newsfirstkannada.com

ಇದು ರೋಚಕ ಕಿಡ್ನಾಪ್ ಕಹಾನಿ.. ದರ್ಶನ್​ ಜೊತೆ ಫೋಟೋ ತೆಗೆಸ್ತೀವಿ ಅಂತ ಕರೆದು, ಕೊಂದು ಹಾಕಿದ್ರಾ?

Share :

Published June 15, 2024 at 4:11pm

  ಯಾರಿಗೂ ಸಾಲ ಕೊಡೋದು ಇಲ್ಲಣ್ಣ ಅಂದಿದ್ದ ರೇಣುಕಾಸ್ವಾಮಿ

  ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿದವರು ಯಾರು, ಯಾರು?

  ದುಡ್ಡು ಕೊಟ್ಟವ್ರು ನೀನಗಾಗಿ ಕಾಯುತ್ತಿದ್ದಾರೆ ಎಂದಿದ್ದ ರಾಘವೇಂದ್ರ

ಬೆಂಗಳೂರು: ಸ್ಯಾಂಡಲ್​ವುಡ್​ ಸ್ಟಾರ್ ದರ್ಶನ್ ಸೂಚನೆಯಂತೆ ಮೃತ ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಲಾಗಿತ್ತು ಎನ್ನುವ ಮಹತ್ವದ ಮಾಹಿತಿ ಇದೀಗ ಹೊರ ಬಿದ್ದಿದೆ. ಯಾರಿಗೋ 10 ಸಾವಿರ ರೂಪಾಯಿ ಸಾಲ ಕೊಡಬೇಕು ಎಂದು ಹೇಳಿ ರೇಣುಕಾಸ್ವಾಮಿಯನ್ನು ಮೂವರು ಆರೋಪಿಗಳು ಕಿಡ್ನಾಪ್ ಮಾಡಿದ್ದರು ಎಂದು ಗೊತ್ತಾಗಿದೆ.

ಇದನ್ನೂ ಓದಿ: ಮೋದಿ ಜೊತೆ ಕ್ಯೂಟ್ ಆಗಿ ಪೋಸ್ ಕೊಟ್ಟ ಮೆಲೋನಿ.. ಪ್ರಧಾನಿ ಮುಖದಲ್ಲಿ ಮಂದಹಾಸ; ವಿಡಿಯೋ ಸಖತ್‌ ವೈರಲ್!

ಮೊದಲೇ ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಲು ಪ್ಲಾನ್ ಮಾಡಿದ್ದರು. ರೇಣುಕಾಸ್ವಾಮಿ ಬರುತ್ತಿದ್ದಂತೆ ಸಾಲದ ಕಥೆಯನ್ನು ಆರೋಪಿ ರಘು ಕಟ್ಟಿದ್ದನು. ಯಾರಿಗೋ 10 ಸಾವಿರ ರೂಪಾಯಿ ಸಾಲ ಕೊಡಬೇಕಂತ ಸುಳ್ಳು ಹೇಳಿ ಹಣ ಕೊಟ್ಟವರು ಕುಂಚಿಗನಾಳ್ ಬಳಿ ಕಾಯುತ್ತಿದ್ದಾರೆ ಎಂದಿದ್ದನು. ಇದಕ್ಕೆ ರೇಣುಕಾಸ್ವಾಮಿ ಯಾರಿಗೂ ಸಾಲ ಕೊಡೋದು ಇಲ್ಲಣ್ಣ ಎಂದಿದ್ದನು. ಪ್ಲಾನ್​​ನಂತೆ ಚಳ್ಳಕೆರೆ ಗೇಟ್​ ಬಾಲಾಜಿ ಬಾರ್ ಪಕ್ಕ ಹೊಂಚು ಹಾಕಿ ರಘು, ಜಗ್ಗು ಹಾಗೂ ಅನು ಮೂವರ ಗ್ಯಾಂಗ್ ಕಾದು ಕುಳಿತ್ತಿತ್ತು. ರೇಣುಕಾಸ್ವಾಮಿ ಬರುತ್ತಿದ್ದಂತೆ ಮೂವರ ಗ್ಯಾಂಗ್ ರೇಣುಕಾಸ್ವಾಮಿಯನ್ನು ಆಟೋದಲ್ಲಿ ಕರೆದುಕೊಂಡು ಹೋಗಿದ್ದರು.

ಇದನ್ನೂ ಓದಿ: ನಡೆಯಲ್ಲ ಬ್ಯಾಟ್ಸ್​​​ಮನ್​​​ ಆಟ.. ಬೂಮ್ರಾ ಅಬ್ಬರದ ಆತ್ಮವಿಶ್ವಾಸಕ್ಕೆ ಕಾರಣವೇನು..?

ಬಳಿಕ ದರ್ಶನ್​ ಜೊತೆ ಫೋಟೋ ತೆಗೆಸುತ್ತೇವೆ ಎಂದು ರೇಣುಕಾಸ್ವಾಮಿಯನ್ನು ಕಾರಲ್ಲಿ ಕೂರಿಸಿಕೊಂಡು ಹೋಗಿದ್ದರು. ತುಮಕೂರು ಸಮೀಪ ಬರುತ್ತಿದ್ದಂತೆ ಬಾಸ್ (ದರ್ಶನ್) ನಿನ್ನ ಬೈಬೋದು. ಬಾಸ್ ಒಂದೆರೆಡು ಏಟು ಹೊಡೀತಾರೆ, ಬೇಜಾರ್ ಆಗಬೇಡ. ದರ್ಶನ್ ಜೊತೆ ನಿನ್ನ ಫೋಟೋ ತೆಗೆಸುತ್ತೇವೆ ಎಂದು ರಾಘವೇಂದ್ರ ಹೇಳಿದ್ದನು. ನೈಸ್ ರೋಡ್, ಕೆಂಗೇರಿ ಮೂಲಕ ಶೆಡ್ ತಲುಪಿದ್ದ ಗ್ಯಾಂಗ್​​ಗೆ ಲೊಕೇಷನ್​ ಕನ್​ಫರ್ಮ್​ ಆಗಿತ್ತು. ದರ್ಶನ್ ಆ್ಯಂಡ್ ಟೀಮ್ ರಘುಗೆ ಶೆಡ್​ ಲೊಕೇಷನ್ ಶೇರ್ ಮಾಡಿತ್ತು ಎಂದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇದು ರೋಚಕ ಕಿಡ್ನಾಪ್ ಕಹಾನಿ.. ದರ್ಶನ್​ ಜೊತೆ ಫೋಟೋ ತೆಗೆಸ್ತೀವಿ ಅಂತ ಕರೆದು, ಕೊಂದು ಹಾಕಿದ್ರಾ?

https://newsfirstlive.com/wp-content/uploads/2024/06/dboss8.jpg

Load More