/newsfirstlive-kannada/media/post_attachments/wp-content/uploads/2024/07/Prakash-Raj_Darshan.jpg)
ಬೆಂಗಳೂರು: ಕೊಲೆ ಕೇಸ್​ವೊಂದರಲ್ಲಿ ನಟ ದರ್ಶನ್​​ ಅವರು ಜೈಲು ಸೇರಿದ್ದಾರೆ. ಜೈಲು ಸೇರಿದ ದರ್ಶನ್​ ಮತ್ತು ಗ್ಯಾಂಗ್​ ಬಗ್ಗೆ ಇಡೀ ಇಂಡಸ್ಟ್ರಿ ಮಾತಾಡುತ್ತಿದೆ. ಈ ಬಗ್ಗೆ ಬಹುಭಾಷಾ ನಟ ಪ್ರಕಾಶ್​ ರಾಜ್​​ ಅವರು ರಿಯಾಕ್ಟ್​ ಮಾಡಿದ್ದಾರೆ.
ಈ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ನಟ ಪ್ರಕಾಶ್​ ರಾಜ್​ ಅವರು, ದರ್ಶನ್​ ಬಗ್ಗೆ ಎಲ್ಲರು ಮಾತಾಡುತ್ತಿದ್ದಾರೆ. ನಾನು ಅದರ ಬಗ್ಗೆ ಮಾತಾಡಿದ್ರೆ ಏನು ಪ್ರಯೋಜನ ಇಲ್ಲ. ಕಳೆದ ಒಂದೂವರೆ ತಿಂಗಳಿನಿಂದ ಒಂದೇ ಘಟನೆ ಬಗ್ಗೆ ಎಲ್ಲರೂ ಮಾತಾಡಿದ್ದಾರೆ. ನಾನು ಬೇರೆ ವಿಚಾರದ ಬಗ್ಗೆ ಮಾತಾಡ್ತೀನಿ ಎಂದರು.
ನಾವು ನೀಟ್​​ ಪ್ರಶ್ನೆ ಪತ್ರಿಕೆ ಲೀಕ್ ಬಗ್ಗೆ ಮಾತಾಡೋಣ. ಆಟೋ ಡ್ರೈವರ್​ ಸಮಸ್ಯೆಗಳ ಕುರಿತು ಚರ್ಚಿಸೋಣ. ಅಂಗನವಾಡಿ ಕಾರ್ಯಕರ್ತೆಯರ ಸಂಬಳದ ಬಗ್ಗೆ ಕೂಡ ಡಿಸ್ಕಸ್​ ಮಾಡೋಣ. ಯಾಕೆ ಯಾವಾಗಲೂ ಒಂದೇ ವಿಷಯದ ಬಗ್ಗೆ ಮಾತಾಡೋದು ಎಂದರು.
ಸೋಷಿಯಲ್​ ಮೀಡಿಯಾ ಮಿಸ್​​ಯೂಸ್​ ಬಗ್ಗೆ ಮಾತಾಡಿದ ಪ್ರಕಾಶ್​ ರಾಜ್​ ಅವರು, ಎಲ್ಲದರಲ್ಲೂ ಒಳ್ಳೆಯದು ಮತ್ತು ಕೆಟ್ಟದು ಇರುತ್ತೆ. ನಾವು ಒಳ್ಳೆಯದನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬೇಕು. ಕೆಟ್ಟದರ ಬಗ್ಗೆ ಬಹಳ ಯೋಚನೆ ಮಾಡಬಾರದು ಎಂದರು.
ಇದನ್ನೂ ಓದಿ:ಅಂದು ಅವಮಾನ ಇಂದು ಸನ್ಮಾನ! ಕ್ಯಾಪ್ಟನ್​ ಆಗುವಂತೆ KL ರಾಹುಲ್​ ಕಾಲು ಹಿಡಿದ BCCI
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us