newsfirstkannada.com

ಇನ್ನೂ ರಿಟ್ರೀವ್ ಆಗದ ದರ್ಶನ್​, ಪವಿತ್ರಾ ಐಫೋನ್​ಗಳು.. ಸಾಕ್ಷ್ಯ ನಾಶಕ್ಕೆ ಸಖತ್‌ ಪ್ಲಾನ್! ಏನಿದರ ರಹಸ್ಯ?

Share :

Published September 5, 2024 at 10:04pm

    ಕಳೆದ ಒಂದೂವರೆ ತಿಂಗಳಿನಿಂದ CFSLನಲ್ಲಿ ಇದ್ದ ಫೋನ್​ಗಳು

    ದರ್ಶನ್, ಪವಿತ್ರಾ ಗೌಡ ಫೋನ್ ಎಲ್ಲಿಗೆ ಕಳುಹಿಸಲು ಪ್ಲಾನ್ ಇದೆ?

    ಸಾಕ್ಷ್ಯನಾಶಕ್ಕೆ ಯಾವುದರ ಮೊರೆ ಹೋಗಿದ್ದರು ಈ ಆರೋಪಿಗಳು

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್-ಪವಿತ್ರಾಗೌಡ ಮೊಬೈಲ್​​​ಗಳು ಪ್ರಮುಖ ಸಾಕ್ಷ್ಯಗಳಾಗಿವೆ. ತನಿಖೆ ವೇಳೆ ಮೊಬೈಲ್ ವಶಕ್ಕೆ ಪಡೆದಿದ್ದ ಪೊಲೀಸರು ರಿಟ್ರೀವ್​ಗೆ ಹೈದ್ರಾಬಾದ್​ನ ಎಫ್​ಎಸ್​ಎಲ್​ಗೆ ಕಳುಹಿಸಿದ್ದರು. ಒಂದೂವರೆ ತಿಂಗಳ ಬಳಿಕ ಎರಡೂ ಮೊಬೈಲ್​ಗಳು ರಿಟ್ರೀವ್ ಆಗದೆ ವಾಪಸ್ ಆಗಿವೆ. ಸದ್ಯ ಈ ಮೊಬೈಲ್​​ಗಳನ್ನು ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಗುಜರಾತ್​​ ಎಫ್​ಎಸ್​ಎಲ್​​ಗೆ ಕಳುಹಿಸಲು ಪೊಲೀಸರು ಚಿಂತನೆ ನಡೆಸಿದ್ದಾರೆ.

ಇದನ್ನೂ ಓದಿ: ಪ್ರತೀಕಾರ ತೀರಿಸಿಕೊಳ್ಳಲು ರೀತಿ ನೀತಿ ಬೇರೆ ಇವೆ.. ದರ್ಶನ್​ ಬಗ್ಗೆ ಉಮಾಪತಿಗೌಡ ಖಡಕ್ ಮಾತು; ಏನಂದ್ರು?

ಇದೊಂಥರ ವಿಚಿತ್ರ ವಿಕೃತಿ. ಯಾರಾದ್ರೂ ಹಿಂಸೆ ಅನುಭವಿಸ್ತಿದ್ರೆ ಅದನ್ನು ನೋಡಿಕೊಂಡು ಮಜಾ ಅನುಭವಿಸುವ ಮನಸ್ಥಿತಿ. ಹಿಂಸೆ ಮಹಾಪಾಪ. ಆದ್ರೆ ಅಂದು ಪಟ್ಟಣಗೆರೆ ಶೆಡ್​​ನಲ್ಲಿ ನಡೆಸಿದ್ದು ಅತ್ಯಂತ ನೀಚ ಕೃತ್ಯ. ರೇಣುಕಾಸ್ವಾಮಿ ಮೇಲೆ ಹಲ್ಲೆ ಹಾಗೂ ಹತ್ಯೆ ದೃಶ್ಯಗಳು ಆರೋಪಿಗಳ ಮೊಬೈಲ್​ಗಳಲ್ಲಿ ಸೆರೆಯಾಗಿದ್ದವು. ಆ ಫೋಟೋಗಳೆ ಈಗ ಪ್ರಕರಣಕ್ಕೆ ಪ್ರಮುಖ ಸಾಕ್ಷ್ಯಗಳಾಗಿವೆ.

