newsfirstkannada.com

×

ಬಿಳಿ ಗಡ್ಡ, ಹೆವಿ ಟೆನ್ಷನ್.. ಬಳ್ಳಾರಿ ಜೈಲಿನಲ್ಲಿ ದರ್ಶನ್‌ ಹೊಸ ಅವತಾರ; ಸಂತೂರ್ ಸೋಪ್‌ ತಂದು ಕೊಟ್ಟ ವಿಜಯಲಕ್ಷ್ಮಿ!

Share :

Published September 17, 2024 at 6:16pm

    ಜೈಲಿನಲ್ಲಿ ಬಿಳಿ ಗಡ್ಡ ಬಿಟ್ಟು, ಹೆವಿ ಟೆನ್ಷನ್‌ನಲ್ಲಿರುವ ನಟ ದರ್ಶನ್

    ಬಾಸ್ ಸ್ಥಿತಿ ನೋಡಿ ನಟ ಧನ್ವೀರ್ ಹಾಗೂ ಹೇಮಂತ್ ಕಣ್ಣೀರು

    ಎರಡು ಬ್ಯಾಗ್ ಹಿಡಿದು ಹೈಸೆಕ್ಯುರಿಟಿ ಸೆಲ್‌ನಿಂದ ಹೊರ ಬಂದ ದಾಸ

ಬಳ್ಳಾರಿ: ರೇಣುಕಾಸ್ವಾಮಿ ಕೇಸ್‌ನಲ್ಲಿ ಬಂಧನದಲ್ಲಿರುವ ನಟ ದರ್ಶನ್ ಅವರನ್ನ ಕುಟುಂಬ ಸದಸ್ಯರು ಮತ್ತೆ ಭೇಟಿಯಾಗಿದ್ದಾರೆ. ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ಆದ ಮೇಲೆ ಪತ್ನಿ ವಿಜಯಲಕ್ಷ್ಮಿ ಅವರು ನಾಲ್ಕನೇ ಬಾರಿಗೆ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಇಂದು ಬಳ್ಳಾರಿ ಜೈಲಿಗೆ ಬಂದ ವಿಜಯಲಕ್ಷ್ಮಿ ಅವರಿಗೆ ನಟರಾದ ಧನ್ವೀರ್ ಹಾಗೂ ಹೇಮಂತ್ ಸಾಥ್ ನೀಡಿದ್ದರು. ರೇಂಜ್‌ ರೋವರ್ ಕಾರಿನಲ್ಲಿ ಬಂದ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಎರಡು ಬ್ಯಾಗ್‌ನಲ್ಲಿ ದರ್ಶನ್ ಅವರ ಬಟ್ಟೆ ಹಾಗೂ ಇತರೆ ವಸ್ತುಗಳನ್ನ ತಂದಿದ್ದರು.

ಇದನ್ನೂ ಓದಿ: ಪೊಲೀಸ್ರು ದರ್ಶನ್​​ನಾ ಸುಮ್ಮನೆ ಅರೆಸ್ಟ್​ ಮಾಡಲು ಸಾಧ್ಯವಿಲ್ಲ; ಸುದೀಪ್​ ಅಚ್ಚರಿ ರಿಯಾಕ್ಷನ್​​ 

ವಿಜಯಲಕ್ಷ್ಮಿ ಭೇಟಿಗೆ ದರ್ಶನ್ ಅವರು ಹೈಸೆಕ್ಯುರಿಟಿ ಸೆಲ್‌ನಿಂದ ಬಿಗಿ ಭದ್ರತೆಯಲ್ಲೇ ಆಗಮಿಸಿದರು. ಬಿಳಿ ಟೀ ಶರ್ಟ್‌, ಜಿನ್ಸ್ ಪ್ಯಾಂಟ್ ಧರಿಸಿದ್ದ ದರ್ಶನ್ ಅವರು ಬಿಳಿ ಗಡ್ಡ ಬಿಟ್ಟು ಹೆವಿ ಟೆನ್ಷನ್‌ನಲ್ಲಿ ಇದ್ದಿದ್ದು ಕಂಡು ಬಂತು.
ಎಂದಿನಂತೆ ಕಳೆದ ವಾರ ಕುಟುಂಬಸ್ಥರು ನೀಡಿದ್ದ ಎರಡು ಬ್ಯಾಗ್ ಹಿಡಿದು ಬಂದ ದರ್ಶನ್ ಅವರು ಜೈಲಿನ ಸಂದರ್ಶಕರ ಕೋಣೆಗೆ ತೆರಳಿದರು.

