newsfirstkannada.com

ದರ್ಶನ್ ಜೈಲಿಗೆ ಹೋಗಿರೋದು ಆಘಾತವೇ? ಇದೇನು ಮೊದಲಲ್ಲ.. ಸುನಾಮಿಯನ್ನೇ ಎದುರಿಸಿದೆ ಚಂದನವನ!

Share :

Published June 22, 2024 at 8:05pm

Update June 22, 2024 at 8:08pm

  ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಸ್ಯಾಂಡಲ್​ವುಡ್​ ನಟ ದರ್ಶನ್ ಜೈಲಿಗೆ

  ನಟ ದರ್ಶನ್​ ಜೈಲು ಪಾಲಾಗುತ್ತಿದ್ದಂತೆ ದಂಗಾದ ಸ್ಯಾಂಡಲ್​ವುಡ್​ ಮಂದಿ

  ಎರಡನೇ ಬಾರಿ ಪರಪ್ಪನ ಅಗ್ರಹಾರ ಜೈಲಿಗೆ ಕಾಲಿಟ್ಟ ಚಾಲೆಂಜಿಗ್ ಸ್ಟಾರ್ ದರ್ಶನ್

ರೀಲ್ ಅಂಡ್ ರಿಯಲ್‌ಗೇ ತುಂಬಾನೇ ವ್ಯತ್ಯಾಸವಿರುತ್ತದೆ. ಇಷ್ಟೆಲ್ಲಾ ಅರ್ಥವಾಗದಿರೋ ಆಸಾಮಿಯಲ್ಲ ದರ್ಶನ್‌. ಅವರಿಗೆ ಲೈಫ್‌ನ ಎವರಿ ಕಾರ್ನರ್ ಗೊತ್ತು. ಕಷ್ಟ ಅನ್ನೋದು ಗೊತ್ತು. ಸುಖದ ಸುಪತ್ತಿಗೆಯ ಅನುಭವವೂ ಗೊತ್ತು. ನಮಗೆಲ್ಲಾ ಅರ್ಥವಾಗದಿರೋ ಸಂಗತಿ ಏನಂದ್ರೆ, ಕಷ್ಟ ಸುಖಗಳನ್ನ ಕಂಡಿರೋ ದರ್ಶನ್, ಹಂಬಲ್‌ ಯಾಕೇ ಆಗ್ಲಿಲ್ಲಾ ಅನ್ನೋದು. ನೀವು ಬಹುತೇಕರನ್ನ ನೋಡಿ, ಕಷ್ಟದಿಂದ ಬಂದವರು, ಹೋಗ್ತಾ ಹೋಗ್ತಾ ಮೃದುವಾಗಿಬಿಡ್ತಾರೆ.

ಇದನ್ನೂ ಓದಿ: ದರ್ಶನ್​​, ಪವಿತ್ರ ಈ ಜೀವನವೇ ಬೇಡ ಅಂತ ನರಕ ಅನುಭವಿಸಬೇಕು; ರೇಣುಕಾಸ್ವಾಮಿ ತಾಯಿ ಹಿಡಿಶಾಪ

ಆದ್ರೆ, ದರ್ಶನ್ ಮಾತ್ರ ಹೋಗ್ತಾ ಹೋಗ್ತಾ ದರ್ಪಿಷ್ಟನಾಗಿಬಿಟ್ಟ. ಹೋಗ್ತಾ ಹೋಗ್ತಾ ಮುಂಗೋಪಿಯಾಗಿಬಿಟ್ಟ. ಅಕೌಂಟ್‌ನಲ್ಲಿ ಹಣ, ಪಾಪ್ಯುಲಾರಿಟಿ ಹೆಚ್ಚುತ್ತಾ, ಹೆಚ್ಚುತ್ತಾ, ಮದವೇರಿದ ಗಜವಾಗಿಬಿಟ್ಟ. ಇಂಡಸ್ಟ್ರಿಯಲ್ಲಿ ಸಾಕಷ್ಟು ಹೀರೋಗಳು ಸಕ್ಸಸ್ ನೋಡಿದ್ದಾರೆ. ಹಾಗಂತಾ ಈ ಹಿಂದೆ ಯಾರೂ ನೋಡಿರದ ಸಕ್ಸಸ್‌ನ ದರ್ಶನ್ ನೋಡಿಲ್ಲ ಅನ್ನೋದು ಪರಮ ಸುಳ್ಳು. ದರ್ಶನ್‌ಗಿಂತ ಜಾಸ್ತಿ ಸಕ್ಸಸ್‌ ನೋಡಿ ತುಂಬಾ ಹಂಬಲ್ ಆಗಿರೋ ನಟ ನಟಿಯರೂ ಇಂದಿಗೂ ಇದ್ದಾರೆ. ಇಂದಿಗೂ ನಮ್ಮ ಇಂಡಸ್ಟ್ರಿಯಲ್ಲಿದ್ದಾರೆ. ಆದ್ರೆ, ದರ್ಶನ್‌ರಂತೆ ಅವಱರು ಮೆರೆಯಲಿಲ್ಲ, ದರ್ಶನ್‌ರಂತೆ ಅಹಂ ತೋರಿಸಲಿಲ್ಲ, ಇನ್‌ಫ್ಯಾಕ್ಟ್‌, ಪೊಲೀಸರ ರಿಮ್ಯಾಂಡ್ ಅಪ್ಲಿಕೇಷನ್‌ನಲ್ಲಿರುವಂತೆ ಫ್ಯಾನ್ಸ್‌ಗಳನ್ನ ಕೃತ್ಯಕ್ಕೆ ಬಳಸಿಕೊಳ್ಳಲಿಲ್ಲ.

