newsfirstkannada.com

ನಿರ್ಮಾಪಕ ಉಮಾಪತಿ ಬಗ್ಗೆ ದರ್ಶನ್ ಫ್ಯಾನ್ ಅವಹೇಳನಕಾರಿ ಹೇಳಿಕೆ; ಆರೋಪಿ ಚೇತನ್ ಹೇಳಿದ್ದೇನು?

Share :

Published June 25, 2024 at 5:05pm

Update June 25, 2024 at 5:06pm

  ನಟ ಜೈಲಿಗೆ ಸೇರುತ್ತಿದ್ದಂತೆ​​ ಉಮಾಪತಿ ಬಗ್ಗೆ ಮಾತಾಡಿದ್ದ ಅಭಿಮಾನಿ ಚೇತನ್

  ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು ಫ್ಯಾನ್​​ ಅವಹೇಳನಕಾರಿ ಹೇಳಿಕೆ

  ಅಭಿಮಾನಿಗಳಿಗೆ ಪ್ರಚೋದಿಸುತ್ತಿದ್ದ ಆರೋಪದಲ್ಲಿ ದರ್ಶನ್​ ಫ್ಯಾನ್​ ಚೇತನ್ ಅರೆಸ್ಟ್​

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ನಟ ದರ್ಶನ್ ಸೇರಿ ಒಟ್ಟು 17 ಆರೋಪಿಗಳು ಜೈಲು ಪಾಲಾಗಿದ್ದಾರೆ. ಆದರೆ ದರ್ಶನ್ ಅರೆಸ್ಟ್ ಆಗ್ತಿದ್ದಂತೆ ನಿರ್ಮಾಪಕ ಶ್ರೀನಿವಾಸ್​ ಗೌಡ ಅವರ ಬಗ್ಗೆ ಅಭಿಮಾನಿಯೊಬ್ಬ ಅವಹೇಳನಕಾರಿ ಹೇಳಿಕೆ ನೀಡಿದ್ದ. ಹೀಗಾಗಿ ದರ್ಶನ್​ ಅಭಿಮಾನಿ ಚೇತನ್​ ಎಂಬಾತನ ವಿರುದ್ಧ ಬಸವೇಶ್ವರ ನಗರ ಪೊಲೀಸರು ಕೇಸ್​ ದಾಖಲಿಸಿಕೊಂಡು ಬಂಧಿಸಿದ್ದಾರೆ.

ಇದನ್ನೂ ಓದಿ: ಕೊಲೆ ಕೇಸ್‌ಗೆ 10, 20 ಅಲ್ಲ ಬರೋಬ್ಬರಿ 50 ಸಿಸಿಟಿವಿಯಲ್ಲಿ ಸುಳಿವು.. ದರ್ಶನ್ ಗ್ಯಾಂಗ್‌ಗೆ ಹೊಸ ಆಪತ್ತು!

ಐಪಿಸಿ ಸೆಕ್ಷನ್ 504 ಹಾಗೂ 506 ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ. ಆರೋಪಿ ಸ್ಥಾನದಲ್ಲಿರೋ ಚೇತನ್ ದರ್ಶನ್ ಅಭಿಮಾನಿಯಾಗಿದ್ದ. ನಟ ಜೈಲಿಗೆ ಸೇರುತ್ತಿದ್ದಂತೆ ಇತ್ತ ಅಭಿಮಾನಿ ಚೇತನ್​​ ಸ್ಯಾಂಡಲ್​ವುಡ್​ ನಿರ್ಮಾಪಕ ಉಮಾಪತಿಗೆ ಬೆದರಿಕೆ ಹಾಕುವುದರ ಜೊತೆಗೆ ಕೆಟ್ಟ ಕೆಟ್ಟದಾನಿ ನಿಂದನೆ ಮಾಡಿದ್ದ. ಜೊತೆಗೆ ಜೈಲು ಸೇರಿದ ನಟ ದರ್ಶನ್ ಬಗ್ಗೆ ಉಮಾಪತಿ ಗೌಡ ಅವರು ಮಾತಾಡಿದ್ದರು. ಹೀಗಾಗಿ ನಟ ದರ್ಶನ್ ಫ್ಯಾನ್ ಆಗಿರುವ ಚೇತನ್ ಕೋಪಗೊಂಡಿದ್ದು ಡಿ ಬಾಸ್​ ಬಗ್ಗೆ ಮಾತಾಡಿದ್ದಕ್ಕೆ ರೊಚ್ಚಿಗೆದ್ದು ಉಮಾಪತಿ ಗೌಡಗೆ ಬೆದರಿಕೆ ಹಾಕಿದ್ದ. ಅಷ್ಟೇ ಅಲ್ಲದೆ ಉಮಾಪತಿ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದ. ಹಾಗೂ ದರ್ಶನ್ ಇತರೆ ಅಭಿಮಾನಿಗಳಿಗೆ ಪ್ರಚೋದಿಸುತ್ತಿದ್ದ. ಜೈಲು ಸೇರಿರುವ ನಟನ ವಿರುದ್ಧ ಮಾತನಾಡಿದ್ದಕ್ಕೆ ದರ್ಶನ್ ಅಭಿಮಾನಿಗಳು ಮಾಧ್ಯಮದವರಿಗೆ ಬೆದರಿಕೆ ಹಾಕಿದ್ದರು. ಚೇತನ್​​ ಮಾತಾಡಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿತ್ತು. ಈ ಬಗ್ಗೆ ನಿರ್ಮಾಪಕ ಉಮಾಪತಿ ಗೌಡ ದೂರು ನೀಡಿದ್ದರು. ಸದ್ಯ ಬಸವೇಶ್ವರ ನಗರ ಪೊಲೀಸರು ಚೇತನ್​ನನ್ನು ಬಂಧಿಸಿ ಠಾಣೆಗೆ ಕರೆದೊಯ್ದಿದ್ದಾರೆ.

