Advertisment

ಕ್ಲೈಮ್ಯಾಕ್ಸ್‌ನಲ್ಲಿ ದರ್ಶನ್ ಕೇಸ್‌ಗೆ ರೋಚಕ ಟ್ವಿಸ್ಟ್.. ಇನ್ನು 4 ದಿನದಲ್ಲಿ ಜಾಮೀನು ಭವಿಷ್ಯ ನಿರ್ಧಾರ; ಆಗಿದ್ದೇನು?

author-image
admin
Updated On
ಬಳ್ಳಾರಿ ಜೈಲಲ್ಲಿ ಗಡ್ಡ ಬಿಟ್ಟ ದಾಸ.. ಪತ್ನಿ ಭೇಟಿ ಬೆನ್ನಲ್ಲೇ ಸೊರಗಿದ ದರ್ಶನ್ ಮುಖದಲ್ಲಿ ಕಳೆ!
Advertisment
  • ಈ ಕೇಸ್‌ನಲ್ಲಿ ಸಾಕ್ಷಿ ತಿರುಚುವ ಯತ್ನ ನಡೆದಿದೆ; ದರ್ಶನ್​ ಪರ ವಕೀಲರು
  • 500 ಕುಟುಂಬಗಳು ದರ್ಶನ್ ಸಿನಿಮಾದ ಮೇಲೆ ಅವಲಂಬಿತವಾಗಿದೆ
  • ಪವಿತ್ರಾಗೌಡಗೆ ಮಿಸ್ ಯೂ, ಐ ಲವ್ ಯೂ ಹೆಂಡತಿ ಅಂತ ಮೆಸೇಜ್!

ಬೆಂಗಳೂರು: ರೇಣುಕಾಸ್ವಾಮಿ ಕೇಸ್​ನಲ್ಲಿ ಜೈಲು ಹಕ್ಕಿಯಾಗಿರೋ ನಟ ದರ್ಶನ್​, ಜಾಮೀನು ಸಿಕ್ಕರೆ ಪಂಜರದಿಂದ ಹಾರೋಕೆ ರೆಡಿಯಾಗಿದ್ದಾರೆ. ಸುದೀರ್ಘವಾಗಿ ಬೇಲ್​ ಅರ್ಜಿ ವಿಚಾರಣೆ ನಡೆಸಿದ ಜಡ್ಜ್​ ಇಂದು ಮಹತ್ವದ ತೀರ್ಪು ಕಾಯ್ದಿರಿಸಿದ್ದಾರೆ. ಕಳೆದೊಂದು ವಾರದಿಂದ ನಡೆದ ವಿಚಾರಣೆ ದರ್ಶನ್​ ಪರ ವಕೀಲರು ಮತ್ತು SPP ನಡುವಿನ ಜಿದ್ದಾಜಿದ್ದಿನ ವಾದಕ್ಕೆ ಸಾಕ್ಷಿಯಾಗಿದೆ.

Advertisment

ಇದನ್ನೂ ಓದಿ: Video: 65ನೇ ವಯಸ್ಸಿನಲ್ಲಿ ಮತ್ತೊಮ್ಮೆ ಮದುವೆಯಾದ ‘ಖಳನಾಯಕ್​‘ ಸಂಜಯ್ ದತ್ತ! 

ಒಂದಲ್ಲ, ಎರಡಲ್ಲ ಚಾಲೆಂಜಿಂಗ್ ಸ್ಟಾರ್‌ ದರ್ಶನ್​ ಅವರು ಸೆರೆಮನೆ ಸೇರಿ ಮೂರುವರೆ ತಿಂಗಳುಗಳೇ ಕಳೆದಿವೆ. ಜೈಲು ಹಕ್ಕಿಯಾಗಿರೋ ದರ್ಶನ್ ಬಂಧಿಖಾನೆಯಿಂದ ಹಾರಿ ಹೋಗಲು ಜಾಮೀನೆಂಬ ರೆಕ್ಕೆಗಾಗಿ ಕಾಯುತ್ತಿದ್ದಾರೆ. ಕೊನೆಗೂ ಆ ದಿನ ಬಂದಿದ್ದು, ಇನ್ನೂ ನಾಲ್ಕು ದಿನದಲ್ಲಿ ದಾಸನ ಬೇಲ್​ ಭವಿಷ್ಯ ಪ್ರಕಟವಾಗಲಿದೆ.

