newsfirstkannada.com

ಗನ್ ತೆಗೆದು ನನ್‌ ಮುಂದೆ ಇಟ್ಟಿದ್ರು.. ದರ್ಶನ್‌ ಕ್ರೌರ್ಯದ 5 ಕರಾಳ ಮುಖ ಬಿಚ್ಚಿಟ್ಟ ಉಮಾಪತಿ ಗೌಡ

Share :

Published June 18, 2024 at 8:14pm

Update June 18, 2024 at 8:17pm

  ದರ್ಶನ್ ಇನ್ನೊಂದು ಮುಖ ಅನಾವರಣ ಮಾಡಿದ ನಿರ್ಮಾಪಕ

  ಸುಮ್ಮನೆ ಬ್ಯುಲ್ಡಪ್​ಗೋಸ್ಕರ ಮಾತ್ರ ನಿರ್ಮಾಪಕರನ್ನ ಹೊಗಳ್ತಾರೆ

  ಉಮಾಪತಿ ದರ್ಶನ್ ಸಹವಾಸ ಬೇಡ ಅಂತ ದೂರ ಇಗಿದ್ದು ಏಕೆ?

ಬಾಕ್ಸ್ ಆಫೀಸ್ ಸುಲ್ತಾನ ಡಿ ಬಾಸ್. ಚಾಲೆಂಜಿಂಗ್ ಸ್ಟಾರ್.. ಅಬ್ಬ ಒಂದೊಂದು ಟೈಟಲ್​ಗಳು ಏನ್ ಖಡಕ್ ಆಗಿವೆ. ಆದ್ರೆ ಇವತ್ತು ದರ್ಶನ್ ಹೊತ್ತಿರುವ ಕೊಲೆ ಕಳಂಕದಿಂದ ಕ್ರೌರ್ಯದ ಸುಲ್ತಾನ.. ಡೆಂಜರಸ್ ಬಾಸ್.. ಅನ್ನೋ ಭಯಾನಕ ಹೆಸರು ದರ್ಶನ್ ಹಣೆ ಪಟ್ಟಿಗೆ ಅಂಟಿಕೊಂಡಿವೆ. ಇಷ್ಟೆಲ್ಲ ಆದ್ರೂ ಇಂಡಸ್ಟ್ರಿಯವರು ಯಾರು ದರ್ಶನ್​ ಕ್ರೌರ್ಯದ ಬಗ್ಗೆ ತುಟಿಕ್ ಪಿಟಿಕ್ ಅಂದಿರಲಿಲ್ಲ. ಆದ್ರೀಗ ನಿರ್ಮಾಪಕ ಉಮಾಪತಿಗೌಡ ದರ್ಶನ್ ಕರಾಳ ಮುಖವನ್ನ ಅನಾವರಣ ಮಾಡಿದ್ದಾರೆ. ಉಮಾಪತಿಗೌಡ ಬಿಚ್ಚಿಟ್ಟಿರುವ ದರ್ಶನ್ ಕ್ರೌರ್ಯದ ರಹಸ್ಯಗಳು ಕೇಳಿದ್ರೆ ನೀವು ಕನಸಲ್ಲೂ ಬೆಚ್ಚಿ ಬೀಳ್ತಿರಾ.

