‘ಮೊದಲು ನಮ್​​ ತಾಯಿ ಪ್ರೀತಿಸೋಣ.. ನಂತರ ಪಕ್ಕದ ತಾಯಿ’ ಕನ್ನಡ ಸಿನಿಮಾ, ಕಾವೇರಿ ಬಗ್ಗೆ ಮತ್ತೊಮ್ಮೆ​​ ಕಹಳೆ ಮೊಳಗಿಸಿದ ನಟ ದರ್ಶನ್

author-image
AS Harshith
Updated On
‘ಮೊದಲು ನಮ್​​ ತಾಯಿ ಪ್ರೀತಿಸೋಣ.. ನಂತರ ಪಕ್ಕದ ತಾಯಿ’ ಕನ್ನಡ ಸಿನಿಮಾ, ಕಾವೇರಿ ಬಗ್ಗೆ ಮತ್ತೊಮ್ಮೆ​​ ಕಹಳೆ ಮೊಳಗಿಸಿದ ನಟ ದರ್ಶನ್
Advertisment
  • ಕಾವೇರಿ ಬಗ್ಗೆ ಮಾತನಾಡಿ ನಾನೊಬ್ಬನೇ ವಿಲನ್​ ಆದೆ!
  • ಕನ್ನಡ ಸಿನಿಮಾ ಭವಿಷ್ಯದ ಬಗ್ಗೆ ಎಚ್ಚರಿಕೆ ಕೊಟ್ಟ ದರ್ಶನ್​​!
  • ಬೇರೆ ಯಾರಾದರೂ ಒಂದು ಮಾತು ಎತ್ತಿದ್ರಾ ಹೇಳಿ!

ನಟ ದರ್ಶನ್​​​ ಮತ್ತೆ ಪರಭಾಷೆ ಚಿತ್ರಗಳ ಬಗ್ಗೆ ಗುಡುಗಿದ್ದಾರೆ. ನಮಗೆ ಮೊದಲು ನಮ್​​ ತಾಯಿನ ಪ್ರೀತಿಸೋಣ. ನಂತರ ಪಕ್ಕದ ತಾಯಿ ಅಂತ ಕಹಳೆ ಮೊಳಗಿಸಿದ್ದಾರೆ. ಕಾವೇರಿ ನೀರಿನ ವಿಚಾರದಲ್ಲಿ ನಾನೊಬ್ಬ ಮಾತಾಡಿ ವಿಲನ್ ಆದೆ. ಒಬ್ಬರಾದರೂ ಮಾತನಾಡಿದ್ರಾ? ಅವರಿಗೆ ಕೇವಲ ಪ್ರಮೋಷನ್​​​ ಅಷ್ಟೇ ಅಂತ ಸ್ಯಾಂಡಲ್​​​ವುಡ್​​ನಲ್ಲಿನ ಕುದಿಮೌನವನ್ನ ಕೆದಕಿದ್ದಾರೆ. ಅಷ್ಟಕ್ಕೂ ನಟ ದರ್ಶನ್ ಹೇಳಿದ್ದೇನು?.

ಮೊದ್ಲು ನಮ್ ತಾಯಿನ ನಾವ್ ಪ್ರೀತ್ಸೋದ್ ಕಲಿಯೋಣ. ಆಮೇಲೆ ಪಕ್ಕದವರ ತಾಯಿನಾ ನೋಡೋಣ. ಯಾರಾದರೂ ನಮ್ಮ ತಾಯಿನ ಏನಾದ್ರೂ ಅಂದ್ರೆ ಸುಮ್ನೆ ಬಿಟ್ಟುಬಿಡ್ತೀವಾ? ಇದು ಸಿನಿಮಾ ಡೈಲಾಗ್​​​ ಅಲ್ಲ. ಕೈವ ಚಿತ್ರದ ಟ್ರೈಲರ್​​​ ರಿಲೀಸ್​​ ಇವೆಂಟ್​​​ನಲ್ಲಿ ಚಾಲೆಂಜಿಂಗ್​ ಸ್ಟಾರ್​ ಎಸೆದ ಖಡಕ್​​​​ ಸವಾಲು. ಕರ್ನಾಟಕ, ಕನ್ನಡ, ಕಾವೇರಿ ಬಗ್ಗೆ ಮತ್ತೊಮ್ಮೆ ದರ್ಶನ್​​ ಕಹಳೆ ಮೊಳಗಿಸಿದ್ದಾರೆ.

publive-image

ಮೊದಲು ಜಕ್ಕೂರು, ನಾಳೆ ರಾಜಧಾನಿ ಮಧ್ಯೆ ಫಂಕ್ಷನ್​!

ಹೌದು, ನಿನ್ನೆ ಧನ್ವೀರ್ ನಟನೆಯ ಕೈವ ಚಿತ್ರಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್, ಸಾಥ್ ಕೊಟ್ರು. ರಾರಾಜಿನಗರದ ಕೆ.ಎಲ್‌.ಇ ಮೈದಾನದಲ್ಲಿ ಚಿತ್ರದ ಟ್ರೈಲರ್ ರಿಲೀಸ್ ಈವೆಂಟ್‌ಗೆ ಹಾಜರಾಗಿ ಶುಭ ಕೋರಿದ್ರು. ವೇದಿಕೆ ಪಕ್ಕದಲ್ಲೇ ದರ್ಶನ್ ನಟನೆಯ ಕಾಟೇರ ಕಟೌಟ್​ಗಳು ಮಿರ ಮಿರ ಮಿಂಚಿದ್ವು. ದರ್ಶನ್​​​ ನೋಡಲು ಅಭಿಮಾನಿಗಳು ಸಾಗರವೇ ನೆರೆದಿತ್ತು. ಈ ಸಾಗರ ಮಧ್ಯೆ ಪರಭಾಷೆ ಚಿತ್ರಗಳ ವಿರುದ್ಧ ದರ್ಶನ್​​ ಗುಟುರು ಹಾಕಿದ್ರು.

