newsfirstkannada.com

ಡಿ-ಆ್ಯಕ್ಟಿವ್‌ ಆಗಿದ್ದ ದರ್ಶನ್ ಪತ್ನಿ ವಿಜಯಲಕ್ಷ್ಮಿ ಕೊಟ್ರು ಹೊಸ ಟ್ವಿಸ್ಟ್‌; ಏನದು?

Share :

Published June 16, 2024 at 6:04pm

    ದರ್ಶನ್​ ಅರೆಸ್ಟ್​ ಆಗುತ್ತಿದ್ದಂತೆ ಫ್ಯಾನ್ಸ್​ಗೆ ಬಿಗ್​ ಶಾಕ್​ ಕೊಟ್ಟಿದ್ದ ಪತ್ನಿ ವಿಜಯಲಕ್ಷ್ಮಿ

    ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ A2 ಆರೋಪಿಯಾಗಿರುವ ದರ್ಶನ್​

    ಸದ್ಯದಲ್ಲೇ ದರ್ಶನ್​ ಬಗ್ಗೆ ಅಪ್​ಡೇಟ್ಸ್ ನೀಡಲು ಸಿದ್ಧರಾಗಿದ್ದಾರಾ ಪತ್ನಿ ವಿಜಯಲಕ್ಷ್ಮಿ

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯನ್ನು ಕೊಲೆ ಮಾಡಿದ ಆರೋಪದಲ್ಲಿ ನಟ ದರ್ಶನ್ ಅಂಡ್​ ಗ್ಯಾಂಗ್ ಪೊಲೀಸ್​ ವಶದಲ್ಲಿದ್ದಾರೆ. ಈ ಕೊಲೆ ಕೇಸ್​​ ಸಂಬಂಧ ದರ್ಶನ್​ ಅಂಡ್ ಗ್ಯಾಂಗ್​​ ಅನ್ನು ನಿನ್ನೆ ಕೋರ್ಟ್​ಗೆ ಹಾಜರು ಪಡಿಸಲಾಗಿತ್ತು. ಆದರೆ ಕೋರ್ಟ್​ ಮತ್ತೆ 5 ದಿನಗಳ ಕಾಲ ಪೊಲೀಸ್​ ಕಸ್ಟಡಿಗೆ ಆರೋಪಿಗಳನ್ನು ನೀಡಿದೆ.

ಇದನ್ನೂ ಓದಿ: ದರ್ಶನ್​, ಪವಿತ್ರಾ ಜೈಲು ಸೇರಿದ ಬೆನ್ನಲ್ಲೇ ಮತ್ತೆ ಬಿಗ್ ಟ್ವಿಸ್ಟ್​ ಕೊಟ್ಟ ಪತ್ನಿ ವಿಜಯಲಕ್ಷ್ಮಿ

ಇನ್ನು, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡಿರೋ ನಟ ದರ್ಶನ್​​ನಿಂದ ಆಪ್ತರು, ಕುಟುಂಬದವರು ಅವರಿಂದ ಅಂತರ ಕಾಯ್ದುಕೊಂಡಿದ್ದಾರೆ. ದರ್ಶನ್​ರ ತಾಯಿಯಾಗಲಿ, ಪತ್ನಿ, ಮಗ, ಸಹೋದರ ಆಗಲಿ ಯಾರು ಕೂಡ ಠಾಣೆಗೆ ಭೇಟಿ ನೀಡಿಲ್ಲ. ಇದೀಗ ಇದರ ಮಧ್ಯೆ ದರ್ಶನ್​ ಪತ್ನಿ ವಿಜಯಲಕ್ಷ್ಮಿ ಅವರು ಇನ್​ಸ್ಟಾಗ್ರಾಮ್​ ಖಾತೆಯನ್ನು ಮತ್ತೆ ಸಕ್ರಿಯಗೊಳಿಸಿದ್ದಾರೆ. ಅರೆಸ್ಟ್​ ಬಳಿಕ ಅವರ ಪತ್ನಿ ವಿಜಯಲಕ್ಷ್ಮಿ ತಮ್ಮ ಇನ್​ಸ್ಟಾಗ್ರಾಂ ಖಾತೆಯನ್ನು ಡಿ-ಆ್ಯಕ್ಟಿವೇಟ್ ಮಾಡಿದ್ದರು. ಆದರೆ ಈಗ ಮತ್ತೆ ತಮ್ಮ ಇನ್​ಸ್ಟಾ ಖಾತೆಯನ್ನು ಸಕ್ರಿಯಗೊಳಿಸಿದ್ದಾರೆ.

