newsfirstkannada.com

×

ನಟ ದರ್ಶನ್‌ ಗ್ಯಾಂಗ್ ಕೇಸ್‌ಗೆ ಬಿಗ್‌ ಟ್ವಿಸ್ಟ್.. ಈ ಮೂವರಿಗೆ ಕೋರ್ಟ್‌ನಿಂದ ಜಾಮೀನು!

Share :

Published September 23, 2024 at 4:32pm

Update September 23, 2024 at 4:45pm

    ರೇಣುಕಾಸ್ವಾಮಿ ಕೇಸ್‌ನಲ್ಲಿ ದರ್ಶನ್ ಗ್ಯಾಂಗ್‌ನ ಮೂವರಿಗೆ ಜಾಮೀನು ಮಂಜೂರು

    ಮೊದಲ ಬಾರಿಗೆ ದರ್ಶನ್ ಗ್ಯಾಂಗ್‌ನ ಆರೋಪಿಗಳಿಗೆ ಬಿಡುಗಡೆಯ ಬಾಗಿಲು ತೆರೆದ ಭಾಗ್ಯ

    ಷರತ್ತು ಬದ್ಧ ಜಾಮೀನು ಮಂಜೂರು ಮಾಡಿ ಹೈಕೋರ್ಟ್ ಮಹತ್ವದ ಆದೇಶ

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೇಸ್‌ನಲ್ಲಿ ದರ್ಶನ್ ಗ್ಯಾಂಗ್ ಜೈಲಿನಲ್ಲೇ 100ಕ್ಕೂ ಹೆಚ್ಚು ದಿನಗಳನ್ನು ಕಳೆದಿದೆ. ಪೊಲೀಸರು ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ ಬಳಿಕ ಈ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ನಟ ದರ್ಶನ್ ಸೇರಿ ಎಲ್ಲಾ 17 ಆರೋಪಿಗಳು ಚಾರ್ಜ್‌ಶೀಟ್ 3991 ಪುಟಗಳನ್ನು ನೋಡಿ ಶಾಕ್ ಆಗಿದ್ದರು. ಇದೀಗ ಜಾಮೀನಿಗಾಗಿ ನ್ಯಾಯಾಲಯಗಳ ಮೊರೆ ಹೋಗುತ್ತಿದ್ದಾರೆ.

ಇದನ್ನೂ ಓದಿ: ಪಟ್ಟಣಗೆರೆ ಶೆಡ್‌ನಲ್ಲಿ ನಿಜಕ್ಕೂ ನಡೆದಿದ್ದೇನು? A1-A17 ಪಾತ್ರ ಏನೇನು? ಪಿನ್‌ ಟು ಪಿನ್ ಡಿಟೇಲ್ಸ್ ಇಲ್ಲಿದೆ! 

ದರ್ಶನ್ ಗ್ಯಾಂಗ್‌ನಲ್ಲಿ A1 ಪವಿತ್ರಾ ಗೌಡ ಅವರೇ ಮೊದಲಿಗೆ ಜಾಮೀನಿಗಾಗಿ ಅರ್ಜಿ ಹಾಕಿದ್ದರು. ಇದಾದ ಬಳಿಕ ದರ್ಶನ್ ಸೇರಿದಂತೆ ಪ್ರತಿಯೊಬ್ಬರು ಜಾಮೀನಿನ ನಿರೀಕ್ಷೆಯಲ್ಲಿ ಕೋರ್ಟ್‌ ಮೆಟ್ಟಿಲು ಏರುತ್ತಿದ್ದಾರೆ. ಜೈಲಿನ ಒಳಗೆ ಜಾಮೀನಿನ ಜಪ ಮಾಡುತ್ತಿರುವ ದರ್ಶನ್ ಗ್ಯಾಂಗ್ ಸದಸ್ಯರಿಗೆ ಮೊದಲ ಬಾರಿಗೆ ಬಿಡುಗಡೆಯ ಬಾಗಿಲು ತೆರೆದಿದೆ.

