ಕ್ರೈಮ್ರೆಕಾರ್ಡ್ ಅನ್ನ ಕೋರ್ಟ್ಗೆ ಸಲ್ಲಿಸಿದ ಪೊಲೀಸರು
ದರ್ಶನ್ ಸೇರಿ 17 ಜನ ನಡೆಸಿದ್ದ ಮೃಘೀಯ ವರ್ತನೆ ವರದಿ
ಜೈಲಿನಲ್ಲಿ ತಮಗಿರುವ ಅವಕಾಶದಂತೆ ಪತ್ನಿಗೆ ದರ್ಶನ್ ಕರೆ
ದರ್ಶನ್ ಅಂಡ್ ಗ್ಯಾಂಗ್ನ ಕ್ರೈಮ್ ರೆಕಾರ್ಡ್ ಅನ್ನ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. 85 ದಿನಗಳ ಬಳಿಕ ದೋಷಾರೋಪ ಪಟ್ಟಿಯನ್ನ ನೀಡಿದ್ದಾರೆ. ಇದೇ ವೇಳೆ ಚಾರ್ಜ್ಶೀಟ್ನಲ್ಲಿರೋದೇನು ಅನ್ನೋದನ್ನ ತಿಳಿಯಲು ದಾಸ ಫುಲ್ ಟೆನ್ಶನ್ ಆಗಿದ್ದಾರೆ. ಅದನ್ನು ತಿಳಿಯೋಕೆ ಟಿ.ವಿಗಾಗಿ ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಬಿಗ್ಬಾಸ್ ಬೆಡಗಿ ಸಂಗೀತಾ ಶೃಂಗೇರಿಗೆ ಒಲಿದ ಅವಾರ್ಡ್; ಅನುಬಂಧದಲ್ಲಿ ಗಿಟ್ಟಿಸಿಕೊಂಡ ಬಿರುದೇನು?
ದರ್ಶನ್ ಸೇರಿ 17 ಮಂದಿ ನಡೆಸಿದ್ದ ಮೃಗೀಯ ವರ್ತನೆಯನ್ನ ಚಿತ್ರಗುಪ್ತನಂತೆ ಪೊಲೀಸರು ಸವಿವರವಾಗಿ ಬರೆದಿದ್ದಾರೆ. ಎಲ್ಲಾ 17 ಆರೋಪಿಗಳ ವಿರುದ್ಧ ಎಸಿಪಿ ಚಂದನ್ ನೇತೃತ್ವದಲ್ಲಿ 3,991 ಪುಟಗಳ ಚಾರ್ಜ್ಶೀಟ್ ಸಲ್ಲಿಸಿದೆ. ಈ ಬೆನ್ನಲ್ಲೇ ಪ್ರಕರಣದಲ್ಲಿ ಬಹುದೊಡ್ಡ ಬದಲಾವಣೆಯಾಗಿದೆ. ಅತ್ತ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸುತ್ತಿದ್ದಂತೆ ದರ್ಶನ್ ಫುಲ್ ಟೆನ್ಶನ್ನಲ್ಲಿದ್ರು. ವಿಷಯ ತಿಳಿಯುತ್ತಿದ್ದಂತೆ ಜೈಲಿನಲ್ಲಿ ತಮಗಿರುವ ಅವಕಾಶದಂತೆ ಪತ್ನಿ ವಿಜಯಲಕ್ಷ್ಮೀಗೆ ಕರೆ ಮಾಡಿದ್ದಾರೆ. ಚಾರ್ಜ್ಶೀಟ್ ಸಲ್ಲಿಕೆಯ ವಿವರವನ್ನು ಕೇಳಿದ್ದಾರೆ.
