newsfirstkannada.com

ಪದೇ ಪದೇ ಸಿಗರೇಟ್‌ ಕೇಳಿದ್ದಕ್ಕೆ ದರ್ಶನ್‌ಗೆ ವಾರ್ನಿಂಗ್‌; ಕೊನೆಗೂ ಅಶ್ಲೀಲ ಮೆಸೇಜ್ ಸೀಕ್ರೆಟ್‌ ರಿವೀಲ್‌!

Share :

Published June 12, 2024 at 8:28pm

Update June 12, 2024 at 8:30pm

    ಲಾಕಪ್​ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್.. ಮೊದಲ ರಾತ್ರಿ ಏನೆಲ್ಲ ನಡೀತು?

    ಕೊಲೆ ಕೇಸ್‌ನಲ್ಲಿ ಪೊಲೀಸರ ಪ್ರಶ್ನೆಗೆ ಮೌನಕ್ಕೆ ಶರಣಾದ ಪವಿತ್ರಾಗೌಡ ಕಣ್ಣೀರು

    ಟೆನ್ಷನ್​ನಲ್ಲಿ ಸಿಗರೇಟ್ ಕೇಳಿದ ದರ್ಶನ್‌ಗೆ ಪೊಲೀಸರಿಂದ ಖಡಕ್‌ ವಾರ್ನಿಂಗ್!

ಕೋಪ ಅನ್ನೋ ಕಾಯಿಲೆಗೆ ಮೊದಲನೇ ಬಲಿ ಕೋಪ ಮಾಡ್ಕೊಂಡವರು. ರಾಬರ್ಟ್‌ ಸಿನಿಮಾದಲ್ಲಿರೋ ಈ ಡೈಲಾಗ್‌ ನಿಜಕ್ಕೂ ದರ್ಶನ್​ಗೆ ಬರೆದಂತಿದೆ. ದರ್ಶನ್ ಕೋಪ, ಮನಸಲ್ಲಿರುವ ಕ್ರೌರ್ಯವೇ ಇವತ್ತು ಅವರನ್ನೇ ಸಂಕಷ್ಟಕ್ಕೆ ತಳ್ಳಿದೆ. ಕೂದಲಲ್ಲಿ ಹೋಗುವ ವಿಚಾರಕ್ಕೆ ಕೊಡಲಿ ತೆಗೆದುಕೊಂಡ್ರು ಅನ್ನೋ ಹಾಗೆ ಕೂರಿಸಿ ಬುದ್ಧಿ ಹೇಳಬಹುದಾದ ಮ್ಯಾಟರ್​ ಇವತ್ತು ಕರಿಯನನ್ನ ಕಂಬಿ ಹಿಂದೆ ಬಂಧಿಯಾಗುವಂತೆ ಮಾಡಿದೆ.

ರೇಣುಕಾಸ್ವಾಮಿ ಹತ್ಯೆ ಕೇಸ್ ತನಿಖೆ ಚುರುಕು! ಹೇಗಿದೆ ವಿಚಾರಣೆ?

ಕೊಲೆ ಆರೋಪ ಹೊತ್ತಿರುವ ದರ್ಶನ್​ರನ್ನ ನ್ಯಾಯಾಲಯ ಆರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ಹೀಗಾಗಿ ಜೂನ್ 12ರಂದು ಅನ್ನಪೂರ್ಣೆಶ್ವರಿ ಠಾಣೆಯಲ್ಲೇ ದರ್ಶನ್ ಅವರನ್ನು ಇರಿಸಿಕೊಳ್ಳಲಾಗಿತ್ತು. ಪೊಲೀಸ್ ಠಾಣೆಯಲ್ಲಿ ದರ್ಶನ್ ಅವರು ರಾತ್ರಿಯೆಲ್ಲಾ ನಿದ್ದೆಯಿಲ್ಲದೇ ಪರದಾಡಿದ್ರಂತೆ. ಪೊಲೀಸ್ ಕಸ್ಟಡಿಯಲ್ಲಿರುವ ಟೆನ್ಷನ್​ ದಾಸನಿಗೆ ನಿದ್ದೆಗೆಡುವಂತೆ ಮಾಡಿತ್ತು. ಕೊಲೆ ಆರೋಪದಲ್ಲಿ A2 ಆರೋಪಿಯಾಗಿರುವ ದರ್ಶನ್​ ಊಟ ಕೂಡ ಮಾಡದೇ ರಾತ್ರಿ ಕಳೆದಿದ್ದಾರಂತೆ.