ರೇಣುಕಾಸ್ವಾಮಿ ಕೇಸ್‌ನಲ್ಲಿ ಆರೋಪಿ ಆಗಿರುವ A15 ಕಾರ್ತಿಕ್, A16 ಕೇಶವ್ ಮೂರ್ತಿ, A17 ನಿಖಿಲ್‌ಗೆ ಇಂದು ಜಾಮೀನು ಮಂಜೂರು ಆಗಿದೆ. ಅರ್ಜಿಯ ವಿಚಾರಣೆ ನಡೆಸಿರುವ ಹೈಕೋರ್ಟ್‌ ಕೇಶವಮೂರ್ತಿಗೆ ಷರತ್ತು ಬದ್ಧ ಜಾಮೀನು ನೀಡಿದೆ. ನ್ಯಾ.ವಿಶ್ವಜಿತ್ ಶೆಟ್ಟಿ ಅವರಿದ್ದ ನ್ಯಾಯಪೀಠ, ಸಾಕ್ಷಿಗಳ ಮೇಲೆ ಪ್ರಭಾವ ಬೀರದಂತೆ ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಿದೆ. ಸಿಸಿಹೆಚ್ 57 ಸೆಷನ್ಸ್ ಕೋರ್ಟ್‌ನ ನ್ಯಾ. ಜೈ ಶಂಕರ್ ಅವರು A15 ಕಾರ್ತಿಕ್, A17 ನಿಖಿಲ್‌ಗೆ ಜಾಮೀನು ಮಂಜೂರು ಮಾಡಿ ಆದೇಶಿದ್ದಾರೆ.

ಇದನ್ನೂ ಓದಿ: ವೈಯಾಲಿಕಾವಲ್ ಮಹಾಲಕ್ಷ್ಮಿ ಕೇಸ್‌ಗೆ ಹೊಸ ಟ್ವಿಸ್ಟ್‌.. ಪೀಸ್‌, ಪೀಸ್ ಮಾಡಿದ್ದು ಅಶ್ರಫ್ ಅಲ್ಲ? ಮತ್ಯಾರು? 

ಬೇಲ್ ಸಿಕ್ಕ ಆರೋಪಿಗಳ ಪಾತ್ರವೇನು?

A16 ಕೇಶವಮೂರ್ತಿ: ರೇಣುಕಾಸ್ವಾಮಿ ಕೇಸ್‌ನಲ್ಲಿ 5 ಲಕ್ಷ ರೂಪಾಯಿ ಹಣ ಪಡೆದು ಮೃತದೇಹ ಸಾಗಿಸುವಲ್ಲಿ ಭಾಗಿಯಾಗಿದ್ದರು. ಬಳಿಕ ಪೊಲೀಸರ ಮುಂದೆ ಸರೆಂಡರ್ ಆಗಿದ್ದಾರೆ.

A15 ಕಾರ್ತಿಕ್: ಪಟ್ಟಣಗೆರೆ ಶೆಡ್​ನಲ್ಲಿ ಕೆಲಸ ಮಾಡುತ್ತಾರೆ. ರೇಣುಕಾಸ್ವಾಮಿಯ ಮೃತದೇಹ ಸಾಗಿಸಿ ಪೊಲೀಸರ ಮುಂದೆ ಸರೆಂಡರ್ ಆಗಿದ್ದಾರೆ.

A17 ನಿಖಿಲ್: 5 ಲಕ್ಷ ರೂಪಾಯಿ ಹಣ ಪಡೆದು ಮೃತದೇಹ ಸಾಗಿಸುವಲ್ಲಿ ಭಾಗಿಯಾಗಿದ್ದರು. ಹಣ ಪಡೆದು ಪೊಲೀಸರ ಮುಂದೆ ಸರೆಂಡರ್ ಆಗಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಟ ದರ್ಶನ್‌ ಗ್ಯಾಂಗ್ ಕೇಸ್‌ಗೆ ಬಿಗ್‌ ಟ್ವಿಸ್ಟ್.. ಈ ಮೂವರಿಗೆ ಕೋರ್ಟ್‌ನಿಂದ ಜಾಮೀನು!

https://newsfirstlive.com/wp-content/uploads/2024/09/Darshan-Case-A16-Keshava-1.jpg

Load More