ಮೊದ್ಲು ನಮ್ಮ ತಾಯಿನ ನಾವ್​ ಪ್ರೀತ್ಸೋದ್​​ ಕಲಿಯೋಣ!

ದರ್ಶನ್ ವೇದಿಕೆ ಹತ್ತೊದಕ್ಕೂ ಮುನ್ನ ಹಾಸ್ಯನಟ ಚಿಕ್ಕಣ್ಣ, ದಯವಿಟ್ಟು ಕನ್ನಡ ಸಿನಿಮಾಗಳನ್ನ ನೋಡಿ ಅಂತ ಮನವಿ ಮಾಡಿದ್ರು. ಬಳಿಕ ಚಿಕ್ಕಣ್ಣ ಮಾತನ್ನ ಪ್ರಸ್ತಾಪಿಸಿ ದರ್ಶನ್, ಮೊದ್ಲು ನಮ್ ತಾಯಿನ ನಾವ್ ಪ್ರೀತ್ಸೋದ್ ಕಲಿಯೋಣ ಅಂತ ಕನ್ನಡಕ್ಕೆ ಆಗ್ತಿರುವ ತಾತ್ಸಾರಕ್ಕೆ ಗರಂ ಆದ್ರು. ಸ್ವಾರ್ಥ ಆದ್ರು ಅಂದ್ಕೊಳಿ, ಇಲ್ಲ ಹೊಟ್ಟೆ ಉರಿ ಅಂತ ಆದ್ರು ಅಂದ್ಕೊಳಿ. ಅಕ್ಕಪಕ್ಕದ ರಾಜ್ಯದವರು ಜಕ್ಕೂರಿನಿಂದ ಹೊರಗಡೆ ಮೊದ್ಲು ಸಿನಿಮಾ ಕಾರ್ಯಕ್ರಮ ಮಾಡ್ತಿದ್ರು. ಮುಂದಿನ ಬಾರಿ ಇಲ್ಲಿಗೆ ಬರ್ತಾರೆ. ಹಾಗಾದ್ರೆ, ನಾವ್​ ಎಲ್ಲಿ ಹೋಗಬೇಕು ಅಂತ ಕನ್ನಡದ ಭವಿಷ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ರು.

publive-image

ಕರ್ನಾಟಕ ಪರ ಮಾತಾಡಿದ ನಾವು ವಿಲನ್​ಗಳೇ ಬಿಡಿ!

ಇನ್ನು, ರಾಜ್ಯಕ್ಕೆ ಆಗ್ತಿರುವ ಕಾವೇರಿ ಅನ್ಯಾಯವನ್ನ ಪ್ರಸ್ತಾಪಿಸಿದ ದರ್ಶನ್​​​​, ಇದೇ ಕಾವೇರಿ ಇಷ್ಯೂ. ಅವತ್ತು ನಾವು ಮಾತನಾಡಿದಾಗ ದೊಡ್ಡದಾಗಿ ತಪ್ಪಾಗಿ ಕಾಣಿಸಿದ್ವಿ. ನಾವು ವಿಲನ್‌ಗಳೇ ಬಿಡಿ. ನಾವೇನು ಹೀರೋಗಳಲ್ಲ. ಆದ್ರು ನಿಯತ್ತು ಮಾತನಾಡ್ತೀವಿ. ಬೇರೆ ಯಾರಾದರೂ ಒಂದು ಮಾತು ಎತ್ತಿದ್ರಾ ಇದರ ಬಗ್ಗೆ? ಯಾಕೆ ಅವರಿಗೆಲ್ಲಾ ಸಂಬಂಧನೇ ಇಲ್ವಾ? ಬರೀ ಪ್ರಮೋಷನ್ ಅಷ್ಟೇನಾ? ಹಾಗಾಗಿ ದಯಮಾಡಿ ಕನ್ನಡ ಸಿನಿಮಾಗಳನ್ನು ಹರಸಿ, ಬೆಳೆಸಿ ಆರ್ಶೀವದಿಸಿ..

‘ಕಾವೇರಿ ಪರ ಮಾತಾಡಿ ನಾನ್​ ವಿಲನ್​​.. ಬೇರೆ ಅವರಿಗೆ ಸಂಬಂಧವಿಲ್ವಾ’

ಒಟ್ಟಾರೆ, ದರ್ಶನ್​​​ ಮಾತು ಸದ್ಯ ಗಾಂಧಿ ನಗರದಲ್ಲಿ ಸದ್ದು ಮಾಡ್ತಿದೆ.. ಆ ಸದ್ದು ರಾಜ್ಯದ ದಶ ದಿಕ್ಕಲ್ಲೂ ರಿಂಗಣಿಸುವಂತೆ ಮಾಡ್ತಿದೆ.. ಅಷ್ಟಕ್ಕೂ ನಮ್ಮ ತಾಯಿಯೇ ನಮಗೆ ಮೊದಲಲ್ವಾ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment