newsfirstkannada.com

BREAKING: ರೇಣುಕಾಸ್ವಾಮಿ ಕೊಲೆ ಕೇಸ್‌; ಇಂದೇ ನಟ ದರ್ಶನ್ ಅಂಡ್ ಗ್ಯಾಂಗ್ ಜೈಲಿಗೆ?

Share :

Published June 15, 2024 at 4:13pm

  ಇಂದೇ ನಿರ್ಧಾರವಾಗಲಿದೆ ರೇಣುಕಾಸ್ವಾಮಿ ಕೊಲೆ ಆರೋಪಿಗಳ ಭವಿಷ್ಯ

  ಆರೋಪಿಗಳ ವಿಚಾರಣೆ ಮುಗಿದಿರೋದ್ರಿಂದ ಇಂದೇ ಕೋರ್ಟ್​ಗೆ ಹಾಜರು

  ನಟ ದರ್ಶನ್​​, ಆರೋಪಿಗಳ ಮುಂದಿನ ಕ್ರಮದ ಬಗ್ಗೆ ಕೋರ್ಟ್​ನಿಂದ ತೀರ್ಪು

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಇಂದು ದಿಢೀರ್ ಬೆಳವಣಿಗೆಯಾಗಿದ್ದು, ನಟ ದರ್ಶನ್ ಅಂಡ್‌ ಗ್ಯಾಂಗ್‌ ಇವತ್ತೇ ಜೈಲು ಸೇರುವ ಸಾಧ್ಯತೆ ಇದೆ ಎನ್ನಲಾಗಿದೆ. ದರ್ಶನ್ ವಿರುದ್ಧದ ಕೊಲೆ ಆರೋಪ ಕೇಸ್​ಗೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸರು ಸಾಕಷ್ಟು ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ್ದಾರೆ. ಇನ್ನೇನು ಈ ಪ್ರಕರಣದ ತನಿಖೆ ಮುಕ್ತಾಯದ ಹಂತದಲ್ಲಿರುವಾಗಲೇ ಪೊಲೀಸರು ಕೊಲೆ ಕೇಸ್‌ಗೆ ಬಿಗ್ ಟ್ವಿಸ್ಟ್ ಕೊಟ್ಟಿದ್ದಾರೆ.

ಇದನ್ನೂ ಓದಿ: ದರ್ಶನ್​ ವಿರುದ್ಧ ಸ್ಟೇಟಸ್​ ಹಾಕಿದ್ದಕ್ಕೆ ನಿನ್ನನ್ನು ಜೀವಂತ ಸುಡುತ್ತೇವೆ ಎಂದ ಅಭಿಮಾನಿ! ಮುಂದೇನಾಯ್ತು ಗೊತ್ತಾ?

ರೇಣುಕಾಸ್ವಾಮಿ ಹತ್ಯೆ ಕೇಸ್​ನಲ್ಲಿ ಅಂದರ್​ ಆಗಿರೋ ದರ್ಶನ್​ ಆ್ಯಂಡ್​ ಗ್ಯಾಂಗ್​ನ ಭವಿಷ್ಯ ಬಹುತೇಕ ಇಂದೇ ನಿರ್ಧಾರವಾಗಲಿದೆ. ಕೊಲೆ ಪ್ರಕರಣದ ಆರೋಪದಲ್ಲಿ ಪೊಲೀಸರು ದರ್ಶನ್‌ ಮತ್ತು ಅವರ ಸಹಚರರನ್ನು ಜೂನ್ 11ರಂದು ನ್ಯಾಯಾಲಯಕ್ಕೆ ಹಾಜರು ಪಡಿಸಿ ಕಸ್ಟಡಿಗೆ ಪಡೆದಿದ್ದರು. ಈಗಾಗಲೇ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಬಹುತೇಕ ಮುಕ್ತಾಯ ಹಂತಕ್ಕೆ ಬಂದಿದೆ. ನಟ ದರ್ಶನ್ ಸೇರಿ ಎಲ್ಲಾ ಆರೋಪಿಗಳ ಸ್ವಇಚ್ಛಾ ಹೇಳಿಕೆಯನ್ನು ಪೊಲೀಸರು ದಾಖಲು ಮಾಡಿಕೊಂಡಿದ್ದಾರೆ. ಕೊಲೆ ನಡೆದ ಸ್ಥಳ, ಮೃತದೇಹ ಪತ್ತೆಯಾದ ಸ್ಥಳ, ಕಿಡ್ನ್ಯಾಪ್ ಆದ ಸ್ಥಳದಲ್ಲಿ ಮಹಜರು ಕೆಲಸ ಪೂರ್ಣಗೊಂಡಿದೆ. ತಾಂತ್ರಿಕ ಸಾಕ್ಷ್ಯಗಳ ಸಂಗ್ರಹ, ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ಕೂಡ ಮುಗಿದಿದೆ.

