newsfirstkannada.com

ಚಂದ್ರಯಾನದ ಬಗ್ಗೆ ಹೆಮ್ಮೆಯಿದೆ ಆದರೆ.. ಪ್ರಧಾನಿ ಮೋದಿ ಬಗ್ಗೆ ಬೇಸರದಲ್ಲಿ ನಟ ಕಿಶೋರ್‌ ಹೇಳಿದ್ದೇನು?

Share :

24-08-2023

    ಚಂದ್ರಯಾನ 3 ಸಕ್ಸಸ್ ಬಗ್ಗೆ ನಟ ಕಿಶೋರ್‌ ಮಾಡಿದ ಪೋಸ್ಟ್ ವೈರಲ್

    ಸಂಭ್ರಮಿಸಿ ಎನ್ನುತ್ತಿರುವಂತೆಯೇ ನನ್ನ ಕಣ್ಣ ಮುಂದೆ ಆ ಘಟನೆ ಇದೆ

    ‘ಪ್ರಧಾನಿಯಂತೆ ನಾನೂ ಕೂಡ ಸಂವೇದನಾ ಹೀನನೂ ಆಗಬಾರದಿತ್ತೆ’

ಬಹುಭಾಷಾ ನಟ ಕಿಶೋರ್‌ ತಮ್ಮ ಅದ್ಭುತ ನಟನೆ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ. ನಟನೆ ಜೊತೆಗೆ ಕಿಶೋರ್‌ ಅವರು ತಮಗೆ ಅನಿಸಿದ್ದನ್ನು ಆಗಾಗ ಸೋಷಿಯಲ್‌ ಮೀಡಿಯಾಗಳಲ್ಲಿ ನೇರವಾಗಿ ಚರ್ಚಿಸುತ್ತಾರೆ. ಈ ಬಾರಿ ಚಂದ್ರಯಾನ 3 ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಪೋಸ್ಟ್ ಮಾಡಿದ್ದಾರೆ. ಇದರ ಜೊತೆಗೆ ಇತ್ತೀಚೆಗೆ ಮಣಿಪುರದಲ್ಲಿ ನಡೆದ ಹೆಣ್ಣುಮಗಳ ಬೆತ್ತಲೆ ಮೆರವಣಿಗೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ದೇಶದ ರಾಜಕಾರಣಿಗಳನ್ನು ಕುತಂತ್ರಿಗಳೆಂದು ಗೇಲಿ ಮಾಡಿದ್ದಲ್ಲದೆ, ಸಂಬಳ ಇಲ್ಲದೆ ವಿಜ್ಞಾನಿಗಳನ್ನು ಕೆಲಸ ಮಾಡಿಸಿಕೊಂಡ ಬಗ್ಗೆಯೂ ಅಸಮಾಧಾನ ಹೊರಹಾಕಿದ್ದಾರೆ. ಈ ಕುರಿತು ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಮಣಿಪುರದ ಹಿಂಸಾಚಾರ ಹಾಗೂ ಚಂದ್ರಯಾನ 3 ಬಗ್ಗೆ ಫೋಟೋ ಹಾಕಿ ಅದಕ್ಕೆ ಈ ರೀತಿಯ ಕ್ಯಾಪ್ಶನ್​ ಬರೆದುಕೊಂಡಿದ್ದಾರೆ.

