ಕನ್ನಡ ಚಿತ್ರರಂಗದಲ್ಲಿ ನಟಿಯರಿಗೆ ಲೈಂಗಿಕ ಕಿರುಕುಳ ಆರೋಪ
ಲೈಂಗಿಕ ಕಿರುಕುಳ ಕುರಿತು ಅಧ್ಯಯನಕ್ಕೆ ಸಮಿತಿ ರಚನೆಗೆ ಆಗ್ರಹ
ನಟ ಸುದೀಪ್, ಚೇತನ್ ಸೇರಿ ಹಲವರಿಂದ ಮುಖ್ಯಮಂತ್ರಿಗೆ ಪತ್ರ
ಬೆಂಗಳೂರು: ಮಲಯಾಳಂ ಸಿನಿಮಾ ಇಂಡಸ್ಟ್ರಿಯಲ್ಲಿ ನಟಿಯರು ಎದುರಿಸುತ್ತಿರೋ ಲೈಂಗಿಕ ದೌರ್ಜನ್ಯದ ಕುರಿತಾದ ನ್ಯಾಯಮೂರ್ತಿ ಕೆ ಹೇಮಾ ಸಮಿತಿ ವರದಿ ಬಹಿರಂಗವಾಗಿದೆ. ಇದರ ಬೆನ್ನಲ್ಲೇ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ನಡೆಯುತ್ತಿರೋ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯದ ಕುರಿತು ಅಧ್ಯಯನಕ್ಕಾಗಿ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿ ಒಂದು ರಚಿಸಿ ಎಂದು ರಾಜ್ಯ ಸರ್ಕಾರಕ್ಕೆ ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಅಂಡ್ ಇಕ್ವಾಲಿಟಿ (FIRE) ಸಂಸ್ಥೆ ಮನವಿ ಪತ್ರ ನೀಡಿದೆ. ಈ ಬಗ್ಗೆ ನಟ ಚೇತನ್ ಮಾತಾಡಿದ್ದಾರೆ.
ಆರಂಭದಿಂದಲೂ ಫೈರ್ ಸಂಸ್ಥೆ ಮಹಿಳೆಯರ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಾ ಬಂದಿದೆ. ಶ್ರುತಿ ಹರಿಹರನ್ ಮೀ ಟೂ ಕೇಸ್ನಲ್ಲಿ ನಮ್ಮ ಸಂಸ್ಥೆ ಪ್ರಮುಖ ಪಾತ್ರವಹಿಸಿತ್ತು. ಈಗ ನಮಗೆ ನಟ ಸುದೀಪ್, ನಟಿ ರಮ್ಯಾ ಸೇರಿದಂತೆ ಅನೇಕ ಸ್ಟಾರ್ಗಳ ಬೆಂಬಲ ಸಿಕ್ಕಿದ್ದು ಬಲ ಬಂದಂತಾಗಿದೆ ಎಂದರು.
ಸುದೀಪ್, ರಮ್ಯಾ ಅವರಿಗೆ ಹೆಣ್ಣುಮಕ್ಕಳ ಪರ ಕಾಳಜಿ ಇದೆ. ಈ ಹಿಂದೆ ಯಾಕೆ ಅವರು ನಮ್ಮ ಸಂಸ್ಥೆಗೆ ಬೆಂಬಲ ನೀಡಲಿಲ್ಲವೋ ಗೊತ್ತಿಲ್ಲ. ಆದರೀಗ, ಹೆಣ್ಣುಮಕ್ಕಳ ಪರವಾಗಿ ಇವರು ನಿಂತಿದ್ದಾರೆ. ಸುದೀಪ್, ರಮ್ಯಾ ಅವರೊಂದಿಗೆ ಹಲವು ಹಿರಿಯ ನಟ ನಟಿಯರು, ಬರಹಗಾರರು, ಹೋರಾಟಗಾರರು, ವಕೀಲರು ನಮಗೆ ಬೆಂಬಲ ನೀಡಿದ್ದಾರೆ ಎಂದರು.
ಇದನ್ನೂ ಓದಿ: ಕನ್ನಡ ಚಿತ್ರರಂಗದಲ್ಲೂ ಲೈಂಗಿಕ ಕಿರುಕುಳ; ಅಧ್ಯಯನಕ್ಕೆ ಸಮಿತಿ ರಚಿಸಿ; ಸಿಎಂಗೆ ನಟ ನಟಿಯರ ಪತ್ರ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