newsfirstkannada.com

×

ನಟ ಚಂದನ್ ಕುಮಾರ್​ ದಂಪತಿಗೆ ಲಕ್ಕಿ ಬುಧವಾರ.. ಏನಿದರ ಸ್ಪೆಷಲಿಟಿ ಗೊತ್ತಾ?

Share :

Published September 23, 2024 at 7:50pm

Update September 25, 2024 at 5:01pm

    ಸೆ.18ರಂದು ಮುದ್ದಾದ ಮಗುವಿಗೆ ವೆಲ್‌ಕಮ್ ಹೇಳಿದ ದಂಪತಿ

    2021ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಚಂದನ್, ಕವಿತಾ ಗೌಡ

    ಲಕ್ಷ್ಮೀ ಬಾರಮ್ಮ ಸೀರಿಯಲ್​ನಿಂದ ಖ್ಯಾತಿ ಪಡೆದ ಸ್ಟಾರ್​ ಜೋಡಿ

ಲಕ್ಷ್ಮಿ ಬಾರಮ್ಮ ಸೀರಿಯಲ್ ಖ್ಯಾತಿಯ ನಟಿ ಕವಿತಾ ಗೌಡ, ಚಂದನ್ ಕುಮಾರ್ ಮನೆಗೆ ಮುದ್ದಾದ ಮಗುವಿನ ಆಗಮನವಾಗಿದೆ. ಕವಿತಾ ಗೌಡ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಂದೆಯಾದ ಖುಷಿಯಲ್ಲಿ ಚಂದನ್ ಕುಮಾರ್ ಮಗನ ಮೊದಲ ವಿಡಿಯೋ ಹಂಚಿಕೊಂಡಿದ್ದಾರೆ. ಕವಿತಾ ಗೌಡ, ಚಂದನ್ ಕುಮಾರ್ ಮನೆಯಲ್ಲಿ ಸಂಭ್ರಮ ದುಪ್ಪಟ್ಟಾಗಿದೆ.

ಇದನ್ನೂ ಓದಿ: ವಿಷ್ಣುವರ್ಧನ್ ಹುಟ್ಟಿದ ದಿನ ಮಗು ಜನನ.. ಕವಿತಾ ಗೌಡ, ಚಂದನ್‌ಗೆ ಶುಭಾಶಯಗಳ ಮಹಾಪೂರ

ನಟಿ ಕವಿತಾ ಗೌಡ ದಂಪತಿ ಫುಲ್ ಖುಷ್​ ಆಗಿದ್ದಾರೆ. ಮುದ್ದಾದ ಮಗ ಮಡಿಲು ಸೇರಿದ್ದಾನೆ ಅಂತ ಕವಿತಾ ಗೌಡ ಹಾಗೂ ಚಂದನ್ ಕುಮಾರ್ ಅವರು ತಮ್ಮ ಖುಷಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಮಗನ ಕಾಲನ್ನು ಸ್ಪರ್ಶಿಸಿರುವ ಫೋಟೋ ಹಾಗೂ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಇದೀಗ ಮುದ್ದಾದ ಮಗನನ್ನು ತಮ್ಮ ಮನೆಗೆ ಬರಮಾಡಿಕೊಂಡಿದ್ದಾರೆ. ಜೊತೆಗೆ ಆ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಒಂದೇ ದಿನ ತಂದೆ, ತಾಯಿ ಮತ್ತು ನಮ್ಮ ಗಂಡು ಮಗು ಮೂರು ಜನ ಹುಟ್ಟಿದ್ದಾರೆ ಅಂತ ಬರೆದುಕೊಂಡಿದ್ದಾರೆ. ಈ ಮೂಲಕ ಚಂದನ್​ ಕುಮಾರ್ ಹಾಗೂ ಕವಿತಾ ಗೌಡಗೆ ಲಕ್ಕಿ ಬುಧವಾರ ಅಂತ ಹೇಳಬಹುದು.

ಮೇ 5ರಂದು ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಮುದ್ದಾದ ಫೋಟೋವನ್ನು ಶೇರ್​ ಮಾಡಿಕೊಳ್ಳುವ ಮೂಲಕ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇವೆ ಅಂತ ತಿಳಿಸಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆ ಅಭಿಮಾನಿಗಳು ಹಾಗೂ ಕಿರುತೆರೆ ನಟ ನಟಿಯರು ಕವಿತಾ ಗೌಡ ಹಾಗೂ ನಟ ಚಂದನ್ ಕುಮಾರ್​ಗೆ ಶುಭ ಹಾರೈಸಿದ್ದರು. ಆಗಾಗ ನಟಿ ಕವಿತಾ ಗೌಡ ತಮ್ಮ ಮುದ್ದಾದ ಬೇಬಿ ಬಂಪ್​ ಫೋಟೋವನ್ನು ಶೇರ್ ಮಾಡಿಕೊಳ್ಳುತ್ತಾ ಇರುತ್ತಿದ್ದರು.

ಇದನ್ನೂ ಓದಿ: ಲಕ್ಷ್ಮೀ ಬಾರಮ್ಮ ಸೀರಿಯಲ್​ ನಟಿ ಕವಿತಾ ಗೌಡ ಹೊಸ ಫೋಟೋಶೂಟ್​; ತುಂಬು ಗರ್ಭಿಣಿಗೆ ಫ್ಯಾನ್ಸ್​ ಶುಭ ಹಾರೈಕೆ

ಕವಿತಾ ಗೌಡ ಅವರು ಕನ್ನಡ ಕಿರುತೆರೆ ನಟಿ. ಚಂದನ್​ ಕುಮಾರ್​ ಅವರು ಕಿರುತೆರೆ, ಬೆಳ್ಳಿತೆರೆಯಲ್ಲಿ ಮುಂಚಿದ ನಟ. ಕವಿತಾ ಗೌಡ ಹಾಗೂ ಚಂದನ್ ಅವರು ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ನಟಿಸಿದ್ದರು. ತದನಂತರ ಲಾಕ್‌ಡೌನ್ ಸಮಯದಲ್ಲಿ ಜೋಡಿ ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡಿತ್ತು. ಬಳಿಕ 2021 ಮೇ 14ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ಸ್ಟಾರ್ ದಂಪತಿ ಮೊದಲ ಮಗುವಿನ ಬರಮಾಡಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಟ ಚಂದನ್ ಕುಮಾರ್​ ದಂಪತಿಗೆ ಲಕ್ಕಿ ಬುಧವಾರ.. ಏನಿದರ ಸ್ಪೆಷಲಿಟಿ ಗೊತ್ತಾ?

https://newsfirstlive.com/wp-content/uploads/2024/09/kavitha-gowda-1.jpg

Load More