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ದರ್ಶನ್ ಜೈಲು ಸೇರಿದ ದಿನದಿಂದಲೂ ಟ್ರೆಂಡಿಂಗ್​ನಲ್ಲಿರೋದು ನಿರ್ಮಾಪಕ ಉಮಾಪತಿಗೌಡ. ಸೋಷಿಯಲ್ ಮೀಡಿಯಾದಲ್ಲಿ ಉಮಾಪತಿ ಆಡಿದ ಮಾತುಗಳೇ ಫುಲ್ ವೈರಲ್ ಆಗಿದ್ವು. ಯಾಕಂದ್ರೆ ದರ್ಶನ್ ಇವತ್ತು ಇಂಥಾ ಪರಿಸ್ಥಿತಿಗೆ ಬರ್ತಾರೆ ಅಂತ ಉಮಾಪತಿ ಅಂದೇ ಹೇಳಿದ್ರು. ಆದ್ರೀಗ ಖುದ್ದು ಉಮಾಪತಿ ರೇಣುಕಸ್ವಾಮಿ ಕೊಲೆ ಆರೋಪ ಹೊತ್ತಿರುವ ದರ್ಶನ್ ಕರಾಳ ಮುಖದ ದರ್ಶನ ಮಾಡಿಸಿದ್ದಾರೆ. ಇಲ್ಲಿತನಕ ಉತ್ತರ ಸಿಗದೇ ಎಷ್ಟೊ ಪ್ರಶ್ನೆಗಳಿಗೆ ಉಮಾಪತಿ ಖಡಕ್​ ಆಗಿ ಉತ್ತರ ಕೊಟ್ಟಿದ್ದಾರೆ. ಮಾತಿನ ಮೂಲಕ ದರ್ಶನ್​​ಗೆ ಚಾಟಿಯೇಟು ಕೊಟ್ಟಿದ್ದಾರೆ. ದರ್ಶನ್​ ಬಗ್ಗೆ ಉಮಾಪತಿ ಬಿಚ್ಚಿಟ್ಟಿರುವ ರಹಸ್ಯಗಳನ್ನ ನೀವು ಕೇಳಿದ್ರೆ ನಿಮ್ಮ ಎದೆ ಝಲ್ ಅನ್ನೋದ್ರಲ್ಲಿ ಅನುಮಾನವೇ ಇಲ್ಲ.

ಇದನ್ನೂ ಓದಿ: A1 ಪವಿತ್ರಾಗೌಡ ಅಸ್ವಸ್ಥ.. ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಿಂದ ಆಸ್ಪತ್ರೆಗೆ ಶಿಫ್ಟ್‌!

ಡಿ ಬಾಂಬ್ 01- ‘ಜೋರಾಗಿ ಉರಿಯೋ ದೀಪ ಆರುತ್ತೆ ಅಂತ ಗೊತ್ತಿತ್ತು’

ರಾಬರ್ಟ್ ಸಿನಿಮಾ ಮೂಲಕ ಉಮಾಪತಿ ಮತ್ತು ದರ್ಶನ್ ಸ್ನೇಹ ಬೆಳೆದಿತ್ತು. ಈ ಮುಂಚೆ ದರ್ಶನ್​ ಸ್ವಭಾವದ ಬಗ್ಗೆ ಉಮಾಪತಿಗೆ ಪರಿಚಯ ಇರಲಿಲ್ಲ. ಅದ್ಯಾವಾಗ ರಾಬರ್ಟ್ ಸಿನಿಮಾಗೆ ಹಣ ಹಾಕಿದ್ರೋ ಆಗ್ಲೇ ನೋಡಿ ದರ್ಶನ್ ಅಸಲಿ ಮುಖ ಉಮಾಪತಿಗೆ ಪರಿಚಯವಾಗಿತ್ತು. ಮೈಸೂರಿನಲ್ಲಿ ನಡೆದ ಲೋನ್‌ ವಿಚಾರವಾಗಿ ಉಮಾಪತಿ ಮತ್ತು ದರ್ಶನ್ ನಡುವೆ ದೊಡ್ಡ ಟಾಕ್ ವಾರ್ ಆಗಿತ್ತು. ಅಲ್ಲಿಂದ ಉಮಾಪತಿ ದರ್ಶನ್ ಸಹವಾಸ ಬೇಡ ಅಂತ ದೂರ ಇದ್ರು. ಆಮೇಲೆ ಕಾಟೇರ ಕತೆ ವಿಚಾರವಾಗಿ ಉಮಾಪತಿಗೆ ತಗಡು ಅಂತ ಮಾತನಾಡಿದ್ರು. ಈಗ ಉಮಾಪತಿ ದರ್ಶನ್ ಹೇಳಿಕೆಗಳಿಗೆ ಖಡಕ್ ಆಗಿಯೇ ತಿರುಗೇಟು ಕೊಟ್ಟಿದ್ದಾರೆ.

