newsfirstkannada.com

ನಟ ದರ್ಶನ್​​ ಅಭಿಮಾನಿಗಳಿಗೆ ಗುಡ್​ನ್ಯೂಸ್​; 57ನೇ ಸಿನಿಮಾದ ಮುಹೂರ್ತದ ಜೊತೆ ಟೈಟಲ್ ರಿವೀಲ್‌!?

Share :

02-11-2023

    ದೊಡ್ಡ ಗಣಪತಿ ದೇವಸ್ಥಾನದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್

    ಮತ್ತೊಮ್ಮೆ ಮಿಲನ ಪ್ರಕಾಶ್ ಜೊತೆಗೂಡಿ ನಟ ದರ್ಶನ್ ಸಿನಿಮಾ!

    ಸದ್ಯ ಸಾಂಗ್ ಶೂಟಿಂಗ್​​ನಲ್ಲಿ ಸಖತ್‌ ಬ್ಯುಸಿಯಾಗಿರುವ ‘ಕಾಟೇರ’

ಬೆಂಗಳೂರಿನ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸಲಿರುವ 57ನೇ ಸಿನಿಮಾದ ಮುಹೂರ್ತ ಸರಳವಾಗಿ ನೆರವೇರಿತು. ತಾರಕ್ ಸಿನಿಮಾದ ನಂತರ ಮತ್ತೊಮ್ಮೆ ಮಿಲನ ಪ್ರಕಾಶ್ ಅವರ ಜೊತೆಗೂಡಿ ದರ್ಶನ್ ಸಿನಿಮಾ ಮಾಡ್ತಾ ಇದ್ದಾರೆ. ನಿರ್ದೇಶಕ ಮಿಲನ ಪ್ರಕಾಶ್ ನಿರ್ದೇಶನದ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ವೈಷ್ಣೋ ಸ್ಟುಡಿಯೋ ಬ್ಯಾನರ್​ನಡಿ ಈ ಸಿನಿಮಾ ನಿರ್ಮಾಣವಾಗಲಿದೆ.

ತರುಣ್ ಸುಧೀರ್ ನಿರ್ದೇಶನದ ಕಾಟೇರ ಸಿನಿಮಾದ ಸಾಂಗ್ ಶೂಟಿಂಗ್​​ನಲ್ಲಿ ಬ್ಯುಸಿಯಾಗಿರೋ ನಟ ದರ್ಶನ್ ಕಳೆದ ದಿನ ಗುಜರಾತ್​​ನಿಂದ ರಾಣೇಬೆನ್ನೂರಿಗೆ ಬಂದು ಗರಡಿ ಟ್ರೈಲರ್ ಲಾಂಚ್ ಮಾಡಿ ಅಭಿಮಾನಿಗಳನ್ನ ಉದ್ದೇಶಿಸಿ ಮಾತನಾಡಿದ್ದರು. ಇಂದು ಬೆಳಗ್ಗೆ ದೊಡ್ಡ ಗಣಪತಿ ದೇವಾಲಯದಲ್ಲಿ ಡಿ-57 ಸಿನಿಮಾದ ಸರಳ ಮುಹೂರ್ತವಾಗಿದೆ. ಹಾಗಾದ್ರೆ ಡಿ-57 ಸಿನಿಮಾದ ಹೆಸರೇನು? ಯಾವ ರೀತಿಯ ಜಾನರ್​ ಸಿನಿಮಾಕ್ಕೆ ದರ್ಶನ್-ಪ್ರಕಾಶ್ ಕಾಂಬೋ ಮುಂದಾಗಿದೆ ಈ ಕುತೂಹಲಕ್ಕೆ ಉತ್ತರ ಇಲ್ಲಿದೆ.

