‘ಪ್ರಕಾಶ್ ರಾಜ್ ಅವರೇ ಬಿಡಿಸಿ ಹೇಳಬೇಕು’
‘ತಿಮ್ಮಪ್ಪನ ಎದುರು ಹೋಗಿದ್ದು ವಿಪರ್ಯಾಸ’
ವಿಜ್ಞಾನಿಗಳಿಗೆ ಅವ್ರ ಕೆಲ್ಸದ ಮೇಲೆ ನಂಬಿಕೆಯಿಲ್ಲ ಅಂದ್ರೆ
ಚಂದ್ರಯಾನ-3 ಕುರಿತು ನಟ ಪ್ರಕಾಶ್ ರಾಜ್ ಮಾಡಿದ್ದ ವ್ಯಂಗ್ಯದ ಬಗ್ಗೆ ನಟ ಚೇತನ್ ಪ್ರತಿಕ್ರಿಯಿಸಿದ್ದಾರೆ. ಸಮಾಜದಲ್ಲಿ ಬೇರೆ ಬೇರೆ ಧ್ವನಿಗಳು ಬೇಕು. ವಾಕ್ ಸ್ವಾತಂತ್ರ್ಯ ಸಂವಿಧಾನದ ಮುಖ್ಯವಾದ ಭಾಗ. ಹೇಟ್ ಸ್ಪೀಚ್ ಅಲ್ಲದೇ, ವೈಲೆನ್ಸ್ ಅಲ್ಲದೇ ಜನರಿಗೆ ತಮ್ಮ ಅಭಿಪ್ರಾಯ ಹೇಳುವ ಸಮಾಜ ಬೇಕಿದೆ ಎಂದರು.
ಪ್ರಕಾಶ್ ರಾಜ್ ಅವರು ಹೇಳಿರುವ ಬಗ್ಗೆ ಅವರೇ ಬಿಡಿಸಿ ಹೇಳಬೇಕು. ಯಾರೇ ಮೂಲ ಚಂದ್ರಕ್ಕೆ ಹೋದರೂ ಸಹ, ಮೂಲ ಮಲಯಾಳಿಗಳೇ ಇರುತ್ತಾರೆ ಅನ್ನೋ ಜೋಕ್ ಇತ್ತು. ಆ ಜೋಕ್ ಮೂಲಕ ಹಾಗೆ ಹೇಳಿದ್ದಾರೋ, ಏನೋ ನನಗೆ ಗೊತ್ತಿಲ್ಲ ಅಂತಾ ಹೇಳಿದರು. ಅದು ಹಳೆ ಜೋಕ್ ಅನ್ನೋದು ಎಷ್ಟೋ ಕಡೆ ಸ್ಪ್ರೆಡ್ ಆಗಿತ್ತು. ಆದರೆ ಅದನ್ನು ಕೇಳೋಕೆ ಸೀಮಿತ ಆಗಿತ್ತು. ಆ ಉದ್ದೇಶಕ್ಕೆ ಅವರು ಮಾತಾಡಿದ್ದರೋ? ಅಥವಾ ಬೇರೆ ಉದ್ದೇಶಕ್ಕೆ ಮಾತಾಡಿದರೋ ಜನ ನೋಡಬೇಕು ಎಂದಿದ್ದಾರೆ.
ಇನ್ನು ಚಂದ್ರಯಾನ-3 ಯಶಸ್ಸಿಗೆ ನಟ ಚೇತನ್ ಮೆಚ್ಚುಗೆ ಜೊತೆಗೆ ವ್ಯಂಗ್ಯವಾಡಿದ್ದಾರೆ. ಚಂದ್ರಾಯನ 3 ಯಶಸ್ವಿಯಾಗಿ ತಲುಪಿದ್ದು ಭಾರತಕ್ಕೆ ಒಳ್ಳೆಯ ಹೆಸರು ತಂದಿದೆ. ಬಾಹ್ಯಾಕಾಶ ಸಂಶೋಧನೆಯಲ್ಲಿ ನಮ್ಮ ವಿಜ್ಞಾನಿಗಳು ಒಳ್ಳೆಯ ಹೆಸರು ಮಾಡಿದ್ದಾರೆ. ಅಮೇರಿಕಾ, ರಷ್ಯಾ, ಚೀನಾ ಬಳಿಕ ಭಾರತ ಚಂದ್ರನ ಅಂಗಳ ಪ್ರವೇಶಿಸಿದೆ. ಭಾರತ ದಕ್ಷಿಣ ದೃವಕ್ಕೆ ಹೋಗಿರುವದು ಒಳ್ಳೆಯ ಬೆಳವಣಿಗೆ. ಆದ್ರೆ, ಅಧ್ಯಯನ ಮಾಡಿರುವ ನಮ್ಮ ವಿಜ್ಞಾನಿಗಳು ತಿರುಪತಿ- ತಿಮ್ಮಪ್ಪನ ದರ್ಶನಕ್ಕೆ ತೆರಳಿ, ತಿಮ್ಮಪ್ಪನ ಎದುರು ಮಿನಿ ಚಂದ್ರಯಾನ ತಗೊಂಡು ಹೋಗಿದ್ದು ವಿಪರ್ಯಾಸ. ವಿಜ್ಞಾನಿಗಳೇ ಅವ್ರ ಕೆಲಸದ ಮೇಲೆ ನಂಬಿಕೆ ಇಟ್ಕೊಂಡಿಲ್ಲ ಅಂದ್ರೆ ನಾವು ಹೇಗೆ ವಿಜ್ಞಾನಿಗಳ ಮೇಲೆ ನಂಬಿಕೆ ಇಟ್ಕೊಳ್ಳೋದು ಅಂತ ಮತ್ತೆ ವ್ಯಂಗ್ಯವಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