newsfirstkannada.com

×

ಕಿಚ್ಚ ಸುದೀಪ್ BIGG BOSS ನಿರೂಪಣೆ​ ಮಾಡಲ್ವಾ? ಹೊಸ ಅಧ್ಯಾಯದ ಗುಟ್ಟೇನು?

Share :

Published September 17, 2024 at 4:14pm

    ಬಿಗ್‌ಬಾಸ್ ನಿರೂಪಕರು ಚೇಂಜ್​ ಆಗ್ತಾರೆ ಅನ್ನೋ ಸುದ್ದಿಗೆ ಫ್ಯಾನ್ಸ್ ಶಾಕ್​!

    ಸೆಪ್ಟೆಂಬರ್ 29ರಿಂದ ಶುರುವಾಗಲಿದೆ ದೊಡ್ಡ ರಿಯಾಲಿಟಿ ಶೋ ಬಿಗ್​ಬಾಸ್​

    ವೀಕ್ಷಕರಲ್ಲಿ ಸಾಕಷ್ಟು ಕುತೂಹಲ ಮೂಡಿಸುತ್ತಿದೆ ಬಿಗ್​ಬಾಸ್​ ಸೀಸನ್​ 11

ಯಾರು ಏನೇ ಹೇಳಿದರೂ ಬಿಗ್‌ಬಾಸ್‌ ಸೀಸನ್‌ 11ರ ಬಗ್ಗೆ ಜನರಿಗೆ ದುಪ್ಪಟ್ಟಾದ ನಿರೀಕ್ಷೆಗಳಿವೆ. ಯಾವ ಮಟ್ಟಿಗೆ ಅಂದ್ರೆ, ಜನರೇ ವಿಡಿಯೋ ಮಾಡಿ ಅಪ್‌ಲೋಡ್ ಮಾಡ್ತಿದ್ದಾರೆ. ಆ ಸ್ಪರ್ಧಿ ಈ ಸ್ಪರ್ಧಿ ಅಂತಾ. ಇಷ್ಟೊಂದು ಎಕ್ಸ್‌ಪೆಕ್ಟೇಷನ್ ಕ್ರಿಯೇಟ್ ಆಗೋಕೇ ಕಾರಣ ಬಿಗ್‌ಬಾಸ್ ಸೀಸನ್‌ 10ರ ಬಿಗ್ ಸಕ್ಸಸ್‌.

ಇದನ್ನೂ ಓದಿ: ಬಿಗ್​ಬಾಸ್​ ಕನ್ನಡ ಸೀಸನ್​​ 11 ಆ್ಯಂಕರ್​ ಯಾರು? ಸುದೀಪ್​ ಅಲ್ವಾ? ಟ್ವಿಸ್ಟ್​ ಕೊಟ್ಟ ಕಲರ್ಸ್!

ಕನ್ನಡ ಬಿಗ್‌ಬಾಸ್ ಮಟ್ಟಿಗೆ 10ನೇ ಸೀಸನ್‌ ವೆರಿ ವೆರಿ ಸ್ಪೆಷಲ್. ಜನರಿಗೆ ಭರಪೂರ ಮನರಂಜನೆ ಸಿಕ್ಕಿದ್ದು ನಿಜ. ಕಾಂಟ್ರೋವರ್ಸಿ ಆಗಿದ್ದು ನಿಜ. ರೇಟಿಂಗ್‌ ವಿಚಾರದಲ್ಲಿ ಹಿಸ್ಟರಿ ಕ್ರಿಯೇಟ್ ಆಗಿದ್ದು ನಿಜ. ಇದಕ್ಕೆ ಕಿಚ್ಚ ಸುದೀಪ್‌ ಮೈನ್ ರೀಸನ್‌. ವಿಶೇಷ ಅಂದ್ರೆ ಕಿಚ್ಚ ಸುದೀಪ್‌, ಲಾಸ್ಟ್ ಸೀಸನ್‌ನ ಸಖತ್ ಎಂಜಾಯ್ ಮಾಡಿದ್ದರು.

