Advertisment

ಬಳ್ಳಾರಿ ಜೈಲಲ್ಲಿ ಗಡ್ಡ ಬಿಟ್ಟ ದಾಸ.. ಪತ್ನಿ ಭೇಟಿ ಬೆನ್ನಲ್ಲೇ ಸೊರಗಿದ ದರ್ಶನ್ ಮುಖದಲ್ಲಿ ಕಳೆ!

author-image
admin
Updated On
ಬಳ್ಳಾರಿ ಜೈಲಲ್ಲಿ ಗಡ್ಡ ಬಿಟ್ಟ ದಾಸ.. ಪತ್ನಿ ಭೇಟಿ ಬೆನ್ನಲ್ಲೇ ಸೊರಗಿದ ದರ್ಶನ್ ಮುಖದಲ್ಲಿ ಕಳೆ!
Advertisment
  • ಕಳೆದ 15 ದಿನದಿಂದ ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್
  • 24 ನಿಮಿಷಗಳ ಕಾಲ ವಿಜಯಲಕ್ಷ್ಮಿ, ದಿನಕರ್ ಜೊತೆ ಚರ್ಚೆ
  • ಹೈಸೆಕ್ಯೂರಿಟಿ ಸೆಲ್‌ನಿಂದ ಹೊರಗೆ ಬಂದ ಗಡ್ಡ ಬಿಟ್ಟ ದರ್ಶನ್‌!

ರೇಣುಕಾಸ್ವಾಮಿ ಕೇಸ್‌ನಲ್ಲಿ ಬಳ್ಳಾರಿ ಜೈಲಿನಲ್ಲಿರುವ ಆರೋಪಿ ದರ್ಶನ್ ಅವರು ಸೊರಗಿ ಹೋಗಿದ್ದಾರೆ. ಇಂದು ಬಳ್ಳಾರಿ ಜೈಲಿಗೆ ದರ್ಶನ್ ಅವರನ್ನು ಭೇಟಿಯಾಗಲು ಅವರ ಕುಟುಂಬಸ್ಥರು, ವಕೀಲರು ಆಗಮಿಸಿದ್ದರು. ಈ ವೇಳೆ ದಾಸ ಗಡ್ಡ ಬಿಟ್ಟು ಸೆಲ್‌ನಿಂದ ಹೊರಗೆ ಬಂದರು.

Advertisment

ಇದನ್ನೂ ಓದಿ: ಅಮ್ಮನ ಕಾಣಲು ಹಂಬಲಿಸಿದ ದಾಸ -ಸಹೋದರ ದಿನಕರ ಬಳಿ ದರ್ಶನ್ ಕೇಳಿದ್ದೇನು? 

publive-image

ಜೈಲಿನಲ್ಲಿರುವ ದರ್ಶನ್ ಭೇಟಿಯಾಗಲು ಪತ್ನಿ ವಿಜಯಲಕ್ಷ್ಮೀ ಹಾಗೂ ಸಹೋದರ ದಿನಕರ್ ತೂಗುದೀಪ ಅವರು ತೆರಳಿದ್ದರು. ಈ ವೇಳೆ ಸಂದರ್ಶಕರ ಕೊಠಡಿಗೆ ತೆರಳಲು ದರ್ಶನ್ ಅವರನ್ನು ಸೆಲ್‌ನಿಂದ ಹೊರಗೆ ಕರೆ ತರಲಾಯಿತು.

publive-image

ಹೈಸೆಕ್ಯೂರಿಟಿ ಸೆಲ್‌ನಿಂದ ಹೊರ ಬಂದ ದರ್ಶನ್ ಅವರನ್ನು ಬಿಗಿ ಭದ್ರತೆಯಲ್ಲಿ ಕರೆ ತಂದರು. ಸುಮಾರು 24 ನಿಮಿಷಗಳ ಕಾಲ ವಿಜಯಲಕ್ಷ್ಮಿ, ದಿನಕರ್ ಹಾಗೂ ವಕೀಲರ ಜೊತೆಗೆ ದರ್ಶನ್ ಚರ್ಚೆ ಮಾಡಿ ವಾಪಸ್ ಸೆಲ್‌ಗೆ ತೆರಳಿದರು.

Advertisment

ಇದನ್ನೂ ಓದಿ: 24 ನಿಮಿಷಗಳ ಮಾತುಕತೆ..! ಪ್ರಸಾದ ಅಷ್ಟೇ ಅಲ್ಲ, ದರ್ಶನ್​​ಗಾಗಿ ವಿಜಯಲಕ್ಷ್ಮಿ ಏನೇನು ತಂದಿದ್ದರು..?

ದರ್ಶನ್ ಅವರು ಬಳ್ಳಾರಿ ಜೈಲಿಗೆ ಹೋಗಿ ಇಂದಿಗೆ 15 ದಿನ ಕಳೆದಿದೆ. ಈ 15 ದಿನಗಳಲ್ಲಿ ಪತ್ನಿ ವಿಜಯಲಕ್ಷ್ಮಿ ಅವರು 3ನೇ ಬಾರಿ ಇಂದು ಭೇಟಿಯಾಗಿದ್ದಾರೆ. ಇಂದು ಸೆಲ್‌ನಿಂದ ಬಂದ ದರ್ಶನ್ ಅವರು ಎರಡು ಬ್ಯಾಗ್ ಹಿಡಿದು ಬಂದರು. ಕಳೆದ ವಾರ ಪತ್ನಿ ನೀಡಿದ್ದ ಎರಡು ಬ್ಯಾಗ್ ತಂದ ದರ್ಶನ್ ಅವರು ಮತ್ತೊಂದು ಬ್ಯಾಗ್ ಹಿಡಿದು ವಾಪಸ್ ಸೆಲ್‌ಗೆ ಹೋಗಿದ್ದಾರೆ.

publive-image

ಕಳೆದ 15 ದಿನದಿಂದ ಬಳ್ಳಾರಿ ಜೈಲಿನಲ್ಲಿರುವ ದರ್ಶನ್ ಅವರು ಗಡ್ಡ ಬಿಡ್ಡು ಸೊರಗಿದಂತೆ ಕಂಡಿತ್ತು. ಆದರೆ ಪತ್ನಿ ವಿಜಯಲಕ್ಷ್ಮಿ, ಸಹೋದರ ದಿನಕರ್ ಅವರನ್ನು ಭೇಟಿಯಾದ ಬಳಿಕ ದರ್ಶನ್ ಮುಖದಲ್ಲಿ ಹೊಸ ಕಳೆ ಬಂದಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment