newsfirstkannada.com

ಗುಂಡು ಇಲ್ಲ ತುಂಡು ಇಲ್ಲ.. ಚಿತ್ರಾನ್ನಕ್ಕೆ ದರ್ಶನ್ ಬೇಸರ; ಜೈಲಿನಲ್ಲಿ 3ನೇ ದಿನ ದಾಸನಿಗೆ ಏನಾಯ್ತು?

Share :

Published June 25, 2024 at 8:35pm

    ರಾತ್ರಿ ಊಟ ಮಾಡಿ ಬೇಗನೇ ನಿದ್ರೆಗೆ ಜಾರಿದ ನಟ ದರ್ಶನ್​

    ಅತ್ತ ದರ್ಶನ್ ನಿರಾಳ, ಇತ್ತ ಪವಿತ್ರಾ ಗೌಡ ಜೈಲಿನಲ್ಲಿ ವಿಲವಿಲ!

    ಮುದ್ದೆ, ಚಪಾತಿ, ಅನ್ನ, ಸಾಂಬಾರ್, ಮಜ್ಜಿಗೆ, ಚಿತ್ರಾನ್ನದ ಊಟ

ನಟ ದರ್ಶನ್​ ಪರಪ್ಪನ ಪಂಜರದೊಳಗೆ ಬಂಧಿಯಾಗಿ ಮೂರು ದಿನಗಳು ಕಳೆದಿವೆ. ​ಮೊದಲೆರಡು ದಿನ ಚಡಪಡಿಕೆಯಲ್ಲಿದ್ದ ದರ್ಶನ್​, ಪತ್ನಿ ಮಗನ ಭೇಟಿ ಬಳಿಕ ಮೂರನೇ ದಿನ ಕೊಂಚ ನಿರಾಳನಾಗಿದ್ದಾರೆ. ಆದ್ರೆ, ಇತ್ತ ಗೆಳತಿ ಪವಿತ್ರಾಗೌಡ ಮಾತ್ರ ಸೆರೆಮನೆ ವಾಸಕ್ಕೆ ಒಗ್ಗಿಕೊಳ್ಳೋಕೆ ಆಗದೆ ವಿಲವಿಲ ಅಂತ ಒದ್ದಾಡುತ್ತಿದ್ದಾರಂತೆ.

ಇದನ್ನೂ ಓದಿ: ಕೊಲೆ ಕೇಸ್‌ಗೆ 10, 20 ಅಲ್ಲ ಬರೋಬ್ಬರಿ 50 ಸಿಸಿಟಿವಿಯಲ್ಲಿ ಸುಳಿವು.. ದರ್ಶನ್ ಗ್ಯಾಂಗ್‌ಗೆ ಹೊಸ ಆಪತ್ತು!

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಬಂಧಿಯಾಗಿರೋ ದರ್ಶನ್​, ಪರಪ್ಪನ ಅಗ್ರಹಾರದಲ್ಲಿ ಜೈಲುಹಕ್ಕಿಯಾಗಿ ಮೂರು ದಿನವಾಯ್ತು. ಮೊದಲೆರಡು ದಿನ ಊಟ, ತಿಂಡಿ ಸೇರದೆ, ನಿದ್ದೆ ಮಾಡದೇ ಚಡಪಡಿಸಿದ್ದ ದರ್ಶನ್,​ ನಿನ್ನೆ ಕೊಂಚ ನಿರಾಳವಾಗಿದ್ದಾರೆ. ಅರೆಸ್ಟ್​ ಆದ ಬಳಿಕ ಮೊದಲ ಬಾರೀಗೆ ನಿನ್ನೆ ಪತ್ನಿ ವಿಜಯಲಕ್ಷ್ಮೀ, ಪುತ್ರ ವಿನೀಶ್​ ಪರಪ್ಪನ ಅಗ್ರಹಾರದಲ್ಲಿ ದರ್ಶನ್​ ಭೇಟಿ ಮಾಡಿದ್ರು. ಈ ವೇಳೆ ಇಬ್ಬರನ್ನೂ ನೋಡಿದ ದರ್ಶನ್​ ಕಣ್ಣೀರಿಟ್ಟಿದ್ದು, ಮನಸ್ಸು ಸ್ವಲ್ಪ ಹಗುರವಾಗಿದೆಯಂತೆ. ಮನೆಯವರ ಭೇಟಿಯಿಂದ ಸ್ವಲ್ಪ ಅರಾಮಾಗಿದ್ದ ದರ್ಶನ್​, ರಾತ್ರಿ ಮುದ್ದೆ, ಚಪಾತಿ, ಅನ್ನ, ಸಾಂಬಾರ್, ಮಜ್ಜಿಗೆ ಸೇವಿಸಿ​ ನಿದ್ರೆಗೆ ಜಾರಿದ್ದ.

