newsfirstkannada.com

‘ನನಗೂ ನೋವಾಗುತ್ತೆ’- ಅಪ್ಪನಿಗೆ ಬೈದಿದ್ದಕ್ಕೆ ಆಕ್ರೋಶ ಹೊರಹಾಕಿದ ದರ್ಶನ್‌ ಮಗ ವಿನೀಶ್‌

Share :

Published June 13, 2024 at 7:36pm

Update June 13, 2024 at 7:46pm

    ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಬೆನ್ನಲ್ಲೇ ಮಗ ವಿನೀಶ್‌ ತೂಗುದೀಪ ರಿಯಾಕ್ಟ್​

    ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ನಟ ದರ್ಶನ್ ಆ್ಯಂಡ್ ಗ್ಯಾಂಗ್ ಅರೆಸ್ಟ್​

    ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ವಿನೀಶ್‌ ತೂಗುದೀಪ ಪೋಸ್ಟ್​

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯನ್ನು ಕೊಲೆ ಮಾಡಿದ ಆರೋಪದಲ್ಲಿ ನಟ ದರ್ಶನ್ ಆ್ಯಂಡ್ ಗ್ಯಾಂಗ್ ಅನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಪವಿತ್ರಾ ಗೌಡ ಹಾಗೂ ನಟ ದರ್ಶನ್​ನನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಆದರೆ ಇದೇ ಕೇಸ್​ನಿಂದ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ತುಂಬಾ ಬೇಸರವಾಗಿದ್ದರು. ಹೀಗಾಗಿ ಇಂದು ವಿಜಯಲಕ್ಷ್ಮಿ ದರ್ಶನ್ ಅವರು ತಮ್ಮ ಇನ್​ಸ್ಟಾ ಖಾತೆಯನ್ನು ಡಿ-ಆಕ್ಟಿವೇಟ್‌ ಮಾಡಿಕೊಂಡಿದ್ದರು.

ಇದನ್ನೂ ಓದಿ: ದರ್ಶನ್‌ ಹುಚ್ಚು ಅಭಿಮಾನಿ.. ಕೊಲೆ ಕೇಸ್‌ನಲ್ಲಿ ಸಿಕ್ಕಿಬಿದ್ದ A5 ನಂದೀಶ್ ಹಿನ್ನೆಲೆ ಏನು? ಯಾರಿವರು?

ಇದೀಗ ನಟ ದರ್ಶನ್​ ಪುತ್ರ ವಿನೀಶ್‌ ತೂಗುದೀಪ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಹೌದು, ತಂದೆ ದರ್ಶನ್ ಅರೆಸ್ಟ್​ ಆಗುತ್ತಿದ್ದಂತೆ ಮಗ ಹಾಗೂ ಪತ್ನಿ ಸೈಲೆಂಟ್​ ಆಗಿದ್ದರು. ಇತ್ತ ತಂದೆ ಅರೆಸ್ಟ್​ ಆಗುತ್ತಿದ್ದಂತೆ ಸಾಕಷ್ಟು ಜನರು ಕೆಟ್ಟ ಕೆಟ್ಟದಾಗಿ ಕಮೆಂಟ್‌ ಮಾಡುತ್ತಿದ್ದರಿಂದ ವಿನೀಶ್‌ ತೂಗುದೀಪ ಬೇಸರ ಹೊರ ಹಾಕಿದ್ದಾರೆ. ಈ ಬಗ್ಗೆ ದರ್ಶನ್​ ಪುತ್ರ ವಿನೀಶ್ ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಹೀಗೆ ಬರೆದುಕೊಂಡಿದ್ದಾರೆ.

ಇನ್ನು, ಈ ಬಗ್ಗೆ ಬರೆದುಕೊಂಡ ದರ್ಶನ್​ ಪುತ್ರ ವಿನೀಶ್, ನನ್ನ ತಂದೆಯ ಬಗ್ಗೆ ಕೆಟ್ಟ ಕಮೆಂಟ್‌ಗಳನ್ನು ಮಾಡಿ, ಅಶ್ಲೀಲ ಭಾಷೆಯಲ್ಲಿ ನಿಂದಿಸಿದ್ದಕ್ಕೆ ನಿಮಗೆಲ್ಲ ಧನ್ಯವಾದಗಳು. ನಾನು 15 ವರ್ಷದ ಬಾಲಕ. ನನಗೂ ಭಾವನೆಗಳಿವೆ ಎಂಬುದನ್ನು ನೀವು ಪರಿಗಣಿಸಲೇ ಇಲ್ಲ. ಇಂತಹ ಕೆಟ್ಟ ಸಮಯದಲ್ಲಿ ನನ್ನ ತಾಯಿ ಹಾಗೂ ತಂದೆಗೆ ನಿಮ್ಮ ಬೆಂಬಲದ ಅಗತ್ಯವಿದೆ. ನೀವು ನನಗೆ ಶಾಪ ಹಾಕುವುದರಿಂದ ಯಾವುದೇ ಬದಲಾವಣೆ ಆಗುವುದಿಲ್ಲ ಅಂತ ಬರೆದುಕೊಂಡಿದ್ದಾರೆ. ಸದ್ಯ ಇದೇ ಪೋಸ್ಟ್​ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ನನಗೂ ನೋವಾಗುತ್ತೆ’- ಅಪ್ಪನಿಗೆ ಬೈದಿದ್ದಕ್ಕೆ ಆಕ್ರೋಶ ಹೊರಹಾಕಿದ ದರ್ಶನ್‌ ಮಗ ವಿನೀಶ್‌

https://newsfirstlive.com/wp-content/uploads/2024/06/darshan-son.jpg

Load More