newsfirstkannada.com

ಕೈ ಹಿಡಿಯದ ಸಿನಿಮಾ; ಕೊನೆಗೂ ಮದುವೆ ಆಗಲು ಸಜ್ಜಾದ ಅರ್ಜುನ್​ ಸರ್ಜಾ ಪುತ್ರಿ; ಹುಡುಗ ಯಾರು?

Share :

26-06-2023

  ಆಕ್ಷನ್​​ ಕಿಂಗ್​​ ಅರ್ಜುನ್ ಸರ್ಜಾ ಮನೆಯಲ್ಲಿ ಮದುವೆ ಸಂಭ್ರಮ!

  ಹಿರಿಯ ಮಗಳಿಗೆ ಮದುವೆ ಮಾಡಲು ಮುಂದಾದ ಅರ್ಜುನ್​ ಸರ್ಜಾ

  ನಟಿ ಐಶ್ವರ್ಯಾ ಅರ್ಜುನ್​​ ಕೈ ಹಿಡಿಯಲಿರೋ ಹುಡುಗ ಯಾರು..?

ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ಮನೆಯಲ್ಲಿ ಮದುವೆ ಸಂಭ್ರಮದ ಸುಳಿವು ಸಿಕ್ಕಿದೆ. ಹಿರಿ ಮಗಳ ಕಲ್ಯಾಣಕ್ಕೆ ಸಕಲ ತಯಾರಿ ಆರಂಭವಾಗಿದ್ದು, ಶೀಘ್ರದಲ್ಲೇ ಐಶ್ವರ್ಯಾ ಅರ್ಜುನ್​​ ಹಸೆಮಣೆ ಏರಲಿದ್ದಾರೆ ಎಂಬ ಸಮಾಚಾರ ಈಗ ಸಾಮಾಜಿಕ ಜಾಲತಾಣದಲ್ಲಿ ಚಾಲ್ತಿಗೆ ಬಂದಿದೆ. ಅರ್ಜುನ್ ಸರ್ಜಾ ಮತ್ತು ನಿವೇದಿತಾ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು. ಐಶ್ವರ್ಯಾ ಮತ್ತು ಅಂಜನಾ. ಹಿರಿ ಮಗಳು ಐಶ್ವರ್ಯಾ ಈಗಾಗಲೇ ಸಿನಿ ಪ್ರಪಂಚದಲ್ಲಿ ಮಿಂಚುತ್ತಿದ್ದರೆ ಆ ಕಡೆ ಕಿರಿ ಮಗಳು ಉದ್ಯಮ ಕ್ಷೇತ್ರದಲ್ಲಿ ತೊಡಗಿಕೊಂಡಿದ್ರು. ಈಗ ಸರ್ಜಾ ಅವರ ದೊಡ್ಮಗಳು ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.

ಐಶ್ವರ್ಯಾ ಅರ್ಜುನ್​​ ವಿಷಯದಲ್ಲಿ ಸಿನಿಮಾ ಅಷ್ಟಾಗಿ ಕೈ ಹಿಡಿದಿಲ್ಲ. 2013ರಲ್ಲಿ ನಟ ವಿಶಾಲ್ ಜೊತೆ ಹೀರೋಯಿನ್​ ಜರ್ನಿ ಆರಂಭಿಸಿದ ಐಶ್ವರ್ಯಾ ಇದುವರೆಗೂ ಮಾಡಿರೋದು ಕೇವಲ ಎರಡು ಸಿನಿಮಾ. ಇನ್ನು 2018ರಲ್ಲಿ ‘ಪ್ರೇಮ ಬರಹ’ ಚಿತ್ರದೊಂದಿಗೆ ಸ್ಯಾಂಡಲ್​ವುಡ್​ ಪ್ರವೇಶಿಸಿದ ಐಶ್ವರ್ಯಾ ಆಮೇಲೆ ಯಾವುದೇ ಹೊಸ ಸಿನಿಮಾ ಮಾಡಿಲ್ಲ. ಇದೇ ಚಿತ್ರವನ್ನ ತಮಿಳಿನಲ್ಲೂ ಮಾಡಿ ಸುಮ್ಮನಾಗಿದ್ರು. ಈ ನಡುವೆ ತೆಲುಗಿನಲ್ಲಿ ವಿಶ್ವಕ್​​​​ ಸೇನ್ ಜೊತೆ ಹೊಸ ಚಿತ್ರ ಆರಂಭಿಸಿದ್ರು. ಕೆಲವು ವೈಯಕ್ತಿಕ ಕಾರಣಗಳಿಂದ ಈ ಚಿತ್ರ ಅರ್ಧಕ್ಕೆ ನಿಂತು ಹೋಗಿದೆ. ಹಾಗಾಗಿ ಕಳೆದ ಹತ್ತು ವರ್ಷದಲ್ಲಿ ಐಶ್ವರ್ಯಾಗೆ ಸಿನಿಮಾ ಇಂಡಸ್ಟ್ರಿ ಹೇಳಿಕೊಳ್ಳುವ ಸಕ್ಸಸ್​ ಕೊಟ್ಟಿಲ್ಲ. ಇದೀಗ, ಪರ್ಸನಲ್ ಲೈಫ್​ ಕಡೆ ಫೋಕಸ್ ಮಾಡಿರೋ ಐಶ್ವರ್ಯಾ ಅರ್ಜುನ್​​ ತಾನು ಇಷ್ಟ ಪಟ್ಟ ಹುಡುಗನೊಂದಿಗೆ ಸಪ್ತಪದಿ ತುಳಿಯೋಕೆ ಸಜ್ಜಾಗಿದ್ದಾರಂತೆ.