ಈ ವಿಚಾರವನ್ನ ಪತ್ನಿ ಜೊತೆ ಮಾತನಾಡುತ್ತಿರುವಾಗಲೇ ಕರೆ ಅರ್ಧಕ್ಕೆ ಕಟ್ ಆಗಿದೆ. ಜೈಲಿನಿಂದ ಮಾತನಾಡಲು ಕೇವಲ 5 ನಿಮಿಷ ಮಾತ್ರ ಅವಕಾಶ ಇರೋದ್ರಿಂದ ಕಡಿತವಾಗಿದೆ. ಇದು ದರ್ಶನ್ ಟೆನ್ಶನ್ಗೆ ಕಾರಣವಾಗಿದೆ. ಚಾರ್ಜ್ಶೀಟ್ನಲ್ಲಿ ಏನಿದೆ ಅನ್ನೋದನ್ನು ತಿಳಿಯಲು ದಾಸ ಸದ್ಯ ಭಾರೀ ತಲೆಬಿಸಿ ಮಾಡಿಕೊಂಡಿದ್ದಾರೆ. ರಾತ್ರಿಯೆಲ್ಲಾ ನಿದ್ದೆ ಇಲ್ಲದೇ ಕಂಗಾಲಾಗಿದ್ದಾರೆ ಅಂತ ಮಾಹಿತಿ ಸಿಕ್ಕಿದೆ. ತನ್ನ ಕೇಸ್ ಬಗ್ಗೆ ಮಾಹಿತಿ ತಿಳಿಯಲು ದರ್ಶನ್ ಟಿವಿ ನೀಡುವಂತೆ ಜೈಲಧಿಕಾರಿಗಳಿಗೆ ಮನವಿ ಮಾಡಿದ್ದರು. ಇಂದು ಟಿವಿ ನೀಡುವ ಸಾಧ್ಯತೆ ಇದೆ.
ಈ ಹಿಂದೆ ಟಿವಿ ಬೇಡ ಅಂತಿದ್ದ ದಾಸ ಈಗ ತನ್ನ ಕೇಸ್ನ ಮಾಹಿತಿ ಪಡೆಯಲು ಟಿವಿಗಾಗಿ ಬೇಡಿಕೆ ಇಟ್ಟಿದ್ದಾರೆ. ಹೀಗಾಗಿ 15ನೇ ಸೆಲ್ನಲ್ಲಿ ಟಿವಿ ನೀಡಲು ಜೈಲಧಿಕಾರಿಗಳು ನಿರ್ಧರಿಸಿದ್ದಾರೆ. ಇತ್ತ ಈ ನಡುವೆಯೇ ಬಳ್ಳಾರಿಯ ಕೇಂದ್ರ ಜೈಲಿನಲ್ಲಿ ಮನವಿ ಮಾಡಿದಂತೆ ದರ್ಶನ್ಗೆ ಈಗಾಗಲೇ ಸರ್ಜಿಕಲ್ ಚೇರ್ನ್ನು ನೀಡಲಾಗಿದೆ. ಚಾರ್ಜ್ಶೀಟ್ ಸಲ್ಲಿಕೆ ಬೆನ್ನಲ್ಲೇ ಮೊದಲೇ ಡಿ ಗ್ಯಾಂಗ್ ದಿಕ್ಕಾಪಾಲಾಗಿದ್ದು ಈಗ ಒಬ್ಬೊಬ್ಬರಿಗೆ ಒಂದೊಂದು ತಲೆನೋವು ಶುರುವಾಗಿದೆ. ಅದರಲ್ಲೂ ಪ್ರಕರಣದ ಮೊದಲನೇ ಆರೋಪಿ ಪವಿತ್ರಾ ಗೌಡ ಏಕಾಂಗಿಯಾಗಿದ್ದಾರೆ. ಮೊದಲೇ ಜಾಮೀನು ಅರ್ಜಿ ತಿರಸ್ಕಾರವಾಗಿರುವ ತಲೆಬಿಸಿಯಲ್ಲಿರುವ ಪವಿತ್ರಾಗೆ ಇದು ಮತ್ತೊಂದು ತಲೆನೋವಿಗೆ ಕಾರಣವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