ರಿಟ್ರೀವ್ ಆಗದ ದರ್ಶನ್, ಪವಿತ್ರಗೌಡ ಮೊಬೈಲ್​ಗಳು!

ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಇನ್ವೆಸ್ಟಿಗೇಷನ್ ಕೈಗೊಂಡಿದ್ದ ಪೊಲೀಸರು ಟೆಕ್ನಿಕಲ್ ಎವಿಡೆನ್ಸ್​​ಗಳನ್ನು ಕಲೆ ಹಾಕಿ ಅವುಗಳನ್ನು ಹೈದ್ರಾಬಾದ್​​ನ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಅದರಲ್ಲಿ ಪ್ರಮುಖ ಸಾಕ್ಷ್ಯಗಳಾಗಿ ನಟ ದರ್ಶನ್, ಪವಿತ್ರಾಗೌಡ ಹಾಗೂ ಸ್ಟೋನಿಬ್ರೂಕ್ ವಿನಯ್ ಮೊಬೈಲ್​ಗಳಲ್ಲಿ ಸೆರೆಯಾಗಿದ್ದ ದೃಶ್ಯಗಳು ಸೇರಿವೆ. ಆದ್ರೆ 2 ಐಫೋನ್​ ಮೊಬೈಲ್​​ಗಳನ್ನು ರಿಟ್ರೀವ್ ಮಾಡಲು ಸಾಧ್ಯವಾಗದೇ ವಾಪಸ್ ಬಂದಿದ್ದು ತನಿಖೆಗೆ ಅಲ್ಪ ಹಿನ್ನಡೆಯಾದಂತಾಗಿದೆ.

‘ರಿಟ್ರೀವ್ ’ ರಹಸ್ಯ!

  • ದರ್ಶನ್, ಪವಿತ್ರಾಗೌಡ ಮೊಬೈಲ್ ರಿಟ್ರೀವ್​​ಗೆ​ ಸಾಕಷ್ಟು ಪ್ರಯತ್ನ
  • 2 ಐಫೋನ್​ಗಳ ರಿಟ್ರೀವ್​​ಗೆ​ ಯತ್ನಿಸಿದ್ದ ಹೈದ್ರಾಬಾದ್ CFSL
  • ಕಳೆದ ಒಂದೂವರೆ ತಿಂಗಳಿನಿಂದ CFSLನಲ್ಲಿದ್ದ ಫೋನ್​ಗಳು
  • ಆದ್ರೆ ಮೊಬೈಲ್ ರಿಟ್ರೀವ್ ಮಾಡಲಾಗದೆ ಹಿಂತಿರುಗಿಸಿದ CFSL
  • 2 ಐಫೋನ್​ಗಳನ್ನು ಗುಜರಾತ್​ಗೆ ಕಳುಹಿಸಲು ಪೊಲೀಸರ ಪ್ಲಾನ್
  • ಗುಜರಾತ್​ನಲ್ಲಿರೋ FSL ಯೂನಿವರ್ಸಿಟಿಗೆ ಕಳುಹಿಸಲು ಚಿಂತನೆ…
  • ಗುಜರಾತ್​ FSL ವಿವಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಇರುತ್ತೆ
  • ಗುಜರಾತ್​ FSLನಿಂದ 2 ಫೋನ್​ಗಳ ರಹಸ್ಯ ಭೇದಿಸುವ ಪ್ಲಾನ್
  • ಶೀಘ್ರದಲ್ಲೇ ಗುಜರಾತ್​​ FSLಗೆ ಮೊಬೈಲ್ ರವಾನಿಸಲು ಸಿದ್ಧತೆ

ಡಿಜಿಟಲ್ ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದ ಡಿಗ್ಯಾಂಗ್​​!

