newsfirstkannada.com

×

ದಿಢೀರ್​​​ ವಿಜಯಲಕ್ಷ್ಮಿಗೆ ನಟ ದರ್ಶನ್​ ಕರೆ; ನಾಳೆ ಜೈಲಿಗೆ ಬರುವಂತೆ ಮನವಿ; ಕಾರಣವೇನು?

Share :

Published September 10, 2024 at 8:14pm

Update September 10, 2024 at 8:36pm

    ರೇಣುಕಾಸ್ವಾಮಿ ಕೇಸ್​ ಸಂಬಂಧ ಕೋರ್ಟ್​ಗೆ ಪೊಲೀಸ್ರಿಂದ ಚಾರ್ಜ್​ಶೀಟ್​ ಸಲ್ಲಿಕೆ

    ಕೋರ್ಟ್​ಗೆ ಸಲ್ಲಿಸಲಾದ ಚಾರ್ಜ್​ಶೀಟ್​ನಲ್ಲಿ ಆಘಾತಕಾರಿ ವಿಚಾರಗಳು ಬಯಲಿಗೆ

    ಆಘಾತಕಾರಿ ವಿಚಾರಗಳು ಬಯಲಿಗೆ ಬರುತ್ತಿದ್ದಂತೆ ದರ್ಶನ್​ಗೆ ಹೆಚ್ಚಾಯ್ತು ಸಂಕಷ್ಟ!

ಬೆಂಗಳೂರು: ರೇಣುಕಾಸ್ವಾಮಿ ಕೇಸ್ನಲ್ಲಿ ನಟ ದರ್ಶನ್​ ಅವರು ಜೈಲು ಸೇರಿದ್ದಾರೆ. ಇತ್ತೀಚೆಗಷ್ಟೇ ಕೋರ್ಟ್​ಗೆ ರೇಣುಕಾಸ್ವಾಮಿ ಕೇಸ್​ ಸಂಬಂಧ ಪೊಲೀಸ್ರು ಚಾರ್ಜ್​ಶೀಟ್​ ಸಲ್ಲಿಕೆ ಮಾಡಿದ್ರು. ಕೋರ್ಟ್​ಗೆ ಸಲ್ಲಿಸಲಾದ ಈ ಚಾರ್ಜ್​ಶೀಟ್​​ನಲ್ಲಿ ಆಘಾತಕಾರಿ ವಿಷಯಗಳು ಬಹಿರಂಗವಾಗಿವೆ.

ನಟಿ ಪವಿತ್ರಾಗೌಡ ಅವರನ್ನು ಮೆಚ್ಚಿಸಲು ನಟ ದರ್ಶನ್ ರೇಣುಕಾಸ್ವಾಮಿ ಜೀವ ತೆಗೆದರು ಎನ್ನುವ ಆರೋಪ ಕೇಳಿ ಬಂದಿದೆ. ಇದರ ಮಧ್ಯೆ ನಟ ದರ್ಶನ್​ಗೆ ಪವಿತ್ರಾಗೌಡ ಬ್ಲಾಕ್​ಮೇಲ್​ ಮಾಡಿದ್ದರು ಎಂಬ ವಿಚಾರ ಬಹಿರಂಗಗೊಂಡಿದೆ.

ಚಾರ್ಜ್​ಶೀಟ್​ನಲ್ಲಿ ಉಲ್ಲೇಖವಾದ ವಿಚಾರಗಳು ಎಲ್ಲೆಡೆ ವೈರಲ್​ ಆದ ಬೆನ್ನಲ್ಲೇ ಪ್ರಿಸನ್ ಕಾಲ್ ಸಿಸ್ಟಮ್ ಮೂಲಕ ದರ್ಶನ್ ಪತ್ನಿ ವಿಜಯಲಕ್ಷ್ಮಿ ಜೊತೆ ಐದು ನಿಮಿಷಗಳ ಕಾಲ ಮಾತಾಡಿದ್ದಾರೆ. ಪತ್ನಿ ಜೊತೆ ಮಾತಾಡುವಾಗ ದರ್ಶನ್ ಭಾವುಕರಾಗಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ನಾಳೆ ಜೈಲಿಗೆ ಬರುವಂತೆ ದರ್ಶನ್‌ ಪತ್ನಿಗೆ ತಿಳಿಸಿದ್ದಾರೆ. ಈ ಬಗ್ಗೆ ಜೈಲಾಧಿಕಾರಿಗಳಿಗೂ ದರ್ಶನ್ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ನಾಳೆ ಸಂಜೆ 4 ಗಂಟೆಯ ನಂತರ ಬಳ್ಳಾರಿ ಸೆಂಟ್ರಲ್ ಜೈಲಿಗೆ ಪತ್ನಿ ವಿಜಯಲಕ್ಷ್ಮಿ ಹಾಗೂ ದರ್ಶನ್ ತಾಯಿ ಮೀನಾ ಬರಲಿದ್ದಾರೆಂಬ ಮಾಹಿತಿ ಸಿಕ್ಕಿದೆ.

ಗಂಡನಿಗಾಗಿ ದೇವರ ಮೊರೆ ಹೋದ ವಿಜಯಲಕ್ಷ್ಮಿ

ಗಂಡನ ರಕ್ಷಣೆಗಾಗಿ ಪತ್ನಿ ವಿಜಯಲಕ್ಷ್ಮಿ ಶಕ್ತಿದೇವತೆಗಳ ಮೊರೆ ಹೋಗ್ತಿದ್ದಾರೆ. ಬನಶಂಕರಿ ದೇವಿ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಬಳಿಕ ಇದೀಗ ವಿಜಯಲಕ್ಷ್ಮೀ ಅಸ್ಸಾಂನ ಕಾಮಾಕ್ಯ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದಾರೆ. 51 ಶಕ್ತಿ ಪೀಠಗಳಲ್ಲಿ ಕಾಮಾಕ್ಯ ದೇವಿ ದೇಗುಲವೂ ಒಂದಾಗಿದೆ. ಗುಹಾಟಿಯ ಕಾಮಾಕ್ಯ ದೇವಸ್ಥಾನಕ್ಕೆ ಭೇಟಿ ಪತಿಯ ರಕ್ಷಣೆಗಾಗಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: ‘ದರ್ಶನ್​ ಖಾಸಗಿ ವಿಡಿಯೋ ಇಟ್ಕೊಂಡು ಬ್ಲಾಕ್​ಮೇಲ್​ ಮಾಡಿದ್ದ ಪವಿತ್ರಾ’- ವಿಜಯಲಕ್ಷ್ಮಿ ಬಿಚ್ಚಿಟ್ಟ ಅಸಲಿ ಸತ್ಯ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದಿಢೀರ್​​​ ವಿಜಯಲಕ್ಷ್ಮಿಗೆ ನಟ ದರ್ಶನ್​ ಕರೆ; ನಾಳೆ ಜೈಲಿಗೆ ಬರುವಂತೆ ಮನವಿ; ಕಾರಣವೇನು?

https://newsfirstlive.com/wp-content/uploads/2024/09/DARSHAN_WIFE.jpg

Load More