ದರ್ಶನ್ ನಡೆದುಕೊಳ್ಳುವ ರೀತಿ, ಅಬ್ಬರ, ಆರ್ಭಟ ನೋಡಿ ಆವಾಗ ನನಗೆ ಅನಿಸಿತ್ತು. ದೀಪ ಜೋರಾಗಿ ಉರೀತಿದೆ ಎಂದರೆ ಆರೋಗೋಕೆ ಅಂತ. ಇಷ್ಟೆಲ್ಲ ಆರೋಪ ಮಾಡಿ ಹೆಂಗೆ ಅರಗಿಸಿಕೊಳ್ಳುತ್ತಿದ್ದಾರೆ ಎನ್ನುವುದು ನನಗೆ ಗೊತ್ತಾಗ್ತಿರಲಿಲ್ಲ. ಹೆಂಗೆ ಪೊಲೀಸ್ ಇಲಾಖೆ, ಕಾನೂನು ಸುಮ್ಮನೆ ಇದೆ. ಮೈಸೂರು ಕೇಸ್​ನಲ್ಲಿ ಪೊಲೀಸ್ ಇಲಾಖೆ ಸಂಪೂರ್ಣವಾಗಿ ಫೇಲ್ ಆಯಿತು. ಗಂಭೀರವಾಗಿ ಪೊಲೀಸರು ತನಿಖೆ ಮಾಡಿದ್ರೆ 2 ಜೀವಕ್ಕೆ ನ್ಯಾಯ ಸಿಗೋದು. 

ಉಮಾಪತಿ, ನಿರ್ಮಾಪಕ

ಇದನ್ನೂ ಓದಿ: ರೋಹಿತ್-ರಶೀದ್​​​ಗೆ ವರ್ಲ್ಡ್​​ಕಪ್​ನಲ್ಲಿ ಆಗಿ ಬರೋದಿಲ್ಲ.. ಯಾಮಾರಿದ್ರೆ ‘ದೋಸ್ತ್’​ಗಳೇ ವಿಲನ್ ಆಗ್ತಾರಾ?

ಮೈಸೂರಿನಲ್ಲಿ ನಡೆದಿದ್ದ ಗಲಾಟೆ ಬಗ್ಗೆ ಪೊಲೀಸರು ಎಚ್ಚರ ವಹಿಸಿದಿದ್ರೆ ಇವತ್ತು 2 ಜೀವಗಳು ಉಳಿತಾ ಇತ್ತು ಅನ್ನೋದು ಉಮಾಪತಿ ಮಾತು. ಯಾಕಂದ್ರೆ ಅವತ್ತು ಆ ಕೇಸ್​ನ್ನ ಪೊಲೀಸರು ಸರಿಯಾಗಿ ತನಿಖೆ ಮಾಡಿರಲಿಲ್ಲ ಅನ್ನೋದು ಉಮಾಪತಿ ಆರೋಪ. ಆ ಕೇಸ್ ಸರಿಯಾದ ಮಾರ್ಗದಲ್ಲಿ ತನಿಖೆಯಾಗಿದ್ರೆ ಇವತ್ತು ಈ ಪರಿಸ್ಥಿತಿ ಬರ್ತಾ ಇರಲಿಲ್ಲ ಅಂತ ಮಾತಿನ ಮೂಲಕ ಉಮಾಪತಿ ಚಾಟಿ ಬೀಸಿದ್ದಾರೆ.

ಕೋಪ, ತಾಪ, ಕೈಯಲ್ಲಿ ಬೇರೆ ಸರ್ಕಾರದ ಲೈಸನ್ಸ್ ಇರೋ ಗನ್. ಎಲೆಕ್ಷನ್​ ಟೈಮ್​​ನಲ್ಲಿ ಎಕ್ಸಾಂಸನ್ ಲಿಸ್ಟ್​ನಲ್ಲಿ ಇವರ ಹೆಸರು, ಪ್ರದೋಶ್ ಹೆಸರು ಇದ್ದಿದ್ದು ಆಶ್ಚರ್ಯ ಆಗಿತ್ತು.  

ಉಮಾಪತಿ, ನಿರ್ಮಾಪಕ

ಡಿ ಬಾಂಬ್ 02- ನಾನು ನಿರ್ಮಾಪಕನಾ? ಎಣ್ಣೆ ಸಪ್ಲೈಯರ್?