ಅರ್ಜುನ್ ಪುತ್ರಿ ಕೈ ಹಿಡಿಯೋ ವರ ಯಾರು ಗೊತ್ತಾ?

ನಟಿ ಐಶ್ವರ್ಯಾ ಅರ್ಜುನ್​​ ಅವರು ಉಮಾಪತಿ ರಾಮಯ್ಯ ಜೊತೆ ಸಪ್ತಪದಿ ತುಳಿಯಲಿದ್ದಾರೆ. ತಮಿಳಿನ ಖ್ಯಾತ ಹಾಸ್ಯ ನಟ ತಂಬಿ ರಾಮಯ್ಯ ಅವರ ಪುತ್ರ. ನಟ, ನಿರ್ದೇಶಕ, ಬರಹಗಾರ ತಂಬಿ ರಾಮಯ್ಯ ಅವರ ಮಗನ ಜೊತೆ ಸರ್ಜಾ ಮಗಳ ವಿವಾಹ ನಿಶ್ವಯವಾಗಿದೆ ಎಂಬ ಸುದ್ದಿ ವರದಿಯಾಗಿವೆ. ಉಮಾಪತಿ ಮತ್ತು ಐಶ್ವರ್ಯಾ ಅವರದ್ದು ಹಳೆಯ ಪರಿಚಯವಾಗಿದ್ದು, ಮನೆಯವರನ್ನ ಒಪ್ಪಿಸಿ ಮದುವೆ ಆಗ್ತಿದ್ದಾರೆ ಅಂತಾನೂ ಹೇಳಲಾಗ್ತಿದೆ. ಅಂದ್ಹಾಗೆ ಉಮಾಪತಿನೂ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. 2017ರಲ್ಲಿ ಸಿನಿಮಾ ಇಂಡಸ್ಟ್ರಿ ಪ್ರವೇಶಿಸಿದ ಉಮಾಪತಿ ಅದಾದ ಮೇಲೆ ರಿಯಾಲಿಟಿ ಶೋ ಕಡೆ ಮುಖ ಮಾಡಿದ್ರು. ಡ್ಯಾನ್ಸ್​ನಲ್ಲಿ ವಿಶೇಷ ತರಬೇತಿ ಪಡೆದುಕೊಂಡಿದ್ದ ಉಮಾಪತಿ ಕೊರಿಯೋಗ್ರಾಫರ್ ಆಗಿಯೂ ಕೆಲಸ ಮಾಡಿದ್ದಾರೆ. ಆ್ಯಕ್ಷನ್ ಅಡ್ವಂಚರ್ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಕೊನೆ ಸ್ಟೇಜ್​ವರೆಗೂ ಬಂದಿದ್ದಾರೆ. ಮತ್ತೊಂದು ವಿಶೇಷ ಅಂದ್ರೆ ಸ್ವತಃ ಅರ್ಜುನ್ ಸರ್ಜಾ ನಿರೂಪಣೆ ಮಾಡ್ತಿದ್ದ ಶೋವೊಂದರಲ್ಲೂ ಉಮಾಪತಿ ಸ್ಪರ್ಧಿಯಾಗಿದ್ದರಂತೆ.

ಫೆಬ್ರವರಿಯಲ್ಲಿ ನಡೆಯಲಿದೆ ಐಶ್ವರ್ಯ-ಉಮಾಪತಿ ಮದುವೆ!

ಐಶ್ವರ್ಯಾ ಅರ್ಜುನ್​​ ಮತ್ತು ಉಮಾಪತಿ ಮದುವೆಗೆ ಸಂಬಂಧಿಸಿದಂತೆ ಇತ್ತೀಚೆಗಷ್ಟೇ ಮಾತುಕತೆ ನಡೆದಿದೆಯಂತೆ. ಎರಡೂ ಕುಟುಂಬದವರು ಒಂದೆಡೆ ಸೇರಿ ನಿಶ್ಚಿತಾರ್ಥ, ಮದುವೆ ದಿನಾಂಕದ ಬಗ್ಗೆ ಚರ್ಚಿಸಿದ್ದಾರಂತೆ. ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ 2024ರ ಫೆಬ್ರವರಿಯಲ್ಲಿ ಅರ್ಜುನ್ ಸರ್ಜಾ ಪುತ್ರಿ ವಿವಾಹ ಮಹೋತ್ಸವ ಬಹಳ ಅದ್ಧೂರಿಯಾಗಿ ನೆರವೇರಲಿದೆಯಂತೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಕೈ ಹಿಡಿಯದ ಸಿನಿಮಾ; ಕೊನೆಗೂ ಮದುವೆ ಆಗಲು ಸಜ್ಜಾದ ಅರ್ಜುನ್​ ಸರ್ಜಾ ಪುತ್ರಿ; ಹುಡುಗ ಯಾರು?

https://newsfirstlive.com/wp-content/uploads/2023/06/arjun-sarja.jpg

Load More