ಹೀಗಾಗಿ ಭಾನುವಾರ ಜಡ್ಜ್​​​ ಮುಂದೆ ಹಾಜರುಪಡಿಸಬೇಕಾದ ಪೊಲೀಸರು ತಡಮಾಡದೇ ಇಂದೇ ನ್ಯಾಯಲಯದ ಮುಂದೆ ಹಾಜರು ಪಡಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಆರೋಪಿಗಳ ವಿಚಾರಣೆ ಮುಗಿದಿರೋದ್ರಿಂದ ಮತ್ತೆ ಅವರನ್ನು ಕಸ್ಟಡಿಗೆ ಕೇಳೋದು ಬಹುತೇಕ ಅನುಮಾನವಾಗಿದೆ. ಹೀಗಾಗಿ ಇಂದು ಪೊಲೀಸ್​ ಅಧಿಕಾರಿಗಳು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ. ಆಗ ದರ್ಶನ್​ ಆ್ಯಂಡ್​ ಗ್ಯಾಂಗ್ ಜೈಲಿಗೆ ಹೋಗ್ತಾರಾ ಅಥವಾ ಮತ್ತೆ ​ಪೊಲೀಸ್ ಕಸ್ಟಡಿಗೆ ಬರ್ತಾರಾ ಅಂತ ಇನ್ನೇನು ಕೆಲವೇ ಗಂಟೆಗಳಲ್ಲಿ ಗೊತ್ತಾಗಲಿದೆ.

ಇದನ್ನೂ ಓದಿ: ನಟ ದರ್ಶನ್ ‘die hard fans’ಗೆ ಸ್ಟಾರ್ ಡೈರೆಕ್ಟರ್‌ ರಾಮ್‌ಗೋಪಾಲ್ ವರ್ಮಾ ಎಚ್ಚರಿಕೆ; ಏನಂದ್ರು?

ಈ ಹಿನ್ನೆಲೆಯಲ್ಲಿ ಎಸಿಎಂಎಂ ಕೋರ್ಟ್ ಸುತ್ತ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಹಲಸೂರು ಗೇಟ್ ಪೊಲೀಸರು ಹಾಗೂ ಒಂದು ಕೆಎಸ್​ಆರ್​ಪಿ ತುಕಡಿಯ ನಿಯೋಜನೆ ಮಾಡಲಾಗಿದೆ. ಆರೋಪಿಗಳನ್ನು ಕೋರ್ಟ್​ಗೆ ಹಾಜರಿಪಡಿಸುವ ಮೊದಲು ಬೌರಿಂಗ್ ಆಸ್ಪತ್ರೆಗೆ ಕರೆದೊಯ್ದು ಮೆಡಿಕಲ್ ಚೆಕಪ್​ ನಡೆಸಲಿದ್ದಾರೆ. ಮೆಡಿಕಲ್ ಚೆಕಪ್​ ಮುಗಿಸಿದ ಬಳಿಕ ಆರೋಪಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ. ಕೋರ್ಟ್‌ನಲ್ಲಿ ಆರೋಪಿಗಳನ್ನು ಹಾಜರುಪಡಿಸಿದ ಬಳಿಕ ಪೊಲೀಸರು ಮತ್ತೆ ಕಸ್ಟಡಿಗೆ ಕೇಳುವ ಸಾಧ್ಯತೆ ಕಡಿಮೆ ಇದೆ. ಒಂದು ವೇಳೆ ಪೊಲೀಸರು ಹೆಚ್ಚಿನ ವಿಚಾರಣೆಗೆ ಆರೋಪಿಗಳು ಬೇಡ ಎಂದು ಹೇಳಿದರು ದರ್ಶನ್ ಅಂಡ್ ಗ್ಯಾಂಗ್ ಇವತ್ತೇ ಪರಪ್ಪನ ಅಗ್ರಹಾರ ಜೈಲು ಪಾಲಾಗುವ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BREAKING: ರೇಣುಕಾಸ್ವಾಮಿ ಕೊಲೆ ಕೇಸ್‌; ಇಂದೇ ನಟ ದರ್ಶನ್ ಅಂಡ್ ಗ್ಯಾಂಗ್ ಜೈಲಿಗೆ?

https://newsfirstlive.com/wp-content/uploads/2024/06/DARSHAN_PAVITRA-1.jpg

Load More