newsfirstkannada.com

ಬಳ್ಳಾರಿ ಜೈಲಲ್ಲಿ ವೆಸ್ಟರ್ನ್​​ ಟಾಯ್ಲೆಟ್​​ಗೆ ಬೇಡಿಕೆ ಇಟ್ಟ ನಟ ದರ್ಶನ್​​; ಆಮೇಲೇನಾಯ್ತು?

Share :

Published August 31, 2024 at 8:25pm

Update September 2, 2024 at 6:29am

    ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲಿಗೆ ನಟ ದರ್ಶನ್​ ಶಿಫ್ಟ್​​

    ಬಳ್ಳಾರಿ ಜೈಲಿಗೆ ಬರ್ತಿದ್ದಂತೆ ಪೊಲೀಸರಿಗೆ ದರ್ಶನ್​ ಬೇಡಿಕೆ!

    ಪೊಲೀಸರ ಮುಂದೆ ನಟ ದರ್ಶನ್​ ಇಟ್ಟ ಬೇಡಿಕೆಯೇನು?

ಬಳ್ಳಾರಿ: ಇತ್ತೀಚೆಗೆ ನಟ ದರ್ಶನ್​ ಅವರಿಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಶೇಷ ಆತಿಥ್ಯ ನೀಡಿದ್ದ ಫೋಟೋ ಒಂದು ವೈರಲ್​ ಆಗಿದೆ. ದರ್ಶನ್​ ಪರಪ್ಪನ ಅಗ್ರಹಾರ ಜೈಲಿನಲ್ಲಿ ಒಂದು ಕೈಯಲ್ಲಿ ಸಿಗರೇಟ್​​, ಮತ್ತೊಂದು ಕೈಯಲ್ಲಿ ಕಾಫಿ ಹಿಡಿದು ಚೇರ್​ ಮೇಲೆ ಕೂತಿದ್ದ ಫೋಟೋ ಇದಾಗಿತ್ತು. ಈ ಬೆನ್ನಲ್ಲೇ ಎಚ್ಚೆತ್ತ ರಾಜ್ಯ ಸರ್ಕಾರ ಕೋರ್ಟ್​ ಆದೇಶದ ಮೇರೆಗೆ ದರ್ಶನ್​ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಿದೆ.

ಹೈ ಸೆಕ್ಯೂರಿಟಿ ಸೆಲ್​​ನಲ್ಲಿರೋ ದರ್ಶನ್​ ಅವರಿಗೆ ಟಾಯ್ಲೆಟ್ ರೂಮ್ ಸಮಸ್ಯೆ ಆಗಿದೆ. ಇವರಿಗೆ ಬೆನ್ನು ನೋವು ಇರುವ ಕಾರಣ ಇಂಡಿಯನ್ ಟಾಯ್ಲೆಟ್ ಬಳಸೋದು ಕಷ್ಟವಾಗಿದೆ. ಹಾಗಾಗಿ ವೆಸ್ಟರ್ನ್​​ ಟಾಯ್ಲೆಟ್​​​ ವ್ಯವಸ್ಥೆ ಮಾಡಿ ಎಂದು ದರ್ಶನ್​ ಮನವಿ ಮಾಡಿದ್ದಾರೆ. ಇಲ್ಲ ಶೌಚಾಲಯಕ್ಕೆ ಸರ್ಜಿಕಲ್ ಚೇರ್ ನೀಡಿ ಎಂದು ಕೇಳಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಬಗ್ಗೆ ಡಿಐಜಿ ಶೇಷ ಏನಂದ್ರು?

ದರ್ಶನ್​ ಅವರು ಶೌಚಾಲಯ ಸಮಸ್ಯೆಯಿಂದ ಕೆಲವು ಬಾರಿ ಊಟ ನಿರಾಕರಣೆ ಮಾಡಿದ್ರು. ಹೀಗಾಗಿ ಸರ್ಜಿಕಲ್ ಚೇರ್​ಗೆ ಮನವಿ ಮಾಡಿದ್ದಾರೆ. ಸ್ಪೈನಲ್ L-4, L- 5 ಸಮಸ್ಯೆ ಇದೆ ಎಂದಿದ್ದಾರೆ. ಹಾಗಾಗಿ ಮೆಡಿಕಲ್ ರೆಕಾರ್ಡ್ ಪರಿಶೀಲನೆ ಮಾಡಿದ ನಂತರ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಡಿಐಜಿ ಶೇಷ ಹೇಳಿದ್ರು.

ಇದನ್ನೂ ಓದಿ: ನಟಿ ಪವಿತ್ರಾ ಗೌಡ ಅರ್ಜಿ ವಜಾ ಆಗಿದ್ದೇಕೆ? ಇಲ್ಲಿದೆ 6 ಪ್ರಮುಖ ಕಾರಣಗಳು!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಳ್ಳಾರಿ ಜೈಲಲ್ಲಿ ವೆಸ್ಟರ್ನ್​​ ಟಾಯ್ಲೆಟ್​​ಗೆ ಬೇಡಿಕೆ ಇಟ್ಟ ನಟ ದರ್ಶನ್​​; ಆಮೇಲೇನಾಯ್ತು?

https://newsfirstlive.com/wp-content/uploads/2024/08/darshan-7-1.jpg

Load More