ದರ್ಶನ್ ಪರ ವಕೀಲರು ಕೊರಿಯರ್ ಮೂಲಕ ಒಂದು ಲೆಟರ್ ಕಳುಹಿಸಿದ್ದರು. ಎರಡು ಬ್ಯಾಗ್ ಜೊತೆಗೆ ದರ್ಶನ್ ಅವರು ವಕೀಲರು ಕಳುಹಿಸಿದ ಲೆಟರ್‌ಗೆ ಸಹಿ ಮಾಡಿ ಪತ್ನಿ ವಿಜಯಲಕ್ಷ್ಮಿ ಅವರಿಗೆ ನೀಡಿದ್ದಾರೆ.

ದರ್ಶನ್ ಸ್ಥಿತಿ ನೋಡಿ ಕಣ್ಣೀರು!
ಬಳ್ಳಾರಿ ಜೈಲಿನಲ್ಲಿ ದರ್ಶನ್ ಕಂಡ ಕೂಡಲೇ ಪತ್ನಿ ವಿಜಯಲಕ್ಷ್ಮಿ ಭಾವುಕರಾಗಿದ್ದಾರೆ. ನಟ ಧನ್ವೀರ್ ಹಾಗೂ ಆಪ್ತ ಹೇಮಂತ್ ಅವರು ದರ್ಶನ್ ನೋಡಿ ಕಣ್ಣೀರು ಹಾಕಿದ್ದಾರೆ. ಈ ವೇಳೆ ಧನ್ವೀರ್ ಹಾಗೂ ಹೇಮಂತ್ ಅವರನ್ನು ಆರೋಪಿ ದರ್ಶನ್ ಸಮಾಧಾನ ಮಾಡಿದ್ದಾರೆ.

ಇದನ್ನೂ ಓದಿ: ದರ್ಶನ್​ಗೆ ಎಚ್ಚರಿಕೆ ಕೊಟ್ಟ ವಕೀಲರು; ಬಳ್ಳಾರಿ ಜೈಲಿನಲ್ಲಿ ಪದೇ ಪದೆ ಕಿರಿಕ್..! ಈಗ ಏನ್ಮಾಡಿದ್ರು..? 

ಪತ್ನಿ ವಿಜಯಲಕ್ಷ್ಮಿ ಹಾಗೂ ನಟ ಧನ್ವೀರ್ ಹಾಗೂ ಸಂಬಂಧಿಗಳು ದರ್ಶನ್ ಆರೋಗ್ಯ ವಿಚಾರಿಸಿದ್ದಾರೆ. ಬ್ಯಾಗ್‌ನಲ್ಲಿ ಟೂತ್‌ಪೇಸ್ಟ್ , ಸಂತೂರ್ ಸೋಪ್, ಹಣ್ಣು, ಬಟ್ಟೆ, ಟ್ಯಾಬ್ಲೆಟ್ಸ್, ಡ್ರೈಪ್ರೂಟ್ಸ್, ಬೇಕರಿ ತಿಂಡಿಯನ್ನು ದರ್ಶನ್‌ಗೆ ಕೊಡಲಾಗಿದೆ.

ಸಂದರ್ಶಕರ ಕೊಠಡಿಯಲ್ಲಿ ದರ್ಶನ್ ಅವರನ್ನು ಭೇಟಿಯಾದ ವಿಜಯಲಕ್ಷ್ಮಿ ಅವರು 25 ನಿಮಿಷಗಳ ಚರ್ಚೆ ಮಾಡಿದ್ದಾರೆ. ವಕೀಲರು ಕಳುಹಿಸಿದ್ದ ಲೆಟರ್‌ಗೆ ಸಹಿ ಮಾಡಿದ ದರ್ಶನ್ ಅವರು ಕಾನೂನು ಹೋರಾಟದ ಬಗ್ಗೆಯೂ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಳಿ ಗಡ್ಡ, ಹೆವಿ ಟೆನ್ಷನ್.. ಬಳ್ಳಾರಿ ಜೈಲಿನಲ್ಲಿ ದರ್ಶನ್‌ ಹೊಸ ಅವತಾರ; ಸಂತೂರ್ ಸೋಪ್‌ ತಂದು ಕೊಟ್ಟ ವಿಜಯಲಕ್ಷ್ಮಿ!

https://newsfirstlive.com/wp-content/uploads/2024/09/Darshan-Bellary-Jail-10.jpg

Load More