publive-image

ದರ್ಶನ್​ ಪರ ವಾದ ಮಂಡಿಸಿದ ಸಿ.ವಿ.ನಾಗೇಶ್​
ಅ.14ಕ್ಕೆ ಆದೇಶ ಕಾಯ್ದಿರಿಸಿ ಕೋರ್ಟ್ ಆದೇಶ
ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಬಂಧಿಯಾಗಿರೋ ನಟ ದರ್ಶನ್, ಚಾರ್ಜ್​ಶೀಟ್​ ಸಲ್ಲಿಕೆಯಾಗ್ತಿದ್ದಂತೆ ಬೇಲ್​ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಕಳೆದೊಂದು ವಾರದಿಂದ​ ಸುದೀರ್ಘವಾಗಿ ಪ್ರಬಲವಾಗಿ ದರ್ಶನ್​ ಪರ ಮತ್ತು ವಿರೋಧ ವಾದ ಮಂಡನೆಯಾಗಿದೆ. ಇವತ್ತಿಗೆ ಎಲ್ಲಾ ವಾದ, ಪ್ರತಿವಾದ ಮುಕ್ತಾಯವಾಗಿದ್ದು, ಜಾಮೀನು ಅರ್ಜಿ ವಿಚಾರಣೆ ಅಂತ್ಯವಾಗಿದೆ. ಸುದೀರ್ಘ ವಿಚಾರಣೆ ನಡೆಸಿದ 57ನೇ ಸಿಟಿ ಸಿವಿಲ್ ಕೋರ್ಟ್ ತೀರ್ಪು ಕಾಯ್ದಿರಿಸಿ ಆದೇಶ ಹೊರಡಿಸಿದೆ. ಅಕ್ಟೋಬರ್​ 14ಕ್ಕೆ ಆದೇಶ ಕಾಯ್ದಿರಿಸಿ ಜಡ್ಜ್​ ಜೈಶಂಕರ್​ ಆದೇಶ ಹೊರಡಿಸಿದ್ದಾರೆ.

Advertisment

ಎಸ್​ಪಿಪಿ ಪ್ರಸನ್ನಕುಮಾರ್​​ ದರ್ಶನ್​ ಕೃತ್ಯದಲ್ಲಿ ಭಾಗಿಯಾದ ಬಗ್ಗೆ ಸಾಕ್ಷಿ ಸಮೇತ ಪ್ರತಿವಾದ ಮಂಡಿಸಿದ್ರು. ಅದಕ್ಕೆ ಇವತ್ತು ಮತ್ತೆ ಸಿ.ವಿ ನಾಗೇಶ್​ ದರ್ಶನ್​ ಪರ ವಾದ ಮಂಡಿಸಿದ್ದು, ಎಸ್​ಪಿಪಿಗೆ ಕೌಂಟರ್​ ಕೊಟ್ಟಿದ್ದಾರೆ.

ಇದನ್ನೂ ಓದಿ: ನಟ ದರ್ಶನ್ ಹೊಸ ಸಿಗ್ನಲ್‌.. ಅಭಿಮಾನಿಗಳು ಫುಲ್ ಖುಷ್; ಜೈಲಿಂದ ದಾಸ ಕೊಟ್ಟ ಸಂದೇಶ ಏನು? 

ದರ್ಶನ್​ಗೆ ಜೈಲಾ..? ಬೇಲಾ..?
ಸಿ.ವಿ ನಾಗೇಶ್​, ದರ್ಶನ್​ ಪರ ವಕೀಲರು: ತಂತ್ರಜ್ಞಾನ ಆಧರಿಸಿ ದರ್ಶನ್ ಕೃತ್ಯದ ಸಮಯದಲ್ಲಿ ಬೇರೆಡೆ ಇದ್ದರೆಂದು ತೋರಿಸಬಹುದು. ನಾನು ನಿನ್ನೆ ಇಲ್ಲಿ ಕುಳಿತಿದ್ದೆ, ಆದರೆ ಹೈಕೋರ್ಟ್​ನಲ್ಲಿದ್ದಂತೆ ತೋರಿಸಬಹುದು. ಟವರ್ ಲೋಕೇಷನ್ ಆಧರಿಸಿ ನಡೆಸಿದ ತನಿಖೆಗೆ ಮಹತ್ವವಿಲ್ಲ. ಆರೋಪ ಪಟ್ಟಿಯಲ್ಲಿ ಗೂಗಲ್ ಮ್ಯಾಪ್ ಆಧರಿಸಿ ನಕ್ಷೆ ಸಿದ್ಧಪಡಿಸಿದ್ದಾರೆ. ಈ ನಕ್ಷೆಯಲ್ಲಿ ಎಲ್ಲಾ ಆರೋಪಿಗಳ ಫೋಟೋ ತೋರಿಸಿದ್ದಾರೆ. ದರ್ಶನ್ ಫೋಟೋವನ್ನೂ ಈ ಮ್ಯಾಪ್​ನಲ್ಲಿ ಅಂಟಿಸಿದ್ದಾರೆ. ಪೊಲೀಸ್ರು ನಕಲಿ ಡಯಾಗ್ರಾಂ ಸೃಷ್ಟಿಸಿದ್ದಾರೆ. ಡಯಾಗ್ರಾಂ ತಯಾರಿಸುವಾಗ ಎಸಿಪಿ ಬಸವೇಶ್ವರನಗರ ಕಚೇರಿಯಲ್ಲಿದ್ರು.

