newsfirstkannada.com

ಮಗ ಮಾಡಿದ ತಪ್ಪಿಗೆ ತಮಿಳು ಹೀರೋ ಧನುಷ್​ ನಿವಾಸಕ್ಕೆ ಎಂಟ್ರಿಕೊಟ್ಟ ಪೊಲೀಸರು..!

Share :

18-11-2023

    ಕ್ಯಾಪ್ಟನ್‌ ಮಿಲ್ಲರ್‌ ಸಿನಿಮಾಗೆ ಆಕ್ಷನ್‌ ಕಟ್‌ ಹೇಳ್ತಿರೋ ಅರುಣ್‌

    ಮಗ ಮಾಡಿದ್ದ ತಪ್ಪಿಗೆ ಧನುಷ್ ನಿವಾಸಕ್ಕೆ ಭೇಟಿಕೊಟ್ಟ ಪೊಲೀಸ್ರು

    ಕ್ಯಾಪ್ಟನ್‌ ಮಿಲ್ಲರ್‌ ಮೂವಿಯಲ್ಲಿ ಫುಲ್ ಬ್ಯುಸಿ ಇರೋ ಧನುಷ್

ತಮಿಳು ಹೀರೋ ಧನುಷ್‌ ಸದ್ಯಕ್ಕೆ ಕ್ಯಾಪ್ಟನ್‌ ಮಿಲ್ಲರ್‌ ಸಿನಿಮಾದಲ್ಲಿ ಫುಲ್ ಬ್ಯುಸಿ ಇದ್ದಾರೆ. ಸತ್ಯಜ್ಯೋತಿ ಫಿಲ್ಸ್ಮ್‌ ಬ್ಯಾನರ್‌ ಅಡಿಯಲ್ಲಿ ನಿರ್ಮಾಣವಾಗುತ್ತಿರೋ ಈ ಸಿನಿಮಾಗೆ ಅರುಣ್‌ ಮಥೇಶ್ವರನ್‌ ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಈಗಾಗಲೇ ಸಿನಿಮಾ ಶೂಟಿಂಗ್ ಕೊನೆ ಹಂತಕ್ಕೆ ಬಂದಿದೆ. ಆದರೆ ಧನುಷ್ ಮನೆಗೆ ಟ್ರಾಫಿಕ್ ಪೊಲೀಸರು ಎಂಟ್ರಿ ಕೊಟ್ಟು ದಂಡ ಕಟ್ಟಿಸಿಕೊಂಡಿದ್ದಾರೆ.

ನಟ ಧನುಷ್ ಅವರಿಗೆ 17 ವರ್ಷದ ಯಾತ್ರ ಎನ್ನುವ ಪುತ್ರನಿದ್ದಾನೆ. ಈಗಾಗಲೇ ಬೈಕ್ ಓಡಿಸುವುದನ್ನು ಕಲಿತಿರುವ ಯಾತ್ರ ಸಖತ್ ಆಗಿ ರೈಡ್ ಮಾಡುತ್ತಾರೆ. ಆದ್ರೆ ರಸ್ತೆಯಲ್ಲಿ ಹೆಲ್ಮೆಟ್ ಧರಿಸದೇ ಬೈಕ್ ರೈಡಿಂಗ್ ಮಾಡಿದ್ದು ಒಂದು ತಪ್ಪಾದರೆ 17ನೇ ವಯಸ್ಸಿಗೆ ದ್ವಿಚಕ್ರ ವಾಹನ ಚಾಲನೆ ಮಾಡಿದ್ದು ಇನ್ನೊಂದು ತಪ್ಪು. ಅದೇ ಕಾರಣಕ್ಕೆ ಟ್ರಾಫಿಕ್ ಪೊಲೀಸರು ಧನುಷ್ ಮನೆ ಕದ ತಟ್ಟಿದ್ದಾರೆ.

ಕ್ಯಾಪ್ಟನ್ ಮಿಲ್ಲರ್ ಸಿನಿಮಾದಲ್ಲಿ ನಟ ಧನುಷ್

ಈ ಸಂಬಂಧ ಪೊಲೀಸರು ನೇರವಾಗಿ ನಟ ಧನುಷ್ ಮನೆಗೆ ಬಂದಿದ್ದಾರೆ. 17ನೇ ವಯಸ್ಸಿಗೆ ದ್ವಿಚಕ್ರ ವಾಹನ ಚಾಲನೆ ಮಾಡಿ ನಿಯಮ ಉಲ್ಲಂಘನೆ ಮಾಡಿರೋದಕ್ಕೆ ಹಾಗೂ ಹೆಲ್ಮೆಟ್ ಧರಿಸದಿರೋದಕ್ಕೆ ಫೈನ್ ಹಾಕಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಗ ಮಾಡಿದ ತಪ್ಪಿಗೆ ತಮಿಳು ಹೀರೋ ಧನುಷ್​ ನಿವಾಸಕ್ಕೆ ಎಂಟ್ರಿಕೊಟ್ಟ ಪೊಲೀಸರು..!

https://newsfirstlive.com/wp-content/uploads/2023/11/DANUSH.jpg

Load More