ಆರೋಪಿಗಳಿಗೆ 1 ದಿನ ನ್ಯಾಯಾಂಗ ಬಂಧನ ವಿಸ್ತರಣೆ!
ದರ್ಶನಗಾಗಿ ಡ್ರೈಫ್ರೂಟ್ಸ್, ಬಟ್ಟೆ, ಬೇಕರಿ ತಿನಿಸು ತಂದ ವಿಜಯಲಕ್ಷ್ಮಿ
ಜೈಲು ಹಕ್ಕಿ ದರ್ಶನ್ಗೆ ಚಾರ್ಜ್ಶೀಟ್ ನೀಡಿದ ವಕೀಲರು!
ಈ ಬಳ್ಳಾರಿ ಜೈಲು ಸೇರಿ ದರ್ಶನ್ 15 ದಿನ ಕಳೆದಂತಾಯ್ತು. ಚಾರ್ಜ್ಶೀಟ್ ಸಲ್ಲಿಕೆಯಾದ ಬಳಿಕ ದರ್ಶನ್ ಚಿಂತೆಯಲ್ಲೇ ಮುಳುಗಿ ಹೋಗಿದ್ದಾರೆ. ಜೈಲಿನಲ್ಲಿ ಒಬ್ಬಂಟಿಯಾದ ದರ್ಶನ್, ಊಟ, ನಿದ್ದೆ ಸರಿ ಇಲ್ಲದೆ ಒದ್ದಾಟ್ತಿದ್ದಾರೆ. ಗಡ್ಡ ಬಿಟ್ಟ ದರ್ಶನ್, ಸ್ವಲ್ಪ ಬೊಜ್ಜು ಕರಗಿ, ಸೊರಗಿದಂತೆ ಕಂಡಿದ್ದಾರೆ. ನಿನ್ನೆಗೆ ನ್ಯಾಯಾಂಗ ಬಂಧನ ಅವಧಿ ಮುಗಿಸಿದ್ದ ಡಿಗ್ಯಾಂಗ್ಗೆ ಇವತ್ತೊಂದು ದಿನ ಜೈಲು ವಾಸ ಫಿಕ್ಸ್ ಮಾಡಿ ಕೋರ್ಟ್ ವಿಸ್ತರಿಸಿದೆ.
ಇದನ್ನೂ ಓದಿ:24 ನಿಮಿಷಗಳ ಮಾತುಕತೆ..! ಪ್ರಸಾದ ಅಷ್ಟೇ ಅಲ್ಲ, ದರ್ಶನ್ಗಾಗಿ ವಿಜಯಲಕ್ಷ್ಮಿ ಏನೇನು ತಂದಿದ್ದರು..?
ನಟ ದರ್ಶನ್ ಸೇರಿ 17 ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ನಿನ್ನೆ ಅಂತ್ಯವಾದ ಹಿನ್ನೆಲೆ ವಿಡಿಯೋ ಕಾನ್ಫರೆನ್ಸ್ ಮೂಲಕ ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್ಗೆ ಹಾಜರುಪಡಿಸಲಾಗಿತ್ತು. ಈ ವೇಳೆ, ಟೆಕ್ನಿಕಲ್ ಎವಿಡೆನ್ಸ್ಗಳನ್ನ ಆರೋಪಿಗಳ ಪರ ವಕೀಲರಿಗೆ ನೀಡಿಲ್ಲ ಅಂತ ಕೋರ್ಟ್ನಲ್ಲಿ ಕಮಿಟಲ್ ಆದೇಶಕ್ಕೆ ಆರೋಪಿಗಳ ಪರ ವಕೀಲರು ಅಬ್ಜೆಕ್ಷನ್ ಎತ್ತಿದ್ರು. ಹೀಗಾಗಿ ಇವತ್ತು ಡಿಜಿಟಲ್ ಎವಿಡೆನ್ಸ್ಗಳನ್ನ ನೀಡಲಿಕ್ಕೆ ನ್ಯಾಯಾಧೀಶರು ಸೂಚಿಸಿದ್ರು. ಈ ಹಿನ್ನೆಲೆ ಎಲ್ಲಾ ಆರೋಪಿಗಳಿಗೆ ಮತ್ತೆ 1 ದಿನ ನ್ಯಾಯಾಂಗ ಬಂಧನ ವಿಸ್ತರಿಸಿತು.

ಇನ್ನೊಬ್ಬ ವಕೀಲರು ಬಳ್ಳಾರಿ ಜೈಲ್ಗೆ ಆಗಮಿಸಿದ್ರು. ದರ್ಶನ್ ಭೇಟಿ ಮಾಡಿ ಚಾರ್ಜ್ಶೀಟ್ನ ಅಂಶಗಳು ಮತ್ತು ದರ್ಶನ್ಗೆ ಇರೋ ಡೌಟ್ಸ್ ಬಗ್ಗೆ ಕ್ಲಾರಿಪಿಕೇಷನ್ ತಗೊಂಡಿದ್ದಾಗಿ ತಿಳಿಸಿದ್ರು. ದರ್ಶನ್ ಭೇಟಿಯಾಗಲು ಪತ್ನಿ ವಿಜಯಲಕ್ಷ್ಮೀ ಹಾಗೂ ಸಹೋದರ ದಿನಕರ್ ಸಹ ಆಗಮಿಸಿದ್ರು.. ಕೇವಲ 24 ನಿಮಿಷಗಳ ಕಾಲ ವಿಜಯಲಕ್ಷ್ಮಿ ಮತ್ತು ವಕೀಲರಿಗೆ ಅವಕಾಶ ನೀಡ್ಲಾಗಿತ್ತು. ದರ್ಶನಗಾಗಿ ಡ್ರೈಫ್ರೂಟ್ಸ್, ಬಟ್ಟೆ , ಬೇಕರಿ ತಿನಿಸು ತಂದಿದ್ರು.. ಕಳೆದ 15 ದಿನದಿಂದ ಬಳ್ಳಾರಿ ಜೈಲಿನಲ್ಲಿರುವ ದರ್ಶನ್, ಗಡ್ಡ ಬಿಟ್ಟಿದ್ದು, ಸೊರಗಿದಂತೆ ಕಂಡಿದ್ದಾರೆ. ಈ 15 ದಿನಗಳಲ್ಲಿ ಪತ್ನಿ ವಿಜಯಲಕ್ಷ್ಮಿ 3ನೇ ಬಾರಿ ಭೇಟಿಯಾಗಿದ್ದಾರೆ.
ಇದನ್ನೂ ಓದಿ:ಬಳ್ಳಾರಿ ಜೈಲಲ್ಲಿ ದರ್ಶನ್ ಭೇಟಿಯಾದ ಸುಶಾಂತ್ ನಾಯ್ಡು; ಯಾರಿವರು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