ದರ್ಶನ್ ಕುಡಿತಾರೆ ಅನ್ನೋದು ಎಲ್ಲರಿಗೂ ಗೊತ್ತಿತ್ತು. ಆರಂಭದಲ್ಲಿ ಉಮಾಪತಿಗೂ ದರ್ಶನ್​ ಕುಡಿತದ ಬಗ್ಗೆ ಗೊತ್ತಿದ್ರೂ ಅವರು ಎಷ್ಟು ಕುಡಿತಾರೆ ಅನ್ನೋದು ಗೊತ್ತಿರಲಿಲ್ಲ. ಆದ್ರೆ ಹುಬ್ಬಳ್ಳಿಯಲ್ಲಿ ನಡೆದಿದ್ದ ರಾಬರ್ಟ್ ಇವೆಂಟ್​ ವೇಳೆ ದರ್ಶನ್‌ರ ಇನ್ನೊಂದು ಮುಖದ ಪರಿಚಯವಾಗಿತ್ತಂತೆ. ಅವತ್ತು ಬರೋಬ್ಬರಿ 8 ರಿಂದ 9 ಲಕ್ಷ ಬರೀ ಎಣ್ಣೆಗಾಗಿ ಖರ್ಚು ಮಾಡಿದ್ದೆ. ಅವತ್ತೆ ನನಗೆ ನಾನು ನಿರ್ಮಾಪಕನ ಅಥವಾ ಎಣ್ಣೆ ಸಪ್ಲೈಯರಾ ಅಂತ ಅನಿಸ್ತು ಎಂದ್ರು.

ಹುಬ್ಬಳ್ಳಿಯಲ್ಲಿ ಈವೆಂಟ್ ನಡೆಯುತ್ತದೆ. ಇದಕ್ಕಾಗಿ ದೊಡ್ಡ ಹೋಟೆಲ್ ಅನ್ನು ಬುಕ್ ಮಾಡಿದ್ವಿ. ಹೈದರಾಬಾದ್ ಬೇಸಡ್ ಕಂಪನಿ ನಮಗೆ ಟೈ ಆಪ್ ಆಗುತ್ತದೆ. ಆವತ್ತು ಕುಡಿದಿರೋ ಬಿಲ್ 8 ರಿಂದ 9 ಲಕ್ಷ ರೂಪಾಯಿ ಕಟ್ಟುತ್ತೇವೆ. ಆದ್ರೂ ನಮಗೆ, ಅವರಿಗೆ ಗಲಾಟೆ ಆಗುತ್ತೆ. ಈ ಗಲಾಟೆ ಏಕೆ ಆಯಿತು ಅಂದರೆ ಕುಡಿಯೋಕೆ ಎಣ್ಣೆ ಕಡಿಮೆ ಆಯಿತು ಎಂದು ಗಲಾಟೆ ಮಾಡ್ತಾರೆ. ನಿಜವಾಗ್ಲೂ ಆವತ್ತು ಅನಿಸಿದ್ದು ಯಾಕಯ್ಯ ಬೇಕಾಗಿತ್ತು. ರಾಜನಂಗೆ ಇದ್ದೆ ಸಿನಿಮಾ ಮಾಡಿ ಎಣ್ಣೆ ಸಪ್ಲೈರ್ ಆದೆ ಎಂದು ಬೇಜಾರ್ ಆಗಿತ್ತು. ದೊಡ್ಡ ಗಲಾಟೆ ಆದಾಗ ಹರಿಕೃಷ್ಣ ಸರ್ ನಮ್ಮನ್ನು ಸಮಾಧಾನ ಮಾಡ್ತಾರೆ. 

ಉಮಾಪತಿ, ನಿರ್ಮಾಪಕ

ಡಿ ಬಾಂಬ್ 03- ಸಿಸಿಟಿವಿ ನೋಡಿದ್ರೆ ಈ ಹಿಂದೆಯೇ ಲಾಕ್ ಆಗ್ತಿದ್ರು

ದರ್ಶನ್​ ಕುಡ್ದಾಗ ಏನ್ ಮಾಡ್ತಾರೆ ಅನ್ನೋದು ಅವರಿಗೂ ಗೊತ್ತಿರಲ್ಲ. ಹೀಗೆ ದರ್ಶನ್ ಕುಡ್ದಾಗ ವೇಯ್ಟರ್.. ಸಹ ಕಲಾವಿದರು, ನಿರ್ಮಾಪಕರ ಮೇಲೂ ಹಲ್ಲೆ ಮಾಡಿರುವ ಉದಾಹರಣೆಗಳಿವೆ. ಆದರೆ ಪೊಲೀಸರು ಘಟನೆ ನಡೆದ ದಿನ ಸಿಸಿಟಿವಿಗಳನ್ನ ಪರಿಶೀಲನೆ ಮಾಡಿದ್ರೆ ಅವತ್ತೆ ಲಾಕ್ ಆಗ್ತಿದ್ರು ಅಂತ ಉಮಾಪತಿ ಸ್ಫೋಟಕ ವಿಚಾರವನ್ನ ಬಯಲು ಮಾಡಿದ್ದಾರೆ.

