newsfirstkannada.com

ಸರ್ಕಾರ ಅಕ್ಕಿ ಬದಲು ಹಣ ಜೊತೆಗೆ ರಾಗಿ, ಜೋಳ ಕೊಡಬೇಕು; ನಟ ಚೇತನ್​

Share :

29-06-2023

    ಅಕ್ಕಿ ಬದಲು ಹಣ ಕೊಡುವ ವಿಚಾರವಾಗಿ ನಟ ಚೇತನ್ ಹೇಳಿಕೆ

    ಬಡವರಿಗೆ ಶಿಕ್ಷಣ, ಭೂ ಸುಧಾರಣೆ ಮಾಡಬೇಕು ಎಂದ ಚೇತನ್​

    ಸಿದ್ದರಾಮಯ್ಯ ಸರ್ಕಾರ ನುಡಿದಂತೆ ನಡೆಯಬೇಕು-ನಟ ಚೇತನ್​

ಕಲಬುರಗಿ: ರಾಜ್ಯ ಸರಕಾರ ಅಕ್ಕಿ ಬದಲು ಹಣ ಕೊಡುವ ವಿಚಾರವಾಗಿ ನಟ ಚೇತನ್ ಮಾತನಾಡಿದ್ದಾರೆ. ಸಿದ್ದರಾಮಯ್ಯ ಸರ್ಕಾರ ನುಡಿದಂತೆ ನಡೆಯಬೇಕು ಎಂದು ಹೇಳಿದ್ದಾರೆ.

ಕಲಬುರಗಿಯಲ್ಲಿ ಮಾತನಾಡಿದ ಅಹಿಂಸಾ ಚೇತನ್​, ಸರ್ಕಾರ ಅಕ್ಕಿ ಬದಲು ಹಣ ಜೊತೆಗೆ ರಾಗಿ, ಜೋಳ ಕೊಡಬೇಕು. ಬಡವರಿಗೆ ಶಿಕ್ಷಣ ನೀಡಬೇಕು, ಭೂ ಸುಧಾರಣೆ ಮಾಡಿ, ರಾಷ್ಟ್ರೀಕರಣ ಮಾಡಬೇಕು. ಅಕ್ಕಿ ವಿಚಾರದಲ್ಲಿ ಸಿದ್ದರಾಮಯ್ಯ ಸರ್ಕಾರ ಬೇರೆ ರಾಜ್ಯಕ್ಕೆ ಮೊರೆ ಹೊಗ್ತಿದೆ. ನಮ್ಮ ರೈತರನ್ನು ಬೆಳೆಸುವ‌ ಕೆಲಸವಾಗಬೇಕಿದೆ ಎಂದು ಹೇಳಿದ್ದಾರೆ.

ನಂತರ ಮಾತನಾಡಿದ ಚೇತನ್​ ಅವರು, ಕೆ ಜೆ ಜಾರ್ಜ್ ಬಡವರಿಗೆ ದುಡ್ಡು ಬೇಡ ಅಂತಾರೆ. ಸರ್ಕಾರ ದುಡ್ಡು, ರಾಗಿ ಜೋಳ ಎಲ್ಲವನ್ನೂ ‌ಕೊಡಬೇಕು. ಸಚಿವ ಕೆ ಜೆ ಜಾರ್ಜ್ ಒಬ್ಬ ಶ್ರೀಮಂತ ವ್ಯಕ್ತಿ ಈ ರೀತಿ ‌ಮಾತಾಡೋದು ಅವರಿಗೆ ಶೋಭೆ ತರೋದಿಲ್ಲ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸರ್ಕಾರ ಅಕ್ಕಿ ಬದಲು ಹಣ ಜೊತೆಗೆ ರಾಗಿ, ಜೋಳ ಕೊಡಬೇಕು; ನಟ ಚೇತನ್​

https://newsfirstlive.com/wp-content/uploads/2023/06/Chetan.jpg

Load More