ಮಧ್ಯಾಹ್ನದಿಂದ ಊಟವಿಲ್ಲ ಮಜ್ಜಿಗೆಯಲ್ಲೇ ದಿನ ಕಳೆದ ದರ್ಶನ್!
ಮಂಗಳವಾರ ಬೆಳ್ಳಂ ಬೆಳಗ್ಗೆ ಪೊಲೀಸರು ದರ್ಶನ್​ರನ್ನ ಮೈಸೂರಿನಿಂದ ಕರೆದುಕೊಂಡು ಬಂದಿದ್ರು. ಹೀಗಾಗಿ ಬೆಳಗ್ಗೆ ಇಡ್ಲಿ ತಿಂದಿದ್ದು ಬಿಟ್ರೆ ದರ್ಶನ್ ಬೇರೆ ಆಹಾರ ಸೇವಿಸಿರಲಿಲ್ಲ. ಮಂಗಳವಾರ ಮಧ್ಯಾಹ್ನದಿಂದ ಊಟವೇ ಮಾಡಿಲ್ಲ ಎನ್ನಲಾಗಿದೆ. ಬರೀ ಜ್ಯೂಸ್ ಮಜ್ಜಿಗೆ ಕುಡಿದು ಕಾಲ ಕಳೆದಿರುವ ದರ್ಶನ್ ಚಾಕ್​ಲೇಟ್ ತಿಂದು ಮಲಗಿದ್ರಂತೆ.

ಟೆನ್ಷನ್​ನಲ್ಲಿ ಸಿಗರೇಟ್ ಕೇಳಿದ ಕರಿಯ! ಪೊಲೀಸರ ವಾರ್ನಿಂಗ್!
ದರ್ಶನ್ ಸಿಗರೇಟ್ ಸೇದ್ತಾರೆ ಅನ್ನೋದು ಗೊತ್ತಿರೋ ವಿಚಾರವೇನು ಅಲ್ಲ. ಸೋ ಕೊಲೆ ಆರೋಪದ ಟೆನ್ಷನ್​ನಲ್ಲಿ ಠಾಣೆಯಲ್ಲಿ ಇರೋ ದರ್ಶನ್​ ಸಿಗರೇಟ್ ಕೇಳಿದ್ರಂತೆ. ಪೊಲೀಸರು ಇದಕ್ಕೆಲ್ಲ ಅವಕಾಶವಿಲ್ಲ ಅಂತ ಖಡಕ್ ಆಗಿ ಸಿಗರೇಟ್ ಕೊಡೋದಿಕ್ಕೆ ಆಗಲ್ಲ ಅಂತ ಹೇಳಿದ್ದಾರೆ ಎನ್ನಲಾಗಿದೆ. ಹೀಗಾಗಿ ಸಿಗರೇಟ್ ಇಲ್ಲದೇ ದರ್ಶನ್ ರಾತ್ರಿ ಕಳೆದಿದ್ದಾರೆ ಅಂತ ತಿಳಿದು ಬಂದಿದೆ.

ಇದನ್ನೂ ಓದಿ: ಗಂಡನ ಸಾವಿಗೆ ಅಸಲಿ ಕಾರಣ ಬಿಚ್ಚಿಟ್ಟ ರೇಣುಕಾಸ್ವಾಮಿ ಪತ್ನಿ; ದರ್ಶನ್​​-ಪವಿತ್ರಾ ಮಾಡಿದ್ದೇನು? 

ಪೊಲೀಸರ ಪ್ರಶ್ನೆಗೆ ಮೌನಕ್ಕೆ ಶರಣಾದ ಪವಿತ್ರಾಗೌಡ ಕಣ್ಣೀರು!
ಚಿತ್ರದುರ್ಗದ ನಾರಾಯಣ ಸ್ವಾಮಿ ಕೊಲೆಯ ಮೂಲ ರೂವಾರಿಯೇ ಈ ಪವಿತ್ರಾಗೌಡ.. ದರ್ಶನ್ ಜೊತೆ ಪವಿತ್ರಾಗೌಡ ಕೂಡ ಪೊಲೀಸ್ ಕಸ್ಟಡಿಯಲ್ಲಿದ್ದಾಳೆ.. ಹೀಗಾಗಿ ತನಿಖೆ ಶುರು ಮಾಡಿರುವ ಪೊಲೀಸರು ಪವಿತ್ರಾಗೌಡಗೆ ಸಾಲು ಸಾಲು ಪ್ರಶ್ನೆಗಳು ಕೇಳಿದ್ದು, ಕೆಲ ಪ್ರಶ್ನೆಗಳಿಗೆ ಮಾತ್ರ ಉತ್ತರ ಕೊಟ್ಟಿರುವ ಪವಿತ್ರಾ ಉಳಿದ ಪ್ರಶ್ನೆಗಳಿಗೆ ಉತ್ತರಿಸಿದೇ ಮೌನಕ್ಕೆ ಶರಣಾಗಿದ್ದರು ಎನ್ನಲಾಗಿದೆ.

