newsfirstkannada.com

ಸಿನಿಮಾ ಫೈಟ್​ ರೀತಿಯಲ್ಲೇ ರೇಣುಕಾಸ್ವಾಮಿಗೆ ದರ್ಶನ್​ ಡಿಚ್ಚಿ.. ಹೇಗಿದೆ ಗೊತ್ತಾ ದಾಸನ ಅಟ್ಟಹಾಸ?

Share :

Published June 15, 2024 at 4:44pm

    ದರ್ಶನ್ ಎಂಟ್ರಿ ಬಳಿಕ ಎಲ್ಲರನ್ನ ಶೆಡ್​ನಿಂದ​ ಆಚೆ ಕಳುಹಿಸಿದ್ದ​ ಗ್ಯಾಂಗ್

    ರೇಣುಕಾಸ್ವಾಮಿ ಸ್ಥಿತಿ ಕಂಡು ಗಾಬರಿಯಾಗಿದ್ದ ಅನು, ಜಗ್ಗ ಮತ್ತು ರವಿ

    ರೇಣುಕಾ ಮೈ ಮೇಲಿದ್ದ ಬಟ್ಟೆಯನ್ನ ಬಿಚ್ಚಿ ಕ್ರೌರ್ಯ ಮೆರೆದಿದ್ದ ಗ್ಯಾಂಗ್

ಬೆಂಗಳೂರು: ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿಕೊಂಡು ರಘು ಗ್ಯಾಂಗ್ ಬರುತ್ತಿದ್ದಂತೆ ಶೆಡ್​​ನಲ್ಲಿದ್ದವರೆಲ್ಲ ನರರಾಕ್ಷಸರಾಗಿದ್ದರು. ಬಳಿಕ ಶೆಡ್​ನಲ್ಲಿ ರೇಣುಕಾಸ್ವಾಮಿ ಬಟ್ಟೆ ಬಿಚ್ಚಿ ಸಿನಿಮಾ ಸ್ಟೈಲ್​ನಲ್ಲಿ ಗ್ಯಾಂಗ್​ ಅಟ್ಯಾಕ್ ಮಾಡಿತ್ತು. ಇದಾದ 20 ನಿಮಿಷಕ್ಕೆ ಶೆಡ್​ಗೆ ನಟ ದರ್ಶನ್ ಎಂಟ್ರಿಕೊಟ್ಟಿದ್ದರು ಎಂದು ತನಿಖೆಯಿಂದ ಗೊತ್ತಾಗಿದೆ.

ಇದನ್ನೂ ಓದಿ: ಮೋದಿ ಜೊತೆ ಕ್ಯೂಟ್ ಆಗಿ ಪೋಸ್ ಕೊಟ್ಟ ಮೆಲೋನಿ.. ಪ್ರಧಾನಿ ಮುಖದಲ್ಲಿ ಮಂದಹಾಸ; ವಿಡಿಯೋ ಸಖತ್‌ ವೈರಲ್!

ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿಕೊಂಡು ಶೆಡ್​ಗೆ ಕರೆತರುವರೆಗೆ ಒಂದು ರೀತಿ ಇತ್ತು. ಯಾವಾಗ ದರ್ಶನ್ ಶೆಡ್​​ಗೆ ಬಂದನೋ ಆವಾಗ ರೇಣುಕಾಸ್ವಾಮಿಯ ಕೂಗಾಟ, ನರಳಾಟ ಜೋರಾಗತೊಡಗಿತ್ತು. ದರ್ಶನ್​ ಬಂದಿದ್ದಕ್ಕೆ ಶೆಡ್​ ಒಳಗಿದ್ದ ಎಲ್ಲರು ಹೊರಗೆ ಬಂದಿದ್ದರು. ಒಳಗೆ ಸಿನಿಮಾ ಸ್ಟೈಲ್​ನಲ್ಲಿ ರೇಣುಕಾಸ್ವಾಮಿ ಮೇಲೆ ದರ್ಶನ್ ಅಟ್ಟಹಾಸ ಮರೆದಿದ್ದರು. ಶೆಡ್ ಹೊರಗೆ ಕುಳಿತ್ತಿದ್ದ ಕಿಡ್ನಾಪ್ ಮಾಡಿದ್ದ ಗ್ಯಾಂಗ್​ನವರಲ್ಲಿ ಏನಾಗುತ್ತೋ ಏನೋ ಎಂದು ಆತಂಕ, ನಡುಕ ಶುರುವಾಗಿತ್ತು.

