newsfirstkannada.com

ನಿಗೂಢವಾಗಿ ಸಾವನ್ನಪ್ಪಿದ ಖ್ಯಾತ ನಟ.. ದೇವಾಲಯದ ಬೀದಿಯಲ್ಲಿ ಸಿಕ್ತು ಮೃತದೇಹ

Share :

05-08-2023

    ಕಮಲ್​ ಹಾಸನ್​ ಜೊತೆಗೆ ಸ್ನೇಹಿತರಾಗಿ ನಟಿಸಿದ್ದ ನಟ

    ಅಪೂರ್ವ ಸಹೋದರ್​ಗಲ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು

    60 ವರ್ಷದ ನಟನ ಮೃತದೇಹ ದೇವಾಲಯದ ಬೀದಿಯಲ್ಲಿ ಪತ್ತೆ

ಖ್ಯಾತ ತಮಿಳು ನಟ ಮೋಹನ್​​ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಜುಲೈ 31ರಂದು ಅವರ ಮೃತದೇಹ ಮಧುರೈನ ತಿರುಪರ್ಕುಂದ್ರಂ ದೇವಾಲಯದ ಬಳಿ ಪತ್ತೆಯಾಗಿದೆ. ಸ್ಥಳೀಯರು ನಟನ ಮೃತದೇಹವನ್ನು ಕಂಡು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.

60 ವರ್ಷದ ಮೋಹನ್​ ಮೃತದೇಹವನ್ನು ಮಧುರೈನ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಪೋಸ್ಟ್ ಮಾರ್ಟಮ್​ ಮಾಡಲಾಗಿದೆ. ಬಳಿಕ ಅವರ ಮನೆಯವರಿಗೆ ಮೃತದೇಹವನ್ನು ರವಾನಿಸಲಾಗಿದೆ.

ಮಧುರೈನ ರಥಬೀದಿಯಲ್ಲಿದ್ದ ಮೋಹನ್

ಮೋಹನ್ ಸೇಲಂ ಜಿಲ್ಲೆಯ ಮೆಟ್ಟೂರುನವರಾಗಿದ್ದು,​ ಅನೇಕ ಸಿನಿಮಾಗಳಳ್ಲಿ ಪಾತ್ರಗಳನ್ನು ನಿರ್ವಹಿಸಿದ್ದರು. ಸುಮಾರು 80ರಿಂದ 90 ಸಿನಿಮಾಗಳಲ್ಲಿ ನಟಿಸಿದ್ದಾರೆ. ಮೋಹನ್​ ಸಾಯುವುದಕ್ಕೂ ಮೊದಲು ಮಧುರೈನ ರಥಬೀದಿಯಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದರು.

ತಮಿಳು ನಟ ಮೋಹನ್
ತಮಿಳು ನಟ ಮೋಹನ್

ಅಪೂರ್ವ ಸಹೋದರ್​ಗಲ್

1989ರಿಂದ ಮೋಹನ್​​ ಸಿನಿಮಾಗಳಲ್ಲಿ ನಟಿಸುತ್ತಾ ಬಂದಿದ್ದಾರೆ.ಅಪೂರ್ವ ಸಹೋದರ್​ಗಲ್​ ಅವರು ನಟಿಸಿರುವ ಮೊದಲ ಸಿನಿಮಾವಾಗಿದೆ. ಕಮಲ್​ ಹಾಸನ್​ನ ಮೂವರು ಸ್ನೇಹಿತರಲ್ಲಿ ಮೋಹನ್​ ಕೂಡ ಪಾತ್ರ ನಿರ್ವಹಿಸಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಿಗೂಢವಾಗಿ ಸಾವನ್ನಪ್ಪಿದ ಖ್ಯಾತ ನಟ.. ದೇವಾಲಯದ ಬೀದಿಯಲ್ಲಿ ಸಿಕ್ತು ಮೃತದೇಹ

https://newsfirstlive.com/wp-content/uploads/2023/08/Mohan.jpg

Load More