newsfirstkannada.com

ತಂದೆ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡಿದವರಿಗೆ ಥ್ಯಾಂಕ್ಸ್ ಎಂದ ದರ್ಶನ್ ಪುತ್ರ ವಿನೀಶ್‌; ಹೇಳಿದ್ದೇನು?

Share :

Published June 13, 2024 at 8:42pm

Update June 13, 2024 at 8:45pm

  ಕೆಟ್ಟ ಕಮೆಂಟ್ ಮಾಡಿದವರಿಗೆ 15 ವರ್ಷದ ಮಗನ ಬಗ್ಗೆ ಕಾಳಜಿ ಇಲ್ಲ

  ತಂದೆ ಅರೆಸ್ಟ್ ಆದ ಬಳಿಕ ವಿನೀಶ್ ದರ್ಶನ್ ಖಡಕ್ ರಿಯಾಕ್ಷನ್

  ಅವಾಚ್ಯ ಭಾಷೆಯನ್ನು ಬಳಸಿದ ಎಲ್ಲರಿಗೂ ಧನ್ಯವಾದಗಳು ಎಂದ ವಿನೀಶ್

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನದಲ್ಲಿರುವ ನಟ ದರ್ಶನ್ ಕಂಬಿ ಹಿಂದೆ ಕಾಲ ಕಳೆಯುತ್ತಿದ್ದಾರೆ. ಕೊಲೆ ಆರೋಪದಲ್ಲಿ ಬಂಧಿಸಿರುವ ಪೊಲೀಸರು ಇಂಚಿಂಚು ಮಾಹಿತಿಯನ್ನು ತನಿಖೆಯಿಂದ ಕಲೆ ಹಾಕುತ್ತಿದ್ದಾರೆ. ನಟ ದರ್ಶನ್ ಅವರ ಬಂಧನ ಹಾಗೂ ಪೊಲೀಸರ ತನಿಖೆ ಬಗ್ಗೆಯೇ ಸಾಕಷ್ಟು ಚರ್ಚೆಯಾಗುತ್ತಿದೆ.

ಕೊಲೆ ಆರೋಪದಲ್ಲಿ ಬಂಧನದ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಪರ-ವಿರೋಧದ ಚರ್ಚೆಯಾಗುತ್ತಿದೆ. ದರ್ಶನ್ ಮತ್ತವರ ಗ್ಯಾಂಗ್ ವರ್ತನೆಗೆ ಸಾರ್ವಜನಿಕ ವಲಯದಲ್ಲಿ ಭಾರೀ ಟೀಕೆ ವ್ಯಕ್ತವಾಗಿದೆ.
ನಟ ದರ್ಶನ್ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಪತ್ನಿ ವಿಜಯಲಕ್ಷ್ಮಿ ಅವರು ಸೋಷಿಯಲ್ ಮೀಡಿಯಾದ ಮೂಲಕ ತಮ್ಮ ಬೇಸರ ಹೊರ ಹಾಕಿದ್ದರು. ನಿನ್ನೆ ಇನ್ಸ್‌ಸ್ಟಾಗ್ರಾಮ್‌ನಲ್ಲಿ ಡಿಪಿ ಡಿಲೀಟ್ ಮಾಡಿ, ದರ್ಶನ್ ಹಾಗೂ ಅವರ ಫ್ಯಾನ್ಸ್ ಪೇಜ್‌ ಅನ್ನು ಅನ್‌ಫಾಲೋ ಮಾಡಿದ್ದರು. ಇಂದು ವಿಜಯಲಕ್ಷ್ಮಿ ಅವರ ಇನ್ಸ್‌ಸ್ಟಾಗ್ರಾಮ್‌ ಪೇಜ್‌ ಅನ್ನೇ ಡಿ ಆ್ಯಕ್ಟಿವ್ ಮಾಡೋ ಮೂಲಕ ದರ್ಶನ್ ಅರೆಸ್ಟ್ ಆದ ಬಳಿಕ ಸೋಷಿಯಲ್ ಮೀಡಿಯಾದಿಂದಲೇ ಅಂತರ ಕಾಯ್ದುಕೊಂಡಿದ್ದಾರೆ.

ಇದನ್ನೂ ಓದಿ: ನಟ ದರ್ಶನ್ ಅರೆಸ್ಟ್ ಬೆನ್ನಲ್ಲೇ ಕರ್ನಾಟಕ ಪೊಲೀಸರಿಗೆ ಮೋಹಕ ತಾರೆ ರಮ್ಯಾ ಸೆಲ್ಯೂಟ್! 

ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಸೋಷಿಯಲ್ ಮೀಡಿಯಾದಲ್ಲಿ ಡಿ ಆ್ಯಕ್ಟಿವ್ ಆದ ಬಳಿಕ ಪುತ್ರ ವಿನೀಶ್ ದರ್ಶನ್ ಅವರು ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ವಿನೀಶ್ ದರ್ಶನ್ ಅವರು ಇನ್ಸ್‌ಸ್ಟಾಗ್ರಾಮ್‌ನಲ್ಲಿ ಒಂದು ಸ್ಟೇಟಸ್ ಹಾಕಿದ್ದು, ತನ್ನ ತಂದೆ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡಿದವರಿಗೆ ಧನ್ಯವಾದ ತಿಳಿಸಿದ್ದಾರೆ.

ವಿನೀಶ್ ದರ್ಶನ್ ಹೇಳಿದ್ದೇನು?
ನನ್ನ ತಂದೆಯ ವಿರುದ್ಧ ಕೆಟ್ಟ ಕಮೆಂಟ್ ಮತ್ತು ಅವಾಚ್ಯ ಭಾಷೆಯನ್ನು ಬಳಸಿದ ಎಲ್ಲರಿಗೂ ಧನ್ಯವಾದಗಳು. ಕೆಟ್ಟ ಕಮೆಂಟ್ ಮಾಡಿದವರಿಗೆ ದರ್ಶನ್ ಅವರಿಗೆ 15 ವರ್ಷದ ಮಗನಿದ್ದಾನೆ. ಅವನಿಗೂ ಭಾವನೆಗಳು ಇರುತ್ತವೆ ಅನ್ನೋದನ್ನು ಪರಿಗಣಿಸಿಲ್ಲ. ಇಂತಹ ಕಠಿಣ ಸಂದರ್ಭದಲ್ಲಿ ನನ್ನ ತಾಯಿ, ತಂದೆ ಮತ್ತು ಮಗನಿಗೆ ನಿಮ್ಮ ಬೆಂಬಲದ ಅಗತ್ಯವಿದೆ. ಎಲ್ಲರೂ ಎಲ್ಲರನ್ನೂ ಬದಲಾಯಿಸಲು ಸಾಧ್ಯವಿಲ್ಲ ಎಂದು ವಿನೀಶ್ ಹೇಳಿದ್ದಾರೆ.

ಇದನ್ನೂ ಓದಿ: ಕೊಲೆ ಪ್ರಕರಣದಲ್ಲಿ ದರ್ಶನ್‌ಗೆ ಜೀವಾವಧಿ ಶಿಕ್ಷೆ ಆಗುತ್ತಾ? ಸೆಕ್ಷನ್ 302 ಬಗ್ಗೆ ರಮ್ಯಾ ಧ್ವನಿ ಎತ್ತಿದ್ದೇಕೆ? 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತಂದೆ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡಿದವರಿಗೆ ಥ್ಯಾಂಕ್ಸ್ ಎಂದ ದರ್ಶನ್ ಪುತ್ರ ವಿನೀಶ್‌; ಹೇಳಿದ್ದೇನು?

https://newsfirstlive.com/wp-content/uploads/2024/06/darshan-son2.jpg

Load More