newsfirstkannada.com

×

ದರ್ಶನ್‌ಗೆ ರಾಜಾತಿಥ್ಯ ಸಿಕ್ಕ ಕೇಸ್‌ಗೆ ಟ್ವಿಸ್ಟ್‌.. ವಿಲ್ಸನ್ ಗಾರ್ಡನ್ ನಾಗ ಬೇರೆ ಜೈಲಿಗೆ ಶಿಫ್ಟ್‌; ಎಲ್ಲಿಗೆ?

Share :

Published September 17, 2024 at 8:13pm

Update September 17, 2024 at 8:16pm

    ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜನಂತಿದ್ದ ನಟ ದರ್ಶನ್ ಬಳ್ಳಾರಿಗೆ

    ಜೈಲಿನಲ್ಲಿ ಐಷಾರಾಮಿ ಲೈಫ್ ಲೀಡ್ ಮಾಡುತ್ತಿದ್ದ ರೌಡಿ ಶೀಟರ್ ನಾಗ

    ಬೆಂಗಳೂರು ಬಿಟ್ಟು ಬೇರೆ ಜೈಲಿಗೆ ರೌಡಿ ವಿಲ್ಸನ್‌ ಗಾರ್ಡನ್ ನಾಗ ಶಿಫ್ಟ್‌?

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಕೇಸ್‌ನಲ್ಲಿ ನಟ ದರ್ಶನ್ ಗ್ಯಾಂಗ್‌ ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಿಂದಾಸ್ ಆಗಿದ್ದರು. ಒಂದು ಕೈಯಲ್ಲಿ ಟೀ, ಮತ್ತೊಂದು ಕೈಯಲ್ಲಿ ಸಿಗರೇಟ್ ಸೇದುತ್ತಾ ಪರಪ್ಪನ ಅಗ್ರಹಾರ ಜೈಲನ್ನೇ ತಮ್ಮ ಅಡ್ಡೆ ಮಾಡಿಕೊಂಡಿದ್ದರು. ನಟ ದರ್ಶನ್ ಹಾಗೂ ರೌಡಿಗಳ ನಸೀಬು ಖರಾಬ್ ಆಗಿದ್ದು ಈಗ ಎಲ್ಲರೂ ಛಿದ್ರ, ಛಿದ್ರವಾಗುವ ಕಾಲ ಬಂದಿದೆ.

ಇದನ್ನೂ ಓದಿ: ಜೈಲಲ್ಲಿ ವಿಲ್ಸನ್ ಗಾರ್ಡನ್ ನಾಗನದ್ದೇ ಹವಾ.. ದರ್ಶನ್‌ಗೇ ಆರ್ಡರ್ ಮಾಡಿ ಕರೆಸಿಕೊಳ್ತಿದ್ದ ರೌಡಿಶೀಟರ್! 

ಒಂದೇ ಒಂದು ಫೋಟೋ ಈ ರೌಡಿ ಗ್ಯಾಂಗ್ ಹಣೆ ಬರಹವನ್ನೇ ಬದಲಾಯಿಸಿ ಬಿಟ್ಟಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜನಂತಿದ್ದ ದರ್ಶನ್ ಈ ಫೋಟೋ ಲೀಕ್ ಆದ ಮೇಲೆ ಬಳ್ಳಾರಿ ಜೈಲಿಗೂ ಎತ್ತಂಗಡಿಯಾಗಿದ್ದಾರೆ. ದರ್ಶನ್ ಶಿಫ್ಟ್ ಆದ ಬಳಿಕ ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗನ ಸರದಿ.

ದರ್ಶನ್‌ಗೆ ಸೆಂಟ್ರಲ್ ಜೈಲಲ್ಲಿ ರಾಜಾತಿಥ್ಯ ಸಿಕ್ಕ ಕೇಸ್‌ಗೆ ಹೊಸ ಟ್ವಿಸ್ಟ್ ಸಿಕ್ಕಿದೆ. ಈ ಬಗ್ಗೆ ಬಂಧಿಖಾನೆ ಇಲಾಖೆ ತನಿಖೆ ನಡೆಸಿ ವರದಿಯನ್ನು ಸಲ್ಲಿಸಿದೆ. ಇದೀಗ ರೌಡಿಗಳ ದರ್ಬಾರ್‌ಗೆ ಹೈಬ್ರೇಕ್ ಹಾಕಲಾಗುತ್ತಿದೆ. ಕೊನೆಗೂ ವಿಲ್ಸನ್ ಗಾರ್ಡನ್ ನಾಗನ ಶಿಫ್ಟ್ ಮಾಡಲು ಪೊಲೀಸರಿಗೆ ಕೋರ್ಟ್ ಅನುಮತಿ ನೀಡಿದೆ.

ಇದನ್ನೂ ಓದಿ: ಬೆಂಗಳೂರು ಡಾನ್​ ಯಾರು? ಭೂಗತ ಲೋಕದ ವಿಲ್ಸನ್ ಗಾರ್ಡನ್ ನಾಗನ ಭಯಾನಕ ಕಥೆ ಇಲ್ಲಿದೆ! 

ರೌಡಿಶೀಟರ್‌ ವಿಲ್ಸನ್ ಗಾರ್ಡನ್ ನಾಗ ಸೇರಿ ಕೋಕಾ ಆ್ಯಕ್ಟ್‌ ಕೇಸ್‌ನಲ್ಲಿದ್ದ ಎಲ್ಲಾ ಆರೋಪಿಗಳನ್ನು ಬೇರೆ ಜೈಲಿಗೆ ಶಿಫ್ಟ್ ಮಾಡಲಾಗುತ್ತಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಐಷಾರಾಮಿ ಲೈಫ್ ಲೀಡ್ ಮಾಡುತ್ತಿದ್ದ ರೌಡಿ ಶೀಟರ್ ವಿಲ್ಸನ್ ಗಾರ್ಡನ್ ನಾಗ ಈಗ ಬೆಂಗಳೂರು ಬಿಟ್ಟು ಬೇರೆ ಜೈಲಿಗೆ ಹೋಗುವ ಸಾಧ್ಯತೆ ಇದೆ. ನಾಳೆ ವಿಲ್ಸನ್ ಗಾರ್ಡನ್ ನಾಗ ಹಾಗೂ ಇತರೆ ಆರೋಪಿಗಳು ಯಾವ, ಯಾವ ಜೈಲಿಗೆ ಹೋಗಲಿದ್ದಾರೆ ಅನ್ನೋದು ನಿರ್ಧಾರವಾಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದರ್ಶನ್‌ಗೆ ರಾಜಾತಿಥ್ಯ ಸಿಕ್ಕ ಕೇಸ್‌ಗೆ ಟ್ವಿಸ್ಟ್‌.. ವಿಲ್ಸನ್ ಗಾರ್ಡನ್ ನಾಗ ಬೇರೆ ಜೈಲಿಗೆ ಶಿಫ್ಟ್‌; ಎಲ್ಲಿಗೆ?

https://newsfirstlive.com/wp-content/uploads/2024/08/willson-Garden-Naga.jpg

Load More