ಡಿ ಬಾಂಬ್ 04- ‘ಅವರು ಮಾಡಿದ್ದಕ್ಕೆ ಎಲ್ಲದಕ್ಕೂ ಜೈ ಜೈ ಅಂತಿರಲಿಲ್ಲ ನಾನು’

ದರ್ಶನ್ ಜೊತೆಗಿದ್ದವರು ಪಾನಪ್ರಿಯರು ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಆದ್ರೆ ಉಮಾಪತಿ ಈ ಎಣ್ಣೆಯಿಂದ ದೂರ ದೂರ. ಇದೇ ಕಾರಣಕ್ಕೆ ದರ್ಶನ್​ ಉಮಾಪತಿಯನ್ನ ದೂರ ಮಾಡಿದ್ದಂತೆ. ಯಾಕಂದ್ರೆ ಸಂಜೆಯಾಗುತ್ತಲೇ ಟೇಬಲ್​​ನಲ್ಲಿ ಕೂತು ಎಣ್ಣೆ ಹಾಕೋರು ದರ್ಶನ್​ಗೆ ಬೇಕಾಗಿದ್ರು. ಉಮಾಪತಿ ಇದ್ರಿಂದ ದೂರ ಇದ್ರು. ಜೊತೆಗೆ ದರ್ಶನ್ ಮಾಡುವ ಎಲ್ಲ ಕೆಲಸಗಳಿಗೆ ಜೈ ಅಂತಾ ಇರಲಿಲ್ಲ. ಹೀಗಾಗಿ ಈ ಕಾರಣಕ್ಕೆ ದರ್ಶನ್ ದೂರ ಆಗಿದ್ರಂತೆ.

ಟ್ರ್ಯಾಪ್ ಮಾಡಿ ನನ್ನ ಮುಗಿಸೋಕೆ ನೋಡಿದ್ರು! ಏನಿದು ಟ್ರ್ಯಾಪ್?

ದರ್ಶನ್ ಉಮಾಪತಿ ಗಲಾಟೆ ಬಳಿಕ ದರ್ಶನ್ ಟ್ರ್ಯಾಪ್ ಮಾಡಿ ಉಮಾಪತಿಗೆ ಕಂಟಕ ತಂದಿಡೋದಕ್ಕೆ ಯತ್ನಿಸಿದ್ರಂತೆ. ಈ ಬಗ್ಗೆ ಸ್ಫೋಟಕ ವಿಚಾರ ಬಿಚ್ಚಿಟ್ಟಿರುವ ಉಮಾಪತಿ ಟ್ರ್ಯಾಪ್ ಮಾಡಿ ನನ್ನ ಮುಗಿಸೋಕೆ ನೋಡಿದ್ರು. ಆದ್ರೆ ಭಗವಂತ ಅವತ್ತು ನಮ್ಮನ್ನ ಕಾಪಾಡಿದ ಅಂತ ಹೇಳಿದ್ರು.

ಇದನ್ನೂ ಓದಿ: ದರ್ಶನ್ ಗ್ಯಾಂಗ್​ನಿಂದ ಕೊಲೆಯಾದ ಯುವಕನ ಪತ್ನಿಗೆ ಸರ್ಕಾರಿ ಕೆಲಸ? ರೇಣುಕಾಸ್ವಾಮಿ ತಾಯಿ ಏನಂದ್ರು?

