newsfirstkannada.com

‘ನಟ ದರ್ಶನ್​ಗೆ ಈ ಪರಿಸ್ಥಿತಿ ಬರಬಾರದಿತ್ತು..’ ಇಂದ್ರಜಿತ್ ಲಂಕೇಶ್

Share :

Published June 18, 2024 at 2:45pm

    ‘2021ರಲ್ಲಿ ಏಕಾಂಗಿಯಾಗಿ ದರ್ಶನ್ ಬಗ್ಗೆ ಧ್ವನಿ ಎತ್ತಿದ್ದೆ’

    ‘ನಾನು ದರ್ಶನ್ ಜೊತೆ ಎರಡು ಸಿನಿಮಾ ಮಾಡಿದ್ದೇನೆ’

    ‘ಪ್ರತಿಯೊಬ್ಬರೂ ಜೀವಿಸೋದಕ್ಕೆ ಕೆಲಸ ಮಾಡಲೇಬೇಕು’

ನಟ ದರ್ಶನ್ ಬಂಧನ ಪ್ರಕರಣಕ್ಕೆ ಸಂಬಂಧಿಸಿ ಮಂಡ್ಯದಲ್ಲಿ ನಿರ್ದೇಶಕ ಇಂದ್ರಜಿತ್ ಲಂಕೇಶ್ ಪ್ರತಿಕ್ರಿಯಿಸಿ.. 2021ರಲ್ಲಿ ಏಕಾಂಗಿಯಾಗಿ ನಾನು ದರ್ಶನ್ ಬಗ್ಗೆ ಧ್ವನಿ ಎತ್ತಿದ್ದೆ. ಅಂದೇ ಸುಧಾರಣೆ ಆಗಿದ್ರೆ ಈ ರೀತಿ ಅನಾಹುತ ಆಗುತ್ತಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ನಾನು ದರ್ಶನ್ ಜೊತೆ ಎರಡು ಸಿನಿಮಾ ಮಾಡಿದ್ದೇನೆ. ಲಂಕೇಶ್ ಪತ್ರಿಕೆ ಸಿನಿಮಾ ಅಡ್ವಾನ್ಸ್ ಹಣದಲ್ಲಿ ಹೊಸ ಸ್ಕೋಡಾ ಕಾರು ಖರೀದಿ ಮಾಡಿದ್ದರು. ಈ ಪರಿಸ್ಥಿತಿ ದರ್ಶನ್​ಗೆ ಆಗಬಾರದಿತ್ತು. ಈ ಘಟನೆ ನಡೆಯೋದಕ್ಕೆ ಸಾಮಾಜಿಕ ಜಾಲತಾಣವೇ ಕಾರಣ ಎಂದರು.

ಇದನ್ನೂ ಓದಿ:ಪೂರ್ತಿ ಊಟ ಮಾಡಲ್ಲ.. ಸೆಲ್​ನಲ್ಲಿ ಏಕಾಂಗಿ.. 1 ಸೆಲ್​.. 1 ಚಾಪೆ.. 1 ಚೇರ್.. ದರ್ಶನ್ ಸ್ಟೇಷನ್ ಡೈರಿ..!

ಚಿತ್ರರಂಗದಿಂದ ದರ್ಶನ್ ಬ್ಯಾನ್ ಮಾಡಬೇಕೆಂಬ ವಿಚಾರಕ್ಕೆ ಪ್ರತಿಕ್ರಿಯಿಸಿ.. ಬ್ಯಾನ್ ಅನ್ನೋ ಶಬ್ದವನ್ನ ಯಾರೂ ಉಪಯೋಗಿಸಿಕೊಳ್ಳಬಾರದು. ಯಾವುದೇ ಸಂದರ್ಭದಲ್ಲೂ ಯಾರನ್ನೂ ಬ್ಯಾನ್ ಮಾಡಬಾರದು. ಈ ಹಿಂದೆ ಮಹಿಳೆಯರನ್ನ ಬ್ಯಾನ್ ಮಾಡಿದ್ರು, ಆದ್ರೆ ಬ್ಯಾನ್ ಮಾಡಬಾರದಿತ್ತು. ಕೋರ್ಟ್ ಕೂಡ ಕೆಲಸ ಇಲ್ಲದೇ ಯಾರೂ ಇರಬಾರದು ಅಂತ ಹೇಳುತ್ತದೆ. ಪ್ರತಿಯೊಬ್ಬರೂ ಜೀವಿಸೋದಕ್ಕೆ ಕೆಲಸ ಮಾಡಲೇಬೇಕು ಎಂದು ಇಂದ್ರಜಿತ್ ಲಂಕೇಶ್ ಹೇಳಿದರು.

ಇದನ್ನೂ ಓದಿ:ಕಮಿಷನರ್‌ ಕಂಡ್ರೆ ಸಪ್ಪೆ ಮುಖ.. ಸ್ಟೇಷನ್‌ನಲ್ಲಿ ದರ್ಶನ್‌ ನಡೆ ನುಡಿ ಹೇಗಿದೆ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ನಟ ದರ್ಶನ್​ಗೆ ಈ ಪರಿಸ್ಥಿತಿ ಬರಬಾರದಿತ್ತು..’ ಇಂದ್ರಜಿತ್ ಲಂಕೇಶ್

https://newsfirstlive.com/wp-content/uploads/2024/06/DARSHAN-35.jpg

Load More