Advertisment

ಜಾಮೀನು ಸಿಗುವ ನಿರೀಕ್ಷೆಯಲ್ಲಿ ದರ್ಶನ್​.. ಐಟಿ ಇಲಾಖೆಯಿಂದ ಬಿಗ್ ಶಾಕ್ ಎದುರಾಗುತ್ತಾ?

author-image
Bheemappa
Updated On
ಬಿಳಿ ಗಡ್ಡ, ಹೆವಿ ಟೆನ್ಷನ್.. ಬಳ್ಳಾರಿ ಜೈಲಿನಲ್ಲಿ ದರ್ಶನ್‌ ಹೊಸ ಅವತಾರ; ಸಂತೂರ್ ಸೋಪ್‌ ತಂದು ಕೊಟ್ಟ ವಿಜಯಲಕ್ಷ್ಮಿ!
Advertisment
  • ಪ್ರಕರಣದಲ್ಲಿ ಎ1 ಆರೋಪಿ ಜಾರಿಕೊಂಡರೆ ದಾಸನಿಗೆ ಕಷ್ಟ
  • ಲಕ್ಷ ಲಕ್ಷ ಹಣದ ಹರಿದಾಡಿರುವ ಕುರಿತು ಐಟಿ ವಿಚಾರಣೆ
  • ರೇಣುಕಾಸ್ವಾಮಿ ಕೇಸ್​ಲ್ಲಿ ಎ2 ಆರೋಪಿ ಆಗಿರುವ ದರ್ಶನ್

ಬಳ್ಳಾರಿ: ಐಟಿ ಅಧಿಕಾರಿಗಳ ವಿಚಾರಣೆ ಜಾಮೀನಿಗೆ ತೊಡಕಾಗಹುದು ಎಂದು ಜೈಲಿನಲ್ಲಿರುವ ದರ್ಶನ್ ಟೆನ್ಷನ್​ನಲ್ಲಿದ್ದಾರೆ ಎಂದು ತಿಳಿದುಬಂದಿದೆ.

Advertisment

ಸೋಮವಾರ ಅಂದರೆ ಸೆಪ್ಟೆಂಬರ್ 30 ರಂದು ಕೋರ್ಟ್​​ನಿಂದ ಜಾಮೀನು ಸಿಗಬಹುದು ಎನ್ನುವ ನಿರೀಕ್ಷೆಯಲ್ಲಿ ದರ್ಶನ್ ಇದ್ದರು. ಆದರೆ ಘಟನೆ ವೇಳೆ 84 ಲಕ್ಷ ರೂಪಾಯಿಗಳ ವಹಿವಾಟಿಗೆ ಸಂಬಂಧಿಸಿದಂತೆ ಐಟಿ ಅಧಿಕಾರಿಗಳು ದರ್ಶನ್ ಅವರನ್ನು ಎರಡು ದಿನ ವಿಚಾರಣೆ ಮಾಡಿದ್ದಾರೆ. ಇದೇ ಜಾಮೀನಿಗೆ ತೊಡಕಾಗಬಹುದು ಎಂದು ದರ್ಶನ್ ಟೆನ್ಷನ್​ಗೆ ಒಳಗಾಗಿದ್ದಾರೆ. ವಿಚಾರಣೆಯ ಕೆಲ ಅಂಶಗಳು, ಕೊಲೆ ಬಳಿಕ ಹಣ ವಹಿವಾಟು ನಡೆದಿರುವ ಮೇಲೆ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ (SPP) ಬೆಲ್‌ಗೆ ತಡೆ ತರುವ ಸಾಧ್ಯತೆ ಇದೆ.

ಇದನ್ನೂ ಓದಿ:ಮುಡಾ ಕೇಸ್​; ಸಿಎಂ ಸಿದ್ದರಾಮಯ್ಯ ವಿರುದ್ಧ ಯಾವ್ಯಾವ IPC ಸೆಕ್ಷನ್​ ಏನ್ ಹೇಳುತ್ತೆ?

publive-image

ಪ್ರಕರಣದ ಎ1 ಆರೋಪಿಯಾಗಿರುವ ಪವಿತ್ರಾಗೌಡ ಕೇಸ್​ನಿಂದ ಜಾರಿಕೊಳ್ಳುವ ತಂತ್ರ ಇದೀಗ ದರ್ಶನ್​ಗೆ ಮತ್ತಷ್ಟು ಉರುಳಾಗುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ ಐಟಿ ಹಾಗೂ ಪವಿತ್ರಾ ಗೌಡ ನಿಲುವು ನೋಡಿಕೊಂಡು ದರ್ಶನ್ ಕಾನೂನು ಹೋರಾಟಕ್ಕೆ ಮುಂದಾಗಬಹುದು. ಹೀಗಾಗಿ ದರ್ಶನ್ ಪರ ವಕೀಲರು ಮತ್ತೊಂದು ಬಾರಿ ನಟನಿಂದ ಪೂರ್ಣ ಮಾಹಿತಿ ಪಡೆಯಲಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment