newsfirstkannada.com

EXCLUSIVE: ರೇಣುಕಾಸ್ವಾಮಿ ಕೊಲೆ ಕೇಸ್‌; ಪಾರಾಗಲು ₹70 ಲಕ್ಷದ ಪ್ಲಾನ್.. MLAಗೆ ದರ್ಶನ್ ಕಾಲ್!

Share :

Published June 21, 2024 at 5:38pm

  ರೇಣುಕಾಸ್ವಾಮಿ ಕೊಲೆಯಾದ ಬಳಿಕ 70 ಲಕ್ಷದ ಆಟ ಶುರುವಾಗಿತ್ತು

  ನಟ ದರ್ಶನ್ ಮನೆಯಲ್ಲೇ ಇತ್ತು 37.40 ಲಕ್ಷ ರೂಪಾಯಿ ನಗದು ಪತ್ತೆ

  ಆರೋಪಿಗಳು 30 ಲಕ್ಷ ರೂಪಾಯಿಯನ್ನು ಸರೆಂಡರ್ ಪ್ಲಾನ್‌ಗೆ ಬಳಕೆ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆಯಲ್ಲಿ ದಿನಕ್ಕೊಂದು ಸ್ಫೋಟಕ ಮಾಹಿತಿಗಳು ಬಯಲಾಗುತ್ತಿದೆ. ನಟ ದರ್ಶನ್ ಅವರ ಗ್ಯಾಂಗ್ ಕ್ರೌರ್ಯದ ಜೊತೆಗೆ ಪ್ರಕರಣದಿಂದ ಪಾರಾಗಲು ಬರೋಬ್ಬರಿ 70 ಲಕ್ಷ ರೂಪಾಯಿಯ ಪ್ಲಾನ್‌ ಮಾಡಲಾಗಿದೆ. ಈ ಹಣದ ವಿಷಯವು ಈಗ ಕೊಲೆ ಪ್ರಕರಣದಲ್ಲಿ ಪ್ರಮುಖವಾದ ಪಾತ್ರವಹಿಸಿದೆ.

ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿ ಕೊಲೆಯಾದ ಬಳಿಕ 70 ಲಕ್ಷದ ಆಟ ಶುರುವಾಗಿದೆ. ನಟ ದರ್ಶನ್ ಅವರ ಮನೆಯಲ್ಲಿದ್ದ 30 ಲಕ್ಷ ರೂಪಾಯಿಯನ್ನು ಸರೆಂಡರ್ ಪ್ಲಾನ್‌ಗೆ ಬಳಕೆ ಮಾಡಿಕೊಳ್ಳಲಾಗಿದೆ. 30 ಲಕ್ಷ ರೂಪಾಯಿಯನ್ನು A14 ಪ್ರದೋಶ್‌ಗೆ ನೀಡಿ ಆರೋಪಿಗಳ ಸರೆಂಡರ್‌ಗೆ ಹೇಳಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: EXCLUSIVE: ರೇಣುಕಾಸ್ವಾಮಿ ಕೊಲೆ ಕೇಸ್‌ಗೆ ರೋಚಕ ಟ್ವಿಸ್ಟ್‌; ಮೊಬೈಲ್‌ನಲ್ಲಿ ಅಸಲಿ ವಿಡಿಯೋ ಪತ್ತೆ!

A14 ಪ್ರದೂಶ್‌ ಕೈಯಿಂದ ಮೊದಲಿಗೆ ಕೆಲ ಆರೋಪಿಗಳಿಗೆ 10 ಲಕ್ಷ ರೂಪಾಯಿ ನೀಡಲಾಗುತ್ತೆ. ಆ 10 ಲಕ್ಷ ರೂಪಾಯಿ ಹಣವನ್ನು ಸದ್ಯ ಪೊಲೀಸರು ಸೀಜ್ ಮಾಡಿದ್ದಾರೆ. ಮತ್ತೆ ಸಾಕ್ಷ್ಯ ನಾಶ & ಪೊಲೀಸರ ಮ್ಯಾನೇಜ್‌ಗೆ 40 ಲಕ್ಷ ರೂಪಾಯಿ ಬಳಕೆ ಮಾಡಲು ಪ್ಲಾನ್ ಮಾಡಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.

ಓರ್ವ MLAಗೆ ದರ್ಶನ್ ಕರೆ!
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತೊಂದು ರೋಚಕ ಸಂಗತಿ ಏನಂದ್ರೆ, ಕೃತ್ಯದ ಬಳಿಕ ನಟ ದರ್ಶನ್ ಓರ್ವ ಎಂಎಲ್ಎಗೆ ಕರೆ ಮಾಡಿದ್ದಾರೆ. ಅವರ ಮೂಲಕ 40 ಲಕ್ಷ ರೂಪಾಯಿ ಕಲೆಕ್ಟ್​ ಮಾಡಲಾಗಿದೆ. ಆ ಹಣ ನೇರವಾಗಿ ಆರ್‌ಆರ್ ನಗರದಲ್ಲಿರುವ ದರ್ಶನ್ ಮನೆಗೆ ಬಂದಿದೆ.

40 ಲಕ್ಷ ರೂಪಾಯಿಯಲ್ಲಿ 37 ಲಕ್ಷ ರೂಪಾಯಿ ಅನ್ನು RR ನಗರದ ಮನೆಯಲ್ಲಿಟ್ಟು, ದರ್ಶನ್ ಅವರು 3 ಲಕ್ಷ ರೂಪಾಯಿ ಅನ್ನು ಮೈಸೂರಿಗೆ ಕೊಂಡೊಯ್ದಿದ್ದಾರೆ. 3 ಲಕ್ಷ ರೂಪಾಯಿ ಅನ್ನು ಮೇಕಪ್ ಮ್ಯಾನ್ ಮೂಲಕ ದರ್ಶನ್ ಅವರು ಪತ್ನಿ ವಿಜಯಲಕ್ಷ್ಮಿ ಮನೆಗೆ ಕಳಿಸಿಕೊಟ್ಟಿದ್ದಾರೆ. ವಿಜಯಲಕ್ಷ್ಮಿ ಮನೆಯಲ್ಲಿದ್ದ 3 ಲಕ್ಷ ರೂಪಾಯಿ ಹಾಗೂ ದರ್ಶನ್ ಮನೆಯಲ್ಲಿದ್ದ 37.40 ಲಕ್ಷ ರೂಪಾಯಿ ಹಣವನ್ನು ಪೊಲೀಸರು ಸೀಜ್​ ಮಾಡಿದ್ದಾರೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

EXCLUSIVE: ರೇಣುಕಾಸ್ವಾಮಿ ಕೊಲೆ ಕೇಸ್‌; ಪಾರಾಗಲು ₹70 ಲಕ್ಷದ ಪ್ಲಾನ್.. MLAಗೆ ದರ್ಶನ್ ಕಾಲ್!

https://newsfirstlive.com/wp-content/uploads/2024/06/renukaswami.jpg

Load More