newsfirstkannada.com

ನಟ ದರ್ಶನ್ ಸೇರಿ ನಾಲ್ವರು ಆರೋಪಿಗಳು ಮತ್ತೆ ಪೊಲೀಸ್ ಕಸ್ಟಡಿಗಾ? ಕಾರಣವೇನು?

Share :

Published June 22, 2024 at 3:27pm

Update June 22, 2024 at 3:28pm

    ನಟ ದರ್ಶನ್ ಹಾಗೂ ನಾಲ್ವರು ಕಸ್ಟಡಿ ಅವಧಿ ಇಂದಿಗೆ ಅಂತ್ಯ

    A2 ದರ್ಶನ್, A9 ಧನರಾಜ್, A14 ಪ್ರದೂಷ್, A10 ವಿನಯ್

    ಮತ್ತೊಮ್ಮೆ ಪೊಲೀಸ್ ಕಸ್ಟಡಿಗೆ ಕೇಳಲು ಬಲವಾದ 2 ಕಾರಣಗಳಿವೆ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಗ್ಯಾಂಗ್ ಜೈಲಿಗಾ? ಕಸ್ಟಡಿಗಾ? ಅನ್ನೋ ಭವಿಷ್ಯ ಕೆಲವೇ ಕ್ಷಣದಲ್ಲಿ ನಿರ್ಧಾರವಾಗಲಿದೆ. A2 ದರ್ಶನ್, A9 ಧನರಾಜ್, A14 ಪ್ರದೂಷ್, A10 ವಿನಯ್ ಅವರನ್ನು ಪೊಲೀಸರು ಕೋರ್ಟ್‌ಗೆ ಹಾಜರುಪಡಿಸುತ್ತಿದ್ದು, ಮತ್ತೊಮ್ಮೆ ಪೊಲೀಸ್ ಕಸ್ಟಡಿಗೆ ಕೇಳುವ ಸಾಧ್ಯತೆ ಇದೆ ಎನ್ನಲಾಗಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಹಾಗೂ ನಾಲ್ವರ ಕಸ್ಟಡಿ ಅವಧಿ ಇಂದಿಗೆ ಅಂತ್ಯವಾಗುತ್ತಿದೆ. ಹೀಗಾಗಿ ಬಿಗಿ ಪೊಲೀಸ್ ಭದ್ರತೆಯಲ್ಲಿ ಆರೋಪಿಗಳನ್ನ ಪೊಲೀಸರು ಕೋರ್ಟ್‌ಗೆ ಹಾಜರುಪಡಿಸುತ್ತಿದ್ದಾರೆ.
ಆರೋಪಿಗಳನ್ನು ಕೋರ್ಟ್‌ಗೆ ಹಾಜರು ಪಡಿಸೋ ಮುನ್ನ ಪೊಲೀಸರು ದರ್ಶನ್ ಸೇರಿ ನಾಲ್ವರಿಗೆ ವೈದ್ಯಕೀಯ ಪರೀಕ್ಷೆ ನಡೆಸಿದ್ದಾರೆ. ಅನ್ನಪೂರ್ಣೇಶ್ವರಿ ನಗರ ಠಾಣೆಗೆ ಮಲ್ಲತ್ತಹಳ್ಳಿ ಸರ್ಕಾರಿ ಆಸ್ಪತ್ರೆ ವೈದ್ಯರ ತಂಡ ಆರೋಪಿಗಳ ಪರೀಕ್ಷೆ ನಡೆಸಿದೆ. ಮೆಡಿಕಲ್ ಟೆಸ್ಟ್ ಮುಗಿದ ಬಳಿಕ ಆರೋಪಿಗಳನ್ನು ಠಾಣೆಯಿಂದ ಕೋರ್ಟ್‌ಗೆ ಕರೆದುಕೊಂಡು ಬರಲಾಗಿದೆ.

ಮತ್ತೆ ಎರಡು ದಿನ ಪೊಲೀಸ್ ಕಸ್ಟಡಿ?
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಹಾಗೂ ನಾಲ್ವರು ಆರೋಪಿಗಳನ್ನ ಮತ್ತೆ ಎರಡು ದಿನಗಳ ಕಸ್ಟಡಿಗೆ ಕೇಳಲು ಪೊಲೀಸರು ಚಿಂತನೆ ನಡೆಸಿದ್ದಾರೆ. ಇಷ್ಟು ದಿನದ ವಿಚಾರಣೆಯಲ್ಲಿ ಆರೋಪಿಗಳು ಹೆಚ್ಚೇನೂ ಹೇಳಿಲ್ಲ. ಜೊತೆಗೆ ಕೊಲೆಯಾಗಿರುವ ರೇಣುಕಾಸ್ವಾಮಿಯ ಮೊಬೈಲ್ ಕೂಡ ಇನ್ನೂ ಸಿಕ್ಕಿಲ್ಲ. ಹೀಗಾಗಿ ಮತ್ತೊಮ್ಮೆ ಆರೋಪಿಗಳನ್ನು 3ನೇ ಬಾರಿಗೆ ಎರಡು ದಿನಗಳ ಕಸ್ಟಡಿ ಪಡೆದು ವಿಚಾರಣೆ ನಡೆಸುವ ಸಾಧ್ಯತೆ ಇದೆ.

ಇದನ್ನೂ ಓದಿ: ದರ್ಶನ್​ ಬೇಡ, ಡಿ ಬಾಸ್​ ಬೇಡ.. ವಾಹನಕ್ಕೆ ಅಂಟಿಸಿರೋ ಸ್ಟಿಕ್ಕರ್​ ಕಿತ್ತೆಸೆದ ಫ್ಯಾನ್ಸ್​ 

ಎರಡನೇ ಬಾರಿ ಜೈಲಿಗೆ ಫಿಕ್ಸ್?
ಒಂದು ವೇಳೆ ಕೋರ್ಟ್‌ ಪೊಲೀಸ್ ಕಸ್ಟಡಿಗೆ ಕೊಡದೇ ಇದ್ದರೆ ನಟ ದರ್ಶನ್ ಅವರಿಗೆ ಜೈಲು ಫಿಕ್ಸ್ ಎನ್ನಲಾಗುತ್ತಿದೆ. ನ್ಯಾಯಾಂಗ ಬಂಧನಕ್ಕೆ ನೀಡಲು ಆದೇಶ ನೀಡಿದರೆ ದರ್ಶನ್ ಅವರು ಎರಡನೇ ಬಾರಿ ಪರಪ್ಪನ ಅಗ್ರಹಾರ ಜೈಲು ಸೇರಲಿದ್ದಾರೆ. ಈ ಹಿಂದೆ ಪತ್ನಿ ವಿಜಯಲಕ್ಷ್ಮಿ ಅವರ ಮೇಲೆ ಹಲ್ಲೆ ನಡೆಸಿದ್ದ ಕೇಸ್​ನಲ್ಲಿ ದರ್ಶನ್ ಜೈಲು ಪಾಲಾಗಿದ್ದರು. ಇಂದು ಕೋರ್ಟ್‌ ದರ್ಶನ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಕೊಟ್ರೆ 2ನೇ ಬಾರಿ ಸೆಂಟ್ರಲ್ ಜೈಲು ಸೇರಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಟ ದರ್ಶನ್ ಸೇರಿ ನಾಲ್ವರು ಆರೋಪಿಗಳು ಮತ್ತೆ ಪೊಲೀಸ್ ಕಸ್ಟಡಿಗಾ? ಕಾರಣವೇನು?

https://newsfirstlive.com/wp-content/uploads/2024/06/dboss3.jpg

Load More