ಇಷ್ಟು ದಿನ ಪದೆ ಪದೇ ಟೀಕೆಗೆ ಗುರಿಯಾಗುತ್ತಿದ್ದ ‘ಅಕ್ಕಿ’ಗೆ ವಿಮುಕ್ತಿ
ಸ್ವಾತಂತ್ರ್ಯ ದಿನದಂದೇ ಅಕ್ಷಯ್ ಕುಮಾರ್ ಮತ್ತೊಂದು ಸಿಹಿ ಸುದ್ದಿ
ಸ್ಪೆಷಲ್ ಫೋಟೋ ಶೇರ್ ಮಾಡಿಕೊಂಡ ‘ಓ ಮೈ ಗಾಡ್’ ಹೀರೋ
ಬಾಲಿವುಡ್ ನಟ ಅಕ್ಷಯ್ ಕುಮಾರ್ ಸದಾ ಒಂದಲ್ಲ ಒಂದು ವಿವಾದಗಳಿಂದ ಸುದ್ದಿ ಆಗುತ್ತಾರೆ. ಸದ್ಯ ಇವರು ಅಭಿನಯಿಸಿರುವ ಓ ಮೈ ಗಾಡ್-2 ಬೆಳ್ಳಿತೆರೆ ಮೇಲೆ ರಾರಾಜಿಸುತ್ತಿದ್ದು ಬಾಕ್ಸ್ ಆಫೀಸ್ನಲ್ಲೂ ಸಖತ್ ಕಲೆಕ್ಷನ್ ಮಾಡುತ್ತಿದೆ. ಸಿನಿಮಾ ಯಶಸ್ವಿಯಾದ ಖುಷಿಯಲ್ಲಿರುವ ‘ಅಕ್ಕಿ’ ಸ್ವಾತಂತ್ರ್ಯ ದಿನದಂದೇ ಮತ್ತೊಂದು ಆನಂದಕರವಾದ ಸಂಗತಿ ಶೇರ್ ಮಾಡಿಕೊಂಡಿದ್ದಾರೆ.
ನಟ ಅಕ್ಷಯ್ ಕುಮಾರ್ ಕೆನಡಾದ ಸಿಟಿಜನ್ಶಿಪ್ ಅನ್ನು ತ್ಯಜಿಸಿ ಭಾರತದ ಪೌರತ್ವವನ್ನು ಮತ್ತೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಸ್ವತಃ ಅಕ್ಷಯ್ ಕುಮಾರ್ ಅವರೇ ತಮ್ಮ ಅಧಿಕೃತ ಟ್ವಿಟರ್ ಅಕೌಂಟ್ನಲ್ಲಿ ಪೌರತ್ವವನ್ನು ಪಡೆದುಕೊಂಡಿರುವ ದಾಖಲೆಗಳ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ನನ್ನ ಹೃದಯ ಮತ್ತು ಪೌರತ್ವ ಎರಡು ಹಿಂದೂಸ್ತಾನಿ. ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು. ಜೈ ಹಿಂದ್ ಎಂದು ಬರೆದುಕೊಂಡಿದ್ದಾರೆ.
ಬಾಲಿವುಡ್ ಅಂಗಳದಲ್ಲಿ ಬಿಗ್ ಸ್ಟಾರ್ ಆಗಿರುವ ಅಕ್ಷಯ್ ಕುಮಾರ್ ಅಪಾರ ಭಾರತೀಯರ ಅಭಿಮಾನವನ್ನು ಗಳಿಸಿಕೊಂಡಿದ್ದಾರೆ. ಆದರೆ ಕೆನಡಾದ ಪೌರತ್ವವನ್ನು ಹೊಂದಿದ್ದ ನಟ ಆಗಾಗ ಕೆಲವರಿಂದ ಟೀಕೆಗೆ ಗುರಿಯಾಗುತ್ತಿದ್ದರು. ಇದು ಅವರಿಗೆ ಸಾಕಷ್ಟು ನೋವನ್ನುಂಟು ಮಾಡಿತ್ತು. ಹೀಗಾಗಿ ಭಾರತದ ಮೇಲಿನ ಪ್ರೀತಿಯನ್ನು ಸಾಬೀತುಪಡಿಸಬೇಕು ಎಂದು ಮತ್ತೆ ಇಲ್ಲಿನ ಪೌರತ್ವವನ್ನು ಪಡೆಯಲೇಬೇಕೆಂದು ಅರ್ಜಿ ಸಲ್ಲಿಸಿದ್ದರು. ಅದರಂತೆ ಸ್ವಾತಂತ್ರ್ಯ ದಿನಾಚರಣೆಯಂದೇ ಬಾಲಿವುಡ್ ಸ್ಟಾರ್ಗೆ ಭಾರತದ ಪೌರತ್ವ ಸಿಕ್ಕಿರುವುದಕ್ಕೆ ಡಬಲ್ ಖುಷಿ ವ್ಯಕ್ತಪಡಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
Dil aur citizenship, dono Hindustani.
Happy Independence Day!
Jai Hind! 🇮🇳 pic.twitter.com/DLH0DtbGxk— Akshay Kumar (@akshaykumar) August 15, 2023