ಈ ಎಲ್ಲಾ ಕಾರಣಗಳಿಗಾಗಿ ಸೀಸನ್‌ 11 ಬಗ್ಗೆ ಜನರಿಗೆ ನಿರೀಕ್ಷೆಯಿದೆ. ಆದ್ರೆ, ಆ್ಯಂಕರ್ ಚೇಂಜ್ ಆಗ್ತಾರೆ ಅಂದಾಗ ಸ್ವತಃ ಬಿಗ್‌ಬಾಸ್ ಫ್ಯಾನ್ಸ್ ಗಾಬರಿಯಾಗಿದ್ದರು. ಕಿಚ್ಚ ಸುದೀಪ್ ಕೂಡ ಈ ಬಗ್ಗೆ ಕ್ಲಾರಿಟಿ ಇಲ್ಲ ಅಂದಾಗ, ಜನರಿಗೆ ಮತ್ತಷ್ಟು ಶಾಕ್ ಆಗಿದ್ದು ನಿಜಕ್ಕೂ ಸತ್ಯ. ಕಲರ್ಸ್‌ ಕನ್ನಡ ಟೀಮ್‌ ಬೇರೆ ನಟನನ್ನ ಹುಡುಕಾಟ ನಡೆಸಿದ್ದು ನಿಜಾನಾ? ಆರಂಭದಲ್ಲಿ ಕಿಚ್ಚ ನಾನ್ ಬರಲ್ಲ ಅಂದಿದ್ದು ನಿಜನಾ? ಆ ನಂತರ ಸಂಧಾನ ಮಾತುಕತೆ ನಡೆಯಿತಾ? ಹೀಗೊಂದು ಪ್ರಶ್ನೆ ಇಂಡಸ್ಟ್ರಿಯಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಮೂಲಗಳ ಪ್ರಕಾರ, ಆರಂಭದಲ್ಲಿ ಕಿಚ್ಚ ಸುದೀಪ್ ನಾನ್ ಮಾಡಲ್ಲ ಎಂದಿದ್ದು ನಿಜನೇ. ಆ ನಂತರ ಬಿಗ್‌ಬಾಸ್ ಟೀಮ್‌ ಬೇರೆ ನಟರನ್ನ ತಲಾಷ್‌ ಮಾಡಿದ್ದು ನಿಜ. ಬೇರೆ ಆ್ಯಂಕರ್ ಆದ್ರೆ ಪರಿಸ್ಥಿತಿ ಹೇಗಿರುತ್ತೆ ಅನ್ನೋದರ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆ ಆಗಿದ್ದು ನಿಜ ಅಂತಿವೆ ಮೂಲಗಳು. ಹಾಗಾದ್ರೆ, ಕೊನೆಗೆ ಕಿಚ್ಚ ಸುದೀಪ್ ಅವರೇ ಫೈನಲ್ ಆಗಿದ್ಹೇಗೇ ಅನ್ನೋದೇ ಇಂಟರೆಸ್ಟಿಂಗ್.

ಇದನ್ನೂ ಓದಿ: ಬಿಗ್‌ಬಾಸ್ ಸೀಸನ್‌ 11ಕ್ಕೆ ಕಿಚ್ಚ ಸುದೀಪ್‌ ಆ್ಯಂಕರಿಂಗ್ ಮಾಡ್ತಾರೋ, ಇಲ್ವೋ? ಇಲ್ಲಿದೆ ಪಕ್ಕಾ ಮಾಹಿತಿ!

ಯಾವಾಗ ಕಿಚ್ಚ ಸುದೀಪ್‌ ನೋ ಎಂದಾಗ, ಮತ್ತೆ ಚಾನಲ್‌ನ ಕಡೆಯವರು ಇಂಡಸ್ಟ್ರಿಯಲ್ಲಿರುವ ಫ್ರೆಂಡ್‌ ಕಿಚ್ಚ ಸುದೀಪ್ ಜೊತೆ ಮಾತುಕತೆ ನಡೆಸಿದ್ದಾರೆ. ಹಲವಾರು ಸುತ್ತಿನ ಮಾತುಕತೆಯ ನಂತರ ಕಿಚ್ಚ ಸುದೀಪ್‌ ಓಕೆ ಎಂದರು. ಚಾನೆಲ್‌ನವರು ಕೂಡ ಖುಷ್ ಆದರು ಅನ್ನೋ ಮಾಹಿತಿ ಸಿಕ್ಕಿದೆ. ಒಟ್ಟಾರೆಯಾಗಿ, ಕೊನೆಗೂ ಬಿಗ್‌ಬಾಸ್ ಟೀಮ್ ಅಂದುಕೊಂಡಂತೆ, ಜನರು ನಿರೀಕ್ಷೆ ಮಾಡಿದಂತೆಯೇ ಕಿಚ್ಚ ಸುದೀಪ್‌ ಆ್ಯಂಕರ್ ಆಗಿದ್ದಾರೆ. ಈಗ ಇರೋದು ಒಂದೇ ಪ್ರಶ್ನೆ, ಬಿಗ್‌ಬಾಸ್ ಸೀಸನ್‌ 11ರ ಸ್ಪರ್ಧಿಗಳು ಯಾಱರು ಅನ್ನೋದು. ಸದ್ಯ ಇದೇ ತಿಂಗಳು 29ಕ್ಕೆ ದೊಡ್ಡ ರಿಯಾಲಿಟಿ ಶೋ ಶುರುವಾಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಿಚ್ಚ ಸುದೀಪ್ BIGG BOSS ನಿರೂಪಣೆ​ ಮಾಡಲ್ವಾ? ಹೊಸ ಅಧ್ಯಾಯದ ಗುಟ್ಟೇನು?

https://newsfirstlive.com/wp-content/uploads/2024/09/kiccha4.jpg

Load More