newsfirstkannada.com

ಚಂದ್ರಯಾನ-3 ಯಶಸ್ವಿ; ಭಾರತವನ್ನು ಹಾಡಿಹೊಗಳಿದ ನಟ ಪ್ರಕಾಶ್​​ ರಾಜ್​ ಹೇಳಿದ್ದೇನು..?

Share :

23-08-2023

  ಚಂದ್ರನ ಅಂಗಳಕ್ಕೆ ಕಾಲಿಟ್ಟ ಭಾರತದ ಪ್ರಜ್ಞಾನ್​​ ರೋವರ್

  ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದ್ದ ಶತಕೋಟಿ ಭಾರತೀಯರು

  ಚಂದ್ರಯಾನ-3 ಯಶಸ್ವಿಯನ್ನು ಹಾಡಿಹೊಗಳಿದ ಪ್ರಕಾಶ್​​ ರಾಜ್​​

ಬೆಂಗಳೂರು: ಚಂದ್ರಯಾನ-3 ಯಶಸ್ವಿಯಾಗಿ ಪೂರೈಸಿ ಭಾರತದ ಬಗ್ಗೆ ಇಡೀ ಜಗತ್ತೇ ನಿಬ್ಬೆರಗಾಗಿದೆ. ಈ ಬೆನ್ನಲ್ಲೇ ಇದಕ್ಕೆ ಕಾರಣರಾದ ಇಸ್ರೋ ವಿಜ್ಞಾನಿಗಳನ್ನು ಬಹುಭಾಷಾ ನಟ ಪ್ರಕಾಶ್​​ ರಾಜ್​ ಅವರು ಅಭಿನಂದಿಸಿದ್ದಾರೆ.

ಈ ಸಂಬಂಧ ಟ್ವೀಟ್​ ಮಾಡಿದ ನಟ ಪ್ರಕಾಶ್​ ರಾಜ್​​, ಭಾರತದ ಮನುಕುಲದ ಹೆಮ್ಮೆಯ ಕ್ಷಣಗಳಿವು. ನಿಮಗೆ ಧನ್ಯವಾದಗಳು ಇಸ್ರೋ. ಚಂದ್ರಯಾನ-3 ಯಶಸ್ವಿಯಾಗಲು ಕಾರಣರಾದ ಮತ್ತು ಇದನ್ನು ಸಾಧ್ಯವಾಗಿಸಿದ ಎಲ್ಲರಿಗೂ ಅಭಿನಂದನೆಗಳು. ವಿಶಾಲ ವಿಶ್ವದ ಇನ್ನಷ್ಟು ವಿಸ್ಮಯಗಳನ್ನು ಅರಿಯಲು. ಜತೆಗೆ ಸಂಭ್ರಮಿಸಲು ಇದು ದಾರಿಯಾಗಲಿ ಎಂದರು.

ಕೊನೆಗೂ ಕೋಟ್ಯಾಂತರ ಭಾರತೀಯರ ಪ್ರಾರ್ಥನೆ ಫಲಿಸಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ 3 ಮಿಷನ್ ಯಶಸ್ವಿಯಾಗಿ ಲ್ಯಾಂಡ್ ಆಗಿದೆ. ವಿಕ್ರಮ್ ಲ್ಯಾಂಡರ್ ಸೇಫ್ ಲ್ಯಾಂಡ್ ಆಗಿದ್ದು ಇಡೀ ದೇಶಾದ್ಯಂತ ಸಂಭ್ರಮಾಚರಣೆ ಶುರುವಾಗಿದೆ.

ಈ ಹಿಂದೆ ಪ್ರಕಾಶ್​ ರಾಜ್​​ ಚಂದ್ರಯಾನ-3 ಬಗ್ಗೆ ವ್ಯಂಗ್ಯಭರಿತ ಟ್ವೀಟ್​​ ಮಾಡಿ ಟೀಕೆಗೆ ಗುರಿಯಾಗಿದ್ದರು. ಇದಕ್ಕೆ ನಟ ಪ್ರಕಾಶ್‌ ರಾಜ್‌ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಈ ಮಧ್ಯೆ ಪ್ರಕಾಶ್‌ ರಾಜ್‌ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ ಶ್ರೀರಾಮ ಸೇನೆ ಮುಖಂಡರು ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ಪೊಲೀಸ್​​ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಶ್ರೀರಾಮ ಸೇನೆ ಮುಖಂಡ ಶಿವಾನಂದ ಗಾಯಕವಾಡ್ ದೂರು ನೀಡಿದ್ದು, ಪ್ರಕಾಶ್ ರಾಜ್ ಬಂಧನಕ್ಕೆ ಆಗ್ರಹಿಸಿದ್ದರು. ಇನ್ನು, ಈ ಬೆನ್ನಲ್ಲೇ ಸೋಷಿಯಲ್​ ಮೀಡಿಯಾದಲ್ಲಿ ಪ್ರಕಾಶ್​ ರಾಜ್​ ಬಂಧನಕ್ಕೆ ಒತ್ತಾಯಿಸಿ ಹಲವರು ಪೋಸ್ಟ್​ ಹಾಕಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚಂದ್ರಯಾನ-3 ಯಶಸ್ವಿ; ಭಾರತವನ್ನು ಹಾಡಿಹೊಗಳಿದ ನಟ ಪ್ರಕಾಶ್​​ ರಾಜ್​ ಹೇಳಿದ್ದೇನು..?

https://newsfirstlive.com/wp-content/uploads/2023/08/Prakash-Raj_1.jpg

Load More