ಫ್ಯಾಮಿಲಿ ಆಡಿಯೆನ್ಸ್ ಸಿನಿಮಾಗಳಿಗೆ ಮಿಲನ್ ಪ್ರಕಾಶ್ ಅವರು ಎತ್ತಿದ ಕೈ. ಈ ವಿಚಾರಕ್ಕೆ ತಾರಾಕ್ ಸಿನಿಮಾಕ್ಕೆ ನಟ ದರ್ಶನ್ ನಿರ್ದೇಶಕ ಪ್ರಕಾಶ್ ಜೊತೆ ಕೆಲಸ ಮಾಡಿದ್ದು. ಈಗ ಮುಂದಿನ ಸಿನಿಮಾಕ್ಕೆ ಅಣಿಯಾಗಿರುವ ಪ್ರಕಾಶ್-ದರ್ಶನ್ ಕಾಂಬೋ ಹೊಸ ಜಾನರ್​ಗೆ ಕೈ ಹಾಕೋ ಥರ ಕಾಣ್ತಾ ಇದೆ. ಈ ಊಹೆಗೆ ಕಾರಣ ಚಿತ್ರದ ಟೈಟಲ್.

ನಟ ದರ್ಶನ್ ಕರಿಯರ್​ನ 57ನೇ ಚಿತ್ರದ ಹೆಸರು ಏನು ಅನ್ನೋ ಪ್ರಶ್ನೆಗೆ ಉತ್ತರ ‘‘ಡೆವಿಲ್ – ದಿ ಹೀರೋ’’ ಎನ್ನುತ್ತಿದೆ ಬಲ ಮೂಲಗಳು. ಮುಹೂರ್ತ ಕ್ಲಾಪ್ ಬೋರ್ಡ್ ಈಗ ಸೋಶಿಯಲ್ ಮಿಡಿಯಾ ಸಮುದ್ರ ದಡದಲ್ಲಿ ತೇಲಾಡುತ್ತಿದೆ.

ಈ ಡೆವಿಲ್ ಟೈಟಲ್ ನೋಡ್ತಾ ಇದ್ರೆ ಇದು ಹಾರರ್ ಥ್ರಿಲ್ಲರ್ ಸಿನಿಮಾ ಆಗಿರಬಹುದಾ? ಈ ಹಿಂದೆ ದರ್ಶನ್ ಯಾವುದೇ ರೀತಿಯ ಹಾರರ್ ಚಿತ್ರ ಕಾಣಿಸಿಕೊಂಡಿಲ್ಲ. ಹಂಗೇನು ಆದ್ರೆ ಡೆವಿಲ್ ಮೇಲೆ Dಭಕ್ತ ಗಣ ಸಖತ್ ಕುತೂಹಲದಿಂದ ಎದುರು ನೋಡೋದು ಪಕ್ಕಾ. ಸದ್ಯ ಕಾಟೇರ ಸಿನಿಮಾದ ಫೈನಲ್ ವರ್ಕ್​​ನಲ್ಲಿರುವ ಇವರು ದರ್ಶನ್, ಕಾಟೇರ ಚಿತ್ರಕ್ಕಿಂತ ಮುಂಚೆ ಗರಡಿ ಸಿನಿಮಾದಲ್ಲಿ ಘರ್ಜಿಸಲಿದ್ದಾರೆ. ಕಾಟೇರ ಶೂಟಿಂಗ್ ಆಗ್ತಾ ಇದ್ದಂಗೆ ಡೆವಿಲ್ ಚಿತ್ರದ ಶೂಟಿಂಗ್ ದಾಸ ದರ್ಶನ್ ತೂಗುದೀಪ ಹೊರಡೋದು ಪಕ್ಕಾ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಟ ದರ್ಶನ್​​ ಅಭಿಮಾನಿಗಳಿಗೆ ಗುಡ್​ನ್ಯೂಸ್​; 57ನೇ ಸಿನಿಮಾದ ಮುಹೂರ್ತದ ಜೊತೆ ಟೈಟಲ್ ರಿವೀಲ್‌!?

https://newsfirstlive.com/wp-content/uploads/2023/11/d-boss-7.jpg

Load More