ಪೊಲೀಸ್ ಪ್ರಶ್ನೆಗೆ ಪವಿತ್ರಾ ಹೇಳಿದ್ದೇನು?

ಅಧಿಕಾರಿ : ರೇಣುಕಾಸ್ವಾಮಿ ನಿಮಗೆ ಹೇಗೆ ಪರಿಚಯ?
ಪವಿತ್ರಾಗೌಡ : ರೇಣುಕಾಸ್ವಾಮಿ ಬಗ್ಗೆ ನನಗೆ ಪರಿಚಯವಿಲ್ಲ

ಅಧಿಕಾರಿ : ರೇಣುಕಾಸ್ವಾಮಿ ನಿಮಗೆ ಏನಂಥಾ ಚಾಟ್ ಮಾಡಿದ್ರು?
ಪವಿತ್ರಾಗೌಡ : ಸೋಷಿಯಲ್ ಮೀಡಿಯಾದಲ್ಲಿ ಅಶ್ಲೀಲ ಪೋಸ್ಟ್ ಹಾಕಿದ್ದ

ಅಧಿಕಾರಿ: ರೇಣುಕಾಸ್ವಾಮಿ ವಿಚಾರವನ್ನ ದರ್ಶನ್​ಗೆ ಹೇಳಿದ್ಯಾರು?
ಪವಿತ್ರಾಗೌಡ : ರೇಣುಕಾಸ್ವಾಮಿ ಬಗ್ಗೆ ದರ್ಶನ್​ಗೆ ನಾನು ಹೇಳೇ ಇಲ್ಲ

ಅಧಿಕಾರಿ : ಆತನನ್ನ ಬೆಂಗಳೂರಿಗೆ ಕರೆಸಿದ್ದು ನಿಮಗೆ ಗೊತ್ತಿತ್ತಾ?
ಪವಿತ್ರಾಗೌಡ : ಉತ್ತರ ನೀಡದೇ ಮೌನವಾಗಿದ್ದ ಪವಿತ್ರಾ ಗೌಡ

ಅಧಿಕಾರಿ: ಹಲ್ಲೆ ಮಾಡೋ ವೇಳೆ ನೀವು ಶೆಡ್ ಬಳಿ ತೆರಳಿದ್ರಾ?
ಪವಿತ್ರಾಗೌಡ : ಈ ಬಗ್ಗೆ ನನಗೇನು ಗೊತ್ತಿಲ್ಲ

ಇದನ್ನೂ ಓದಿ: ಪಟ್ಟಣಗೆರೆ ಶೆಡ್‌ನಲ್ಲಿ ಪವಿತ್ರಾ ಗೌಡ ಕಣ್ಣೀರು.. ಪಕ್ಕದಲ್ಲೇ ನಿಂತಿದ್ದ ದರ್ಶನ್ ಮಾಡಿದ್ದೇನು? 

ಸತ್ವ ಅನುಗ್ರಹ ಅಪಾರ್ಟ್ಮೆಂಟ್​ ಬಳಿ ಸ್ಥಳ ಮಹಜರು!
ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಚುರುಕುಗೊಂಡ ಬೆನ್ನಲ್ಲೇ ಪೊಲೀಸರು ಬುಧವಾರ ಸ್ಥಳ ಮಹಜರು ಪ್ರಕ್ರಿಯೆ ನಡೆಸಿದ್ದಾರೆ. ನಾರಾಯಣ ಸ್ವಾಮಿ ಮೃತದೇಹ ಸಿಕ್ಕ ಸತ್ವ ಅನುಗ್ರಹ ಅಪಾರ್ಟ್​ಮೆಂಟ್ ಬಳಿ ಸ್ಥಳ ಮಹಜರು ಕಾರ್ಯ ನಡೆಸಲಾಯಿತು. ಮೃತದೇಹ ಎಸೆದಿದ್ದ ಆರೋಪಿಗಳಾದ ನಿಖಿಲ್, ರಾಘವೇಂದ್ರ , ಕಾರ್ತಿಕ್ ಈ ಮೂವರನ್ನ ಮೃತದೇಹ ಸಿಕ್ಕ ಸ್ಥಳಕ್ಕೆ ಕರೆದುಕೊಂಡು ಬಂದು ಸ್ಥಳ ಮಹಜರು ನಡೆಸಲಾಗಿತ್ತು. ಇನ್ನೊಂದೆಡೆ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿದ್ದ ಆರ್​.ಆರ್​ ನಗರದ ಶೆಡ್​ಗೆ ಎಫ್​ಎಸ್​ಎಲ್​ ತಂಡ ಭೇಟಿ ಕೊಟ್ಟಿತ್ತು. ಇಡೀ ಶೆಡ್​ ಪರಿಶೀಲನೆ ನಡೆಸಿದ್ದ ಎಫ್​​ಎಸ್​ಎಲ್ ತಂಡ ಶೆಡ್​​ನಲ್ಲಿ ಇಂಚಿಂಚೂ ಮಾಹಿತಿ ಕಲೆ ಹಾಕಿದೆ.