ಇನ್ನೂ, ಎ2 ದರ್ಶನ್​ ಇಂದು ಬೆಳಗ್ಗೆ 6 ಗಂಟೆಗೆ ಸುಮಾರಿಗೆ ಎಚ್ಚರಗೊಂಡಿದ್ದರು. ಬಳಿಕ ಕಾಫಿ ಬದಲು ಬಿಸಿ ನೀರು ಸೇವಿಸಿದ್ದರು. ಯಾರ ಸಹವಾಸವೂ ಬೇಡ ಅಂತ ಸೈಲೆಂಟ್ ಆಗಿರೋ ದರ್ಶನ್, ಸಹ ಕೈದಿಗಳ ಜೊತೆಯೂ ಸರಿಯಾಗಿ ಬೆರೆಯುತ್ತಿಲ್ಲ. ಜೈಲಿನ ಮೆನುವಿನಂತೆ ದರ್ಶನ್​ ಬೆಳಗ್ಗೆ ಚಿತ್ರಾನ್ನ ಸೇವಿಸಿದ್ರು. ಬಳಿಕ ಕೊಠಡಿಯಲ್ಲಿ ಒಂಟಿಯಾಗಿ ಯೋಚಿಸುತ್ತಾ ಕುಳಿತಿದ್ದಾರಂತೆ. ಅತ್ತ ಪತ್ನಿ ಭೇಟಿಯಿಂದ ದರ್ಶನ್ ಕೊಂಚ ನಿರಾಳರಾಗಿದ್ರೆ, ಇತ್ತ ಗೆಳತಿ ಪವಿತ್ರಾ ಗೌಡ ಪರಪ್ಪನ ಅಗ್ರಹಾರದಲ್ಲಿ ವಿಲವಿಲ ಅಂತಿದ್ದಾರೆ. ಜೈಲು ಪಾಲಾಗಿ ಐದು ದಿನ ಕಳೆದ್ರೂ ಜೈಲೂಟಕ್ಕೆ ಹೊಂದಿಕೊಳ್ಳದೇ ಚಡಪಡಿಡುತ್ತಿದ್ದಾರೆ. ರಾಯಲ್​ ಲೈಫ್​ ಲೀಡ್​ ಮಾಡಿದ್ದ ಪವಿತ್ರಾ ಗೌಡ ಸರಿಯಾಗಿ ಊಟ ಸೇರದೆ, ನಿದ್ರೆ ಮಾಡದೇ ನರಳಾಡ್ತಿದ್ದಾರಂತೆ. ಅಷ್ಟೇ ಅಲ್ಲ ನಿದ್ರೆ ವೇಳೆ ಪದೇ ಪದೇ ಪವಿತ್ರಾಗೌಡ ಎಚ್ಚರಗೊಳ್ತಿದ್ದಾಳಂತೆ.

ಇದನ್ನೂ ಓದಿ: ರೇಣುಕಾಸ್ವಾಮಿ ಮೆಸೇಜ್ ಮಾಡಿದ್ದೇ ಮೊದಲ ತಪ್ಪು.. A4 ರಘು ಪತ್ನಿ ಸಹನಾ ಖಡಕ್‌ ಮಾತು; ಹೇಳಿದ್ದೇನು?

ಇನ್ನೂ, ಪವಿತ್ರಾ ಗೌಡಳನ್ನ ನೋಡೋಕೆ ಇಂದು ಪುತ್ರಿ ಖುಷಿ ಮತ್ತು ತಂದೆ, ತಾಯಿ, ಸಹೋದರ ಪರಪ್ಪನ ಅಗ್ರಹಾರಕ್ಕೆ ಆಗಮಿಸಿದ್ರು. ಈ ವೇಳೆ ಪೋಷಕರು ಪವಿತ್ರಾಗಾಗಿ ಬ್ಯಾಗ್​ವೊಂದನ್ನ ತಂದಿದ್ದು, ಅದ್ರಲ್ಲಿ ಬಟ್ಟೆ ಮತ್ತು ಮೇಕಪ್​ ಐಟಮ್ಸ್​ ಇರಬಹುದು ಎನ್ನಲಾಗ್ತಿದೆ. ಸೆರೆಮನೆವಾಸ ಹೈಫೈ ಲೈಫ್​ ಲೀಡ್​ ಮಾಡ್ಕೊಂಡಿದ್ದ ದರ್ಶನ್​ ಮತ್ತು ಪವಿತ್ರಾಳ ಸೊಕ್ಕಡಗಿಸಿರೋದಂತೂ ಸುಳ್ಳಲ್ಲ. ಜೈಲುಹಕ್ಕಿಗಳಾಗಿರೋ ಇಬ್ಬರೂ ರೆಕ್ಕೆ ಬಡಿದು ಹಾರಿ ಹೋಗೋಕೆ ಚಡಪಡಿಸ್ತಿದ್ದಾರೆ. ಆದ್ರೆ, ಈಗ ಸಿಕ್ಕಿರೋ ಸಾಕ್ಷ್ಯಗಳು ಸದ್ಯಕ್ಕಂತೂ ಇಬ್ಬರಿಗೂ ಹೊರ ಹೋಗೋಕೆ ಕಂಟಕವಾಗಲಿವೆ ಎನ್ನಲಾಗ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗುಂಡು ಇಲ್ಲ ತುಂಡು ಇಲ್ಲ.. ಚಿತ್ರಾನ್ನಕ್ಕೆ ದರ್ಶನ್ ಬೇಸರ; ಜೈಲಿನಲ್ಲಿ 3ನೇ ದಿನ ದಾಸನಿಗೆ ಏನಾಯ್ತು?

https://newsfirstlive.com/wp-content/uploads/2024/06/dboss9.jpg

Load More