Advertisment

ಪ್ರಸನ್ನ ಕುಮಾರ್​​, ಎಸ್​ಪಿಪಿ: ಇದಕ್ಕೆ ನಮ್ಮ ಬಳಿ ಉತ್ತರ ಇದೆ.

ಸಿ.ವಿ ನಾಗೇಶ್​, ದರ್ಶನ್​ ಪರ ವಕೀಲರು: ತನಿಖಾಧಿಕಾರಿ ಸಾಕ್ಷಿಗಳ ಮಾಹಿತಿ ನೀಡದಿದ್ದರೂ ಹೇಗೆ ತಯಾರಿಸಿದರು. ಇದು ಪೊಲೀಸರ ಫ್ಯಾಬ್ರಿಕೇಷನ್ ಅಲ್ಲವೇ? ಹೀಗಾಗಿ ಈ ನಕ್ಷೆಗೆ ಯಾವುದೇ ಮಹತ್ವ ಕೊಡಬಾರದು. ಇಲ್ಲಿ ಸಾಕ್ಷಿ ತಿರುಚುವ ಯತ್ನ ನಡೆದಿದೆ. ಸಾಮಾನ್ಯವಾಗಿ ಆರೋಪಿಗಳನ್ನು ಬಂಧಿಸಿದಾಗ ಅವರ ಮೊಬೈಲ್ ಸೀಜ್ ಮಾಡಲಾಗುತ್ತದೆ. ಆದರೆ ಸಾಕ್ಷಿಗಳ ಮೊಬೈಲ್ ಸೀಜ್ ಮಾಡದೇ ಅವರ ಲೋಕೇಷನ್ ಹೇಗೆ ಪಡೆದರು. ಹೀಗಾಗಿ ಸೀನ್ ಆಫ್ ಅಫೆನ್ಸ್ ಚಿತ್ರಣವೇ ನಂಬಲು ಅಸಾಧ್ಯ. ಯಾವುದೇ ಟೆಕ್ನಿಕಲ್ ಎವಿಡೆನ್ಸ್ ಪಕ್ಕಾ ಇರುವುದಿಲ್ಲ. ಅದನ್ನ ಎಡಿಟ್ ಮಾಡಬಹುದು, ಬೇಕಾದನ್ನ ಬದಲಿಸಬಹುದು. ಹೀಗಾಗಿ ಟೆಕ್ನಿಕಲ್ ಎವಿಡೆನ್ಸ್ ಒಪ್ಪಲು ಅರ್ಹವಲ್ಲ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಈ ಪ್ರತ್ಯಕ್ಷ ಸಾಕ್ಷಿ ಬಿಟ್ಟರೆ ಬೇರೆ ಸಾಕ್ಷಿಯೇ ಇಲ್ಲ. ಇದನ್ನ ಬಿಟ್ಟರೆ ಕೃತ್ಯ ಸಾಬೀತುಪಡಿಸುವಂತಹ ಒಂದಂಶವೂ ಇಲ್ಲ. ರಿಮಾಂಡ್ ಅರ್ಜಿ ಸಲ್ಲಿಸುವಾಗ ಕೋರ್ಟ್​ಗೆ ಕೇಸ್ ಡೈರಿಯ ಪ್ರತಿ ಸಲ್ಲಿಸಬೇಕು.

publive-image

ಈ ವೇಳೆ ಸಿ.ವಿ.ನಾಗೇಶ್​ ವಾದಕ್ಕೆ ಎಸ್​ಪಿಪಿ ಪ್ರಸನ್ನಕುಮಾರ್​​ ಆಕ್ಷೇಪ ಮಾಡಿದ್ರು.