ಇನ್ನು ತನಿಖೆ ವೇಳೆ ನಟ ದರ್ಶನ್ & ಗ್ಯಾಂಗ್​​ನಿಂದ ಸಾಕ್ಷ್ಯನಾಶಕ್ಕೆ ಯತ್ನಿಸಿರುವ ಕಳ್ಳಾಟ ಬಯಲಾಗಿದೆ. ಅರೆಸ್ಟ್​ ಆದ್ರೆ ಯಾವುದೇ ಸಾಕ್ಷ್ಯ ಸಿಗಬಾರದು ಅಂತ ಪ್ಲಾನ್ ಮಾಡಿದ್ದ ಆರೋಪಿಗಳು ಡಿಜಿಟಲ್ ಸಾಕ್ಷ್ಯನಾಶಕ್ಕೆ ಗೂಗಲ್ ಮೊರೆ ಹೋಗಿದ್ದರು. ಆರೋಪಿಗಳು ಓಡಾಡಿದ್ದ ಲೊಕೇಷನ್ ಸಿಗದಂತೆ ಯಾವ ರೀತಿ ಡಾಟಾ ಡಿಲೀಟ್ ಮಾಡಬೇಕು ಅಂತ ಗೂಗಲ್​​ನಲ್ಲಿ ತಡಕಾಡಲಾಗಿತ್ತು. 14ನೇ ಆರೋಪಿ ಸಾಫ್ಟ್​ವೇರ್ ಇಂಜಿನಿಯರ್ ಆಗಿದ್ದು ಪ್ರದೂಶ್ ಮೊಬೈಲ್ ವಶಕ್ಕೆ ಪಡೆದು ತನಿಖೆ ನಡೆಸುವ ವೇಳೆ ಕಳ್ಳಾಟ ಬಯಲಾಗಿತ್ತು. ಪ್ರದೂಶ್ ಹಾಗೂ ಇತರೆ ಆರೋಪಿಗಳ ಲೋಕೇಷನ್ ಜೊತೆ ಸರ್ಚ್ ಹಿಸ್ಟರಿ ಕೂಡ ಪತ್ತೆಯಾಗಿತ್ತು. ಸಾಕ್ಷ್ಯನಾಶಕ್ಕೆ ಯತ್ನಿಸಿರುವ ಬಗ್ಗೆ ಪೊಲೀಸರು ಚಾರ್ಜ್​​ಶೀಟ್​ನಲ್ಲಿ ಉಲ್ಲೇಖಿಸಿದ್ದರು.

ಇದನ್ನೂ ಓದಿ: KSRTC- ಶಾಲಾ ಬಸ್ ಮಧ್ಯೆ ಭೀಕರ ಆಕ್ಸಿಡೆಂಟ್.. ಕಾಲು ಕಳೆದುಕೊಂಡ ಮಕ್ಕಳು, ಇಬ್ಬರು ಬಾಲಕರು ಸಾವು

ಜಾಮೀನಿಗಾಗಿ ಹೈಕೋರ್ಟ್​​ ಮೊರೆ ಹೋಗಲು ಮುಂದಾದ ಪವಿತ್ರಾ!

ಇತ್ತ ಪೊಲೀಸರು ಚಾರ್ಜ್​ಶೀಟ್ ಸಲ್ಲಿಸುತ್ತಲೇ ಎ1 ಪವಿತ್ರಾಗೌಡಗೆ ಮತ್ತಷ್ಟು ಟೆನ್ಷನ್ ಹೆಚ್ಚಿದೆ. ಈಗಾಗಲೇ ಕೆಳ ನ್ಯಾಯಾಲಯದಲ್ಲಿ ಜಾಮೀನು ರಿಜೆಕ್ಟ್‌ ಆಗಿದ್ದು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಪವಿತ್ರಾಗೌಡ ಪರ ವಕೀಲರು ಮುಂದಾಗಿದ್ದಾರೆ. ಗುಜರಾತ್ ಎಫ್​ಎಸ್​​ಎಲ್​ನಿಂದ ಆ ಎರಡೂ ಐಫೋನ್​ಗಳು ರಿಟ್ರೀವ್ ಆದ್ರೆ ಮತ್ತಷ್ಟು ಸ್ಫೋಟಕ ಮಾಹಿತಿ ಹೊರಬೀಳುವ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇನ್ನೂ ರಿಟ್ರೀವ್ ಆಗದ ದರ್ಶನ್​, ಪವಿತ್ರಾ ಐಫೋನ್​ಗಳು.. ಸಾಕ್ಷ್ಯ ನಾಶಕ್ಕೆ ಸಖತ್‌ ಪ್ಲಾನ್! ಏನಿದರ ರಹಸ್ಯ?

https://newsfirstlive.com/wp-content/uploads/2024/09/DARSHAN_PAVITRA-5.jpg

Load More