ಇದನ್ನೂ ಓದಿ: ಇದು ರೋಚಕ ಕಿಡ್ನಾಪ್ ಕಹಾನಿ.. ದರ್ಶನ್​ ಜೊತೆ ಫೋಟೋ ತೆಗೆಸ್ತೀವಿ ಅಂತ ಕರೆದು, ಕೊಂದು ಹಾಕಿದ್ರಾ?

ಸಿನಿಮಾ ಫೈಟ್​ ರೀತಿಯಲ್ಲೇ ರೇಣುಕಾಸ್ವಾಮಿ ಮೇಲೆ ದರ್ಶನ್​ ಡಿಚ್ಚಿ ಮಾಡಿದ್ದನು. ರೇಣುಕಾಸ್ವಾಮಿಯ ಕೂಗಾಟ-ಅರಚಾಟ ಕೇಳಿ ಹೊರಗಿದ್ದವರೆಲ್ಲ ಒಂದು ಕ್ಷಣ ಹೆದರುತ್ತಿದ್ದರು. ಒಳಗೆ ರೇಣುಕಾಸ್ವಾಮಿ ಮೇಲೆ ದರ್ಶನ್ ಹಲ್ಲೆ ಮಾಡುವುದನ್ನು ನೋಡಲಾಗದೇ ರಘು ಶೆಡ್ ಹೊರಗೆ ಬಂದು ಭಯಗೊಂಡಿದ್ದನು. ಬಳಿಕ ಓಡಿ ಬಂದು ರೇಣುಕಾಸ್ವಾಮಿ ಕೊಲೆಯಾದ ಸುದ್ದಿಯನ್ನು ತಿಳಿಸಿದ್ದನು. ಆರೋಪಿ ರಘು ಹೇಳಿದ್ದ ಸುದ್ದಿ ಕೇಳಿ ರವಿ, ಜಗ್ಗ ಮತ್ತು ಅನು ಬೆಚ್ಚಿಬಿದ್ದಿದ್ದರು. ಬಳಿಕ ರೇಣುಕಾಸ್ವಾಮಿ ಮೃತದೇಹ ಸಾಗಾಟ ಮಾಡುವಂತೆ ಹೇಳಿ ದರ್ಶನ್ ಹೋಗಿದ್ದರು. ಯಾವಾಗ ಶೆಡ್​​ನಿಂದ ಮೃತದೇಹ ಹೊರ ಹೋಯಿತು ಆವಾಗ ದರ್ಶನ್ ಎಸ್ಕೇಪ್ ಆಗಿದ್ದನು. ದರ್ಶನ್ ಎಸ್ಕೇಪ್ ಆಗುತ್ತಿದ್ದಂತೆ ಗಾಬರಿಯಲ್ಲೇ ಮೃತದೇಹ ಸಾಗಿಸಿದ್ದ ಗ್ಯಾಂಗ್ ಸೈಲೆಂಟ್ ಆಗಿ ದುರ್ಗ ಸೇರಿಕೊಂಡು ತಮಗೇನು ಗೊತ್ತಿಲ್ಲ ಎಂಬುವಂತೆ ಇದ್ದರು. ಆ ಮೇಲೆ ನಡೆದಂತ ಘಟನೆಗಳು ಈಗ ಎಲ್ಲ ಜನರಿಗೆ ಗೊತ್ತಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಿನಿಮಾ ಫೈಟ್​ ರೀತಿಯಲ್ಲೇ ರೇಣುಕಾಸ್ವಾಮಿಗೆ ದರ್ಶನ್​ ಡಿಚ್ಚಿ.. ಹೇಗಿದೆ ಗೊತ್ತಾ ದಾಸನ ಅಟ್ಟಹಾಸ?

https://newsfirstlive.com/wp-content/uploads/2024/06/DARSHAN_MURDER_NEW_7.jpg

Load More