newsfirstkannada.com

ಜೈಲಿನಲ್ಲಿ ದರ್ಶನ್‌ ರಾಜಾತಿಥ್ಯ ಕೇಸ್‌ಗೆ ಹೊಸ ಟ್ವಿಸ್ಟ್ ಕೊಟ್ಟ ಚೇತನ್ ಅಹಿಂಸಾ; ಹೇಳಿದ್ದೇನು?

Share :

Published August 26, 2024 at 11:05pm

    ನಟ ದರ್ಶನ್‌ ವಿಶೇಷ ಸೌಲಭ್ಯಗಳನ್ನು ಪಡೆಯುತ್ತಿರುವುದು ಹೇಗೆ?

    ನಾನು 2 ಬಾರಿ ಸೆಂಟ್ರಲ್‌ ಜೈಲಿಗೆ ಭೇಟಿ ನೀಡಿದ್ದೇನೆ ಎಂದ ನಟ ಚೇತನ್

    ಕೊಲೆ ಆರೋಪಿ ದರ್ಶನ್ ಪರ ರಾಜಕಾರಣಿಗಳ ಲಾಬಿ ನಡೆದಿತ್ತಾ?

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲಿನಲ್ಲಿರುವ ದರ್ಶನ್ ರಾಜಾತಿಥ್ಯದ ಫೋಟೋ ಸಖತ್ ಸದ್ದು ಮಾಡ್ತಿದೆ. ದರ್ಶನ್‌ ಕೈಗೆ ಸಿಗರೇಟ್‌ ಕೊಟ್ಟು, ಚೇರ್‌ನಲ್ಲಿ ಕೂರಿಸಿದವರ ಬಗ್ಗೆ ಜೈಲಾಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಪರಪ್ಪನ ಅಗ್ರಹಾರದ ಸರ್ಪಗಾವಲಿನಲ್ಲೂ ವಿಚಾರಣಾಧೀನ ಕೈದಿಗಳಿಗೆ ಸಿಕ್ಕ ಸೌಲಭ್ಯಗಳು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.

ಇದನ್ನೂ ಓದಿ: BREAKING: ದರ್ಶನ್ ಸ್ಲೇಟ್ ಹಿಡಿಯೋದು ಫಿಕ್ಸ್‌? A2 ಅಲ್ಲ A1 ವಿರುದ್ಧ ರೌಡಿಶೀಟ್ ಓಪನ್? 

ದರ್ಶನ್ ವಿರುದ್ಧ ಸಾಲು, ಸಾಲು ಕೇಸ್‌ ದಾಖಲಾಗಿರುವ ಮಧ್ಯೆ ನಟ ಚೇತನ್ ಅಹಿಂಸಾ ಅವರು ಹೊಸ ಟ್ವಿಸ್ಟ್ ಕೊಟ್ಟಿದ್ದಾರೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಚೇತನ್‌ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್‌ ವಿಶೇಷ ಸೌಲಭ್ಯಗಳನ್ನು ಪಡೆಯುತ್ತಿರುವುದನ್ನು ಇತ್ತೀಚಿನ ಚಿತ್ರವೊಂದು ತೋರಿಸುತ್ತದೆ. ನಾನು 2 ಬಾರಿ ಜೈಲಿಗೆ ಭೇಟಿ ನೀಡಿದ್ದೇನೆ. ಆ ಸಂದರ್ಭದಲ್ಲಿ ನಾನು ನೋಡಿದ 1,000ಕ್ಕೂ ಹೆಚ್ಚು ಕೈದಿಗಳಲ್ಲಿ, ಈ ಫೋಟೋದಲ್ಲಿ ದರ್ಶನ್ ರಂತೆ ಒಬ್ಬರಿಗೂ ಕುರ್ಚಿ, ಟೇಬಲ್, ಮಗ್, ಚಹಾ ಅಥವಾ ಕಾಫಿ, ಕರವಸ್ತ್ರ ಅಥವಾ ಸಿಗರೇಟ್ ಸಿಗಲಿಲ್ಲ. ಈ ಚಿತ್ರವು ನಿಜವಾಗಿದ್ದರೆ, ಹಣ ಮತ್ತು ಪ್ರಭಾವವು ಅದ್ಭುತಗಳನ್ನು ಮಾಡುತ್ತವೆ ಎಂದಿದ್ದಾರೆ.

