newsfirstkannada.com

‘ದರ್ಶನ್ ತಪ್ಪು ಮಾಡಿದ್ರೆ ಶಿಕ್ಷೆಯಾಗಲಿ’- ರೇಣುಕಾಸ್ವಾಮಿ ತಂದೆ, ತಾಯಿಯ ಬಗ್ಗೆ ನಟ ಧನಂಜಯ್ ಏನಂದ್ರು?

Share :

Published July 10, 2024 at 10:15pm

Update July 10, 2024 at 10:16pm

  ಅಲ್ಲಿ ಒಂದು ದುರಂತ ಆಗಿದೆ ಒಂದು ಜೀವನೂ ಹೋಗಿದೆ

  ಕೆಲವೊಂದು ಹೋರಾಟಗಳನ್ನ ಒಂಟಿಯಾಗಿ ಫೈಟ್ ಮಾಡಬೇಕು

  ಒಬ್ಬ ಬ್ರದರ್ ಆಗಿ ನಾನು ದರ್ಶನ್ ಬಗ್ಗೆ ಈ ಮಾತು ಹೇಳುತ್ತಿದ್ದೇನೆ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್ ನ್ಯಾಯಾಂಗ ಬಂಧನದಲ್ಲಿದ್ದಾರೆ. ದರ್ಶನ್ ಗ್ಯಾಂಗ್ ವಿರುದ್ಧ ಆರೋಪಗಳ ಬಗ್ಗೆ ಪೊಲೀಸರ ತನಿಖೆ ನಡೆಯುತ್ತಿದೆ. ಈ ಪ್ರಕರಣದ ಬಗ್ಗೆ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಈ ಮಧ್ಯೆ ನಟ ಡಾಲಿ ಧನಂಜಯ್ ಅವರು ಮೊದಲ ಬಾರಿಗೆ ದರ್ಶನ್ ಅವರ ಬಂಧನಕ್ಕೆ ಕುರಿತಂತೆ ಪ್ರತಿಕ್ರಿಯೆ ನೀಡಿದ್ದಾರೆ.

ಈ ಹಿಂದೆ ರೇಣುಕಾಸ್ವಾಮಿ ಕೊಲೆ ಕೇಸ್‌ ಬಗ್ಗೆ ಮಾತನಾಡಲು ಧನಂಜಯ್ ಅವರು ನಿರಾಕರಿಸಿದ್ದರು. ಇದೀಗ ಈ ಬಗ್ಗೆ ಮಾತನಾಡಿದ ಅವರು, ನಮ್ಮ ಪರಿಸ್ಥಿತಿನೂ ಅರ್ಥ ಮಾಡ್ಕೋಬೇಕು. ಆರೋಪಿಗಳು ನಮ್ಮ ಮನೆಯವರೇ ಆಗಿರುವಾಗ ಏನ್ ಮಾಡೋದು ಹೇಳಿ. ಅಲ್ಲಿ ಒಂದು ದುರಂತ ಆಗಿದೆ. ಒಂದು ತಪ್ಪಾಗಿದೆ. ಒಂದು ಜೀವನೂ ಹೋಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ: ಕೊನೆಗೂ ಬದಲಾದ ದಾಸ.. ಜೈಲಿನಲ್ಲಿ ನಗು, ನಗುತ್ತಾ ಕಾಲ ಕಳೆಯುತ್ತಿರುವ ದರ್ಶನ್‌; ಏನಾಯ್ತು ಗೊತ್ತಾ? 

ಕೊಲೆಯಾದ ರೇಣುಕಾಸ್ವಾಮಿ ತಂದೆ, ತಾಯಿ ಮುಖ ನೋಡಿದಾಗ ಅಥವಾ ಪತ್ನಿ, ಮಗುವಿನ ಭವಿಷ್ಯ ನೋಡಿದಾಗ ಖಂಡಿತ ಎಲ್ಲರಿಗೂ ಬೇಜಾರು ಆಗುತ್ತೆ. ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ. ಆ ಜೀವಕ್ಕೆ ಏನು ನ್ಯಾಯ ಸಿಗಬೇಕೋ ಅದು ಸಿಕ್ಕೇ ಸಿಗುತ್ತೆ.