ವೈರಲ್​ ಆಗಿರೋ ವಿಡಿಯೋದಲ್ಲಿ ದರ್ಶನ್​ ಫ್ಯಾನ್​​ ಚೇತನ್​ ಹೇಳಿದ್ದೇನು?

ನಮ್ಮ ಬಾಸ್​​ ಜೈಲಿನಲ್ಲಿ ಇದ್ದಾರೆ ಅಂತ ಜಾಸ್ತಿ ಮಾತಾಡುತ್ತಿದ್ದಾರೆ. ನಮ್ಮ ದರ್ಶನ್​ ಬಾಸ್​ ಬಗ್ಗೆ ಮಾತನಾಡೋ ಯಾವ ಯೋಗ್ಯತೆ ಉಮಾಪತಿಗೆ ಇಲ್ಲ. ಉಮಾಪತಿ ಮಾತು ಕೇಳಿ ನಮ್ಮ ಬಾಸ್​ ದುಡ್ಡು ಹಾಕಿಲ್ಲ. ನಮ್ಮ ಬಾಸ್​​ ಉಮಾಪತಿ ಅವರನ್ನು ತನ್ನ ಹತ್ತಿರಕ್ಕೆ ಕರೆಸಿಕೊಳ್ಳುತ್ತಾರೆ ಅಂತ ಏಕವಚನದಲ್ಲಿ ಮಾತಾಡಿದ್ದರು.

ಇದನ್ನೂ ಓದಿ: ‘ತಪ್ಪಾಗಿದೆ ಕ್ಷಮಿಸಿಬಿಡಿ..’ ಉಮಾಪತಿ ಗೌಡಗೆ ಬೆದರಿಕೆ ಹಾಕಿದ್ದ ದರ್ಶನ್ ಅಭಿಮಾನಿ..!

ಪೊಲೀಸರ ಸಮ್ಮುಖದಲ್ಲಿ ವಿಡಿಯೋದಲ್ಲಿ ಮಾಡಿ ಮಾತಾಡಿದ್ದೇನು?

ಸರ್​ ನನ್ನ ಹೆಸರು ಚೇತನ್ ಅಂತ. ನಟ ದರ್ಶನ್ ಅವರ ಅಭಿಮಾನಿ ಆಗಿದ್ದೇನೆ. ಆವತ್ತು ಅನ್ನಪೂರ್ಣೇಶ್ವರಿ ದೇವಾಸ್ಥಾನ ಹತ್ತಿರ ಹೋಗಿದ್ದೆ. ಈ ವೇಳೆ ಉಮಾಪತಿ ಶ್ರೀನಿವಾಸ್ ಹಾಗೂ ಪ್ರಥಮ್ ಅವರ ಬಗ್ಗೆ ತಪ್ಪಾಗಿ ಮಾತನಾಡಿದ್ದೇನೆ. ಕಾನೂನು ಪ್ರಕಾರ ಏನಿದೆ ಅದಕ್ಕೆ ನಾನು ತಲೆ ಬಾಗುತ್ತೇನೆ. ನನ್ನಿಂದ ಏನೇ ತಪ್ಪಾಗಿದ್ದರೂ ಕ್ಷಮಿಸಿಬಿಡಿ ಎಂದು ಕೇಳಿಕೊಂಡಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಿರ್ಮಾಪಕ ಉಮಾಪತಿ ಬಗ್ಗೆ ದರ್ಶನ್ ಫ್ಯಾನ್ ಅವಹೇಳನಕಾರಿ ಹೇಳಿಕೆ; ಆರೋಪಿ ಚೇತನ್ ಹೇಳಿದ್ದೇನು?

https://newsfirstlive.com/wp-content/uploads/2024/06/umapathi2.jpg

Load More