newsfirstkannada.com

ದರ್ಶನ್, ವಿಜಯಲಕ್ಷ್ಮಿ ಮದುವೆಗೆ ಸಾಕ್ಷಿ.. ಆಮಂತ್ರಣ ಪತ್ರಿಕೆ ದಿಢೀರ್‌ ವೈರಲ್ ಆಗಿದ್ದೇಕೆ? ಕಾರಣವೇನು?

Share :

Published July 4, 2024 at 7:58pm

  ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲಿನಲ್ಲಿರುವ ದರ್ಶನ್, ಪವಿತ್ರಾ ಗೌಡ

  ಈಗ ದರ್ಶನ್ ಮದುವೆ ಆಮಂತ್ರಣ ಪತ್ರಿಕೆ ವೈರಲ್ ಆಗಿರುವುದು ಯಾಕೆ?

  ಜೈಲಿನಲ್ಲಿರುವ ದರ್ಶನ್‌ ಗ್ಯಾಂಗ್‌ಗೆ ಕೋರ್ಟ್‌ನಿಂದ ಮತ್ತೆ ನ್ಯಾಯಾಂಗ ಬಂಧನ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅವರು ಬೆಂಗಳೂರಿನ ಪರಪ್ಪನ ಅಗ್ರಹಾರದ ಸೆರೆವಾಸದಲ್ಲಿದ್ದಾರೆ. ದರ್ಶನ್ ಜೈಲು ಸೇರಿದ ಬಳಿಕ ಅವರ ಪತ್ನಿ ವಿಜಯಲಕ್ಷ್ಮಿ, ಮಗ ವಿನೀಶ್ ಸೇರಿದಂತೆ ಕುಟುಂಬಸ್ಥರು ಅವರನ್ನು ಭೇಟಿ ಮಾಡಿ, ಮಾತನಾಡಿ ವಾಪಸ್ ಆಗಿದ್ದರು. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ಹಾಗೂ ವಿಜಯಲಕ್ಷ್ಮಿ ಅವರ ಮದುವೆ ಆಮಂತ್ರಣ ಪತ್ರಿಕೆ ಸಖತ್ ವೈರಲ್ ಆಗುತ್ತಿದೆ.

ಇದನ್ನೂ ಓದಿ: ಅಬ್ಬಾ.. ಅಂಬಾನಿ ಸೊಸೆ ಧರಿಸಿದ್ದ ಲೆಹೆಂಗಾವೆಲ್ಲ ಅಪ್ಪಟ ಚಿನ್ನ.. ಚಿನ್ನ; ಇದರಲ್ಲಿರೋ ಶ್ಲೋಕದ ವಿಶೇಷತೆ ಏನು?

ಇತ್ತೀಚೆಗೆ ಸುದ್ದಿಗೋಷ್ಠಿಯೊಂದರಲ್ಲಿ ಬೆಂಗಳೂರು ಪೊಲೀಸ್ ಆಯುಕ್ತ ಬಿ. ದಯಾನಂದ್ ಅವರು ಪವಿತ್ರಾ ಗೌಡ ಅವರು ನಟ ದರ್ಶನ್​ ಪತ್ನಿ ಎಂದು ಹೇಳಿದ್ದರು. ಇದಕ್ಕೆ ಸಂಬಂಧಿಸಿದಂತೆ ವಿಜಯಲಕ್ಷ್ಮಿ ಅವರು ಕಮಿಷನರ್ ಅವರಿಗೆ ಪತ್ರ ಬರೆದು ದರ್ಶನ್​ ಅವರ ಪತ್ನಿ ಪವಿತ್ರಾ ಗೌಡ ಎಂದು ತಪ್ಪಾಗಿ ಹೇಳಿದ್ದೀರಿ. ಇದು ನನ್ನ ಮತ್ತು ನನ್ನ ಮಗನಿಗೆ ಮುಂದಿನ ದಿನಗಳಲ್ಲಿ ತೊಂದರೆ ಆಗಬಾರದೆಂದು ಮನವಿ ಮಾಡಿದ್ದರು. ಇದರ ಬೆನ್ನಲ್ಲೇ ದರ್ಶನ್ ಹಾಗೂ ವಿಜಯಲಕ್ಷ್ಮಿ ಅವರ ಮದುವೆ ಆಮಂತ್ರಣ ಪತ್ರಿಕೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡಲಾಗಿದೆ.

ಇದನ್ನೂ ಓದಿ: BREAKING: ದರ್ಶನ್‌ಗೂ ಪವಿತ್ರಾಗೂ ಏನ್ ಸಂಬಂಧ? ಪೊಲೀಸರಿಗೆ ಕ್ಲಾರಿಟಿ ಕೊಟ್ಟ ವಿಜಯಲಕ್ಷ್ಮೀ

ಸದ್ಯ ವೈರಲ್ ಆಗಿರುವ ಮದುವೆ ಕಾರ್ಡ್​ ಅನ್ನು ಮೈಸೂರು ಮೂಲದ ಕೆ.ಎನ್ ನಟರಾಜನ್ ಮತ್ತು ಕುಟುಂಬದವರಿಗೆ ದರ್ಶನ್ ತಾಯಿ ಮೀನಾ ಶ್ರೀನಿವಾಸ್ ಅವರು ಕೊಟ್ಟಿರುವುದು ಆಗಿದೆ. 19/05/2003ರಂದು ದರ್ಶನ್ ತೂಗುದೀಪ ಹಾಗೂ ವಿಜಯಲಕ್ಷ್ಮಿ ಅವರು ವಿವಾಹವಾಗಿದ್ದರು. ಇದೆಲ್ಲ ವೈರಲ್ ಆಗಿರುವ ಮದುವೆ ಕಾರ್ಡ್​​ನಲ್ಲಿ ಉಲ್ಲೇಖವಾಗಿದೆ. ಇನ್ನು ದರ್ಶನ್ ಅವರ ನ್ಯಾಯಾಂಗ ಬಂಧನವನ್ನು ಇಂದು ಕೋರ್ಟ್ ವಿಸ್ತರಣೆ ಮಾಡಿದ್ದು ಜುಲೈ 18ರವರೆಗೆ ದರ್ಶನ್ ಅವರಿಗೆ ಪರಪ್ಪನ ಅಗ್ರಹಾರ ಜೈಲೇ ಗತಿಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದರ್ಶನ್, ವಿಜಯಲಕ್ಷ್ಮಿ ಮದುವೆಗೆ ಸಾಕ್ಷಿ.. ಆಮಂತ್ರಣ ಪತ್ರಿಕೆ ದಿಢೀರ್‌ ವೈರಲ್ ಆಗಿದ್ದೇಕೆ? ಕಾರಣವೇನು?

https://newsfirstlive.com/wp-content/uploads/2024/07/darshan_WIFE_NEWS.jpg

Load More