ನಟ ಕಿಶೋರ್‌ ಅಸಮಾಧಾನ ಬರಹ  

ಚಂದ್ರನ ದಕ್ಷಿಣ ಧ್ರುವದ ಮೇಲೆ ಪ್ರಪಂಚದಲ್ಲೇ ಮೊಟ್ಟ ಮೊದಲ ಬಾರಿಗೆ ಭಾರತದ ಉಪಗ್ರಹ ಅಡಿಯಿರಿಸಿದ್ದು ಹೆಮ್ಮೆಯಿದೆ. ಎದೆ ಬೀಗಿದೆ ಆದರೆ.. ಸಂಭ್ರಮಿಸಲೇ ಎನ್ನುತ್ತಿರುವಂತೆಯೇ ನನ್ನ ಕಣ್ಣ ಮುಂದೆ ನನ್ನ ದೇಶದ ಕುತಂತ್ರಿ ರಾಜಕಾರಣಿಗಳು ನನ್ನ ಮನೆಯ ಹೆಣ್ಣು ಮಕ್ಕಳನ್ನು ಬೀದಿಯಲ್ಲಿ ಬೆತ್ತಲೆ ಮೆರವಣಿಗೆ ಮಾಡಿ ಅತ್ಯಾಚಾರ ಮಾಡುತ್ತಿರುವ ಚಿತ್ರ ಬಂದು ನಿಲ್ಲುತ್ತದೆ. ನನ್ನ ರೈತ ಸಹೋದರರ ಮೇಲೆ ಜೀಪು ಹರಿಸಿ ಕೊಲ್ಲುತ್ತಿರುವ ಚಿತ್ರ. ಹಿಂದೂ ಮುಸ್ಲಿಂ ಮೂಲಭೂತವಾದಿಗಳಿಗೆ ಕುಮ್ಮಕ್ಕು ಕೊಟ್ಟು ದೇಶವನ್ನು ಒಡೆಯುತ್ತಿರುವ ಚಿತ್ರ. ನನ್ನ ಮುಸ್ಲಿಂ ಕ್ರಿಶ್ಚಿಯನ್ ಸಹೋದರ ಸಹೋದರಿಯರ ಮನೆ, ಹೊಟ್ಟೆ ಪಾಡಿನ ಅಂಗಡಿಗಳನ್ನು ಧರ್ಮಾಂಧ ಬುಲ್ಡೋಜರುಗಳು ಪುಡಿ ಪುಡಿ ಮಾಡುತ್ತಿರುವ ಚಿತ್ರ. ರಾಜಕೀಯ ದಾಳಗಳಾಗಿ ಸಾಯುತ್ತಲೇ ಇರುವ ಕಾಶ್ಮೀರ ಜನತೆಯ ಚಿತ್ರ ಇಂದಿಗೂ ದಲಿತರ, ಆದಿವಾಸಿಗಳ ಮೇಲೆ ಎಸಗುತ್ತಿರುವ ಹೇಸಿಗೆ ದೌರ್ಜನ್ಯದ ಚಿತ್ರ, ದೇಶದ ಯೋಧರನ್ನು ರಾಜಕಾರಣಿಗಳೇ ತಯಾರು ಮಾಡಿದ ಸಾವಿನ ಕೂಪಕ್ಕೆ ತಳ್ಳುವ ಚಿತ್ರ. ಹೀಗೇ ನೂರಾರು ಉಪಗ್ರಹಕ್ಕಿಂತ ಪರದೆಯ ಮೇಲೆ ಹೆಚ್ಚು ರಾರಾಜಿಸಿ ಮೆರೆದ ಪ್ರಧಾನಿಯಂತೆ ನಾನೂ ಕೂಡ ಸ್ವಾರ್ಥಿಯೂ, ಅಸೂಕ್ಷ್ಮಮತಿಯೂ, ಸಂವೇದನಾ ಹೀನನೂ ಆಗಬಾರದಿತ್ತೆ.. ಸಂಬಳವೂ ಇಲ್ಲದೆ ದುಡಿದ ನನ್ನ ದೇಶದ ವಿಜ್ಞಾನಿಗಳ ಬೆವರ ಫಲವನ್ನು ಸಂಭ್ರಮಿಸಲು??? ಎಂದು ಬರೆದುಕೊಂಡಿದ್ದಾರೆ.

ಇದನ್ನು ಓದಿ: WATCH: ಚಂದ್ರಯಾನ-3 ಸಕ್ಸಸ್ ಲೈವ್​ ನೋಡಿದ ನಟಿ ಸನ್ನಿ ಲಿಯೋನ್​ ಹೇಳಿದ್ದೇನು?

View this post on Instagram

A post shared by Kishore Kumar Huli (@actorkishore)

ಕಿಶೋರ್ ಅವರ ಈ ಪೊಸ್ಟ್​ ಅನ್ನು ನೋಡಿದ ನೆಟ್ಟಿಗರು ನಟನ ವಿರುದ್ಧ ಕಿಡಿಕಾರಿದ್ದಾರೆ. ಓರ್ವ ನೆಟ್ಟಿಗ ಎಲ್ಲದಕ್ಕೂ ರಾಜಕೀಯ ತರಬೇಡಿ, ಮತ್ತೋರ್ವ, ನೀವು ಸಿನಿಮಾ ಯಶಸ್ಸನ್ನು ಆಚರಿಸಿ ಪಾರ್ಟಿ ಮಾಡುತ್ತೀರಿ, ಆದರೆ ಭಾರತೀಯ ಜನರು ವೈಜ್ಞಾನಿಕ ಸಾಧನೆಯನ್ನು ಆಚರಿಸಲು ಸಾಧ್ಯವಿಲ್ಲವೇ ಎಂದು ಕಾಲೆಳೆಯುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚಂದ್ರಯಾನದ ಬಗ್ಗೆ ಹೆಮ್ಮೆಯಿದೆ ಆದರೆ.. ಪ್ರಧಾನಿ ಮೋದಿ ಬಗ್ಗೆ ಬೇಸರದಲ್ಲಿ ನಟ ಕಿಶೋರ್‌ ಹೇಳಿದ್ದೇನು?

https://newsfirstlive.com/wp-content/uploads/2023/08/Actor-Kishore.jpg

Load More