ಸಿಗರೇಟ್ ಸೇದುವ ಫೋಟೋ, ವಿಡಿಯೋ ಕಾಲ್‌ ಮಾಡೋ ವಿಡಿಯೋ, ಬೆಡ್‌ ಮೇಲೆ ಕೂತು ಧಮ್ ಹೊಡೆಯೋ ಫೋಟೋ ಈ ಮೂರು ಬಾಂಬ್ ಸ್ಫೋಟಗೊಂಡ ಬಳಿಕ ದರ್ಶನ್‌ ಕೇಸ್‌ನಲ್ಲಿ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ಬಹುಮುಖ್ಯವಾಗಿ ಜೈಲಿನಲ್ಲಿ ದರ್ಶನ್‌ಗೆ ಫೈವ್‌ ಸ್ಟಾರ್ ಹೋಟೆಲ್‌ ರೀತಿಯ ಟ್ರೀಟ್‌ಮೆಂಟ್ ಸಿಗ್ತಿದ್ಯಾ ಎಂಬ ಶಂಕೆ ಶುರುವಾಗುವಂತೆ ಮಾಡಿದೆ. ಮತ್ತು, ದರ್ಶನ್‌ಗೆ ಸಿಗರೇಟ್ ಕೊಟ್ಟವರು ಯಾರು ಎಂಬ ಪ್ರಶ್ನೆ ಹುಟ್ಟಿದೆ.

ಆರೋಪಿ ದರ್ಶನ್ ಪರ ರಾಜಕಾರಣಿಗಳ ಲಾಬಿ ನಡೆದಿತ್ತಾ?
ರೇಣುಕಾಸ್ವಾಮಿ ಕೊಲೆ ಕೇಸ್‌ನಿಂದ ದರ್ಶನ್‌ರನ್ನು ಬಿಡಿಸೋದಕ್ಕೆ ಕೆಲ ಪ್ರಭಾವಿ ರಾಜಕೀಯ ನಾಯಕರು ಕಂಡ ಕಂಡ ಮಾರ್ಗದಲ್ಲಿ ಪ್ರಭಾವ ಬೀರಲು ಮುಂದಾಗಿದ್ದರೆಂಬ ಮಾಹಿತಿಗಳಿದ್ವು. ಈಗ, ದರ್ಶನ್‌ಗೆ ಜೈಲಿನಲ್ಲಿ ಮೋಜು, ಮಸ್ತಿಗೆ ರಾಜಕೀಯ ನಾಯಕರ ಒತ್ತಡವೇ ಕಾರಣವಾಯ್ತಾ ಎಂಬ ಗುಮಾನಿ ಶುರುವಾಗಿದೆ. ಕೆಲ ಪ್ರಭಾವಿ ರಾಜಕೀಯ ನಾಯಕರ ಒತ್ತಡಕ್ಕೆ ಮಣಿದು ಜೈಲು ಅಧಿಕಾರಿಗಳೇ ದರ್ಶನ್ ಮೋಜು ಮಸ್ತಿಗೆ ಅವಕಾಶ ಮಾಡಿಕೊಟ್ರಾ ಎಂಬ ಪ್ರಶ್ನೆ ಕೂಡ ಭುಗಿಲೆದ್ದಿದೆ.

ಇದನ್ನೂ ಓದಿ: ದರ್ಶನ್ & ಗ್ಯಾಂಗ್‌ ಬೇರೆ ಜೈಲಿಗೆ ಶಿಫ್ಟ್‌? ಎಲ್ಲಿಗೆ ಹೋಗ್ತಾರೆ? ಆ ಕತ್ತಲ ಕೋಣೆಯಲ್ಲಿ ಲಾಕ್‌ ಆಗ್ತಾರಾ?