ಇದನ್ನೂ ಓದಿ: ‘ನಿಮ್ಮನ್ನ ಮಿಸ್ ಮಾಡಿಕೊಳ್ತಿದ್ದೇನೆ ಅಪ್ಪ’ ಎಂದು ಹಾಕಿದ್ದ ಪೋಸ್ಟ್​ ಡಿಲೀಟ್​​! ದರ್ಶನ್ ಪುತ್ರ ವಿನೀಶ್​ಗೆ ಏನಾಯ್ತು​​?

ಹೌದು, ಇಂದೊಂದು ಕೇಸ್​ನಿಂದ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ತುಂಬಾ ಬೇಸರಗೊಂಡು ಇನ್​ಸ್ಟಾ ಖಾತೆಯನ್ನು ಡಿ-ಆಕ್ಟಿವೇಟ್‌ ಮಾಡಿಕೊಂಡಿದ್ದರು. ಸದ್ಯ ವಿಜಯಲಕ್ಷ್ಮಿ ಅವರು ತಮ್ಮ ಹಳೆ ಖಾತೆಯನ್ನೇ ಮತ್ತೆ ಸಕ್ರಿಯಗೊಳಿಸಿದ್ದಾರೆ. ಆದರೆ ತಾವು ಮಾಡಿದ್ದ ಎಲ್ಲ ಪೋಸ್ಟ್​ಗಳನ್ನು ಡಿಲೀಟ್ ಮಾಡಿಕೊಂಡಿದ್ದಾರೆ. ಫಾಲೋ ಮಾಡುತ್ತಿದ್ದವರನ್ನು ಸಹ ಅನ್​ಫಾಲೋ ಮಾಡಿಬಿಟ್ಟಿದ್ದಾರೆ. ಆದರೆ ಇನ್​ಸ್ಟಾಗ್ರಾಮ್​ ಖಾತೆ ಹೆಸರು ವಿಜಿ ದರ್ಶನ್ ಅಂತಲೇ ಇದೆ. ಆದರೆ ದರ್ಶನ್​ ಪತ್ನಿ ವಿಜಯಲಕ್ಷ್ಮಿ ಇನ್​ಸ್ಟಾಗ್ರಾಮ್​ ಅಕೌಂಟ್​ನಲ್ಲಿ ಸಾಕಷ್ಟು ಜನ ಅವರ ಹೆಸರಿಗೆ ಟ್ಯಾಗ್​​ ಮಾಡಿದ ವಿಡಿಯೋಗಳು ಮಾತ್ರ ಉಳಿದುಕೊಂಡಿವೆ. ಇದನ್ನು ನೋಡಿದ ಅಭಿಮಾನಿಗಳು ಮತ್ತೆ ಇನ್​ಸ್ಟಾಗ್ರಾಮ್​ ಖಾತೆಯನ್ನು ಸಕ್ರಿಯಗೊಳಿಸಿದ ಅವರು ಈ ಮೂಲಕ ಪ್ರಕರಣದ ಬಗ್ಗೆ ಮಾಹಿತಿ ನೀಡುತ್ತಾರೆಯೇ ಎಂಬ ಕುತೂಹಲ ಮೂಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಡಿ-ಆ್ಯಕ್ಟಿವ್‌ ಆಗಿದ್ದ ದರ್ಶನ್ ಪತ್ನಿ ವಿಜಯಲಕ್ಷ್ಮಿ ಕೊಟ್ರು ಹೊಸ ಟ್ವಿಸ್ಟ್‌; ಏನದು?

https://newsfirstlive.com/wp-content/uploads/2024/06/darshan-wife.jpg

Load More