಲವೊಂದು ಕ್ಷಣಗಳನ್ನ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಅಭಿಮಾನಿಗಳಿಗೂ ಕೂಡ ವಿಕ್ಕಿಯನ್ನ ಇಷ್ಟ ಪಟ್ಟ ಕಾರಣ ದೀರ್ಘದಂಡ ಧನ್ಯವಾದಗಳು ಅಭಿ ಅರ್ಪಿಸಿದ್ದಾರೆ. ಒಟ್ಟಿನಲ್ಲಿ ಅಭಿಮಾನಿಗಳು ಕೂಡ ವಿಕ್ಕಿ ಪಾತ್ರವನ್ನ ಮಿಸ್ ಮಾಡಿಕೊಳ್ಳುವುದರಲ್ಲಿ ಡೌಟೆ ಇಲ್ಲ. ಅಷ್ಟು ಅಂದವಾಗಿ ಅಭಿನಯಿಸಿ ಈಗ ಧಾರಾವಾಹಿಯಿಂದ ಸಂಪೂರ್ಣ ಹೊರ ಬಂದಿದ್ದಾರೆ ನಟ ಅಭಿಷೇಕ್ ದಾಸ್.
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