ಪ್ರಸನ್ನ ಕುಮಾರ್​​, ಎಸ್​ಪಿಪಿ: ನಾವು ಕೇಸ್ ಡೈರಿ ಪ್ರತಿ ಸಲ್ಲಿಸಿದ್ದೇವೆ. ಗೊತ್ತಿಲ್ಲದಿದ್ದರೆ ಹಿರಿಯ ವಕೀಲರು ಆ ಬಗ್ಗೆ ವಾದ ಮಂಡಿಸಬಾರದು.

ಸಿ.ವಿ ನಾಗೇಶ್​, ದರ್ಶನ್​ ಪರ ವಕೀಲರು: ನೀವು ಕೇಸ್ ಡೈರಿಯ ಪ್ರತಿ ಸಲ್ಲಿಸಿದ್ದೀರಾ ಎಂದು ಮ್ಯಾಜಿಸ್ಟ್ರೇಟ್ ಆದೇಶದಲ್ಲಿ ಎಲ್ಲಿದೆ.

Advertisment

ಪ್ರಸನ್ನ ಕುಮಾರ್​​, ಎಸ್​ಪಿಪಿ: ಕೋರ್ಟ್​ಗೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದ್ದೇವೆ. ಅದನ್ನು ರಿಮ್ಯಾಂಡ್ ಅರ್ಜಿಯಲ್ಲಿ ನಮೂದಿಸಬೇಕಿಲ್ಲ.

ಸಿ.ವಿ ನಾಗೇಶ್​, ದರ್ಶನ್​ ಪರ ವಕೀಲರು: ದರ್ಶನ್​ಗೆ ರೇಣುಕಾಸ್ವಾಮಿ ಬಗ್ಗೆ ಫೆಬ್ರವರಿಯಲ್ಲೇ ಗೊತ್ತು ಅಂತ ಎಸ್​ಪಿಪಿ ಆರೋಪಿಸಿದ್ದಾರೆ. ಆದ್ರೆ, ಪವನ್ ದರ್ಶನ್​ಗೆ ರೇಣುಕಾಸ್ವಾಮಿ ಬಗ್ಗೆ ಹೇಳಿರೋದು ಮೇನಲ್ಲಿ. ಅಲ್ಲಿವರೆಗೂ ರೇಣುಕಾಸ್ವಾಮಿ ಬಗ್ಗೆ ದರ್ಶನ್ ಗಮನಕ್ಕೆ ಇರಲಿಲ್ಲ. ದರ್ಶನ್ ಜೊತೆ ಪವಿತ್ರಾ ಗೌಡ ಮಾತು ನಿಲ್ಲಿಸಿದ್ರು. ಪವಿತ್ರಾ ಗೌಡ ಜೊತೆ ಮಾತುಬಿಟ್ಟಿರುವಾಗ ರೇಣುಕಾಸ್ವಾಮಿ ಬಗ್ಗೆ ಗೊತ್ತಾಗೋಕೆ ಹೇಗೆ ಸಾಧ್ಯ. ಮೋಹನ್ ರಾಜ್ ಮೇನಲ್ಲಿ ಕೊಟ್ಟ 40 ಲಕ್ಷ ಹಣವನ್ನ ಕೊಲೆಗೆಂದು ಇಡಲೂ ಸಾಧ್ಯವೇ. ಸಾಕ್ಷಿ 79 ಹೇಳ್ತಾರೆ ದರ್ಶನ್ ಅದೇ ಶೆಡ್ ನಲ್ಲಿ ಶೂಟಿಂಗ್ ಕೂಡ ನಡೆಸಿದ್ರು ಅಂತ. ಆಗ ಯಾಕೆ ಅವರ ಶೂನಲ್ಲಿ ಮಣ್ಣು ಸಿಕ್ಕಿ ಹಾಕಿಕೊಂಡಿರಬಾರದು. ಅಥವಾ ಅದರ ಹಿಂದಿನ ದಿನ ಯಾಕೆ ಶೂನಲ್ಲಿ ಮಣ್ಣು ಬಂದಿರಬಾರದು?

publive-image

ಪ್ರಸನ್ನ ಕುಮಾರ್​​, ಎಸ್​ಪಿಪಿ: ಎಲ್ಲಾ ಪ್ರಶ್ನೆಗಳಿಗೆ ಒಂದೇ ನಿಮಿಷದಲ್ಲಿ ಉತ್ತರಿಸುತ್ತೇನೆ.