ರೇಣುಕಾಸ್ವಾಮಿ ಕಳುಹಿಸಿದ್ದ ಮೆಸೇಜ್ ಸ್ಕ್ರೀನ್ ಶಾಟ್ ಪತ್ತೆ! 
ಪವಿತ್ರಾಗೌಡ ಮೊಬೈಲ್ ವಶಕ್ಕೆ ಪಡೆದಿರುವ ಪೊಲೀಸರಿಗೆ ರೇಣುಕಾಸ್ವಾಮಿ ಪವಿತ್ರಾಗೌಡಗೆ ಕಳಿಸಿದ್ದ ಮೆಸೇಜ್​ಗಳ ಸ್ಕ್ರೀನ್ ಶಾಟ್ ಪತ್ತೆಯಾಗಿದೆ. ಪವಿತ್ರಾ ಗೌಡ ಮೊಬೈಲ್ ಪರಿಶೀಲನೆ ನಡೆಸುವಾಗ 10 ದಿನಗಳ ಹಿಂದೆ ಪವಿತ್ರಾಗೌಡಗೆ ಈ ಮೆಸೇಜ್ ಕಳಿಸಿರೋದು ಗೊತ್ತಾಗಿದೆ. ಆಗ ಪವಿತ್ರಾಗೌಡ ಪವನ್ ಎಂಬಾತನಿಗೆ ಈ ಸ್ಕ್ರೀನ್​ಶಾಟ್​ಗಳನ್ನ ಕಳಿಸಿದ್ದಾರೆ. ಸ್ಕ್ರೀನ್​ ಶಾಟ್ ಜೊತೆ ರೇಣುಕಾಸ್ವಾಮಿ ಫೋಟೋಗಳನ್ನ ಸಹ ಪವನ್​ಗೆ ಕಳಿಸಿರೋದು ತನಿಖೆಯಲ್ಲಿ ರಿವೀಲ್ ಆಗಿದೆ. ಈ ವೇಳೆ ಪವನ್​ ತಲೆಕೆಡಿಸಿಕೊಳ್ಳಬೇಡಿ ನಾವು ನೋಡ್ಕೋತೀವಿ ಅಂತ ರಿಪ್ಲೈ ಮಾಡಿರೋದು ಪತ್ತೆಯಾಗಿದೆ. ಬಳಿಕ ಎಲ್ಲಾ ಆರೋಪಿಗಳು ಸೇರಿ ಪ್ಲಾನ್ ಮಾಡಿರೋದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.

ಇದನ್ನೂ ಓದಿ: ಅಯ್ಯೋ ತಗಡೇ.. ನಟ ದರ್ಶನ್‌ ಅರೆಸ್ಟ್ ಆದ್ಮೇಲೆ ಉಮಾಪತಿ ವಿಡಿಯೋಗಳು ಸಖತ್‌ ವೈರಲ್‌! 

ಪವಿತ್ರಾ ಗೌಡ ಮೊಬೈಲ್ ಅಷ್ಟೇ ಅಲ್ಲ ಎಲ್ಲಾ ಆರೋಪಿಗಳ ಮೊಬೈಲ್ ನಂಬರ್ CDR ತೆಗೆದು ಪರಿಶೀಲನೆ ಮಾಡಲು ಪೊಲೀಸರು ಸಿದ್ಧತೆ ನಡೆಸುತ್ತಿದ್ದಾರೆ. ಇನ್ನೂ ಹತ್ಯೆಯ ವೇಳೆ ನಟ ದರ್ಶನ್ ನಂಬರ್ ಯಾವ ಲೋಕೇಷನ್​ನಲ್ಲಿತ್ತು? ಆರೋಪಿಗಳ ಜೊತೆ ದರ್ಶನ್ ಯಾವಾಗೆಲ್ಲ ಸಂಪರ್ಕದಲ್ಲಿದ್ದರು ಎಂಬ ಮಾಹಿತಿ ಕಲೆಹಾಕುವ ನಿಟ್ಟಿನಲ್ಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪದೇ ಪದೇ ಸಿಗರೇಟ್‌ ಕೇಳಿದ್ದಕ್ಕೆ ದರ್ಶನ್‌ಗೆ ವಾರ್ನಿಂಗ್‌; ಕೊನೆಗೂ ಅಶ್ಲೀಲ ಮೆಸೇಜ್ ಸೀಕ್ರೆಟ್‌ ರಿವೀಲ್‌!

https://newsfirstlive.com/wp-content/uploads/2024/06/DARSHAN_PAVITRA-1.jpg

Load More