ಡಿ ಬಾಂಬ್ 05- ‘ನನ್‌ ಮುಂದೆ ಏಕಾಏಕಿ ಗನ್ ಇಟ್ಟಿದ್ರು ದರ್ಶನ್‌’

ದರ್ಶನ್ ಕರಾಳ ಮುಖ ಅನಾವರಣಗೊಳಿಸಿರುವ ಉಮಾಪತಿ ಗನ್ ವಿಚಾರವಾಗಿ ಬೆಚ್ಚಿ ಬೀಳಿಸುವ ವಿಚಾರ ಹೊರ ಹಾಕಿದ್ದಾರೆ. ಮೈಸೂರಿನಲ್ಲಿ ನಡೆದ ಗಲಾಟೆ ಬಳಿಕ ದರ್ಶನ್​ ಹೋಟೆಲ್ ಒಂದಕ್ಕೆ ಬರೋದಿಕ್ಕೆ ಹೇಳಿದ್ರಂತೆ. ಆಗ ಉಮಾಪತಿ ಹೋಟೆಲ್​ಗೆ ಹೋದಾಗ ದರ್ಶನ್​ ಗನ್ ತೆಗೆದು ಟೇಬಲ್ ಮೇಲೆ ಇಟ್ಟಿದ್ರಂತೆ. ಗನ್ ತೋರಿಸಿ ಬಿಲ್ಡಪ್‌ ಕೊಡೋ ಯತ್ನ ನಡೆಸಿದ್ರಂತೆ.

ದರ್ಶನ್‌ ನಿರ್ಮಾಪಕರನ್ನ ಹೊಗಳೋದು ಬಿಲ್ಡಪ್​ಗೆ ಮಾತ್ರ

ದರ್ಶನ್ ಯಾವುದೇ ಸಂದರ್ಶನ ನೋಡಿದ್ರು ನಿರ್ಮಾಪಕರು ಅನ್ನದಾತರು ಅವರು ನಮ್ಮ ಯಜಮಾನರು ಅನ್ನೋ ಮಾತು ಇದ್ದೆ ಇರುತ್ತೆ. ಆದ್ರೆ ಉಮಾಪತಿ ಹೇಳೋ ಪ್ರಕಾರ ದರ್ಶನ್​ ಒಳಗೊಂದು ಹೊರಗೊಂದು ಮಾತಾಡ್ತರಂತೆ. ಸುಮ್ಮನೆ ಬಿಲ್ಡಪ್​ಗೋಸ್ಕರ ಮಾತ್ರ ನಿರ್ಮಾಪಕರನ್ನ ಹೊಗಳಿ ಅಟ್ಟಕೇರಿಸ್ತಾರೆ ಅಂತ ಹೇಳೋ ಮೂಲಕ ದರ್ಶನ್​​ಗೆ ಟಾಂಗ್ ಕೊಟ್ಟಿದ್ದಾರೆ.

ಇದನ್ನೂ ಓದಿ: ಅಪ್ಪನಿಲ್ಲದ ಮನೆಯಲ್ಲಿ ನಾನೂ ಇರಲ್ಲ.. ದರ್ಶನ್ ಜೈಲು ಸೇರಿದ ಬೆನ್ನಲ್ಲೇ ವಿನೀಶ್​ ಎಲ್ಲಿದ್ದಾರೆ?

ದರ್ಶನ್ ಆಡಿದ ಒಂದೊಂದು ಮಾತನ್ನ ಕೇಳಿಸಿಕೊಂಡು ಸೈಲೆಂಟ್ ಆಗಿದ್ದ ಉಮಾಪತಿ ಇವತ್ತು ಚಾಟಿ ಏಟಿನಂತ ಮಾತುಗಳಾಡುವ ಮೂಲಕ ದರ್ಶನ್​ ಹೇಳಿಕೆಗಳಿಗೆ ಟಾಂಗ್ ಕೊಟ್ಟಿದ್ದಾರೆ. ಇದಷ್ಟೆ ಅಲ್ಲ, ದರ್ಶನ್ ಗ್ಯಾಂಗ್​ ಬಗ್ಗೆ ದರ್ಶನ್ ಸಹವಾಸದ ಬಗ್ಗೆ ಉಮಾಪತಿ ಬೆಚ್ಚಿ ಬೀಳುವ ವಿಚಾರಗಳನ್ನೇ ಬಿಚ್ಚಿಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗನ್ ತೆಗೆದು ನನ್‌ ಮುಂದೆ ಇಟ್ಟಿದ್ರು.. ದರ್ಶನ್‌ ಕ್ರೌರ್ಯದ 5 ಕರಾಳ ಮುಖ ಬಿಚ್ಚಿಟ್ಟ ಉಮಾಪತಿ ಗೌಡ

https://newsfirstlive.com/wp-content/uploads/2024/02/Darshan_Umapathy.jpg

Load More