ಆರೋಪಿಗಳು ನಮ್ಮ ಮನೆಯವರೇ ಆದಾಗ ನಮಗೆ ಏನು ಅನ್ನಿಸುತ್ತೆ ಅನ್ನೋದು ಇಲ್ಲಿ ಮುಖ್ಯವಾಗುತ್ತೆ. ಆರೋಪದಲ್ಲಿ ದರ್ಶನ್ ಅವರ ಹೆಸರು ಕೇಳಿ ಬಂದಾಗ ಎರಡು ದಿನ ಬೇಜಾರಾಗಿದ್ದೆ. ದರ್ಶನ್ ಅವರನ್ನು ನಾವು ಪ್ರೀತಿ, ಅಭಿಮಾನಿದಿಂದ ಕಂಡವರು. ಒಂದು ಜೀವ ಹೋದಾಗ ಕಾನೂನಾತ್ಮಕವಾಗಿ ಏನೇನು ಆಗಬೇಕು ಅದು ಆಗುತ್ತೆ. ಯಾರನ್ನೂ ಸಮರ್ಥಿಸಿಕೊಳ್ಳಲು ಆಗಲ್ಲ ಎಂದು ಧನಂಜಯ್ ಹೇಳಿದ್ದಾರೆ.

ಇದನ್ನೂ ಓದಿ: VIDEO: ಕೊಲೆ ಕೇಸಲ್ಲಿ ಜೈಲು ಸೇರಿದ ನಟ ದರ್ಶನ್​​ ಬಗ್ಗೆ ಪ್ರಕಾಶ್​ ರಾಜ್​ ಏನಂದ್ರು? 

ಕೊಲೆಯಾದಾಗ ನಾವು ಯಾರು ನೋಡಿಲ್ಲ. ಬರೀ ಕೇಳಿದ್ದೇವೆ. ಅಲ್ಲಿ ಏನು ಆಗಿದೆಯೋ ಅದೆಲ್ಲಾ ಪೊಲೀಸರಿಗೆ ಗೊತ್ತಿರುತ್ತೆ. ಕೋಪದಲ್ಲಿ ಏನು ನಡೆದಿದೆಯೋ ಗೊತ್ತಿಲ್ಲ. ನಾವು ಈಗ ಯಾರು ಹೇಳೋದಕ್ಕೆ ಆಗಲ್ಲ.‌ ಜಡ್ಜ್ ಮಾಡಕ್ಕೆ ಆಗಲ್ಲ. ಕೆಲವೊಂದು ಹೋರಾಟಗಳನ್ನ ಒಂಟಿಯಾಗಿ ಫೈಟ್ ಮಾಡಬೇಕು. ಪಶ್ಚಾತ್ತಾಪಕ್ಕೆ ದಾರಿ ಇದ್ದೇ ಇದೆ. ಆಮೇಲೆ ಪ್ರೇಕ್ಷಕರನ್ನ ರಂಜಿಸಲಿ. ಒಬ್ಬ ಬ್ರದರ್ ಆಗಿ ನಾನು ಹೇಳುತ್ತಿದ್ದೇನೆ. ದರ್ಶನ್ ಅವ್ರೇ ತಪ್ಪು ಮಾಡಿದ್ರೂ ಶಿಕ್ಷೆಯಾಗಲಿ ಎಂದು ಧನಂಜಯ್ ಅವರು ಬೇಸರದಲ್ಲೇ ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ದರ್ಶನ್ ತಪ್ಪು ಮಾಡಿದ್ರೆ ಶಿಕ್ಷೆಯಾಗಲಿ’- ರೇಣುಕಾಸ್ವಾಮಿ ತಂದೆ, ತಾಯಿಯ ಬಗ್ಗೆ ನಟ ಧನಂಜಯ್ ಏನಂದ್ರು?

https://newsfirstlive.com/wp-content/uploads/2024/07/Dhanjay-On-Darshan-Case.jpg

Load More