newsfirstkannada.com

ನಟ ದರ್ಶನ್​​ ಜತೆಗೆ ಪತ್ನಿ ವಿಜಯಲಕ್ಷ್ಮಿಗೂ ಸಂಕಷ್ಟ.. ಚಾರ್ಜ್​ಶೀಟ್​ ಸಲ್ಲಿಸಲು ನಿರ್ಧಾರ!

Share :

Published June 17, 2024 at 6:00pm

    ಪ್ರಕರಣದಲ್ಲಿ ದರ್ಶನ್ ಬಂಧಿಸದೆ ನಿರ್ಲಕ್ಷ್ಯ ವಹಿಸಿದ್ದ ಅರಣ್ಯ ಇಲಾಖೆ

    ಐದು ನೋಟಿಸ್ ನೀಡಿದ್ದರೂ ವಿಚಾರಣೆಗೆ ಹಾಜರಾಗದ ನಟ ದರ್ಶನ್‌

    ನಟ ದರ್ಶನ್, ಪತ್ನಿ ವಿಜಯಲಕ್ಷ್ಮಿ, ಪ್ರಾಪರ್ಟಿ ಮ್ಯಾನೇಜರ್ ವಿರುದ್ಧ FIR ದಾಖಲು

ಮೈಸೂರು: ರೇಣುಕಾಸ್ವಾಮಿ ಕೊಲೆ ಕೇಸ್​ ಸಂಬಂಧ ನಟ ದರ್ಶನ್ ಅಂಡ್​ ಗ್ಯಾಂಗ್​ ಸದ್ಯ ಪೊಲೀಸ್​ ಕಸ್ಟಡಿಯಲ್ಲಿದ್ದಾರೆ. ಈ ಕೇಸ್​ ಬಗ್ಗೆ ಪೊಲೀಸ್​ ಅಧಿಕಾರಿಗಳು ದಿನದಿಂದ ದಿನಕ್ಕೆ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಆದರೆ ಇದರ ಮಧ್ಯೆ ಕೊಲೆ ಕೇಸ್​ನಲ್ಲಿ ಜೈಲು ಸೇರಿರೋ ನಟ ದರ್ಶನ್​ಗೆ ಮತ್ತೊಂದು ಸಂಕಷ್ಟ ಎದುರಾಗಿದೆ.

ಇದನ್ನೂ ಓದಿ: ಮೆಗ್ಗರ್​​ ರಾಜುನ ಕ್ರೌರ್ಯದ ಇತಿಹಾಸ ತುಂಬಾನೇ ಭಯಾನಕ.. ಚಿತ್ರಹಿಂಸೆ ಅನುಭವಿಸಿದ್ದು ರೇಣುಕಾಸ್ವಾಮಿ ಒಬ್ಬರೇ ಅಲ್ಲ..!

ಹೌದು, ನಟ ದರ್ಶನ್ ಜೊತೆಗೆ ಪತ್ನಿ ವಿಜಯಲಕ್ಷ್ಮಿಗೂ ಈ ಕೇಸ್​ನಲ್ಲಿ ಸಂಕಷ್ಟ ಎದುರಾಗಿದೆ. ಕಾನೂನು ಬಾಹಿರವಾಗಿ ವಿಶಿಷ್ಟ ಪ್ರಬೇಧದ ಬಾತುಕೋಳಿ ಸಾಕಿದ ಕೇಸ್​ಗೆ ಸಂಬಂಧಿಸಿದ್ದಂತೆ FIR ದಾಖಲಾಗಿ ನೋಟಿಸ್ ಕೊಟ್ಟರು ಕೂಡ ನಟ ದರ್ಶನ್ ವಿಚಾರಣೆಗೆ ಹಾಜರಾಗಿಲ್ಲ. ಒಂದಲ್ಲಾ ಎರಡಲ್ಲಾ ಒಟ್ಟು ಐದು ನೋಟಿಸ್ ನೀಡಿದ್ದರೂ ನಟ ದರ್ಶನ್‌ ವಿಚಾರಣೆಗೆ ಹಾಜರಾಗಿಲ್ಲ. ಹೀಗಾಗಿ ಈ ಕೇಸ್​ನಲ್ಲಿ ದರ್ಶನ್​ ಪತ್ನಿ ವಿಜಯಲಕ್ಷ್ಮಿ A1, ಪ್ರಾಪರ್ಟಿ ಮ್ಯಾನೇಜರ್ ನಾಗರಾಜ್ A2 ಹಾಗೂ ನಟ ದರ್ಶನ್ A3 ಸ್ಥಾನದಲ್ಲಿದ್ದಾರೆ.

ನಟ ದರ್ಶನ್ ತೋಟವು ಮೈಸೂರು ಜಿಲ್ಲೆ ಟಿ‌.ನರಸೀಪುರದಲ್ಲಿ ಇದೆ. ಈ ಪ್ರಕರಣದಲ್ಲಿ ದರ್ಶನ್​ರನ್ನು ಬಂಧಿಸದೆ ಅರಣ್ಯ ಇಲಾಖೆ ನಿರ್ಲಕ್ಷ್ಯ ವಹಿಸಿದೆ. ನಿಯಮಗಳ ಪ್ರಕಾರ ಬಾರ್ ಹೆಡೆಡ್ ಗೂಸ್ ಸಾಕುವುದು ಕಾನೂನು ಬಾಹಿರ‌ವಾಗಿದೆ. ಆದರೆ ಕಾನೂನು ಬಾಹಿರವಾಗಿ ವಿಶಿಷ್ಟ ಪ್ರಬೇಧದ ಬಾತುಕೋಳಿ ಸಾಕಿದ್ದರಿಂದ ನಟ ದರ್ಶನ್​ನನ್ನು ಅರೆಸ್ಟ್​ ಮಾಡಬೇಕಿತ್ತು. ಆದರೆ ಸೆಲೆಬ್ರಿಟಿ ಆಗಿದ್ದರಿಂದ ವಿಚಾರಣೆಗೆ ಅವಕಾಶ‌‌ ನೀಡಲಾಗಿತ್ತು. ನಟ ದರ್ಶನ್​ ತಲೆಮರೆಸಿಕೊಳ್ಳದ ಕಾರಣ ಅರಣ್ಯ ಇಲಾಖೆ ಅಧಿಕಾರಿಗಳು ಬಲವಂತವಾಗಿ ಬಂಧಿಸಿರಲಿಲ್ಲ. ಇದೀಗ ಅರಣ್ಯ ಇಲಾಖೆ ಅಧಿಕಾರಿಗಳು ಈ ಕೇಸ್​​ ಅನ್ನು ಚುರುಕುಗೊಳಿದೆ. ಜೊತೆಗೆ 2 ದಿನಗಳಲ್ಲಿ ಚಾರ್ಜ್ ಶೀಟ್ ಸಲ್ಲಿಸಲು ಅರಣ್ಯ ಇಲಾಖೆ ನಿರ್ಧಾರ ಕೈಗೊಂಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಟ ದರ್ಶನ್​​ ಜತೆಗೆ ಪತ್ನಿ ವಿಜಯಲಕ್ಷ್ಮಿಗೂ ಸಂಕಷ್ಟ.. ಚಾರ್ಜ್​ಶೀಟ್​ ಸಲ್ಲಿಸಲು ನಿರ್ಧಾರ!

https://newsfirstlive.com/wp-content/uploads/2024/06/darshan-wife.jpg

Load More