Advertisment

ಸಿ.ವಿ ನಾಗೇಶ್​, ದರ್ಶನ್​ ಪರ ವಕೀಲರು: ಸಿನಿಮಾ ಶೂಟಿಂಗ್​ಗಾಗಿ ನಿರ್ಮಾಪಕರು ಹಣ ಹೂಡಿದ್ದಾರೆ. ಪ್ರತಿನಿತ್ಯ 500 ಕುಟುಂಬಗಳು ದರ್ಶನ್ ಸಿನಿಮಾದ ಮೇಲೆ ಅವಲಂಬಿತವಾಗಿದೆ. ಅವರಿಗೆಲ್ಲಾ ಈಗ ಕೆಲಸ ಇಲ್ಲದಂತಾಗಿದೆ.

ಪ್ರಸನ್ನ ಕುಮಾರ್​​, ಎಸ್​ಪಿಪಿ: ಈ ಲ್ಯಾಟಿಟ್ಯೂಡ್ ಹಾಗೂ ಲಾಂಗಿಟ್ಯೂಡ್ ನಿರ್ದಿಷ್ಟ ಸ್ಥಳವನ್ನ ಸೂಚಿಸುತ್ತದೆ. ಯಾರು ಕೂಡ ಇದನ್ನ ಪ್ಯಾಬ್ರಿಕೇಟೆಡ್ ಮಾಡಲು ಸಾಧ್ಯವಿಲ್ಲ. ಪೊಲೀಸರ ತನಿಖೆಯಲ್ಲಿ ಯಾವುದೇ ಲೋಪವಿಲ್ಲ. ಯಾವುದು ಅಕ್ಯೂರೇಟ್ ಇದೆಯೋ ಅದನ್ನ ನ್ಯಾಯಾಲಕ್ಕೆ ನೀಡಲಾಗಿದೆ. ಅದು ಬ್ಯೂಟಿ ಅಫ್ ಇನ್ವೇಸ್ಟಿಗೇಟರ್. ಇಲ್ಲಿ ಯಾವುದೇ ಸಾಕ್ಷಿಗಳನ್ನ ಸೃಷ್ಟಿ ಮಾಡಿಲ್ಲ. ದರ್ಶನ್ ಸಿಮ್ ಹೇಮಂತ್ ಹೆಸರಿನಲ್ಲಿದೆ ಅಂತ ಹೇಳ್ತಿದ್ದೀರಾ.. ಲವ್ ಯೂ, ಮಿಸ್ ಯೂ ಅಂತ ಪವಿತ್ರಾ ಗೌಡ ಹೇಮಂತ್​ಗೆ ಹೇಳೋಕೆ ಸಾಧ್ಯನಾ? ಅದೇ ನಂಬರ್​​ನಿಂದ ಪವಿತ್ರಾಗೌಡಗೆ ಮಿಸ್ ಯೂ, ಐ ಲವ್ ಯೂ ಹೆಂಡತಿ ಅಂತ ಮೆಸೇಜ್ ಬಂದಿದೆ. ಮೇನಲ್ಲಿ‌ ಮೂರು ದಿನ ಮಾತ್ರ ಪವಿತ್ರಾಗೌಡ ಹಾಗೂ ದರ್ಶನ್ ಕಾಂಟ್ಯಾಕ್ಟ್ ನಲ್ಲಿ ಇರಲಿಲ್ಲ. ಉಳಿದಂತೆ ಪ್ರತಿನಿತ್ಯ ಕಾಂಟ್ಯಾಕ್ಟ್​ನಲ್ಲಿ ಇದ್ದಾರೆ.

ಸುದೀರ್ಘ ವಾದ ಆಲಿಸಿದ ಜಡ್ಜ್​​ ಜೈಶಂಕರ್​ ತೀರ್ಪನ್ನ ಕಾಯ್ದಿರಿಸಿ ಆದೇಶ ಹೊರಡಿಸಿದ್ದಾರೆ. ಅಕ್ಟೋಬರ್​ 14 ಕ್ಕೆ ದರ್ಶನ್​ ಮಾತ್ರವಲ್ಲ ಪವಿತ್ರಾ ಗೌಡ, ರವಿ, ನಾಗರಾಜ್​, ಲಕ್ಷ್ಮಣ್​ ಬೇಲ್​ ಭವಿಷ್ಯ ನಿರ್ಧಾರವಾಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment