newsfirstkannada.com

ಕಾಪಾಡಮ್ಮ ತಾಯಿ.. ಬೆಂಗಳೂರಿನ ಶಕ್ತಿ ದೇವತೆ ಮೊರೆ ಹೋದ ವಿಜಯಲಕ್ಷ್ಮಿ ದರ್ಶನ್; ಏನಿದರ ವಿಶೇಷ?

Share :

Published July 6, 2024 at 10:57pm

  ಬೆಂಗಳೂರಿನ ಪ್ರಸಿದ್ಧ ದೇವಸ್ಥಾನಕ್ಕೆ ಭೇಟಿ ಕೊಟ್ಟ ವಿಜಯಲಕ್ಷ್ಮಿ

  ದರ್ಶನ್ ಆರೋಪ ಮುಕ್ತರಾಗಲಿ ಎಂದು ವಿಜಯಲಕ್ಷ್ಮಿ ಪ್ರಾರ್ಥನೆ

  ಅರೆಸ್ಟ್ ಆಗೋ 2 ದಿನಕ್ಕೂ ಮುಂಚೆ ದರ್ಶನ್ ಕೂಡ ಇಲ್ಲಿಗೆ ಭೇಟಿ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ಅವರು ಜೈಲುಪಾಲಾಗಿದ್ದಾರೆ. ಈ ಪ್ರಕರಣದಲ್ಲಿ ಸದ್ಯಕ್ಕಂತೂ ದರ್ಶನ್‌ ಪಾರಾಗೋದು ಕಷ್ಟವಾಗಿದೆ. ಜೈಲಿನಲ್ಲಿರುವ ದರ್ಶನ್ ಅವರನ್ನು ಹೊರಗೆ ಕರೆದುಕೊಂಡು ಬರಲು ಪತ್ನಿ ವಿಜಯಲಕ್ಷ್ಮಿ ಅವರು ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ.

ಇದನ್ನೂ ಓದಿ: ದರ್ಶನ್​ಗೆ ಬೇಲ್​ ಸಿಗುತ್ತಾ? ಇಲ್ವಾ? ನಿವೃತ್ತ ಪೊಲೀಸ್​​​ ಅಧಿಕಾರಿಯಿಂದ ಸ್ಫೋಟಕ ವಿಷ್ಯ ಬಯಲು 

ಕಾನೂನು ಹೋರಾಟದ ಬಗ್ಗೆ ಚಿಂತಿಸಿರುವ ಮಧ್ಯೆ ವಿಜಯಲಕ್ಷ್ಮಿ ದರ್ಶನ್ ಅವರು ದಾಸನಿಗಾಗಿ ಶಕ್ತಿ ದೇವತೆಯ ಮೊರೆ ಹೋಗಿದ್ದಾರೆ ಎನ್ನಲಾಗಿದೆ. ಬೆಂಗಳೂರಿನ ಪ್ರಸಿದ್ಧ ಬಂಡೆ ಮಹಾಕಾಳಿ ಸನ್ನಿಧಿಗೆ ವಿಜಯಲಕ್ಷ್ಮಿ ದರ್ಶನ್ ಅವರು ಭೇಟಿ ಕೊಟ್ಟಿದ್ದಾರೆ. ನಿನ್ನೆ ಅಮಾವಾಸ್ಯೆ ಇತ್ತು. ಇಂದು ಬಂಡೆ ಮಹಾಕಾಳಿ ದೇವಸ್ಥಾನಕ್ಕೆ ತೆರಳಿರುವ ದರ್ಶನ್ ಪತ್ನಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

2 ದಿನ ಮುಂಚೆ ದರ್ಶನ್ ಕೂಡ ಭೇಟಿ!
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಅರೆಸ್ಟ್ ಆಗೋ 2 ದಿನಕ್ಕೂ ಮುಂಚೆ ದರ್ಶನ್ ಅವರು ಕೂಡ ಇದೇ ಬಂಡೆ ಮಹಾಕಾಳಿ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದರು. ಶಕ್ತಿ ದೇವತೆಯ ಮುಂದೆ ದೃಷ್ಟಿ ತೆಗೆಸಿ ತಡೆ ಒಡೆಸಿದ್ದರು ಅನ್ನೋ ಮಾಹಿತಿ ಲಭ್ಯವಾಗಿದೆ. ದೃಷ್ಟಿ ಪೂಜೆ ಮಾಡಿಸಿ ಶಕ್ತಿ ದೇವತೆ ಆರಾಧಿಸುವ ಪೂಜಾರಿಯಿಂದ ದರ್ಶನ್ ಅವರು ತಡೆ ಒಡೆಸಿದ್ದರು. ಆಗ ತಡೆ ಒಡೆದ ಪೂಜಾರಿ ಅವರು ಒಂದಷ್ಟು ದಿನ ಹೊರಗೆ ಎಲ್ಲಾದರು ಹೋಗಿ ಬರಲು ಸಲಹೆ‌ ನೀಡಿದ್ದರು.

ಇದನ್ನೂ ಓದಿ: ಕೊಲೆ ಕೇಸ್‌ಗೆ ಬಿಗ್‌ ಟ್ವಿಸ್ಟ್; ಬಿಜೆಪಿ MLA ಕಾರು ಚಾಲಕನಿಗಾಗಿ ಹುಡುಕಾಟ.. ದರ್ಶನ್ ಮನೆ ಕೆಲಸದವರಿಗೂ ಕಂಟಕ! 

ದರ್ಶನ್ ಅವರು ಮನಸ್ಸಲ್ಲಿ ತಳಮಳ, ಗೊಂದಲ ಇದೆ ಎಂದು ಮನೆಯಲ್ಲಿ ದೃಷ್ಟಿ ಪೂಜೆ ಸಹ ಮಾಡಿಸಿದ್ದರಂತೆ. ಇದೀಗ ದರ್ಶನ್ ಅವರು ಆರೋಪ ಮುಕ್ತರಾಗಲಿ ಎಂದು ಪತ್ನಿ ವಿಜಯಲಕ್ಷ್ಮಿ ಅವರು ಇಂದು ಅದೇ ಶಕ್ತಿ ದೇವತೆ ಮೊರೆ ಹೋಗಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರೋ ಪತಿ ಆರೋಪ ಮುಕ್ತರಾಗಲಿ ಎಂದು ದೇವಿಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾಪಾಡಮ್ಮ ತಾಯಿ.. ಬೆಂಗಳೂರಿನ ಶಕ್ತಿ ದೇವತೆ ಮೊರೆ ಹೋದ ವಿಜಯಲಕ್ಷ್ಮಿ ದರ್ಶನ್; ಏನಿದರ ವಿಶೇಷ?

https://newsfirstlive.com/wp-content/uploads/2024/07/darshan1.jpg

Load More