newsfirstkannada.com

ನೋಟಿಸ್​ ನೀಡಿ ಉತ್ತರ ನೀಡುವ ಮುಂಚೆಯೇ ದಾಳಿ; ಅರಣ್ಯಾಧಿಕಾರಿಗಳ ನಡೆಗೆ ಹೈಕೋರ್ಟ್​ ಮೊರೆ ಹೋದ ನಟ ಜಗ್ಗೇಶ್​

Share :

26-10-2023

    ಹುಲಿ ಉಗುರು ಪೆಂಡೆಂಟ್ ಧರಿಸಿದ ಆರೋಪದಲ್ಲಿ ನಟ ಜಗ್ಗೇಶ್​

    ಅರಣ್ಯಾಧಿಕಾರಿಗಳ ಕ್ರಮ ಪ್ರಶ್ನಿಸಿದ ನವರಸ ನಾಯಕ ಜಗ್ಗೇಶ್​

    ನೋಟೀಸ್ ರದ್ದು ಪಡಿಸಲು‌ ನಟ ಜಗ್ಗೇಶ್ ಹೈಕೋರ್ಟ್ ಗೆ ಮನವಿ

ಸ್ಯಾಂಡಲ್​ವುಡ್​ನಲ್ಲೂ ಹುಲಿ ಉಗುರಿನ ಸೌಂಡ್​​ ಜೋರಾಗಿ ಕೇಳಿಬರುತ್ತಿದೆ. ಹೀಗಿರುವಾಗ ನಟ ಜಗ್ಗೇಶ್​ ಧರಿಸಿದ್ದ ಹುಲಿ ಉಗುರಿನ ಪೆಂಡೆಂಟ್​ ಅನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಇದೀಗ ಇದೇ ವಿಚಾರವಾಗಿ ನವರಸ ನಾಯಕ ಅರಣ್ಯಾಧಿಕಾರಿಗಳ ಕ್ರಮ ಪ್ರಶ್ನಿಸಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.

ಹುಲಿ ಉಗುರು ಪೆಂಡೆಂಟ್ ಧರಿಸಿದ ಆರೋಪಕ್ಕೆ ಸಂಬಂಧಿಸಿ ಅರಣ್ಯಾಧಿಕಾರಿಗಳಿಂದ ನಟ ಜಗ್ಗೇಶ್ ಮನೆ ಶೋಧನೆ ಮಾಡಿದ್ದಾರೆ. ಆದರೆ ಈ ವಿಚಾರವಾಗಿ ಅರಣ್ಯಾಧಿಕಾರಿಗಳ ನಡೆ ಕಾನೂನು ಬಾಹಿರ. ನೋಟೀಸ್ ನೀಡಿ ಉತ್ತರ ನೀಡುವ ಮುಂಚೆಯೇ ದಾಳಿ ಮಾಡಿದ್ದಾರೆಂದು ನವರಸ ನಾಯಕ ಕೆಂಡಾಮಂಡಲರಾಗಿದ್ದಾರೆ.

ಅರಣ್ಯಾಧಿಕಾರಿಗಳು ಕಾನೂನು ಪ್ರಕಾರ ನೋಟೀಸ್ ಗೆ ಉತ್ತರ ನೀಡಿದ ಬಳಿಕ ಪರಿಶೀಲಿಸಬೇಕಿತ್ತು. ಹೀಗಾಗಿ ನೋಟೀಸ್ ರದ್ದು ಪಡಿಸಲು‌ ನಟ ಜಗ್ಗೇಶ್ ಹೈಕೋರ್ಟ್ ಗೆ ಮನವಿ ಮಾಡಿದ್ದಾರೆ.

ಅರಣ್ಯಾಧಿಕಾರಿಗಳು ಪರಿಶೀಲನೆ ನೆಪದಲ್ಲಿ ಮನೆ ವಸ್ತುಗಳ ಚೆಲ್ಲಾಪಿಲ್ಲಿ ಮಾಡಿದ್ದಾರೆ. ಸಂದರ್ಶನದಲ್ಲಿ ಹೇಳಿದ ಮಾತನ್ನ ಆಧಾರಿಸಿಕೊಂಡಿದ್ದಾರೆ. ಅದನ್ನ ಬಳಸಿ ತೇಜೋವಧೆ ಮಾಡಲಾಗುತ್ತಿದೆ. ಹೀಗಾಗಿ ನನಗೆ ಕೊಟ್ಟ ನೊಟೀಸ್ ರದ್ದು ಮಾಡಲು ಮನವಿ ಮಾಡುವಂತೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನೋಟಿಸ್​ ನೀಡಿ ಉತ್ತರ ನೀಡುವ ಮುಂಚೆಯೇ ದಾಳಿ; ಅರಣ್ಯಾಧಿಕಾರಿಗಳ ನಡೆಗೆ ಹೈಕೋರ್ಟ್​ ಮೊರೆ ಹೋದ ನಟ ಜಗ್ಗೇಶ್​

https://newsfirstlive.com/wp-content/uploads/2023/10/jagesh-4.jpg

Load More