ಒಂದೊಮ್ಮೆ, ಪರಪ್ಪನ ಅಗ್ರಹಾರದಲ್ಲಿ ದರ್ಶನ್‌ ಬಿಂದಾಸ್ ಲೈಫ್‌ಗೆ ಕೆಲ ರಾಜಕೀಯ ನಾಯಕರ ಪ್ರಭಾವವೇ ಕಾರಣವಾಗಿದೆ ಎಂಬುದು ನಿಜವಾಗಿದ್ದೇ ಆದ್ರೆ.. ಅವರು ಯಾರು ಎಂಬ ಪ್ರಶ್ನೆ ಮೂಡಲೇ ಇರದು. ಇದರಲ್ಲಿ, ರಾಜಕೀಯ ನಾಯಕರ ಕೈವಾಡ ಇದೆಯಾ? ತನಿಖೆಯಲ್ಲಿ ಬಯಲಿಗೆ ಬರಲಿದ್ಯಾ ಕಾದು ನೋಡ್ಬೇಕಿದೆ.

ಐಷಾರಾಮಿ ಬದುಕಿಗೆ ತಮ್ಮದೇ ಪ್ರಭಾವ ಬಳಸಿದ್ರಾ ದರ್ಶನ್?

ದರ್ಶನ್ ರಾಜ್ಯ ಕಂಡ ಅತಿದೊಡ್ಡ ಸ್ಟಾರ್, ಕರ್ನಾಟಕದ ಮೂಲೆ ಮೂಲೆಯಲ್ಲೂ ದರ್ಶನ್‌ಗೆ ಅಭಿಮಾನಿಗಳಿದ್ದಾರೆ. ದರ್ಶನ್‌ ಕೇಳಿದ್ದನ್ನು ಮಾಡುವ ಜನರಿದ್ದಾರೆ. ಹಾಗಾಗಿ, ತನ್ನದೇ ಪ್ರಭಾವ ಬಳಸಿಕೊಂಡು ಯಾರಿಗೂ ತಿಳಿಯದಂತೆ ಸಿಗರೇಟ್, ಮದ್ಯ ತಮಗೆ ಬೇಕೆಂದ ವಸ್ತುಗಳನ್ನ ತರಿಸಿಕೊಳ್ತಿದ್ರಾ ಎಂಬುದೂ ಕೂಡ ಸದ್ಯದ ಅತಿದೊಡ್ಡ ಡೌಟ್!

ಇದನ್ನೂ ಓದಿ: ನಟ ದರ್ಶನ್ ಮೇಲೆ ಮತ್ತೊಂದು FIR; ಎಡಿಜಿಪಿ ಮಾಲಿನಿ ಕೃಷ್ಣಮೂರ್ತಿಯಿಂದ ಸ್ಫೋಟಕ ಮಾಹಿತಿ ಬಹಿರಂಗ

ಪರಪ್ಪನ ಅಗ್ರಹಾರದಲ್ಲಿ ದರ್ಶನ್‌ ಸಿಗರೇಟ್ ಸೇದುತ್ತಾ. ರೌಡಿಯೊಟ್ಟಿಗೆ ಹರಟುತ್ತಾ ಕೂತಿರೋ ದೃಶ್ಯ ನಿಜಕ್ಕೂ ಆಘಾತ ಹುಟ್ಟಿಸಿದೆ. ಜೈಲಲ್ಲಿ ಹೀಗೆಲ್ಲಾ ರಾಜಾತಿಥ್ಯ ಸಿಗುತ್ತೆ ಅಂದ್ರೆ ಜೈಲಿಗೆ ಹೋಗೋಕೆ ಯಾರೂ ಭಯಪಡದಂತಾ ಸನ್ನಿವೇಶ ನಿರ್ಮಾಣವಾಗಿಬಿಡೋ ಆತಂಕವಿದೆ. ಈ ಸಂಬಂಧಪಟ್ಟಂತೆ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಬೇಕು ಅನ್ನೋದು ಜನಾಕ್ರೋಶದ ಮಾತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಜೈಲಿನಲ್ಲಿ ದರ್ಶನ್‌ ರಾಜಾತಿಥ್ಯ ಕೇಸ್‌ಗೆ ಹೊಸ ಟ್ವಿಸ್ಟ್ ಕೊಟ್ಟ ಚೇತನ್ ಅಹಿಂಸಾ; ಹೇಳಿದ್ದೇನು?

https://newsfirstlive.com/wp-content/uploads/2024/08/Chetan-On-Darshan.jpg

Load More