ಪೊಲೀಸರು ರಿಮ್ಯಾಂಡ್‌ ಅರ್ಜಿಯನ್ನ ಕಲಾ ರಸಿಕರು ಓದಿಬಿಟ್ಟರೇ ಮನಸ್ಸಿಗೆ ನೋವಾಗಿ ಬಿಡುತ್ತೆ. ಯಾಕಂದ್ರೆ, ಎರಡನೇ ಬಾರಿ ಪೊಲೀಸ್ ಕಸ್ಟಡಿಗೆ ಕೇಳೋ ಸಂದರ್ಭದಲ್ಲಿ ಪೊಲೀಸರು, ದರ್ಶನ್‌ನ ಕ್ರಿಮಿನಲ್ ಬ್ಯಾಕ್‌ಗ್ರೌಂಡ್ ಇರೋ ವ್ಯಕ್ತಿ ಅಂತಾ ಮೆನ್ಶನ್ ಮಾಡಿದ್ದಾರೆ. ಕೇವಲ ಉಲ್ಲೇಖ ಮಾಡಿಲ್ಲ, ಅದಕ್ಕೆ ಪುರಾವೆಗಳನ್ನ ನೀಡಿದ್ದಾರೆ. ಅಂದ್ರೆ, ಈ ಹಿಂದೆ ನಡೆದಿರೋ ಕೇಸ್‌ಗಳ ನೀಟ್ ಮೆನ್ಶನ್ ಇದೆ. ಓರ್ವ ನಟನನ್ನ ಇಷ್ಟಪಡೋರು, ಪಡದೇ ಇರೋರಿಗಿಂತ ಸಿನಿಮಾವನ್ನ ತುಂಬಾ ಇಷ್ಟಪಡೋರು ಇದನ್ನ ಸಹಿಸಿಕೊಳ್ಳೋದು, ಅರಗಿಸಿಕೊಳ್ಳೋದು, ಈ ನೋವನ್ನ ನುಂಗಿಕೊಳ್ಳೋದು ತುಂಬಾ ಕಷ್ಟನೇ.

ಈ ನೋವು ಒಂದು ರೀತಿ ಗಜ ಪ್ರಸವದಂತೆ. ಬಹುಶಃ ಇನ್ಮುಂದೆ ಯಾವ ನಟನೂ ಈ ಪರಿಸ್ಥಿತಿಗೆ ತನ್ನನ್ನ ತಂದೊಡ್ಡಿಕೊಳ್ಳಬಾರದು. ಯಾಕಂದ್ರೆ, ಅವರು ವೈಯಕ್ತಿಕವಾಗಿ ಸಮಸ್ಯೆಗೆ ಸಿಲುಕಿಕೊಳ್ತಾರೆ ಅಂತಲ್ಲ. ಸಿನಿಮಾನಾ ಪ್ರೀತಿಸೋರಿಗೆ ಆಗೋ ನೋವು ಜೀರ್ಣಿಸಿಕೊಳ್ಳೋದು ಕಷ್ಟ ಅನ್ನೋ ಕಾರಣಕ್ಕೇ. ಸಿನಿಮಾ ಇಂಡಸ್ಟ್ರಿಗೆ ಕಷ್ಟವಾಗಬಹುದೋ ಇಲ್ವೋ ಗೊತ್ತಿಲ್ಲ. ನಮ್ಮ ಚಿತ್ರರಂಗ ಇದಕ್ಕಿಂತ ದೊಡ್ಡ ಸುನಾಮಿಗಳನ್ನ ಎದುರಿಸಿ ಗಟ್ಟಿಯಾಗಿ ನಿಂತಿದೆ ಅನ್ನೋದು ಇತಿಹಾಸದ ಪುಟಗಳನ್ನ ಓದಿಕೊಂಡವರಿಗೆ ಈ ಕಹಿ ಸತ್ಯದ ಅರಿವಿದೆ. ಇತಿಹಾಸ ಗೊತ್ತಿಲ್ಲದವರಿಗೆ ಇದರ ಅರಿವಿಲ್ಲ. ಅದು ಯಾರ ತಪ್ಪು ಅಲ್ಲ. ಈ ಆಘಾತ ಆ ನಂತರ ಸರಿ ಹೋಗಬಹುದು. ಕನ್ನಡ ಚಿತ್ರರಂಗ ಡಬ್ಬಿಂಗ್ ಅನ್ನು ಎದುರಿಸಿ ಇಂಡಸ್ಟ್ರಿ ಉಳಿದಿತ್ತು. ರಾಜ್ಯದಲ್ಲಿ ಪರಭಾಷೆಯ ಪ್ರಾಬಲ್ಯದ ನಡುವೆಯೂ ಚಂದನವನ 90 ವರ್ಷ ಪೂರ್ಣಗೊಳಿಸಿದೆ. ಈ ಆಘಾತದಿಂದ ಇಂಡಸ್ಟ್ರಿ ಹೊರ ಬರಲು ಸಮಯ ಆಗಬಹುದು. ಆಗೋದೇ ಇಲ್ಲ ಅಂತಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದರ್ಶನ್ ಜೈಲಿಗೆ ಹೋಗಿರೋದು ಆಘಾತವೇ? ಇದೇನು ಮೊದಲಲ್ಲ.. ಸುನಾಮಿಯನ್ನೇ ಎದುರಿಸಿದೆ ಚಂದನವನ!

https://newsfirstlive.com/wp-content/uploads/2024/06/DARSHAN-25.jpg

Load More